1. ಇಸ್ರೇಲರು ಅಖಾಸಿಯದ ಸಮೀಪದಲ್ಲಿ ಇಳಿದುಕೊಂಡಿದ್ದರು. ಅವರು ಅಲ್ಲಿದ್ದಾಗ ಮೋವಾಬ್ ಸ್ತ್ರೀಯರೊಡನೆ ಲೈಂಗಿಕ ಪಾಪಗಳನ್ನು ಮಾಡತೊಡಗಿದರು.
|
4. ಯೆಹೋವನು ಮೋಶೆಗೆ, “ನೀನು ಜನರ ನಾಯಕರನ್ನೆಲ್ಲ ಬಂಧಿಸಿ ಯೆಹೋವನ ಮುಂದೆ ಬಹಿರಂಗವಾಗಿ ಅವರನ್ನು ನೇಣುಗಂಬಕ್ಕೆ ಏರಿಸು. ಹೀಗೆ ಯೆಹೋವನ ಕೋಪಾಗ್ನಿಯನ್ನು ಇಸ್ರೇಲರಿಂದ ತೊಲಗಿಸಬೇಕು” ಎಂದು ಹೇಳಿದನು.
|
5. ಆದಕಾರಣ ಮೋಶೆ ಇಸ್ರೇಲರ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಪ್ರತಿಯೊಬ್ಬನು, ಸುಳ್ಳುದೇವರಾದ ಪೆಗೋರದ ಬಾಳನನ್ನು ಆರಾಧಿಸುವಂತೆ ಜನರನ್ನೂ ಪ್ರೋತ್ಸಾಹಿಸಿದವರನ್ನು ಕಂಡು ಹಿಡಿದು ನೀವು ಅವರನ್ನು ಕೊಲ್ಲಬೇಕು” ಎಂದು ಆಜ್ಞಾಪಿಸಿದನು.
|
6. ಆಗ ಮೋಶೆ ಮತ್ತು ಇಡೀ ಇಸ್ರೇಲ್ ಸಮುದಾಯವು ಒಟ್ಟಾಗಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಅಳುತ್ತಿದ್ದರು. ಅಷ್ಟರಲ್ಲಿ ಇಸ್ರೇಲ್ ಮನುಷ್ಯನೊಬ್ಬನು ಮಿದ್ಯಾನ್ ಸ್ತ್ರೀಯೊಬ್ಬಳನ್ನು ತನ್ನ ಸಂಬಂಧಿಕರ ಬಳಿಗೆ ಕರೆದುಕೊಂಡು ಬಂದನು. ಮೋಶೆಯ ಮತ್ತು ಎಲ್ಲಾ ಜನರ ಕಣ್ಣೆದುರಿನಲ್ಲೇ ಅವನು ಹೀಗೆ ಮಾಡಿದನು.
|
7. ಕೂಡಲೇ ಯಾಜಕನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ತೆಗೆದುಕೊಂಡು
|
8. ಆ ಇಸ್ರೇಲನನ್ನು ಹಿಂಬಾಲಿಸಿ ಮಲಗುವ ಕೋಣೆಯೊಳಗೆ ಹೋಗಿ ಅವನನ್ನೂ ಆ ಮಿದ್ಯಾನ್ ಸ್ತ್ರೀಯನ್ನೂ ಒಂದೇ ಏಟಿನಿಂದ ಹೊಟ್ಟೆಯಲ್ಲಿ ತಿವಿದು ಕೊಂದನು. ಆಗ ಇಸ್ರೇಲರಿಗುಂಟಾದ ವ್ಯಾಧಿ ನಿಂತುಹೋಯಿತು.
|
13. ಆ ಒಡಂಬಡಿಕೆಯ ಪ್ರಕಾರವಾಗಿ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ಮಾತು ಕೊಡುತ್ತೇನೆ. ಅವನು ತನ್ನ ದೇವರ ಗೌರವವನ್ನು ಕಾಪಾಡಿ ಇಸ್ರೇಲರಿಗೋಸ್ಕರ ದೋಷಪರಿಹಾರವನ್ನು ಮಾಡಿದ್ದರಿಂದ ನಾನು ಅವನಿಗೆ ಈ ಮಾತನ್ನು ಕೊಟ್ಟಿದ್ದೇನೆ” ಎಂದು ಹೇಳಿದನು.
|
14. ಆ ಮಿದ್ಯಾನ್ ಸ್ತ್ರೀಯೊಡನೆ ಕೊಲ್ಲಲ್ಪಟ್ಟವನು ಸಿಮೆಯೋನ್ ಕುಲದವರಲ್ಲಿ ಗೋತ್ರಪ್ರಧಾನನಾಗಿದ್ದ ಜಿಮ್ರೀ. ಇವನು ಸಾಲೂ ಎಂಬವನ ಮಗ.
|
18. ಯಾಕೆಂದರೆ ಅವರು ನಿಮ್ಮನ್ನು ವೈರಿಗಳೆಂದು ಪರಿಗಣಿಸಿ ಪೆಗೋರನ ಘಟನೆಯಲ್ಲಿ ನಿಮ್ಮನ್ನು ಮೋಸಗೊಳಿಸಿದರು. ಮಿದ್ಯಾನಿನ ನಾಯಕನೊಬ್ಬನ ಮಗಳೂ ತಮ್ಮ ರಕ್ತಸಂಬಂಧಿಯೂ ಆಗಿದ್ದ ಕೊಜ್ಬೀಯ ವಿಷಯದಲ್ಲಿಯೂ ಅವರು ನಿಮ್ಮನ್ನು ಮೋಸಗೊಳಿಸಿದರು. ಪೆಗೋರಿನ ಘಟನೆಯಿಂದ ಇಸ್ರೇಲರಿಗೆ ಕಾಯಿಲೆ ಉಂಟಾದಾಗ ಆ ಸ್ತ್ರೀಯೂ ಸತ್ತಳು.”
|