2. ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ ನಿನ್ನ ಶತ್ರುಗಳು ಚದರಿಹೋಗಲಿ. ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ ನಿನ್ನ ಶತ್ರುಗಳು ನಾಶವಾಗಲಿ.
|
4. ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ. ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ. ಆತನ ಹೆಸರು ಯಾಹು. ಆತನ ಹೆಸರನ್ನು ಕೊಂಡಾಡಿರಿ!
|
6. ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು. ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು. ದೇವದ್ರೋಹಿಗಳಾದರೊ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.
|
12. “ಬಲಿಷ್ಠ ರಾಜರುಗಳ ಸೈನ್ಯಗಳು ಓಡಿಹೋಗುತ್ತಿವೆ! ಸೈನಿಕರು ಯುದ್ಧದಿಂದ ತಂದ ಕೊಳ್ಳೆವಸ್ತುಗಳನ್ನು ಮನೆಯಲ್ಲಿದ್ದ ಸ್ತ್ರೀಯರು ಹಂಚಿಕೊಳ್ಳುವರು. ಕುರಿಹಟ್ಟಿಯೊಳಗೆ ಇದ್ದವರೂ ಐಶ್ವರ್ಯವನ್ನು ಪಾಲುಮಾಡಿಕೊಳ್ಳುವರು.
|
16. ಬಾಷಾನ್ ಪರ್ವತವೇ, ಚೀಯೋನ್ ಪರ್ವತವನ್ನು ನೀನು ಕೀಳಾಗಿ ಕಾಣುವುದೇಕೆ? ಯೆಹೋವನು ತನಗೆ ಪ್ರಿಯವಾದ ಚೀಯೋನ್ ಪರ್ವತವನ್ನೇ ತನ್ನ ಶಾಶ್ವತ ವಾಸಸ್ಥಾನವಾಗಿ ಆರಿಸಿಕೊಂಡಿದ್ದಾನೆ.
|
18. ಆತನು ಸೆರೆಯಾಳುಗಳನ್ನು ನಡೆಸಿಕೊಂಡು ಬೆಟ್ಟದ ಮೇಲೇರಿ ಹೋದನು; ತನಗೆ ದ್ರೋಹಮಾಡಿದ ಜನರಿಂದ ಆತನು ಕಷ್ಟಗಳನ್ನು ತೆಗೆದುಕೊಳ್ಳುವನು. ದೇವರಾದ ಯೆಹೋವನು ಮೇಲೇರಿಹೋದದ್ದು ಅಲ್ಲಿ ವಾಸಿಸುವುದಕ್ಕಾಗಿಯೇ.
|
22. ನನ್ನ ಯೆಹೋವನು ಇಂತೆಂದನು: “ನಾನು ಪೂರ್ವ ದಿಕ್ಕಿನಲ್ಲಿರುವ ಬಾಷಾನಿನಿಂದಲೂ ಪಶ್ಚಿಮ ದಿಕ್ಕಿನಿಂದಲೂ ಶತ್ರುವನ್ನು ಹಿಡಿದು ತರುವೆನು.
|
24. ಇಗೋ, ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ. ನನ್ನ ರಾಜನಾದ ಪರಿಶುದ್ಧ ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
|
27. ಅವರನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಮೊದಲನೆಯದಾಗಿ ಬೆನ್ಯಾಮೀನನ ಚಿಕ್ಕ ಕುಲವಿದೆ; ಅದರ ನಂತರ ಯೆಹೂದನ ಮಹಾಕುಲವಿದೆ. ಅದರ ನಂತರ ಜೆಬುಲೂನ್ ಮತ್ತು ನಫ್ತಾಲಿ ಕುಲಗಳ ನಾಯಕರು ಇದ್ದಾರೆ.
|
30. ಕೋಲಿನಿಂದ ಬಡಿದು ನಿನಗೆ ಬೇಕಾದದ್ದನ್ನೆಲ್ಲಾ ಆ ಪ್ರಾಣಿಗಳಿಂದ ಮಾಡಿಸು. ಆ ಜನಾಂಗಗಳಲ್ಲಿರುವ “ಹೋರಿಗಳು” ಮತ್ತು “ಹಸುಗಳು” ನಿನಗೆ ವಿಧೇಯವಾಗಿರುವಂತೆ ಮಾಡು. ನೀನು ಆ ಜನಾಂಗಗಳನ್ನು ಯುದ್ಧದಲ್ಲಿ ಸೋಲಿಸಿರುವುದರಿಂದ ಅವರು ನಿನಗೆ ಬೆಳ್ಳಿಯನ್ನು ತಂದುಕೊಡುವಂತೆ ಮಾಡು.
|
31. ಅವರು ಈಜಿಪ್ಟಿನಿಂದ ಐಶ್ವರ್ಯವನ್ನು ನಿನಗೆ ತಂದು ಕೊಡುವಂತೆ ಮಾಡು. ದೇವರೇ, ಇಥಿಯೋಪಿಯದವರು ತಮ್ಮ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
|
33. ದೇವರಿಗೆ ಗಾಯನ ಮಾಡಿರಿ! ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು. ಆತನ ಗರ್ಜನೆಗೆ ಕಿವಿಗೊಡಿರಿ!
|
35. ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತ ಸ್ವರೂಪನಾಗಿರುವೆ. ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು. ದೇವರಿಗೆ ಸ್ತೋತ್ರ!
|