1. ರಚನೆಗಾರ : ದಾವೀದ. ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು. ನನ್ನ ಬಿನ್ನಹಕ್ಕೆ ಕಿವಿಗೊಡು. ನಿನ್ನ ನೀತಿಗೂ ನಂಬಿಗಸ್ತಿಕೆಗೂ ತಕ್ಕಂತೆ ನನ್ನ ಪ್ರಾರ್ಥನೆಗೆ ಉತ್ತರಕೊಡು.
|
2. ನಿನ್ನ ಸೇವಕನಾದ ನನಗೆ ತೀರ್ಪುಮಾಡಬೇಡ. ನನ್ನ ಇಡೀ ಜೀವಮಾನದಲ್ಲಿ ನಿರಪರಾಧಿಯೆಂಬ ತೀರ್ಪನ್ನು ಹೊಂದಲು ನನಗೆ ಸಾಧ್ಯವೇ ಇಲ್ಲ.
|
3. ಆದರೆ ನನ್ನ ಶತ್ರುಗಳು ನನ್ನನ್ನು ಬೆನ್ನಟ್ಟುತ್ತಿದ್ದಾರೆ. ಅವರು ನನ್ನ ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾರೆ. ಬಹುಕಾಲದ ಹಿಂದೆ ಸ್ತತವರನ್ನು ಕಾರ್ಗತ್ತಲೆಯ ಸಮಾಧಿಗೆ ನೂಕುವಂತೆ ಅವರು ನನ್ನನ್ನು ನೂಕುತ್ತಿದ್ದಾರೆ.
|
5. ಆದರೆ ಬಹುಕಾಲದ ಹಿಂದೆ ನಡೆದವುಗಳನ್ನು ಜ್ಞಾಪಿಸಿಕೊಳ್ಳುವೆನು. ನೀನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ಆಲೋಚಿಸುವೆನು.
|
6. ನನ್ನ ಕೈಗಳನ್ನು ಮೇಲೆತ್ತಿ ನಿನಗೆ ಪ್ರಾರ್ಥಿಸುವೆನು. ಒಣಭೂಮಿಯು ಮಳೆಗಾಗಿ ಕಾಯುವಂತೆ ನಾನು ನಿನ್ನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
|
7. ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು. ನನ್ನ ಆತ್ಮವು ಕುಂದಿಹೋಗುತ್ತಿದೆ. ನೀನು ನನಗೆ ವಿಮುಖನಾಗಬೇಡ. ಸತ್ತು ಸಮಾಧಿಯಲ್ಲಿರುವವರಂತೆ ನನ್ನನ್ನು ಸಾವಿಗೀಡುಮಾಡಬೇಡ.
|
8. ಮುಂಜಾನೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು. ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನಾನು ಮಾಡಬೇಕಾದವುಗಳನ್ನು ನನಗೆ ತೋರಿಸು. ನಾನು ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿದ್ದೇನೆ!
|
10. ನಿನ್ನ ಇಚ್ಛೆಗನುಸಾರವಾಗಿ ನಾನು ಮಾಡಬೇಕಾದುದನ್ನು ನನಗೆ ತೋರಿಸಿಕೊಡು. ನೀನೇ ನನ್ನ ದೇವರು. ನನಗೆ ಒಳ್ಳೆಯವನಾಗಿದ್ದು ಸುರಕ್ಷಿತವಾದ ದಾರಿಯಲ್ಲಿ ನಡೆಸು.
|
11. ಯೆಹೋವನೇ, ನನ್ನನ್ನು ಉಜ್ಜೀವಿಸಮಾಡು. ಆಗ ಜನರು ನಿನ್ನ ಹೆಸರನ್ನು ಕೊಂಡಾಡುವರು. ನೀನು ನಿಜವಾಗಿಯೂ ಒಳ್ಳೆಯವನೆಂಬುದನ್ನು ನನಗೆ ತೋರಿಸಿಕೊಡು. ನನ್ನನ್ನು ಶತ್ರುಗಳಿಂದ ರಕ್ಷಿಸು.
|
12. ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು. ನನ್ನನ್ನು ಕೊಲ್ಲಬೇಕೆಂದಿರುವ ಶತ್ರುಗಳನ್ನು ಸೋಲಿಸು. ನಾನು ನಿನ್ನ ಸೇವಕನಾಗಿರುವೆ.
|