1. ಶೆ ಪವಿತ್ರಗುಡಾರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿದ ಮೇಲೆ ಅದನ್ನು ಅದರ ವಸ್ತುಗಳೊಡನೆ, ಯಜ್ಞವೇದಿಕೆಯೊಡನೆ ಮತ್ತು ಅದರ ಎಲ್ಲಾ ಉಪಕರಣಗಳೊಡನೆ ಯೆಹೋವನಿಗಾಗಿ ಅಭಿಷೇಕಿಸಿ ಪ್ರತಿಷ್ಠಿಸಿದನು. ಇವು ಯೆಹೋವನ ಆರಾಧನೆಗಾಗಿ ಮಾತ್ರ ಉಪಯೋಗಿಸಲ್ಪಡುತ್ತವೆಂದು ಹೀಗೆ ಪ್ರತ್ಯೇಕಿಸಲ್ಪಟ್ಟವು.
|
2. ಬಳಿಕ ಇಸ್ರೇಲಿನ ಪ್ರಧಾನ ಪುರುಷರು, ಅವರ ಕುಟುಂಬಗಳ ನಾಯಕರು ಅಂದರೆ ಜನಗಣತಿಯ ಮೇಲ್ವಿಚಾರಣೆಯನ್ನು ಸಹ ವಹಿಸಿಕೊಂಡಿದ್ದ
|
3. ಗೋತ್ರ ಪ್ರಧಾನರು ಮುಂದೆ ಬಂದು, ತಮ್ಮ ಕಾಣಿಕೆಗಳನ್ನು ಸಮರ್ಪಿಸಿದರು. ಇಬ್ಬಿಬ್ಬರು ಆರು ಕಮಾನು ಬಂಡಿಗಳನ್ನೂ ಅವುಗಳನ್ನು ಎಳೆಯುವುದಕ್ಕೆ ಆರು ಜೊತೆ ಎತ್ತುಗಳನ್ನೂ ಕೊಟ್ಟರು. ಪ್ರಧಾನರು ಇವುಗಳನ್ನು ಪವಿತ್ರಗುಡಾರದಲ್ಲಿ ಯೆಹೋವನಿಗೆ ಒಪ್ಪಿಸಿದರು.
|
5. “ಪ್ರಧಾನರಿಂದ ಈ ಕಾಣಿಕೆಗಳನ್ನು ಸ್ವೀಕರಿಸು. ಇವು ದೇವದರ್ಶನಗುಡಾರದ ವರ್ಗಾವಣೆಗೆ ಉಪಯೋಗಿಸಲ್ಪಡಲಿ. ಇವುಗಳನ್ನು ಲೇವಿಯರಿಗೆ ಕೊಡು. ಅವರು ತಮ್ಮ ಕೆಲಸಗಳನ್ನು ಮಾಡಲು ಇದು ಸಹಾಯ ಮಾಡುವುದು.”
|
7. ಅವನು ಗೇರ್ಷೋನ್ ಗೋತ್ರಪುರುಷರಿಗೆ ಅವರ ಕೆಲಸಕ್ಕೆ ಅಗತ್ಯವಾಗಿದ್ದ ಎರಡು ಬಂಡಿಗಳನ್ನು ಮತ್ತು ಎರಡು ಜೊತೆ ಎತ್ತುಗಳನ್ನು ಕೊಟ್ಟನು.
|
8. ಬಳಿಕ ಮೆರಾರೀಯರ ಕೆಲಸಕ್ಕೆ ಬೇಕಾಗಿದ್ದ ನಾಲ್ಕು ಬಂಡಿಗಳನ್ನೂ ನಾಲ್ಕು ಜೊತೆ ಎತ್ತುಗಳನ್ನೂ ಅವರಿಗೆ ಕೊಟ್ಟನು. ಇವರೆಲ್ಲರು ಮಾಡುವ ಕೆಲಸಕ್ಕೆ ಯಾಜಕನಾದ ಆರೋನನ ಮಗನಾದ ಈತಾಮಾರನು ಮೇಲ್ವಿಚಾರಕನಾಗಿದ್ದನು.
|
9. ಮೋಶೆಯು ಕೆಹಾತ್ಯರಿಗೆ ಎತ್ತುಗಳನ್ನಾಗಲಿ ಬಂಡಿಗಳನ್ನಾಗಲಿ ಕೊಡಲಿಲ್ಲ. ಯಾಕೆಂದರೆ ಅವರು ಪವಿತ್ರವಸ್ತುಗಳನ್ನು ತಮ್ಮ ಭುಜದ ಮೇಲೆ ಹೊರಬೇಕು. ಅವರಿಗೆ ಈ ಕೆಲಸವು ಕೊಡಲ್ಪಟ್ಟಿತು.
|
10. ವೇದಿಕೆಯು ಅಭಿಷೇಕಿಸಲ್ಪಟ್ಟಾಗ, ಯಜ್ಞವೇದಿಕೆಯ ಆರಂಭಕ್ಕಾಗಿ ಪ್ರಧಾನರು ಸಹ ತಮ್ಮ ಕಾಣಿಕೆಗಳನ್ನು ವೇದಿಕೆಯ ಮುಂದೆ ತಂದರು.
|
11. ಯೆಹೋವನು ಮೋಶೆಗೆ, “ಪ್ರತಿದಿನ ಒಬ್ಬ ಪ್ರಧಾನನು ವೇದಿಕೆಯ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ತರಬೇಕು” ಎಂದು ಆಜ್ಞಾಪಿಸಿದನು.
|
84. ಇವೆಲ್ಲವೂ ಇಸ್ರೇಲರ ಪ್ರಧಾನರು ತಂದ ಕಾಣಿಕೆಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಯಜ್ಞವೇದಿಕೆಗೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವುಗಳೇ. ಅವರು ಹನ್ನೆರಡು ಬೆಳ್ಳಿಯ ತಟ್ಟೆಗಳನ್ನೂ ಹನ್ನೆರಡು ಬೆಳ್ಳಿಯ ಬಟ್ಟಲುಗಳನ್ನೂ ಹನ್ನೆರಡು ಚಿನ್ನದ ಧೂಪಾರತಿಗಳನ್ನೂ ತಂದರು.
|
85. ಪ್ರತಿಯೊಂದು ಬೆಳ್ಳಿಯ ತಟ್ಟೆಯ ತೂಕ ಸುಮಾರು ಮೂರುಕಾಲು ಪೌಂಡುಗಳು, ಪ್ರತಿ ಬಟ್ಟಲು ಸುಮಾರು ಮೂರುಮುಕ್ಕಾಲು ಪೌಂಡು ತೂಕವುಳ್ಳದ್ದಾಗಿದ್ದವು. ಬೆಳ್ಳಿಯ ತಟ್ಟೆಗಳು ಮತ್ತು ಬೆಳ್ಳಿಯ ಬಟ್ಟಲುಗಳು ಒಟ್ಟಿಗೆ ಅಧಿಕೃತ ಅಳತೆಯ ಪ್ರಕಾರ ಅರವತ್ತು ಪೌಂಡುಗಳಷ್ಟು ತೂಕವಾಗಿದ್ದವು.
|
86. ಧೂಪವುಳ್ಳ ಹನ್ನೆರಡು ಚಿನ್ನದ ಧೂಪಾರತಿಗಳಲ್ಲಿ ಪ್ರತಿಯೊಂದು ಧೂಪಾರತಿ ಅಧಿಕೃತ ಅಳತೆಯ ಪ್ರಕಾರ ಹತ್ತು ತೊಲೆ ತೂಕವುಳ್ಳದ್ದಾಗಿತ್ತು. ಹನ್ನೆರಡು ಚಿನ್ನದ ಧೂಪಾರತಿಗಳು ಒಟ್ಟಿಗೆ ನೂರಿಪ್ಪತ್ತು ತೊಲೆಗಳಷ್ಟು ತೂಕವುಳ್ಳದ್ದಾಗಿದ್ದವು.
|
87. ಸರ್ವಾಂಗಹೋಮಕ್ಕಾಗಿ ಉಪಯೋಗಿಸಲ್ಪಟ್ಟ ಒಟ್ಟು ಪಶುಗಳು: ಹನ್ನೆರಡು ಹೋರಿಗಳು, ಹನ್ನೆರಡು ಟಗರುಗಳು, ಒಂದು ವರುಷದ ಎರಡು ಗಂಡು ಕುರಿಮರಿಗಳು. ಆ ಸಮರ್ಪಣೆಗಳೊಂದಿಗೆ ಧಾನ್ಯಸಮರ್ಪಣೆಗಳೂ ಅರ್ಪಿಸಲ್ಪಟ್ಟವು. ದೋಷಪರಿಹಾರಕ ಯಜ್ಞವಾಗಿ ಹನ್ನೆರಡು ಹೋತಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟವು.
|
88. ಸಮಾಧಾನ ಯಜ್ಞಕ್ಕಾಗಿಯೂ ಪ್ರಧಾನರು ಪಶುಗಳನ್ನು ಕೊಟ್ಟರು. ಅವುಗಳ ಒಟ್ಟು ಸಂಖ್ಯೆ ಇಪ್ಪತ್ನಾಲ್ಕು ಹೋರಿಗಳು, ಅರವತ್ತು ಟಗರುಗಳು, ಅರವತ್ತು ಹೋತಗಳು, ಒಂದು ವರುಷದ ಅರವತ್ತು ಗಂಡು ಕುರಿಮರಿಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಅದಕೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವೇ.
|
89. ಮೋಶೆ ಯೆಹೋವನ ಸಂಗಡ ಮಾತಾಡಲು ದೇವದರ್ಶನಗುಡಾರದೊಳಗೆ ಹೋದಾಗ, ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯ ಹೊದಿಕೆಯ ಮೇಲಿದ್ದ ಎರಡು ಕೆರೂಬಿಗಳ ಮಧ್ಯದಿಂದ ಯೆಹೋವನ ಸ್ವರವು ಮೋಶೆಗೆ ಕೇಳಿಸಿತು. ಹೀಗೆ ಆತನು ಅವನ ಸಂಗಡ ಮಾತಾಡಿದನು.
|