ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಙ್ಞಾನೋಕ್ತಿಗಳು
1. ಪದೇಪದೇ ಎಚ್ಚರಿಸಿದರೂ ಮೊಂಡನಾಗಿರುವವನು ಪಕ್ಕನೆ ಏಳದ ಹಾಗೆ ನಾಶವಾಗುವನು. [PE][PS]
2. ಅಧಿಪತಿಯು ಒಳ್ಳೆಯವನಾಗಿರುವಾಗ ಜನರೆಲ್ಲರೂ ಸಂತೋಷವಾಗಿರುವರು. ಕೆಡುಕನು ಆಳುವಾಗ ಜನರೆಲ್ಲರೂ ಸಂಕಟಪಡುವರು. [PE][PS]
3. ಜ್ಞಾನವನ್ನು ಪ್ರೀತಿಸುವವನ ತಂದೆ ಬಹು ಸಂತೋಷವಾಗಿರುವನು. ಆದರೆ ಸೂಳೆಯರ ಸಹವಾಸ ಮಾಡುವವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು. [PE][PS]
4. ರಾಜನು ನ್ಯಾಯವಂತನಾಗಿದ್ದರೆ ದೇಶವು ಬಲಿಷ್ಠವಾಗಿರುವುದು. ರಾಜನು ತನ್ನ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿಪರೀತ ತೆರಿಗೆಗಳನ್ನು ಹಾಕಿದರೆ, ದೇಶವು ಹಾಳಾಗುವುದು. [PE][PS]
5. ನೆರೆಯವನ ಮುಖಸ್ತುತಿ ಮಾಡುವವನು ಅವನ ಕಾಲಿಗೆ ಬಲೆಯನ್ನು ಒಡ್ಡುತ್ತಿದ್ದಾನೆ. [PE][PS]
6. ಕೆಡುಕರು ತಮ್ಮ ಪಾಪದಿಂದಲೇ ಸಿಕ್ಕಿಕೊಳ್ಳುವರು. ಒಳ್ಳೆಯವರಾದರೋ ಸಂತೋಷದಿಂದ ಹಾಡುವರು. [PE][PS]
7. ನೀತಿವಂತರು ಬಡವರಿಗೆ ಒಳ್ಳೆಯದನ್ನು ಮಾಡಲು ಇಷ್ಟಪಡುತ್ತಾರೆ. ಕೆಡುಕರಾದರೋ ಬಡವರನ್ನು ಲಕ್ಷಿಸುವುದಿಲ್ಲ. [PE][PS]
8. ದುರಾಭಿಮಾನಿಗಳು ಇಡೀ ಪಟ್ಟಣವನ್ನೇ ಬೇಸರಗೊಳಿಸುವರು. ಜ್ಞಾನಿಗಳಾದರೋ ಕೋಪದ ಜ್ವಾಲೆಗಳನ್ನು ನಂದಿಸುವರು. [PE][PS]
9. ಜ್ಞಾನಿಯು ಮೂಢನೊಂದಿಗೆ ನ್ಯಾಯಾಲಯಕ್ಕೆ ಹೋದರೆ, ಮೂಢನು ಕೇವಲ ಆರ್ಭಟಿಸುವನು; ಹುಚ್ಚುಚ್ಚಾಗಿ ಕೂಗಾಡುವನು; ಅವರಿಗೆ ಪರಿಹಾರ ದೊರೆಯುವುದಿಲ್ಲ. [PE][PS]
10. ಕೊಲೆಗಾರರು ಯಥಾರ್ಥವಂತರನ್ನು ಯಾವಾಗಲೂ ದ್ವೇಷಿಸುವರು. ಆ ಕೆಡುಕರು ಅವರನ್ನು ಕೊಲ್ಲಬಯಸುವರು. [PE][PS]
11. ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು; ಆದರೆ ಜ್ಞಾನಿಯು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವನು. [PE][PS]
12. ಅಧಿಪತಿಯು ಸುಳ್ಳುಮಾತುಗಳಿಗೆ ಕಿವಿಗೊಟ್ಟರೆ, ಅವನ ಅಧೀನದಲ್ಲಿರುವ ಅಧಿಕಾರಿಗಳೆಲ್ಲರು ಕೆಡುಕರಾಗುವರು. [PE][PS]
13. ಒಂದು ರೀತಿಯಲ್ಲಿ ಬಡವನಿಗೂ ಅವನನ್ನು ಕುಗ್ಗಿಸುವವನಿಗೂ ವ್ಯತ್ಯಾಸವಿಲ್ಲ; ಅವರಿಬ್ಬರಿಗೂ ಜೀವಕೊಟ್ಟಾತನು ಯೆಹೋವನೇ; ಅವರಿಬ್ಬರನ್ನು ಸೃಷ್ಟಿಮಾಡಿದವನು ಯೆಹೋವನೇ. [PE][PS]
14. ಬಡಜನರಿಗೆ ನ್ಯಾಯದೊರಕಿಸುವ ರಾಜನು ಬಹುಕಾಲ ಆಳುವನು. [PE][PS]
15. ಶಿಕ್ಷೆಯು ಮತ್ತು ತಿದ್ದುಪಡಿಯು ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ. ಶಿಸ್ತುಪಡಿಸಿಲ್ಲದ ಯೌವನಸ್ಥನು ತನ್ನ ತಾಯಿಯನ್ನು ನಾಚಿಕೆಗೆ ಗುರಿಪಡಿಸುತ್ತಾನೆ. [PE][PS]
16. ಕೆಡುಕರು ದೇಶವನ್ನು ಆಳುತ್ತಿದ್ದರೆ, ಎಲ್ಲೆಲ್ಲೂ ಪಾಪವಿರುವುದು. ಆದರೆ ಒಳ್ಳೆಯವರಿಗೆ ಕೊನೆಯಲ್ಲಿ ಜಯವಾಗುವುದು. [PE][PS]
17. ನಿನ್ನ ಮಗನನ್ನು ತಿದ್ದಿ ಸರಿಪಡಿಸು; ಆಗ ನೀನು ಅವನ ಬಗ್ಗೆ ಹೆಮ್ಮೆಯಿಂದಿರುವೆ. ಅವನು ನಿನ್ನನ್ನು ತೃಪ್ತಿಪಡಿಸುವನು. [PE][PS]
18. ಪ್ರವಾದಿಗಳಿಗೆ ದರ್ಶನವಾಗದಿದ್ದರೆ ಜನರು ಹತೋಟಿ ತಪ್ಪುತ್ತಾರೆ. ಆದರೆ ದೇವರ ಕಟ್ಟಳೆಗೆ ವಿಧೇಯನಾಗಿರುವವನು ಸಂತೋಷವಾಗಿರುವನು. [PE][PS]
19. ನೀನು ಸೇವಕನಿಗೆ ಕೇವಲ ಮಾತಿನಿಂದ ಹೇಳಿದರೆ ಅವನು ಪಾಠವನ್ನು ಕಲಿತುಕೊಳ್ಳುವುದಿಲ್ಲ. ಅವನು ನಿನ್ನ ಮಾತುಗಳನ್ನು ಅರ್ಥಮಾಡಿಕೊಂಡರೂ ವಿಧೇಯನಾಗುವುದಿಲ್ಲ. [PE][PS]
20. ವಿವೇಚಿಸದೆ ಮಾತಾಡುವವನನ್ನು ನೀನು ಕಂಡಿರುವಿಯೋ? ಅವನಿಗಿಂತಲೂ ಮೂಢನಿಗೇ ಹೆಚ್ಚು ನಿರೀಕ್ಷೆಯಿದೆ. [PE][PS]
21. ನೀನು ಚಿಕ್ಕಂದಿನಿಂದಲೇ ಗುಲಾಮನನ್ನು ಕೋಮಲನಾಗಿ ಸಾಕಿದರೆ, ಕೊನೆಯಲ್ಲಿ ಅವನು ಮೊಂಡನಾಗಿರುವನು. [PE][PS]
22. ಕೋಪಿಷ್ಠನು ಜಗಳ ಎಬ್ಬಿಸುವನು. ಉದ್ರೇಕಗೊಂಡವನು ಅನೇಕ ಪಾಪಗಳನ್ನು ಮಾಡುವನು. [PE][PS]
23. ದುರಾಭಿಮಾನಿಯನ್ನು ಅವನ ದುರಾಭಿಮಾನವೇ ನಾಶಪಡಿಸುವುದು. ಆದರೆ ದೀನನನ್ನು ಬೇರೆ ಜನರು ಗೌರವಿಸುವರು. [PE][PS]
24. ಕಳ್ಳನ ಸಂಗಡಿಗನು ತನಗೆ ತಾನೆ ಕಡುವೈರಿ. ಸಾಕ್ಷಿ ಹೇಳದ ಜನರಿಗೆ ಬರತಕ್ಕ ಶಾಪದ ಬಗ್ಗೆ ಕೇಳಿದರೂ ಅವನು ಹೇಳುವುದಿಲ್ಲ. [PE][PS]
25. ಮನುಷ್ಯರ ಭಯ ಉರುಲಾಗಬಹುದು. ಆದರೆ ಯೆಹೋವನ ಮೇಲಿರುವ ಭರವಸೆ ಕ್ಷೇಮವಾಗಿಡುವುದು. [PE][PS]
26. ಅನೇಕರು ಅಧಿಪತಿಯಿಂದ ಸಹಾಯ ಬಯಸುವರು. ಆದರೆ ನ್ಯಾಯ ದೊರೆಯುವುದು ಯೆಹೋವನಿಂದಲೇ. [PE][PS]
27. ಒಳ್ಳೆಯವರಿಗೆ ಯಥಾರ್ಥರಲ್ಲದವರು ಅಸಹ್ಯ. ಕೆಡುಕರು ಯಥಾರ್ಥರನ್ನು ದ್ವೇಷಿಸುವರು. [PE]

Notes

No Verse Added

Total 31 Chapters, Current Chapter 29 of Total Chapters 31
ಙ್ಞಾನೋಕ್ತಿಗಳು 29:19
1. ಪದೇಪದೇ ಎಚ್ಚರಿಸಿದರೂ ಮೊಂಡನಾಗಿರುವವನು ಪಕ್ಕನೆ ಏಳದ ಹಾಗೆ ನಾಶವಾಗುವನು. PEPS
2. ಅಧಿಪತಿಯು ಒಳ್ಳೆಯವನಾಗಿರುವಾಗ ಜನರೆಲ್ಲರೂ ಸಂತೋಷವಾಗಿರುವರು. ಕೆಡುಕನು ಆಳುವಾಗ ಜನರೆಲ್ಲರೂ ಸಂಕಟಪಡುವರು. PEPS
3. ಜ್ಞಾನವನ್ನು ಪ್ರೀತಿಸುವವನ ತಂದೆ ಬಹು ಸಂತೋಷವಾಗಿರುವನು. ಆದರೆ ಸೂಳೆಯರ ಸಹವಾಸ ಮಾಡುವವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು. PEPS
4. ರಾಜನು ನ್ಯಾಯವಂತನಾಗಿದ್ದರೆ ದೇಶವು ಬಲಿಷ್ಠವಾಗಿರುವುದು. ರಾಜನು ತನ್ನ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿಪರೀತ ತೆರಿಗೆಗಳನ್ನು ಹಾಕಿದರೆ, ದೇಶವು ಹಾಳಾಗುವುದು. PEPS
5. ನೆರೆಯವನ ಮುಖಸ್ತುತಿ ಮಾಡುವವನು ಅವನ ಕಾಲಿಗೆ ಬಲೆಯನ್ನು ಒಡ್ಡುತ್ತಿದ್ದಾನೆ. PEPS
6. ಕೆಡುಕರು ತಮ್ಮ ಪಾಪದಿಂದಲೇ ಸಿಕ್ಕಿಕೊಳ್ಳುವರು. ಒಳ್ಳೆಯವರಾದರೋ ಸಂತೋಷದಿಂದ ಹಾಡುವರು. PEPS
7. ನೀತಿವಂತರು ಬಡವರಿಗೆ ಒಳ್ಳೆಯದನ್ನು ಮಾಡಲು ಇಷ್ಟಪಡುತ್ತಾರೆ. ಕೆಡುಕರಾದರೋ ಬಡವರನ್ನು ಲಕ್ಷಿಸುವುದಿಲ್ಲ. PEPS
8. ದುರಾಭಿಮಾನಿಗಳು ಇಡೀ ಪಟ್ಟಣವನ್ನೇ ಬೇಸರಗೊಳಿಸುವರು. ಜ್ಞಾನಿಗಳಾದರೋ ಕೋಪದ ಜ್ವಾಲೆಗಳನ್ನು ನಂದಿಸುವರು. PEPS
9. ಜ್ಞಾನಿಯು ಮೂಢನೊಂದಿಗೆ ನ್ಯಾಯಾಲಯಕ್ಕೆ ಹೋದರೆ, ಮೂಢನು ಕೇವಲ ಆರ್ಭಟಿಸುವನು; ಹುಚ್ಚುಚ್ಚಾಗಿ ಕೂಗಾಡುವನು; ಅವರಿಗೆ ಪರಿಹಾರ ದೊರೆಯುವುದಿಲ್ಲ. PEPS
10. ಕೊಲೆಗಾರರು ಯಥಾರ್ಥವಂತರನ್ನು ಯಾವಾಗಲೂ ದ್ವೇಷಿಸುವರು. ಕೆಡುಕರು ಅವರನ್ನು ಕೊಲ್ಲಬಯಸುವರು. PEPS
11. ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು; ಆದರೆ ಜ್ಞಾನಿಯು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವನು. PEPS
12. ಅಧಿಪತಿಯು ಸುಳ್ಳುಮಾತುಗಳಿಗೆ ಕಿವಿಗೊಟ್ಟರೆ, ಅವನ ಅಧೀನದಲ್ಲಿರುವ ಅಧಿಕಾರಿಗಳೆಲ್ಲರು ಕೆಡುಕರಾಗುವರು. PEPS
13. ಒಂದು ರೀತಿಯಲ್ಲಿ ಬಡವನಿಗೂ ಅವನನ್ನು ಕುಗ್ಗಿಸುವವನಿಗೂ ವ್ಯತ್ಯಾಸವಿಲ್ಲ; ಅವರಿಬ್ಬರಿಗೂ ಜೀವಕೊಟ್ಟಾತನು ಯೆಹೋವನೇ; ಅವರಿಬ್ಬರನ್ನು ಸೃಷ್ಟಿಮಾಡಿದವನು ಯೆಹೋವನೇ. PEPS
14. ಬಡಜನರಿಗೆ ನ್ಯಾಯದೊರಕಿಸುವ ರಾಜನು ಬಹುಕಾಲ ಆಳುವನು. PEPS
15. ಶಿಕ್ಷೆಯು ಮತ್ತು ತಿದ್ದುಪಡಿಯು ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ. ಶಿಸ್ತುಪಡಿಸಿಲ್ಲದ ಯೌವನಸ್ಥನು ತನ್ನ ತಾಯಿಯನ್ನು ನಾಚಿಕೆಗೆ ಗುರಿಪಡಿಸುತ್ತಾನೆ. PEPS
16. ಕೆಡುಕರು ದೇಶವನ್ನು ಆಳುತ್ತಿದ್ದರೆ, ಎಲ್ಲೆಲ್ಲೂ ಪಾಪವಿರುವುದು. ಆದರೆ ಒಳ್ಳೆಯವರಿಗೆ ಕೊನೆಯಲ್ಲಿ ಜಯವಾಗುವುದು. PEPS
17. ನಿನ್ನ ಮಗನನ್ನು ತಿದ್ದಿ ಸರಿಪಡಿಸು; ಆಗ ನೀನು ಅವನ ಬಗ್ಗೆ ಹೆಮ್ಮೆಯಿಂದಿರುವೆ. ಅವನು ನಿನ್ನನ್ನು ತೃಪ್ತಿಪಡಿಸುವನು. PEPS
18. ಪ್ರವಾದಿಗಳಿಗೆ ದರ್ಶನವಾಗದಿದ್ದರೆ ಜನರು ಹತೋಟಿ ತಪ್ಪುತ್ತಾರೆ. ಆದರೆ ದೇವರ ಕಟ್ಟಳೆಗೆ ವಿಧೇಯನಾಗಿರುವವನು ಸಂತೋಷವಾಗಿರುವನು. PEPS
19. ನೀನು ಸೇವಕನಿಗೆ ಕೇವಲ ಮಾತಿನಿಂದ ಹೇಳಿದರೆ ಅವನು ಪಾಠವನ್ನು ಕಲಿತುಕೊಳ್ಳುವುದಿಲ್ಲ. ಅವನು ನಿನ್ನ ಮಾತುಗಳನ್ನು ಅರ್ಥಮಾಡಿಕೊಂಡರೂ ವಿಧೇಯನಾಗುವುದಿಲ್ಲ. PEPS
20. ವಿವೇಚಿಸದೆ ಮಾತಾಡುವವನನ್ನು ನೀನು ಕಂಡಿರುವಿಯೋ? ಅವನಿಗಿಂತಲೂ ಮೂಢನಿಗೇ ಹೆಚ್ಚು ನಿರೀಕ್ಷೆಯಿದೆ. PEPS
21. ನೀನು ಚಿಕ್ಕಂದಿನಿಂದಲೇ ಗುಲಾಮನನ್ನು ಕೋಮಲನಾಗಿ ಸಾಕಿದರೆ, ಕೊನೆಯಲ್ಲಿ ಅವನು ಮೊಂಡನಾಗಿರುವನು. PEPS
22. ಕೋಪಿಷ್ಠನು ಜಗಳ ಎಬ್ಬಿಸುವನು. ಉದ್ರೇಕಗೊಂಡವನು ಅನೇಕ ಪಾಪಗಳನ್ನು ಮಾಡುವನು. PEPS
23. ದುರಾಭಿಮಾನಿಯನ್ನು ಅವನ ದುರಾಭಿಮಾನವೇ ನಾಶಪಡಿಸುವುದು. ಆದರೆ ದೀನನನ್ನು ಬೇರೆ ಜನರು ಗೌರವಿಸುವರು. PEPS
24. ಕಳ್ಳನ ಸಂಗಡಿಗನು ತನಗೆ ತಾನೆ ಕಡುವೈರಿ. ಸಾಕ್ಷಿ ಹೇಳದ ಜನರಿಗೆ ಬರತಕ್ಕ ಶಾಪದ ಬಗ್ಗೆ ಕೇಳಿದರೂ ಅವನು ಹೇಳುವುದಿಲ್ಲ. PEPS
25. ಮನುಷ್ಯರ ಭಯ ಉರುಲಾಗಬಹುದು. ಆದರೆ ಯೆಹೋವನ ಮೇಲಿರುವ ಭರವಸೆ ಕ್ಷೇಮವಾಗಿಡುವುದು. PEPS
26. ಅನೇಕರು ಅಧಿಪತಿಯಿಂದ ಸಹಾಯ ಬಯಸುವರು. ಆದರೆ ನ್ಯಾಯ ದೊರೆಯುವುದು ಯೆಹೋವನಿಂದಲೇ. PEPS
27. ಒಳ್ಳೆಯವರಿಗೆ ಯಥಾರ್ಥರಲ್ಲದವರು ಅಸಹ್ಯ. ಕೆಡುಕರು ಯಥಾರ್ಥರನ್ನು ದ್ವೇಷಿಸುವರು. PE
Total 31 Chapters, Current Chapter 29 of Total Chapters 31
×

Alert

×

kannada Letters Keypad References