1. ರಚನೆಗಾರ : ಆಸಾಫ. ದೇವರೇ, ನಿನ್ನನ್ನು ಕೊಂಡಾಡುವೆವು! ನಿನ್ನ ಹೆಸರನ್ನು ಸ್ತ್ತುತಿಸುವೆವು; ಯಾಕಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ; ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
|
2. ದೇವರು ಇಂತೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ; ನೀತಿಯಿಂದಲೇ ತೀರ್ಪುಕೊಡುವೆ.
|
7. ನ್ಯಾಯಾಧಿಪತಿಯು ದೇವರೇ. ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ. ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
|
8. ಯೆಹೋವನ ಕೈಯಲ್ಲಿ ಪಾತ್ರೆಯಿದೆ. ಆ ಪಾತ್ರೆಯು ವಿಷದ್ರಾಕ್ಷಾರಸದಿಂದ ತುಂಬಿದೆ. ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು; ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
|