ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು
1. ರಚನೆಗಾರ : ದಾವೀದ. ದೇವರೇ, ನನ್ನನ್ನು ರಕ್ಷಿಸು! ದೇವರೇ, ಬೇಗನೆ ನನಗೆ ಸಹಾಯಮಾಡು!
2. ನನ್ನನ್ನು ಕೊಲ್ಲಲು ಪ್ರಯತ್ನಿಸುವವರು ನಿರಾಶೆಗೊಂಡು ಅಪಮಾನ ಹೊಂದಲಿ. ನನಗೆ ಕೇಡು ಮಾಡಬೇಕೆಂದಿರುವವರು ಅವಮಾನಗೊಂಡು ಓಡಿ ಹೋಗಲಿ.
3. ನನ್ನನ್ನು ಗೇಲಿಮಾಡುವವರು ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
4. ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ. ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.
5. ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ! ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು! ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ. ಯೆಹೋವನೇ ತಡಮಾಡಬೇಡ!

Notes

No Verse Added

Total 150 Chapters, Current Chapter 70 of Total Chapters 150
ಕೀರ್ತನೆಗಳು 70:27

×

Alert

×

kannada Letters Keypad References