1. {ದೆಬೋರಳ ಜಯಗೀತೆ} [PS] ಇಸ್ರೇಲರು ಸೀಸೆರನನ್ನು ಸೋಲಿಸಿದ ದಿನ ದೆಬೋರಳು ಮತ್ತು ಅಬೀನೋವಮನ ಮಗನಾದ ಬಾರಾಕನು ಈ ಗೀತೆಯನ್ನು ಹಾಡಿದರು:
2. “ಇಸ್ರೇಲರು ಯುದ್ಧ ಸನ್ನದ್ಧರಾಗುತ್ತಿದ್ದಾರೆ; [QBR2] ಜನರು ಸ್ವಇಚ್ಛೆಯಿಂದ ಯುದ್ಧಕ್ಕೆ ಹೋಗಲು ಒಪ್ಪಿದ್ದಾರೆ; [QBR] ಯೆಹೋವನಿಗೆ ಸ್ತೋತ್ರವಾಗಲಿ!
3. “ಅರಸರೇ ಕೇಳಿರಿ, [QBR2] ಆಳುವವರೇ ಗಮನಿಸಿರಿ! [QBR] ನಾನು ಹಾಡುವೆನು. [QBR2] ನಾನು ಯೆಹೋವನನ್ನು ಕೀರ್ತಿಸುವೆನು. [QBR] ಇಸ್ರೇಲಿನ ದೇವರಾದ ಯೆಹೋವನಿಗೆ [QBR2] ನಾನು ಗಾನ ಮಾಡುವೆನು.
4. “ಯೆಹೋವನೇ, ನೀನು ಹಿಂದೆ ಸೆಯೀರಿನ ಪ್ರದೇಶದಿಂದ ಬಂದೆ. [QBR2] ನೀನು ಎದೋಮ್ಯರ ಪ್ರದೇಶದಿಂದ ನಡೆದುಕೊಂಡು ಹೋದೆ. [QBR] ನೀನು ನಡೆಯುವಾಗ ಭೂಮಿ ನಡುಗಿತು; ಆಕಾಶ ಹನಿಗರೆಯಿತು. [QBR2] ಮೇಘಮಂಡಲವು ಮಳೆಗರೆಯಿತು. [QBR]
5. ಸೀನಾಯಿ ಬೆಟ್ಟದ ದೇವರಾದ ಯೆಹೋವನ ಎದುರಿಗೆ, [QBR2] ಇಸ್ರೇಲರ ದೇವರಾದ ಯೆಹೋವನ ಎದುರಿಗೆ, ಪರ್ವತಗಳು ನಡುಗಿದವು.
6. “ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ ಯಾಯೇಲಳ ದಿನಗಳಲ್ಲಿಯೂ [QBR2] ಮುಖ್ಯಮಾರ್ಗಗಳು ಬರಿದಾಗಿದ್ದವು. [QBR2] ವ್ಯಾಪಾರಿಗಳು [*ವ್ಯಾಪಾರಿಗಳು ವ್ಯಾಪಾರಿಗಳ ಗುಂಪು. ಸಾಮಾನ್ಯವಾಗಿ ವ್ಯಾಪಾರಿ ಗಳು ತಮ್ಮ ಕತ್ತೆಗಳ ಅಥವಾ ಒಂಟೆಗಳ ಮೇಲೆ ಸರಕುಗಳನ್ನು ಹೇರಿ ಕೊಂಡು ಒಂದು ಗುಂಪಿನಲ್ಲಿ ಪ್ರಯಾಣ ಮಾಡುತ್ತಿದ್ದರು.] ಮತ್ತು ಪ್ರಯಾಣಿಕರು ಸೀಳುದಾರಿಯಿಂದ ಹೋಗುತ್ತಿದ್ದರು.
7. “ದೆಬೋರಳೇ, ನೀನು ಬರುವವರೆಗೆ, [QBR2] ನೀನು ಇಸ್ರೇಲರಿಗೆ ತಾಯಿಯಾಗಿ ಬರುವವರೆಗೆ, ಶೂರರೇ ಇರಲಿಲ್ಲ. [QBR2] ಇಸ್ರೇಲಿನಲ್ಲಿ ವೀರರೇ ಇರಲಿಲ್ಲ. [QBR]
8. ಅವರು ಹೊಸ ದೇವರುಗಳನ್ನು ಆರಿಸಿಕೊಂಡರು; [QBR2] ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು. [QBR] ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ [QBR2] ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ.
9. “ನನ್ನ ಹೃದಯವು ಇಸ್ರೇಲಿನ ಸೇನಾಧಿಪತಿಗಳ ಸಂಗಡವಿದೆ. [QBR2] ಈ ಸೇನಾಧಿಪತಿಗಳು ಇಸ್ರೇಲಿಗಾಗಿ ಯುದ್ಧಮಾಡಲು ಸ್ವಇಚ್ಛೆಯಿಂದ ಬಂದರು. [QBR] ಯೆಹೋವನಿಗೆ ಸ್ತೋತ್ರವಾಗಲಿ.
10. “ಬಿಳಿಯ ಕತ್ತೆಗಳ ಮೇಲೆ ಸವಾರಿ ಮಾಡುವವರೇ, [QBR2] ರತ್ನಗಂಬಳಿಯ ಮೇಲೆ ಕುಳಿತುಕೊಳ್ಳುವವರೇ, [QBR2] ಮಾರ್ಗಗಳ ಮೇಲೆ ಹೋಗುವ ಪ್ರಯಾಣಿಕರೇ, ಗಮನಿಸಿರಿ! [QBR]
11. ತಾಳ ಝಲ್ಲರಿಗಳ ಧ್ವನಿಯನ್ನು ಕೇಳಿರಿ; [QBR2] ಬಾವಿಗಳ ಹತ್ತಿರ ನೆರೆದ ಜನಸಮೂಹದ ಧ್ವನಿಯನ್ನು ಕೇಳಿರಿ; [QBR] ಅಲ್ಲಿ ಅವು ಯೆಹೋವನ ವಿಜಯದ ಬಗ್ಗೆ ಹೇಳುತ್ತವೆ. [QBR] ಯೆಹೋವನ ಜನರು ಪಟ್ಟಣ ದ್ವಾರದಲ್ಲಿ ಯುದ್ಧಕ್ಕೆ ಹೋದಾಗ [QBR2] ಇಸ್ರೇಲಿನಲ್ಲಿ ಅವರ ವಿಜಯದ ಬಗ್ಗೆ ಹೇಳುತ್ತವೆ.
12. “ಏಳು, ಏಳು ದೆಬೋರಳೇ! [QBR2] ಏಳು, ಎದ್ದೇಳು, ಒಂದು ಗೀತೆಯನ್ನು ಹಾಡು! [QBR] ಬಾರಾಕನೇ, ಏಳು! [QBR2] ಅಬೀನೋವಮನ ಮಗನೇ, ಹೋಗು; ನಿನ್ನ ಶತ್ರುಗಳನ್ನು ಸೆರೆ ಹಿಡಿದುಕೊ!
13. “ಆಗ ಬದುಕಿಕೊಂಡಿದ್ದವರು ನಾಯಕರ ಬಳಿಗೆ ಹೋದರು. [QBR2] ಯೆಹೋವನ ಜನರೇ, ನನ್ನೊಂದಿಗೂ ಸೈನಿಕರೊಂದಿಗೂ ಬನ್ನಿರಿ.
14. “ಅಮಾಲೇಕ್ ಪರ್ವತ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಎಫ್ರಾಯೀಮ್ಯರು ಬಂದರು; [QBR2] ನಿನ್ನನ್ನೂ ನಿನ್ನ ಜನರನ್ನೂ ಅನುಸರಿಸುತ್ತಿದ್ದ ಬೆನ್ಯಾಮೀನ್ಯರೂ ಬಂದರು; [QBR] ಮಾಕೀರನ ಕುಲದಿಂದ ನಾಯಕರು ಬಂದರು; [QBR2] ಜೆಬುಲೂನ್ ಕುಲದಿಂದ ನಾಯಕರು ಕಂಚಿನ ದೊಣ್ಣೆಗಳೊಡನೆ ಬಂದರು. [QBR]
15. ಇಸ್ಸಾಕಾರ್ ಕುಲದ ನಾಯಕರು ದೆಬೋರಳ ಜೊತೆಯಲ್ಲಿದ್ದರು. [QBR2] ಇಸ್ಸಾಕಾರ್ ಕುಲದವರು ಬಾರಾಕನಿಗೆ ನಂಬಿಗಸ್ತರಾಗಿದ್ದರು. [QBR2] ಅವರು ಕಾಲು ನಡಿಗೆಯಿಂದ ಕಣಿವೆಗೆ ಬಂದರು. “ರೂಬೇನ್ಯರೇ, ನಿಮ್ಮ ಸೈನ್ಯದಲ್ಲಿ ತುಂಬ ಶೂರರಿದ್ದಾರೆ. [QBR2]
16. ಹೀಗಿರಲು ನೀನು ಕುರಿಯ ಹಟ್ಟಿಗಳ ಗೋಡೆಗೆ ಒರಗಿಕೊಂಡು ಕುಳಿತಿರುವುದೇಕೆ? [QBR] ರೂಬೇನ್ಯರ ಶೂರ ಸೈನಿಕರು ಯುದ್ಧದ ಬಗ್ಗೆ ಬಹಳವಾಗಿ ಯೋಚಿಸಿದರು, [QBR2] ಆದರೆ ಕುರಿಗಳಿಗಾಗಿ ಬಾರಿಸುವ ಸಂಗೀತವನ್ನು ಕೇಳುತ್ತಾ ಮನೆಯಲ್ಲಿ ಇದ್ದುಬಿಟ್ಟರು. [QBR]
17. ಗಿಲ್ಯಾದಿನ ಜನರು ಜೋರ್ಡನ್ ನದಿಯ ಆಚೆಯ ದಡದಲ್ಲಿದ್ದ ತಮ್ಮ ಶಿಬಿರಗಳಲ್ಲಿ ಇದ್ದುಬಿಟ್ಟರು. [†ರೂಬೇನ್ಯರ … ಇದ್ದುಬಿಟ್ಟರು ಈ ಗೀತೆ ರೂಬೇನ್ಯರನ್ನು ತಮಾಷೆ ಮಾಡುತ್ತದೆ.] [QBR2] ದಾನ್ ಕುಲದವರೇ, ನೀವೇಕೆ ನಿಮ್ಮ ಹಡಗುಗಳಲ್ಲಿಯೇ ಉಳಿದುಬಿಟ್ಟಿರಿ? [QBR] ಆಶೇರ್ ಕುಲದವರು ಸಮುದ್ರತೀರದಲ್ಲಿರುವ [QBR2] ತಮ್ಮ ಸುರಕ್ಷಿತವಾದ ಬಂದರುಗಳಲ್ಲಿ ಉಳಿದುಕೊಂಡರು.
18. “ಆದರೆ ಜೆಬುಲೂನ್ಯರೂ ನಫ್ತಾಲ್ಯರೂ ಆ ಬೆಟ್ಟಗಳ ಮೇಲೆ [QBR2] ತಮ್ಮ ಜೀವವನ್ನೇ ಮುಡಿಪಾಗಿಟ್ಟು ಯುದ್ಧ ಮಾಡಿದರು. [QBR]
19. ಕಾನಾನ್ಯ ಅರಸರು ಬಂದು ಯುದ್ಧಮಾಡಿದರು; [QBR2] ಅವರು ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿರುವ ತಾನಾಕದಲ್ಲಿ ಹೋರಾಡಿದರು. [QBR2] ಆದರೆ ಅವರು ಯಾವ ಸಂಪತ್ತನ್ನು ತೆಗೆದುಕೊಂಡು ಹೋಗಲಿಲ್ಲ! [QBR]
20. ಪರಲೋಕದಿಂದ ನಕ್ಷತ್ರಗಳು ಯುದ್ಧ ಮಾಡಿದವು. [QBR2] ನಕ್ಷತ್ರಗಳು ಆಕಾಶಪಥದಿಂದ ಸೀಸೆರನೊಡನೆ ಯುದ್ಧ ಮಾಡಿದವು. [QBR]
21. ಪೂರ್ವಕಾಲದಿಂದ ಪ್ರಸಿದ್ಧವಾದ ಕೀಷೋನ್ ನದಿಯು [QBR2] ಸೀಸೆರನ ಜನರನ್ನು ಕೊಚ್ಚಿಕೊಂಡು ಹೋಯಿತು. [QBR] ನನ್ನ ಆತ್ಮವೇ, ಧೈರ್ಯದಿಂದ ಮುನ್ನುಗ್ಗು! [QBR]
22. ಸೀಸೆರನ ಬಲಿಷ್ಠವಾದ ಕುದುರೆಗಳು ಭರದಿಂದ ಓಡಿದವು. [QBR2] ಆ ಕುದುರೆಗಳ ಕಾಲುಗಳು ನೆಲಕ್ಕೆ ಅಪ್ಪಳಿಸಿದವು.
23. “ಮೇರೋಜ್ ಊರಿಗೆ ಶಾಪಹಾಕಿರಿ; [QBR2] ಅಲ್ಲಿಯ ಜನರಿಗೆ ಶಾಪಹಾಕಿರಿ; [QBR] ಏಕೆಂದರೆ ಅವರು ಯೆಹೋವನ ಸಹಾಯಕ್ಕೆ ತಮ್ಮ ಸೈನ್ಯದೊಂದಿಗೆ ಬರಲಿಲ್ಲ” [QBR2] ಎಂದನು ಯೆಹೋವನ ದೂತನು. [QBR]
24. ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳಿಗೆ [QBR2] ಎಲ್ಲ ಹೆಂಗಸರಿಗಿಂತಲೂ ಹೆಚ್ಚಿಗೆ ದೇವರ ಆಶೀರ್ವಾದವಾಗುವುದು. [QBR]
25. ಸೀಸೆರನು ನೀರು ಕೇಳಿದನು; [QBR2] ಯಾಯೇಲಳು ಅವನಿಗೆ ಹಾಲು ಕೊಟ್ಟಳು. [QBR] ಅರಸನಿಗೆ ಯೋಗ್ಯವಾದ ಬಟ್ಟಲಲ್ಲಿ [QBR2] ಅವಳು ಅವನಿಗೆ ಕೆನೆಯನ್ನು ತಂದಳು. [QBR]
26. ನಂತರ ಯಾಯೇಲಳು ಕೈಚಾಚಿ ಗುಡಾರದ ಗೂಟವನ್ನು ತೆಗೆದುಕೊಂಡಳು. [QBR2] ಅವಳು ಬಲಗೈಯನ್ನು ಚಾಚಿ ದೊಡ್ಡ ಕೊಡತಿಯನ್ನು ತೆಗೆದುಕೊಂಡಳು, [QBR] ಆ ಕೊಡತಿಯಿಂದ ಸೀಸೆರನ ತಲೆಯನ್ನು ಬಿರುಸಾಗಿ ಒಡೆದುಬಿಟ್ಟಳು; [QBR2] ಅವನ ಕಣತಲೆಗೆ ತಿವಿದು ಬಡಿದಳು. [QBR]
27. ಅವನು ಯಾಯೇಲಳ ಪಾದಗಳ ಬಳಿಯಲ್ಲಿ [QBR2] ಬಗ್ಗಿಕೊಂಡು ಉರುಳಿಬಿದ್ದನು; [QBR] ಅವನು ಅವಳ ಪಾದಗಳ ಬಳಿಯಲ್ಲಿ ಕುಸಿದುಬಿದ್ದನು. [QBR2] ಸೀಸೆರನು ಕುಸಿದುಬಿದ್ದಲ್ಲಿಯೇ ಸತ್ತನು.
28. “ಸೀಸೆರನ ತಾಯಿ ಕಿಟಿಕಿಯ ಮೂಲಕ ನೋಡಿದಳು; [QBR2] ಆಕೆಯು ತೆರೆಯ ಮೂಲಕ ನೋಡಿ ಕೂಗಿದಳು. [QBR] ‘ಸೀಸೆರನ ರಥಾಗಮನಕ್ಕೆ ಇಷ್ಟು ತಡವೇಕೆ? [QBR2] ಅವನ ರಥದ ಕುದುರೆಗಳ ಧ್ವನಿ ಬರಲು ಇಷ್ಟು ತಡವೇಕೆ?’ ಅಂದಳು.
29. “ಅವಳ ಸೇವಕಿಯರಲ್ಲಿ ಅತಿಬುದ್ಧಿವಂತಳು ಹೀಗೆ ಉತ್ತರಿಸಿದಳು. [QBR2] ಹೌದು, ಸೇವಕಿಯು ಉತ್ತರಿಸಿದಳು, [QBR]
30. ‘ಖಂಡಿತವಾಗಿ ಅವರು ಗೆದ್ದಿದ್ದಾರೆ, [QBR2] ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ! [QBR] ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ! [QBR2] ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು. [QBR] ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು. [QBR2] ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು; [QBR2] ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’
31. “ಯೆಹೋವನೇ, ನಿನ್ನ ವೈರಿಗಳೆಲ್ಲಾ ಹೀಗೇ ಸಾಯಲಿ; [QBR2] ಆದರೆ ನಿನ್ನನ್ನು ಪ್ರೀತಿಸುವವರೆಲ್ಲರೂ ಬಲವಾಗಿದ್ದು ಉದಯಿಸುವ ಸೂರ್ಯನಂತೆ ಬೆಳಗಲಿ!” [PS] ನಲವತ್ತು ವರ್ಷಗಳವರೆಗೆ ದೇಶದಲ್ಲಿ ಶಾಂತಿ ನೆಲೆಸಿತ್ತು. [PE]