1. {ಜನರ ದುಷ್ಟ ಯೋಚನೆಗಳು} [PS] ಪಾಪಮಾಡಲು ಯೋಚಿಸುವವರಿಗೆ ಸಂಕಟವು ಒದಗುವದು. [QBR2] ಇವರು ಹಾಸಿಗೆಯ ಮೇಲೆ ಬಿದ್ದುಕೊಂಡು ಪಾಪಮಾಡಲು ಯೋಚಿಸುತ್ತಾರೆ. [QBR] ಬೆಳಿಗ್ಗೆ ಸೂರ್ಯ ಮೂಡಲು ತಾವು ಯೋಚಿಸಿದ ಪಾಪವನ್ನು ಕಾರ್ಯಗತ ಮಾಡುತ್ತಾರೆ. [QBR2] ಯಾಕೆ? ಯಾಕೆಂದರೆ ಅವರಿಗೆ ತಮ್ಮ ಇಷ್ಟಪ್ರಕಾರ ನಡೆದುಕೊಳ್ಳಲು ಬಲವಿದೆ. [QBR]
2. ಅವರಿಗೆ ಹೊಲಗದ್ದೆಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. [QBR2] ಅವರಿಗೆ ಮನೆಮಠಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. [QBR] ಒಬ್ಬನಿಗೆ ಮೋಸಮಾಡಿ ಅವನ ಮನೆಯನ್ನು ಕಿತ್ತುಕೊಳ್ಳುವರು. [QBR2] ಇನ್ನೊಬ್ಬನಿಗೆ ಮೋಸಮಾಡಿ ಅವನ ಹೊಲಗದ್ದೆಗಳನ್ನು ಕಿತ್ತುಕೊಳ್ಳುವರು.
3. {ಜನರನ್ನು ಶಿಕ್ಷಿಸಲು ಯೆಹೋವನ ಯೋಜನೆ} [PS] ಅದಕ್ಕಾಗಿಯೇ ಯೆಹೋವನು ಹೀಗೆ ಹೇಳುತ್ತಾನೆ: [QBR] “ನೋಡಿ, ನಾನು ಈ ಕುಟುಂಬದ ವಿರುದ್ಧವಾಗಿ ಸಂಕಟ ತರಲು ಯೋಚಿಸುತ್ತಿದ್ದೇನೆ. [QBR2] ನಿನ್ನನ್ನು ನೀನು ರಕ್ಷಿಸಲು ಸಾಧ್ಯವಿರುವುದಿಲ್ಲ. [QBR] ಭಯಂಕರ ದಿವಸಗಳು ಬರುವದರಿಂದ [QBR2] ನೀನು ಉಬ್ಬಿಕೊಳ್ಳುವುದನ್ನು ನಿಲ್ಲಿಸುವೆ. [QBR]
4. ಆಗ ಜನರು ನಿಮ್ಮ ಬಗ್ಗೆ ಹಾಡನ್ನು ಹಾಡುವರು. [QBR2] ಜನರು ಶೋಕಗೀತೆಯನ್ನು ಹಾಡುವರು. [QBR] ‘ನಾವು ನಾಶವಾದೆವು! [QBR2] ಯೆಹೋವನು ನಮ್ಮ ದೇಶವನ್ನು ನಮ್ಮಿಂದ ತೆಗೆದುಕೊಂಡು ಇತರ ಜನರಿಗೆ ಕೊಟ್ಟನು. [QBR] ಹೌದು, ಆತನು ನಮ್ಮ ಭೂಮಿಯನ್ನು ನಮ್ಮಿಂದ ತೆಗೆದುಕೊಂಡುಬಿಟ್ಟನು, [QBR2] ನಮ್ಮ ಗದ್ದೆಗಳನ್ನು ಯೆಹೋವನು ನಮ್ಮ ವೈರಿಗಳಿಗೆ ಪಾಲು ಮಾಡಿಕೊಟ್ಟನು. [QBR]
5. ಈಗ ನಾವು ನಮ್ಮ ದೇಶವನ್ನು ಅಳತೆಮಾಡಿ [QBR2] ದೇವಜನರಿಗೆ ಹಂಚಲು ಆಗುವದಿಲ್ಲ.’ ”
6. {ಮೀಕನನ್ನು ಬೋಧಿಸಬಾರದೆಂದು ಹೇಳಿದ್ದು} [PS] ಜನರು, “ನೀನು ನಮಗೆ ಬೋಧಿಸಬೇಡ, [QBR2] ಆ ಕೆಟ್ಟವಿಷಯಗಳನ್ನು ನಮಗೆ ಹೇಳಬೇಡ, [QBR2] ನಮಗೆ ಯಾವ ಕೆಟ್ಟ ವಿಷಯವೂ ಸಂಭವಿಸುವುದಿಲ್ಲ” ಎಂದು ಹೇಳುತ್ತಾರೆ.
7. ಆದರೆ ಯಾಕೋಬಿನ ಜನರೇ, [QBR2] ನಾನು ನಿಮಗೆ ಹೇಳಲೇಬೇಕು. [QBR] ನಿಮ್ಮ ದುಷ್ಟತನದ ನಿಮಿತ್ತ ಯೆಹೋವನು [QBR2] ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. [QBR] ನೀವು ನ್ಯಾಯವಾದ ರೀತಿಯಲ್ಲಿ ಜೀವಿಸುತ್ತಿದ್ದರೆ [QBR2] ನಾನು ನಿಮಗೆ ಒಳ್ಳೆಯ ಸಂಗತಿಗಳನ್ನು ತಿಳಿಸುತ್ತಿದ್ದೆ. [QBR]
8. ಆದರೆ ನನಗೆ ವೈರಿಯಂತೆ [*ವೈರಿಯಂತೆ ಯೆಹೋವನ ವಿರುದ್ಧವಾಗಿ ಅಥವಾ ತಮಗೆ ವಿರುದ್ಧವಾಗಿ ತಾವೇ.] ಎದ್ದುನಿಂತಿರುವ ನನ್ನ ಜನರೇ, [QBR2] ನೀವು ಹಾದುಹೋಗುವವರ ಬಟ್ಟೆಯನ್ನು ಅವರ ಬೆನ್ನಿನ ಮೇಲಿಂದ ಕಿತ್ತುಕೊಳ್ಳುತ್ತೀರಿ. [QBR] ನಿಭರ್ಯವಾಗಿ ಓಡಾಡುವ ಜನರಿಂದ [QBR2] ಕೈದಿಗಳೋ ಎಂಬಂತೆ ಸುಲಿದುಕೊಳ್ಳುತ್ತೀರಿ. [QBR]
9. ನನ್ನ ಜನರು ಸ್ತ್ರೀಯರ ಕೈಯಿಂದ [QBR2] ಅಂದವಾದ ಮನೆಗಳನ್ನು ಕಿತ್ತುಕೊಂಡಿದ್ದೀರಿ; [QBR] ಅವರ ಚಿಕ್ಕಮಕ್ಕಳಿಂದ ನನ್ನ ಐಶ್ವರ್ಯವನ್ನು [QBR2] ನಿರಂತರಕ್ಕೂ ಕಿತ್ತುಕೊಂಡಿದ್ದೀರಿ. [QBR]
10. ಎದ್ದು ಈ ಸ್ಥಳವನ್ನು ಬಿಟ್ಟುಹೋಗು. [QBR2] ಇದು ನಿನ್ನ ವಿಶ್ರಾಂತಿಯ ಸ್ಥಳವಲ್ಲ, ಯಾಕೆಂದರೆ ನೀನು ಇದನ್ನು ಹಾಳು ಮಾಡಿರುವೆ. [QBR] ನೀನು ಇದನ್ನು ಹೊಲಸು ಮಾಡಿರುವೆ, [QBR2] ಆದ್ದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕೆಡವಲ್ಪಡುವದು.
11. ಈ ಜನರು ನನ್ನ ಮಾತುಗಳನ್ನು ಕೇಳಲು ಇಷ್ಟಪಡುವದಿಲ್ಲ. [QBR2] ಆದರೆ ಬೇರೊಬ್ಬನ ಸುಳ್ಳು ಮಾತುಗಳನ್ನು ಕೇಳಲು ಇಷ್ಟಪಡುವರು. [QBR] ಸುಳ್ಳು ಪ್ರವಾದಿಯು ಬಂದು, “ನಿಮಗೆ ಒಳ್ಳೆಯ ಭವಿಷ್ಯವಿದೆ. [QBR2] ಬೇಕಾದಷ್ಟು ದ್ರಾಕ್ಷಾರಸ, ಮದ್ಯವು ನಿಮಗೆ ದೊರಕುವವು” ಎಂದು ಹೇಳಿದರೆ ಅವರು ಅವನನ್ನು ನಂಬಿ ಸ್ವೀಕರಿಸಿಕೊಳ್ಳುವರು.
12. {ಯೆಹೋವನು ತನ್ನ ಜನರನ್ನು ಒಟ್ಟುಗೂಡಿಸುತ್ತಾನೆ} [PS] ಯಾಕೋಬಿನ ಜನರೇ, ನಾನು ನಿಮ್ಮೆಲ್ಲರನ್ನು ಒಟ್ಟಾಗಿ ಸೇರಿಸುತ್ತೇನೆ. [QBR2] ಇಸ್ರೇಲಿನಲ್ಲಿ ಉಳಿದವರನ್ನೆಲ್ಲಾ ಒಟ್ಟುಗೂಡಿಸುತ್ತೇನೆ. [QBR] ಹಟ್ಟಿಯೊಳಗೆ ಕುರಿಗಳನ್ನು ಸೇರಿಸುವಂತೆ, [QBR2] ಹುಲ್ಲುಗಾವಲಿನಲ್ಲಿ ಕುರಿಮಂದೆ ಸೇರಿಸಲ್ಪಡುವಂತೆ ನಾನು ಅವರನ್ನು ಒಟ್ಟುಗೂಡಿಸುವೆನು. [QBR] ಆಗ ಆ ಸ್ಥಳವು ಜನಸಮೂಹದ [QBR2] ಗದ್ದಲದಿಂದ ತುಂಬಿಹೋಗುವುದು. [QBR]
13. ಆಗ ಒಡೆದುಹಾಕುವವನು [†ಒಡೆದುಹಾಕುವವನು ನಾಯಕ ಅಥವಾ “ಮೆಸ್ಸೀಯ.”] ಜನಗಳ ಮುಂದೆ ಮುನ್ನುಗ್ಗಿ ಹೋಗಿ, [QBR2] ದ್ವಾರಗಳನ್ನು ಒಡೆದುಹಾಕಿದಾಗ ಜನರು ಪಟ್ಟಣವನ್ನು ಬಿಟ್ಟುಹೋಗುವರು. [QBR] ಅವರು ತಮ್ಮ ರಾಜನನ್ನೂ ಕರ್ತನನ್ನೂ [QBR2] ಹಿಂಬಾಲಿಸಿಕೊಂಡು ಅಲ್ಲಿಂದ ಹೋಗುವರು. [PE]