ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಜೆಕರ್ಯ
1. {ಯೆಹೂದದ ಸುತ್ತಲಿರುವ ದೇಶಗಳ ಬಗ್ಗೆ ದರ್ಶನ} [PS] ಇಸ್ರೇಲಿನ ಬಗ್ಗೆ ಯೆಹೋವನ ದುಃಖದ ಸಂದೇಶ. ಯೆಹೋವನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುತ್ತಾನೆ. ಮಾನವನಲ್ಲಿ ತನ್ನ ಆತ್ಮವನ್ನಿಟ್ಟನು. ಆ ಬಳಿಕ ಆತನು ಹೇಳಿದ್ದೇನೆಂದರೆ,
2. “ನಾನು ಜೆರುಸಲೇಮಿನ ಸುತ್ತಮುತ್ತಲಿರುವ ರಾಷ್ಟ್ರಗಳಿಗೆ ಆಕೆಯನ್ನು ಒಂದು ವಿಷದ ಲೋಟವನ್ನಾಗಿ ಮಾಡುತ್ತೇನೆ. ಆ ರಾಜ್ಯಗಳು ಆ ಪಟ್ಟಣದ ಮೇಲೆ ಬೀಳುವವು. ಆಗ ಇಡೀ ಯೆಹೂದವು ಉರುಲಿನೊಳಗೆ ಬೀಳುವದು.
3. ಆದರೆ ನಾನು ಜೆರುಸಲೇಮನ್ನು ಒಂದು ಭಾರವಾದ ಬಂಡೆ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯತ್ನಿಸುವವನು ಗಾಯಗೊಳ್ಳುವನು. ಆದರೂ ಲೋಕದ ಎಲ್ಲಾ ದೇಶಗಳವರು ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವರು.
4. ಆದರೆ ಆ ಸಮಯದಲ್ಲಿ ನಾನು ಅವರ ಕುದುರೆಗಳನ್ನು ಬೆಚ್ಚಿಬೀಳುವಂತೆ ಮಾಡುವೆನು. ಅದರ ಸವಾರನು ಭಯಗೊಳ್ಳುವನು. ಶತ್ರುವಿನ ಎಲ್ಲಾ ಕುದುರೆಗಳನ್ನು ನಾನು ಕುರುಡು ಮಾಡುವೆನು. ಆದರೆ ನಾನು ಕಣ್ಣು ತೆರೆದು ಯೆಹೂದ ವಂಶವನ್ನು ಸಂರಕ್ಷಿಸುವೆನು.
5. ಯೆಹೂದದ ಪ್ರಧಾನರು ತಮ್ಮ ಜನರನ್ನು ಹುರಿದುಂಬಿಸುವರು. ‘ಸೇವಾಧೀಶ್ವರನಾದ ಯೆಹೋವನು ನಿಮ್ಮ ದೇವರು. ಆತನೇ ನಮಗೆ ಬಲವನ್ನು ಕೊಡುವಾತನು’ ಎಂದು ಹೇಳುವರು.
6. ಆ ಸಮಯದಲ್ಲಿ ಯೆಹೂದದ ಕುಲ ಪ್ರಧಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿಯಂತೆ ಮಾಡುವೆನು. ಅವರು ಹುಲ್ಲು ಸುಡುವ ಬೆಂಕಿಯೋಪಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೆರುಸಲೇಮಿನ ಜನರು ಮತ್ತೆ ನೆಮ್ಮದಿಯಿಂದ ವಾಸಿಸುವರು.” [PE][PS]
7. ಯೆಹೋವನು ಯೆಹೂದದ ಜನರನ್ನು ಮೊದಲು ರಕ್ಷಿಸುವನು. ಆಗ ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತತಿಯವರೂ ಇತರರೂ ತಾವು ಯೆಹೂದ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳಪಡುವದಿಲ್ಲ.
8. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ. ಒಬ್ಬ ಬಲಹೀನ ಮನಷ್ಯನೂ ದಾವೀದನಂತೆ ಶೂರನಾಗುವನು. ಮತ್ತು ದಾವೀದನ ಸಂತತಿಯ ಜನರು ದೇವರುಗಳಂತಿದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು. [PE][PS]
9. ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವ ಜನಾಂಗಗಳನ್ನು ನಾನು ನಾಶಮಾಡುವೆನು.
10. ನಾನು ದಾವೀದನ ಸಂತತಿಯವರನ್ನೂ ಜೆರುಸಲೇಮಿನಲ್ಲಿ ವಾಸಿಸುವವರನ್ನೂ ದಯೆಕರುಣೆಗಳ ಆತ್ಮದಿಂದ ತುಂಬಿಸುವೆನು. ಅವರು ತಾವು ಈಟಿಯಿಂದ ತಿವಿದ ನನ್ನನ್ನು ದೃಷ್ಟಿಸಿ ನೋಡುವರು; ತುಂಬಾ ದುಃಖಿಸುವರು. ತಮಗಿದ್ದ ಒಬ್ಬನೇ ಮಗನನ್ನು ಕಳಕೊಂಡವರಂತೆ ರೋಧಿಸುವರು.
11. ಜೆರುಸಲೇಮಿನಲ್ಲಿ ಅತೀವ ಗೋಳಾಟದ ಮತ್ತು ದುಃಖದ ಕಾಲ ಬರುವದು. ಅದು ಮೆಗಿದ್ದೋ ತಗ್ಗಿನಲ್ಲಿ ಹದದ್ ರಿಮ್ಮೋನನು ಸತ್ತಾಗ ಜನರು ಗೋಳಾಡಿದ ಸಮಯದಂತೆ ಇರುವದು.
12. ಪ್ರತಿಯೊಂದು ಕುಟುಂಬವೂ ರೋಧಿಸುವದು. ದಾವೀದನ ಕುಲದವರೂ ಗೋಳಾಡುವರು. ಅವರ ಹೆಂಡತಿಯರೂ ಗೋಳಾಡುವರು. ನಾತಾನಿನ ಕುಟುಂಬದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು.
13. ಲೇವಿಯ ಸಂತಾನದ ಜನರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. ಶಿಮ್ಮಿಯ ಸಂತಾನದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು.
14. ಅದೇ ರೀತಿಯಲ್ಲಿ ಇತರ ಎಲ್ಲಾ ಕುಲದವರೂ ದುಃಖಿಸುವರು. ಗಂಡಸರೂ ಹೆಂಗಸರೂ ಗೋಳಾಡುವರು.” [PE]

ಟಿಪ್ಪಣಿಗಳು

No Verse Added

ಒಟ್ಟು 14 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 12 / 14
1 2 3 4 5 6 7 8 9 10 11 12 13 14
ಜೆಕರ್ಯ 12:9
ಯೆಹೂದದ ಸುತ್ತಲಿರುವ ದೇಶಗಳ ಬಗ್ಗೆ ದರ್ಶನ 1 ಇಸ್ರೇಲಿನ ಬಗ್ಗೆ ಯೆಹೋವನ ದುಃಖದ ಸಂದೇಶ. ಯೆಹೋವನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುತ್ತಾನೆ. ಮಾನವನಲ್ಲಿ ತನ್ನ ಆತ್ಮವನ್ನಿಟ್ಟನು. ಆ ಬಳಿಕ ಆತನು ಹೇಳಿದ್ದೇನೆಂದರೆ, 2 “ನಾನು ಜೆರುಸಲೇಮಿನ ಸುತ್ತಮುತ್ತಲಿರುವ ರಾಷ್ಟ್ರಗಳಿಗೆ ಆಕೆಯನ್ನು ಒಂದು ವಿಷದ ಲೋಟವನ್ನಾಗಿ ಮಾಡುತ್ತೇನೆ. ಆ ರಾಜ್ಯಗಳು ಆ ಪಟ್ಟಣದ ಮೇಲೆ ಬೀಳುವವು. ಆಗ ಇಡೀ ಯೆಹೂದವು ಉರುಲಿನೊಳಗೆ ಬೀಳುವದು. 3 ಆದರೆ ನಾನು ಜೆರುಸಲೇಮನ್ನು ಒಂದು ಭಾರವಾದ ಬಂಡೆ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯತ್ನಿಸುವವನು ಗಾಯಗೊಳ್ಳುವನು. ಆದರೂ ಲೋಕದ ಎಲ್ಲಾ ದೇಶಗಳವರು ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವರು. 4 ಆದರೆ ಆ ಸಮಯದಲ್ಲಿ ನಾನು ಅವರ ಕುದುರೆಗಳನ್ನು ಬೆಚ್ಚಿಬೀಳುವಂತೆ ಮಾಡುವೆನು. ಅದರ ಸವಾರನು ಭಯಗೊಳ್ಳುವನು. ಶತ್ರುವಿನ ಎಲ್ಲಾ ಕುದುರೆಗಳನ್ನು ನಾನು ಕುರುಡು ಮಾಡುವೆನು. ಆದರೆ ನಾನು ಕಣ್ಣು ತೆರೆದು ಯೆಹೂದ ವಂಶವನ್ನು ಸಂರಕ್ಷಿಸುವೆನು. 5 ಯೆಹೂದದ ಪ್ರಧಾನರು ತಮ್ಮ ಜನರನ್ನು ಹುರಿದುಂಬಿಸುವರು. ‘ಸೇವಾಧೀಶ್ವರನಾದ ಯೆಹೋವನು ನಿಮ್ಮ ದೇವರು. ಆತನೇ ನಮಗೆ ಬಲವನ್ನು ಕೊಡುವಾತನು’ ಎಂದು ಹೇಳುವರು. 6 ಆ ಸಮಯದಲ್ಲಿ ಯೆಹೂದದ ಕುಲ ಪ್ರಧಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿಯಂತೆ ಮಾಡುವೆನು. ಅವರು ಹುಲ್ಲು ಸುಡುವ ಬೆಂಕಿಯೋಪಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೆರುಸಲೇಮಿನ ಜನರು ಮತ್ತೆ ನೆಮ್ಮದಿಯಿಂದ ವಾಸಿಸುವರು.” 7 ಯೆಹೋವನು ಯೆಹೂದದ ಜನರನ್ನು ಮೊದಲು ರಕ್ಷಿಸುವನು. ಆಗ ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತತಿಯವರೂ ಇತರರೂ ತಾವು ಯೆಹೂದ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳಪಡುವದಿಲ್ಲ. 8 ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ. ಒಬ್ಬ ಬಲಹೀನ ಮನಷ್ಯನೂ ದಾವೀದನಂತೆ ಶೂರನಾಗುವನು. ಮತ್ತು ದಾವೀದನ ಸಂತತಿಯ ಜನರು ದೇವರುಗಳಂತಿದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು. 9 ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವ ಜನಾಂಗಗಳನ್ನು ನಾನು ನಾಶಮಾಡುವೆನು. 10 ನಾನು ದಾವೀದನ ಸಂತತಿಯವರನ್ನೂ ಜೆರುಸಲೇಮಿನಲ್ಲಿ ವಾಸಿಸುವವರನ್ನೂ ದಯೆಕರುಣೆಗಳ ಆತ್ಮದಿಂದ ತುಂಬಿಸುವೆನು. ಅವರು ತಾವು ಈಟಿಯಿಂದ ತಿವಿದ ನನ್ನನ್ನು ದೃಷ್ಟಿಸಿ ನೋಡುವರು; ತುಂಬಾ ದುಃಖಿಸುವರು. ತಮಗಿದ್ದ ಒಬ್ಬನೇ ಮಗನನ್ನು ಕಳಕೊಂಡವರಂತೆ ರೋಧಿಸುವರು. 11 ಜೆರುಸಲೇಮಿನಲ್ಲಿ ಅತೀವ ಗೋಳಾಟದ ಮತ್ತು ದುಃಖದ ಕಾಲ ಬರುವದು. ಅದು ಮೆಗಿದ್ದೋ ತಗ್ಗಿನಲ್ಲಿ ಹದದ್ ರಿಮ್ಮೋನನು ಸತ್ತಾಗ ಜನರು ಗೋಳಾಡಿದ ಸಮಯದಂತೆ ಇರುವದು. 12 ಪ್ರತಿಯೊಂದು ಕುಟುಂಬವೂ ರೋಧಿಸುವದು. ದಾವೀದನ ಕುಲದವರೂ ಗೋಳಾಡುವರು. ಅವರ ಹೆಂಡತಿಯರೂ ಗೋಳಾಡುವರು. ನಾತಾನಿನ ಕುಟುಂಬದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. 13 ಲೇವಿಯ ಸಂತಾನದ ಜನರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. ಶಿಮ್ಮಿಯ ಸಂತಾನದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. 14 ಅದೇ ರೀತಿಯಲ್ಲಿ ಇತರ ಎಲ್ಲಾ ಕುಲದವರೂ ದುಃಖಿಸುವರು. ಗಂಡಸರೂ ಹೆಂಗಸರೂ ಗೋಳಾಡುವರು.”
ಒಟ್ಟು 14 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 12 / 14
1 2 3 4 5 6 7 8 9 10 11 12 13 14
Common Bible Languages
West Indian Languages
×

Alert

×

kannada Letters Keypad References