ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಕೀರ್ತನೆಗಳು
1. ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು. [QBR2] ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು. [QBR]
2. ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ. [QBR2] ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು. [QBR]
3. ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ. [QBR2] ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು. [QBR]
4. ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ. [QBR2] ನಾನು ಕಪಟಿಗಳ ಜೊತೆ ಸೇರುವವನಲ್ಲ. [QBR]
5. ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ. [QBR2] ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
6. ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ [*ಯಜ್ಞವೇದಿಕೆ ಈ ಕೀರ್ತನೆಗಾರನು ಯಾಜಕನೂ ಲೇವಿಯನೂ ಆಗಿದ್ದಿರಬೇಕೆಂದು ಇದು ಸೂಚಿಸುತ್ತದೆ. ಜನರನ್ನು ಸಭೆ ಸೇರಿಸುವುದರಲ್ಲಿ ಇವನು ಕಾರ್ಯನಿರತನಾಗಿದ್ದಿರಬಹದು. (ವಚನ 12) ಯಾಜಕರು ಮತ್ತು ಲೇವಿಯರು ಮಾತ್ರ ಸೇವೆಮಾಡಬಹುದಾದ ದೇವಾಲಯದ ಸ್ಥಳದಲ್ಲಿ ಇವನು ಸೇವೆ ಮಾಡುತ್ತಿದ್ದಿರಬಹುದು. ವಚನದ ಈ ಭಾಗವನ್ನು “ನಾನು ಯಜ್ಞವೇದಿಕೆಯ ಸುತ್ತಲೂ ಜನರನ್ನು ಸೇರಿಸಲು ಸಾಧ್ಯವಾಗುವಂತೆ” ಎಂದು ಸಹ ಅನುವಾದಿಸಬಹುದು. ಈ ರೀತಿ ಅನುವಾದ ಮಾಡಿದರೆ, ಈ ಕೀರ್ತನೆಗಾರನು ತನ್ನನ್ನು ಶುದ್ಧೀಕರಿಸಿಕೊಳ್ಳುತ್ತಿದ್ದದ್ದು ಕೇವಲ ಆರಾಧಕನಾಗಿಯೇ ಹೊರತು ಯಾಜಕನಾಗಲ್ಲ ಎಂಬ ಅರ್ಥವನ್ನು ಕೊಡುತ್ತದೆ.] ಸುತ್ತಲೂ ನಡೆಯಲು [QBR2] ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ. [QBR]
7. ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು. [QBR2] ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು. [QBR]
8. ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ [QBR2] ನನಗೆ ಎಷ್ಟೋ ಪ್ರಿಯವಾಗಿದೆ.
9. ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ. [QBR2] ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ. [QBR]
10. ಅವರು ಜನರನ್ನು ವಂಚಿಸುವರು; [QBR2] ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು. [QBR]
11. ನಾನಾದರೋ ನಿರಪರಾಧಿ. [QBR2] ನನಗೆ ಕರುಣೆತೋರಿ ನನ್ನನ್ನು ರಕ್ಷಿಸು. [QBR]
12. ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ. [QBR2] ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು. [PE]
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 26 / 150
1 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು. ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
2 ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ. ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
3 ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ. ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
4 ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ. ನಾನು ಕಪಟಿಗಳ ಜೊತೆ ಸೇರುವವನಲ್ಲ.
5 ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ. ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ. 6 ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ *ಯಜ್ಞವೇದಿಕೆ ಈ ಕೀರ್ತನೆಗಾರನು ಯಾಜಕನೂ ಲೇವಿಯನೂ ಆಗಿದ್ದಿರಬೇಕೆಂದು ಇದು ಸೂಚಿಸುತ್ತದೆ. ಜನರನ್ನು ಸಭೆ ಸೇರಿಸುವುದರಲ್ಲಿ ಇವನು ಕಾರ್ಯನಿರತನಾಗಿದ್ದಿರಬಹದು. (ವಚನ 12) ಯಾಜಕರು ಮತ್ತು ಲೇವಿಯರು ಮಾತ್ರ ಸೇವೆಮಾಡಬಹುದಾದ ದೇವಾಲಯದ ಸ್ಥಳದಲ್ಲಿ ಇವನು ಸೇವೆ ಮಾಡುತ್ತಿದ್ದಿರಬಹುದು. ವಚನದ ಈ ಭಾಗವನ್ನು “ನಾನು ಯಜ್ಞವೇದಿಕೆಯ ಸುತ್ತಲೂ ಜನರನ್ನು ಸೇರಿಸಲು ಸಾಧ್ಯವಾಗುವಂತೆ” ಎಂದು ಸಹ ಅನುವಾದಿಸಬಹುದು. ಈ ರೀತಿ ಅನುವಾದ ಮಾಡಿದರೆ, ಈ ಕೀರ್ತನೆಗಾರನು ತನ್ನನ್ನು ಶುದ್ಧೀಕರಿಸಿಕೊಳ್ಳುತ್ತಿದ್ದದ್ದು ಕೇವಲ ಆರಾಧಕನಾಗಿಯೇ ಹೊರತು ಯಾಜಕನಾಗಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಸುತ್ತಲೂ ನಡೆಯಲು ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
7 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು. ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
8 ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ ನನಗೆ ಎಷ್ಟೋ ಪ್ರಿಯವಾಗಿದೆ. 9 ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ. ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು; ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ. ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ. ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.
ಒಟ್ಟು 150 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 26 / 150
×

Alert

×

Kannada Letters Keypad References