1. {ಸಂಕಟದ ಅರ್ಥ} [PS] ಯೆಹೋವನ ರೌದ್ರ ದಂಡದಿಂದ [QBR2] ಸಂಕಟವನ್ನು ಅನುಭವಿಸಿರುವವನು ನಾನೇ! [QBR]
2. ಯೆಹೋವನು ನನ್ನನ್ನು ಬೆಳಕೇ ಇಲ್ಲದ [QBR2] ಕತ್ತಲೆಗೆ ನಡೆಸಿಕೊಂಡು ಬಂದನು. [QBR]
3. ಯೆಹೋವನು ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದನು. [QBR2] ಆತನು ಇಡೀ ದಿನವೆಲ್ಲಾ ಮತ್ತೆಮತ್ತೆ ಹಾಗೆಯೇ ಮಾಡಿದನು. [QBR]
4. ಆತನು ನನ್ನ ಮಾಂಸವನ್ನು ಮತ್ತು ಚರ್ಮವನ್ನು ಕಂದಿಸಿದ್ದಾನೆ. [QBR2] ಆತನು ನನ್ನ ಮೂಳೆಗಳನ್ನು ಮುರಿದುಹಾಕಿದನು. [QBR]
5. ಆತನು ನನ್ನನ್ನು ಕಠೋರತೆಯಿಂದಲೂ [QBR2] ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ. [QBR]
6. ಬಹುಕಾಲದ ಹಿಂದೆಯೇ ಸತ್ತಿರುವವರಂತೆ [QBR2] ನನ್ನನ್ನು ಕತ್ತಲೆಯಲ್ಲಿ ಕುಳ್ಳಿರಿಸಿದ್ದಾನೆ. [QBR]
7. ಯೆಹೋವನು ನನ್ನನ್ನು ಬಂಧಿಸಿ ನಾನು ಹೊರಗೆ ಬರಲಾಗದಂತೆ ಮಾಡಿದನು. [QBR2] ಆತನು ನನ್ನನ್ನು ಬಲವಾದ ಸರಪಣಿಗಳಿಂದ ಕಟ್ಟಿ ಹಾಕಿದನು. [QBR]
8. ನಾನು ಸಹಾಯಕ್ಕಾಗಿ ಅರಚಿಕೊಳ್ಳುವಾಗಲೂ ಕೂಗಿಕೊಳ್ಳುವಾಗಲೂ [QBR2] ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ. [QBR]
9. ಆತನು ನನ್ನ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದಾನೆ. [QBR2] ಆತನು ನನ್ನ ಹಾದಿಯನ್ನು ಡೊಂಕುಗೊಳಿಸಿದ್ದಾನೆ. [QBR]
10. ನನ್ನ ಪಾಲಿಗಂತೂ ಯೆಹೋವನು ಆಕ್ರಮಣಮಾಡಲು ಸಿದ್ಧವಾಗಿರುವ ಕರಡಿಯಂತೆಯೂ [QBR2] ಅಡಗಿಕೊಂಡಿರುವ ಸಿಂಹದಂತೆಯೂ ಇದ್ದಾನೆ. [QBR]
11. ಯೆಹೋವನು ನನ್ನನ್ನು ನನ್ನ ದಾರಿಯಿಂದ ಓಡಿಸಿದನು. [QBR2] ಆತನು ನನ್ನನ್ನು ಚೂರುಚೂರು ಮಾಡಿದನು. ಆತನು ನನ್ನನ್ನು ಅಸಹಾಯಕನನ್ನಾಗಿ ತೊರೆದುಬಿಟ್ಟಿದ್ದಾನೆ. [QBR]
12. ಆತನು ತನ್ನ ಬಿಲ್ಲನ್ನು ಸಜ್ಜುಗೊಳಿಸಿದನು. [QBR2] ಆತನು ತನ್ನ ಬಾಣಗಳಿಂದ ನನಗೆ ಗುರಿಯಿಟ್ಟನು. [QBR]
13. ಆತನು ನನ್ನ ಹೊಟ್ಟೆಗೆ [QBR2] ತನ್ನ ಬಾಣಗಳಿಂದ ಹೊಡೆದನು. [QBR]
14. ನನ್ನ ಜನರಿಗೆಲ್ಲಾ ಹಾಸ್ಯಾಸ್ಪದವಾಗಿದ್ದೇನೆ. [QBR2] ದಿನವೆಲ್ಲಾ ಅವರು ನನ್ನ ಬಗ್ಗೆ ಹಾಡುಗಳನ್ನು ಹಾಡುತ್ತಾ ಗೇಲಿ ಮಾಡುತ್ತಾರೆ. [QBR]
15. ಯೆಹೋವನು ನನಗೆ ಕುಡಿಯಲು ಈ ವಿಷವನ್ನು (ಶಿಕ್ಷೆಯನ್ನು) ಕೊಟ್ಟನು. [QBR2] ಕಹಿಯಾದ ಈ ಪಾನೀಯದಿಂದ ಆತನು ನನ್ನನ್ನು ತುಂಬಿಸಿದನು. [QBR]
16. ಯೆಹೋವನು ನನಗೆ ನುರುಜುಗಲ್ಲನ್ನು ಮುಕ್ಕಿಸಿ ನನ್ನ ಹಲ್ಲುಗಳನ್ನು ಮುರಿದುಹಾಕಿದ್ದಾನೆ. [QBR2] ಆತನು ನನ್ನನ್ನು ಧೂಳಿಗೆ ಹಾಕಿ ತುಳಿದಿದ್ದಾನೆ. [QBR]
17. ಇನ್ನೆಂದಿಗೂ ಸಮಾಧಾನವೇ ಇರುವುದಿಲ್ಲವೆಂದುಕೊಂಡೆನು. [QBR2] ನಾನು ಸಂತೋಷವನ್ನು ಮರೆತುಬಿಟ್ಟೆನು. [QBR]
18. ನಾನು ನನ್ನೊಳಗೆ, “ಯೆಹೋವನು ನನಗೆ ಸಹಾಯ ಮಾಡುತ್ತಾನೆ [QBR2] ಎಂಬ ನಿರೀಕ್ಷೆ ಇನ್ನೆಂದಿಗೂ ನನಗಿಲ್ಲ” ಎಂದು ಕೊಂಡೆನು. [QBR]
19. ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು [QBR2] ನೆನಸಿಕೊಂಡರೆ ಅದು ಕಹಿ ವಿಷದಂತಿದೆ. [QBR]
20. ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು, [QBR2] ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ. [QBR]
21. ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು. [QBR2] ನಾನು ಯೋಚಿಸಿಕೊಳ್ಳುವದೇನೆಂದರೆ: [QBR]
22. ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ. [QBR2] ಆತನ ದಯೆಗೆ ಅಂತ್ಯವೇ ಇಲ್ಲ. [QBR]
23. ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು. [QBR2] ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು! [QBR]
24. ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು; [QBR2] ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.
25. ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ. [QBR2] ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ. [QBR]
26. ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ [QBR2] ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು. [QBR]
27. ಯೌವನದಲ್ಲೇ ಸಂಕಟದ ನೊಗವನ್ನು [QBR2] ಹೊರುವುದು ಮನುಷ್ಯನಿಗೆ ಒಳ್ಳೆಯದು. [QBR]
28. ಯೆಹೋವನು ಈ ಸಂಕಟದ ನೊಗವನ್ನು [QBR2] ಅವನ ಮೇಲೆ ಹಾಕುವಾಗ ಅವನು ಮೌನವಾಗಿ ಕುಳಿತುಕೊಂಡಿರಬೇಕು. [QBR]
29. ಅವನು ದೀನತೆಯಿಂದ ತನ್ನ ಮುಖವನ್ನು ಧೂಳಿನಲ್ಲಿ ಹಾಕಬೇಕು. [QBR2] ಆಗ ಅವನ ಜೀವಕ್ಕೆ ನಿರೀಕ್ಷೆ ಇದ್ದರೂ ಇರಬಹುದು. [QBR]
30. ಆ ವ್ಯಕ್ತಿಯು ತನ್ನನ್ನು ಹೊಡೆಯುವವರಿಗೆ ತನ್ನ ಕೆನ್ನೆಯನ್ನು ಒಡ್ಡಬೇಕು. [QBR2] ಅವನು ತನಗೆ ಜನರಿಂದಾಗುವ ಗೇಲಿಯನ್ನು ಸಹಿಸಿಕೊಳ್ಳಬೇಕು. [QBR]
31. ಯೆಹೋವನು ಜನರನ್ನು ಶಾಶ್ವತವಾಗಿ ತೊರೆದುಬಿಡುವುದಿಲ್ಲ [QBR2] ಎಂಬುದು ಆ ವ್ಯಕ್ತಿಯ ನೆನಪಿನಲ್ಲಿರಬೇಕು. [QBR]
32. ಯೆಹೋವನು ಶಿಕ್ಷಿಸುವಾಗ ಕರುಣೆಯುಳ್ಳವನೂ ಆಗಿರುತ್ತಾನೆ. [QBR2] ಆತನು ತನ್ನ ಮಹಾಪ್ರೀತಿ ಮತ್ತು ಕನಿಕರಗಳಿಂದಲೇ ಕರುಣೆಯುಳ್ಳವನಾಗಿರುತ್ತಾನೆ.
33. ತಾನು ಜನರನ್ನು ಶಿಕ್ಷಿಸಬೇಕೆಂಬುದು ಯೆಹೋವನ ಬಯಕೆಯೇನಲ್ಲ. [QBR2] ತಾನು ಜನರನ್ನು ವ್ಯಸನಗೊಳಿಸಬೇಕೆಂಬುದು ಆತನಿಗೆ ಇಷ್ಟವಿಲ್ಲ. [QBR]
34. ಈ ಸಂಗತಿಗಳನ್ನು ಇಷ್ಟಪಡುವುದಿಲ್ಲ. ಯಾರೋ ಒಬ್ಬನು ಈ ಲೋಕದ ಕೈದಿಗಳನ್ನೆಲ್ಲಾ ತನ್ನ ಪಾದದ ಕೆಳಗೆ ಹಾಕಿ ತುಳಿಯುವುದನ್ನು ಆತನು ಇಷ್ಟಪಡುವುದಿಲ್ಲ. [QBR]
35. ಒಬ್ಬನು ಮತ್ತೊಬ್ಬನಿಗೆ ಅನ್ಯಾಯ ಮಾಡುವುದನ್ನು ಆತನು ಇಷ್ಟಪಡುವುದಿಲ್ಲ. [QBR2] ಆದರೆ ಕೆಲವರು ಆ ಕೆಟ್ಟಕಾರ್ಯಗಳನ್ನು ಮಹೋನ್ನತನಾದ ಯೆಹೋವನ ಎದುರಿನಲ್ಲಿಯೇ ಮಾಡುತ್ತಾರೆ. [QBR]
36. ವ್ಯಾಜ್ಯದಲ್ಲಿ ದೊರೆಯಬೇಕಾದ ನ್ಯಾಯವನ್ನು ದೊರೆಯದಂತೆ ಮಾಡುವುದು ಯೆಹೋವನಿಗೆ ಇಷ್ಟವಿಲ್ಲ. [QBR2] ಯೆಹೋವನು ಈ ಸಂಗತಿಗಳಲ್ಲಿ ಯಾವುದನ್ನೂ ಇಷ್ಟಪಡುವುದಿಲ್ಲ. [QBR]
37. ಯಾರೇ ಆಗಲಿ ತಾವು ಮುಂತಿಳಿಸಿದ್ದನ್ನು [QBR2] ಯೆಹೋವನು ಆಜ್ಞಾಪಿಸದ ಹೊರತು ಅದು ನೆರವೇರುವುದಿಲ್ಲ. [QBR]
38. ಕೆಟ್ಟವುಗಳೂ ಸಂಭವಿಸುವಂತೆ [QBR2] ಮಹೋನ್ನತನಾದ ಯೆಹೋವನು ಆಜ್ಞಾಪಿಸುತ್ತಾನೆ. [QBR]
39. ಜೀವಂತವಾಗಿರುವ ಯಾವ ವ್ಯಕ್ತಿಯೇ ಆಗಲಿ ತನ್ನ ಪಾಪಗಳ ನಿಮಿತ್ತ [QBR2] ಯೆಹೋವನ ಶಿಕ್ಷೆಗೆ ಗುರಿಯಾಗುವಾಗ ದೂರು ಹೇಳಕೂಡದು. [QBR]
40. ನಾವು ಏನು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಿ ನೋಡೋಣ. [QBR2] ಬಳಿಕ ಯೆಹೋವನಿಗೆ ಅಭಿಮುಖರಾಗೋಣ.
41. ಪರಲೋಕದ ದೇವರಿಗೆ ನಮ್ಮ ಹೃದಯಗಳನ್ನೂ [QBR2] ಕೈಗಳನ್ನೂ ಎತ್ತಿಹಿಡಿಯೋಣ. [QBR]
42. “ನಾವು ದಂಗೆ ಎದ್ದಿದ್ದೇವೆ ಮತ್ತು ಅವಿಧೇಯರಾಗಿದ್ದೇವೆ. [QBR2] ಆದ್ದರಿಂದ ನೀನು ನಮ್ಮನ್ನು ಕ್ಷಮಿಸಿಲ್ಲ. [QBR]
43. ನೀನು ನಮಗೆ ನಿನ್ನ ಕೋಪವನ್ನು ಹೊದಿಸಿ ನಮ್ಮನ್ನು ಓಡಿಸಿಬಿಟ್ಟೆ. [QBR2] ನೀನು ನಮ್ಮನ್ನು ನಿಷ್ಕರುಣೆಯಿಂದ ಕೊಂದುಹಾಕಿದೆ! [QBR]
44. ನೀನು ನಿನಗೆ ಮೋಡಗಳನ್ನು ಹೊದಿಸಿಕೊಂಡು [QBR2] ನಮ್ಮ ಯಾವ ಪ್ರಾರ್ಥನೆಯೂ ನಿನ್ನ ಬಳಿಗೆ ಬಾರದಂತೆ ಮಾಡಿದೆ. [QBR]
45. ನೀನು ನಮ್ಮನ್ನು ಇತರ ಜನಾಂಗಗಳಿಗೆ ಕಸದಂತೆಯೂ [QBR2] ಹೊಲಸಿನಂತೆಯೂ ಮಾಡಿದೆ. [QBR]
46. ನಮ್ಮ ಶತ್ರುಗಳೆಲ್ಲಾ [QBR2] ನಮ್ಮೊಂದಿಗೆ ಕೋಪದಿಂದ ಮಾತಾಡುತ್ತಾರೆ. [QBR]
47. ನಾವು ಭಯಗೊಂಡಿದ್ದೇವೆ. [QBR2] ನಾವು ಗುಂಡಿಯೊಳಗೆ ಬಿದ್ದಿದ್ದೇವೆ. [QBR] ನಮಗೆ ಬಹಳವಾಗಿ ನೋವಾಗಿದೆ! [QBR2] ನಾವು ಮುರಿದುಹೋದವರಾಗಿದ್ದೇವೆ!” [QBR]
48. ನನ್ನ ಕಣ್ಣೀರು ತೊರೆಗಳಂತೆ ಹರಿಯುತ್ತಿದೆ! [QBR2] ನನ್ನ ಜನರು ನಾಶವಾದ ಕಾರಣ ನಾನು ಗೋಳಾಡುತ್ತಿರುವೆ! [QBR]
49. ನನ್ನ ಕಣ್ಣೀರು ಸತತವಾಗಿ ಹರಿಯುತ್ತಿದೆ! [QBR2] ನಾನು ಗೋಳಾಡುತ್ತಲೇ ಇರುವೆನು! [QBR]
50. ಯೆಹೋವನೇ, ಕೆಳಗಿರುವ ನಮ್ಮನ್ನು [QBR2] ನೀನು ಬಗ್ಗಿ ನೋಡುವತನಕ ನಾನು ಗೋಳಾಡುತ್ತಲೇ ಇರುವೆನು! [QBR] ನೀನು ಪರಲೋಕದಿಂದ ನಮ್ಮನ್ನು ನೋಡುವತನಕ [QBR2] ನಾನು ಗೋಳಾಡುತ್ತಲೇ ಇರುವೆನು. [QBR]
51. ನನ್ನ ಪಟ್ಟಣದ ಯುವತಿಯರಿಗೆ ಸಂಭವಿಸಿದ್ದನ್ನು [QBR2] ನಾನು ನೋಡುವಾಗಲೆಲ್ಲ ನನ್ನ ಕಣ್ಣುಗಳು ನನ್ನನ್ನು ದುಃಖಗೊಳಿಸುತ್ತವೆ. [QBR]
52. ನಿಷ್ಕಾರಣವಾಗಿ ಜನರು ನನ್ನ ವೈರಿಗಳಾಗಿದ್ದು ನನ್ನನ್ನು ಪಕ್ಷಿಯಂತೆ ಬೇಟೆಯಾಡಿದರು. [QBR]
53. ನನ್ನ ಪ್ರಾಣವನ್ನು ಒಂದು ಗುಂಡಿಯಲ್ಲಿ ಕೊನೆಗಾಣಿಸಲು ಅವರು ಪ್ರಯತ್ನಿಸಿದರು. [QBR2] ಅವರು ನನಗೆ ಕಲ್ಲುಗಳನ್ನು ತೂರಿದರು. [QBR]
54. ನೀರು ನನ್ನ ತಲೆಯ ಮೇಲೆ ಏರಿತು. [QBR2] “ನಾನು ಸತ್ತುಹೋಗುತ್ತೇನೆ” ಎಂದುಕೊಂಡೆನು. [QBR]
55. ಯೆಹೋವನೇ, ಗುಂಡಿಯ ತಳದಿಂದ [QBR2] ನಾನು ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು. [QBR]
56. ನೀನು ನನ್ನ ಸ್ವರವನ್ನು ಕೇಳಿದೆ. [QBR2] ನೀನು ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಲಿಲ್ಲ; [QBR2] ನಿನ್ನನ್ನು ರಕ್ಷಿಸುವುದಿಲ್ಲ ಎಂದು ಹೇಳಲಿಲ್ಲ. [QBR]
57. ನಾನು ನಿನ್ನನ್ನು ಕರೆದಾಗ, ನೀನು ಸಮೀಪಕ್ಕೆ ಬಂದು, [QBR2] “ಭಯಪಡದಿರು” ಎಂದು ಹೇಳಿದೆ. [QBR]
58. ಯೆಹೋವನೇ, ನೀನು ನನ್ನ ಪರವಾಗಿ ಹೋರಾಡಿದೆ. [QBR2] ನನ್ನ ಪ್ರಾಣವನ್ನು ರಕ್ಷಿಸಿದೆ. [QBR]
59. ಯೆಹೋವನೇ, ನನಗಾಗಿರುವ ಅನ್ಯಾಯವನ್ನು ನೀನು ನೋಡಿರುವೆ. [QBR2] ವ್ಯಾಜ್ಯದಲ್ಲಿ ನನ್ನ ಪರವಾಗಿ ತೀರ್ಪು ನೀಡು. [QBR]
60. ನನ್ನ ಶತ್ರುಗಳು ನನ್ನ ಮೇಲೆ ಹೇಗೆ ಸೇಡನ್ನು ತೀರಿಸಿಕೊಂಡಿದ್ದಾರೆ ನೋಡು. [QBR2] ನನಗೆ ವಿರೋಧವಾಗಿ ಅವರು ಮಾಡಿದ ಎಲ್ಲಾ ಯೋಜನೆಗಳನ್ನು ನೋಡು. [QBR]
61. ಯೆಹೋವನೇ, ಅವರು ನನಗಾಡುವ ಗೇಲಿ ಮಾತನ್ನು ಕೇಳು. [QBR2] ಅವರು ನನ್ನ ವಿರುದ್ಧ ಮಾಡಿದ ಎಲ್ಲಾ ಯೋಜನೆಗಳನ್ನು ಕೇಳು. [QBR]
62. ನನ್ನ ಶತ್ರುಗಳ ಮಾತುಗಳು ಮತ್ತು ಆಲೋಚನೆಗಳು [QBR2] ಯಾವಾಗಲೂ ನನಗೆ ವಿರೋಧವಾಗಿವೆ. [QBR2]
63. ಯೆಹೋವನೇ, ನೋಡು! [QBR2] ಅವರು ಕುಳಿತುಕೊಂಡಿರುವಾಗಲೂ ನಿಂತುಕೊಂಡಿರುವಾಗಲೂ ನನ್ನನ್ನು ಹೇಗೆ ಗೇಲಿ ಮಾಡುತ್ತಾರೆ! [QBR]
64. ಯೆಹೋವನೇ, ನೀನು ಅವರಿಗೆ ಮುಯ್ಯಿತೀರಿಸು! [QBR2] ಅವರು ಮಾಡಿರುವುದಕ್ಕೆ ತಕ್ಕಂತೆ ಅವರನ್ನು ದಂಡಿಸು! [QBR]
65. ಅವರ ಹೃದಯವನ್ನು ಕಠಿಣಗೊಳಿಸು! [QBR2] ಬಳಿಕ ಅವರನ್ನು ಶಪಿಸು! [QBR]
66. ಕೋಪದಿಂದ ಅವರನ್ನು ಓಡಿಸಿಬಿಡು! ಅವರನ್ನು ನಾಶಮಾಡು! [QBR2] ಯೆಹೋವನೇ, ಅವರನ್ನು ಈ ಭೂಲೋಕದಿಂದಲೇ ಅಳಿಸಿಹಾಕು! [PE]