ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಯೆಹೋಶುವ
1. {ಯಾಜಕರಿಗೆ ಮತ್ತು ಲೇವಿಕುಲದವರಿಗೆ ಪಟ್ಟಣಗಳು} [PS] ಲೇವಿ ಕುಲಾಧಿಪತಿಗಳು ಮಾತಾಡುವುದಕ್ಕಾಗಿ ಯಾಜಕನಾದ ಎಲ್ಲಾಜಾರನ, ನೂನನ ಮಗನಾದ ಯೆಹೋಶುವನ ಮತ್ತು ಇಸ್ರೇಲಿನ ಬೇರೆ ಕುಲಾಧಿಪತಿಗಳ ಬಳಿಗೆ ಹೋದರು.
2. ಇದು ಕಾನಾನ್ ದೇಶದ ಶೀಲೋವಿನಲ್ಲಿ ನಡೆಯಿತು. ಲೇವಿ ಕುಲಾಧಿಪತಿಗಳು ಅವರಿಗೆ, “ಯೆಹೋವನು ಮೋಶೆಗೆ ಆಜ್ಞಾಪಿಸಿರುವಂತೆ ನೀವು ನಮಗೆ ವಾಸಮಾಡುವುದಕ್ಕೆ ಪಟ್ಟಣಗಳನ್ನೂ ನಮ್ಮ ಪಶುಗಳು ಮೇಯುವುದಕ್ಕಾಗಿ ಹೊಲಗಳನ್ನೂ ಕೊಡಬೇಕು” ಎಂದು ಹೇಳಿದರು.
3. ಇಸ್ರೇಲರು ಯೆಹೋವನ ಈ ಆಜ್ಞೆಯನ್ನು ಪಾಲಿಸಿದರು. ಅವರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಅವುಗಳ ಸುತ್ತಮುತ್ತಲಿನ ಭೂಮಿಯನ್ನು ಕೊಟ್ಟರು: [PE][PS]
4. ಕೆಹಾತ್ಯರ ಒಂದು ಭಾಗಕ್ಕೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳ ಭೂ ಭಾಗದಿಂದ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು, ಕೆಹಾತ್ಯರು ಲೇವಿ ಕುಲದವನೂ ಯಾಜಕನೂ ಆದ ಆರೋನನ ಸಂತತಿಯವರಾಗಿದ್ದರು. [PE][PS]
5. ಉಳಿದೆಲ್ಲ ಕೆಹಾತ್ಯರಿಗೆ ಎಫ್ರಾಯೀಮ್, ದಾನ್ ಮತ್ತು ಮನಸ್ಸೆಯ ಅರ್ಧಕುಲದ ಪ್ರದೇಶಗಳಿಂದ ಹತ್ತು ಪಟ್ಟಣಗಳನ್ನು ಕೊಡಲಾಯಿತು. [PE][PS]
6. ಗೇರ್ಷೋನ್ಯ ಗೋತ್ರದವರಿಗೆ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು. ಈ ಪಟ್ಟಣಗಳು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧಕುಲದವರಿಗೆ ಸೇರಿದ ಪ್ರದೇಶಗಳಲ್ಲಿದ್ದವು. [PE][PS]
7. ಮೆರಾರೀ ಗೋತ್ರದವರಿಗೆ ಹನ್ನೆರಡು ಪಟ್ಟಣಗಳನ್ನು ಕೊಡಲಾಯಿತು. ಈ ಹನ್ನೆರಡು ಪಟ್ಟಣಗಳು ರೂಬೇನ್, ಗಾದ್ ಮತ್ತು ಜೆಬುಲೂನ್ ಕುಲಗಳಿಗೆ ಸೇರಿದ ಪ್ರದೇಶಗಳಲ್ಲಿದ್ದವು. [PE][PS]
8. ಹೀಗೆ ಇಸ್ರೇಲರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಕೊಟ್ಟರು; ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಯನ್ನು ಪಾಲಿಸಿದರು. [PE][PS]
9. ಯೆಹೂದ ಮತ್ತು ಸಿಮೆಯೋನ್ ಕುಲದವರ ಪ್ರದೇಶಗಳಲ್ಲಿ ಬರುವ ಪಟ್ಟಣಗಳ ಹೆಸರುಗಳು ಇಂತಿವೆ:
10. ಪಟ್ಟಣಗಳನ್ನು ಆರಿಸಿಕೊಳ್ಳುವ ಮೊದಲ ಅಧಿಕಾರವನ್ನು ಕೆಹಾತ್ಯ ಗೋತ್ರದ ಲೇವಿಯರಿಗೆ ಕೊಡಲಾಯಿತು.
11. ಅವರಿಗೆ ಹೆಬ್ರೋನ್ ಎಂಬ ಕಿರ್ಯತರ್ಬನಗರ (ಇದಕ್ಕೆ ಅನಾಕನ ತಂದೆಯಾದ ಅರ್ಬನ ಹೆಸರಿಡಲಾಗಿತ್ತು.) ಮತ್ತು ಅವರ ಪಶುಗಳಿಗಾಗಿ ಆ ನಗರದ ಹತ್ತಿರದ ಸ್ವಲ್ಪ ಭೂಮಿಯನ್ನು ಕೊಡಲಾಯಿತು.
12. ಆದರೆ ಕಿರ್ಯತರ್ಬ ನಗರದ ಸುತ್ತಮುತ್ತಲಿನ ಸಣ್ಣಸಣ್ಣ ಊರುಗಳು ಮತ್ತು ಅವುಗಳಿಗೆ ಸೇರಿದ ಭೂಮಿಯು ಯೆಫುನ್ನೆಯ ಮಗನಾದ ಕಾಲೇಬನಿಗೆ ಸೇರಿತ್ತು.
13. ಆದ್ದರಿಂದ ಆರೋನನ ಸಂತತಿಯವರಿಗೆ ಆಶ್ರಯನಗರವಾದ ಹೆಬ್ರೋನ್ ನಗರವನ್ನು ಕೊಡಲಾಯಿತು. ಆರೋನನ ಸಂತತಿಯವರಿಗೆ ಅವರು ಲಿಬ್ನಾ,
14. ಯತ್ತೀರ್, ಎಷ್ಟೆಮೋಹ,
15. ಹೋಲೋನ್, ದೆಬೀರ್,
16. ಆಯಿನ್, ಯುಟ್ಟಾ ಮತ್ತು ಬೇತ್‌ಷೆಮೆಷ್ ಎಂಬ ಪಟ್ಟಣಗಳನ್ನು ಸಹ ಕೊಟ್ಟರು. ಅವರ ಪಶುಗಳಿಗಾಗಿ ಪಟ್ಟಣಗಳ ಸಮೀಪದಲ್ಲಿದ್ದ ಭೂಮಿಯನ್ನು ಸಹ ಕೊಟ್ಟರು. ಈ ಎರಡು ಗುಂಪುಗಳಿಗೆ ಅವರು ಒಂಭತ್ತು ಪಟ್ಟಣಗಳನ್ನು ಕೊಟ್ಟರು. [PE][PS]
17. ಬೆನ್ಯಾಮೀನ್ ಕುಲದವರಿಗೆ ಸೇರಿದ ನಗರಗಳನ್ನು ಸಹ ಆರೋನನ ಸಂತತಿಯವರಿಗೆ ಕೊಡಲಾಯಿತು. ಅವು ಯಾವುವೆಂದರೆ: ಗಿಬ್ಯೋನ್, ಗೆಬ,
18. ಅನಾತೋತ್ ಮತ್ತು ಅಲ್ಮೋನ್. ಈ ನಾಲ್ಕು ಪಟ್ಟಣಗಳನ್ನೂ ಅವರ ಪಶುಗಳಿಗಾಗಿ ಆ ಪಟ್ಟಣಗಳ ಸಮೀಪದಲ್ಲಿದ್ದ ಸ್ವಲ್ಪ ಭೂಮಿಯನ್ನೂ ಅವರಿಗೆ ಕೊಡಲಾಯಿತು.
19. ಒಟ್ಟಿನಲ್ಲಿ ಆರೋನನ ಸಂತತಿಯವರಾದ ಎಲ್ಲಾ ಯಾಜಕರಿಗೆ ಅವರು ಹದಿಮೂರು ಪಟ್ಟಣಗಳನ್ನು ಕೊಟ್ಟರು. ಅವರ ಪಶುಗಳಿಗಾಗಿ ಪಟ್ಟಣದ ಸಮೀಪದಲ್ಲಿದ್ದ ಸ್ವಲ್ಪ ಭೂಮಿಯನ್ನು ಅವರಿಗೆ ಕೊಡಲಾಯಿತು. [PE][PS]
20. ಕೆಹಾತ್ಯರ ಕುಟುಂಬಕ್ಕೆ ಸೇರಿದ ಇತರ ಜನರಿಗೆ ಎಫ್ರಾಯೀಮ್ ಕುಲದವರ ಪ್ರದೇಶದಿಂದ ಕೆಲವು ಪಟ್ಟಣಗಳನ್ನು ಕೊಡಲಾಯಿತು. ಅವರು ಪಡೆದ ಪಟ್ಟಣಗಳು ಇವು:
21. ಎಫ್ರಾಯೀಮ್ ಪ್ರದೇಶದ ಬೆಟ್ಟದಲ್ಲಿರುವ ಆಶ್ರಯನಗರವಾದ ಶೆಕೆಮ್, ಗೆಜೆರ್,
22. ಕಿಬ್‌ಚೈಮ್ ಮತ್ತು ಬೇತ್‌ಹೋರೋನ್. ಒಟ್ಟಿನಲ್ಲಿ ಎಫ್ರಾಯೀಮರು ಅವರಿಗೆ ನಾಲ್ಕು ಪಟ್ಟಣಗಳನ್ನೂ ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನೂ ಕೊಟ್ಟರು. [PE][PS]
23. ದಾನ್ ಕುಲದವರು ಅವರಿಗೆ ಎಲ್ತೆಕೇ, ಗಿಬ್ಬೆತೋನ್,
24. ಅಯ್ಯಾಲೋನ್ ಮತ್ತು ಗತ್‌ರಿಮ್ಮೋನ್ ಎಂಬ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
25. ಮನಸ್ಸೆಕುಲದ ಅರ್ಧಜನರು ಅವರಿಗೆ ತಾನಾಕ್ ಮತ್ತು ಗತ್‌ರಿಮ್ಮೋನ್ ಎಂಬ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಮನಸ್ಸೆಕುಲದ ಅರ್ಧಜನರು ಅವರಿಗೆ ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
26. ಕೆಹಾತ್ಯ ಕುಟುಂಬದ ಉಳಿದ ಜನರು ಒಟ್ಟಿನಲ್ಲಿ ಹತ್ತು ಪಟ್ಟಣಗಳನ್ನು ಮತ್ತು ತಮ್ಮ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪಭೂಮಿಯನ್ನು ಪಡೆದರು. [PE][PS]
27. ಲೇವಿಯ ಸಂತತಿಯವರಾದ ಗೇರ್ಷೋನ್ಯರಿಗೆ ಈ ಊರುಗಳನ್ನು ಕೊಡಲಾಯಿತು: [PE][PS] ಮನಸ್ಸೆಕುಲದ ಅರ್ಧಜನರು ಅವರಿಗೆ ಬಾಷಾನಿನಲ್ಲಿದ್ದ ಆಶ್ರಯನಗರವಾದ ಗೋಲಾನ್ ನಗರವನ್ನು ಕೊಟ್ಟರು. ಮನಸ್ಸೆಯವರು ಬೆಯೆಷ್ಟೆರಾವನ್ನು ಸಹ ಅವರಿಗೆ ಕೊಟ್ಟರು. ಒಟ್ಟಿನಲ್ಲಿ ಈ ಮನಸ್ಸೆಕುಲದ ಅರ್ಧಜನರು ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
28. ಇಸ್ಸಾಕಾರ್ ಕುಲದವರು ಕಿಷ್ಯೋನ್, ದ್ವಾೆರತ್,
29. ಯರ್ಮೂತ್, ಏಂಗನ್ನೀಮ್ ಎಂಬ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಇಸ್ಸಾಕಾರ್ ಕುಲದವರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
30. ಆಶೇರ್ ಕುಲದವರು ಮಿಷಾಲ್, ಅಬ್ದೋನ್,
31. ಹೆಲ್ಕಾತ್, ರೆಹೋಬ್‌ಗಳನ್ನು ಕೊಟ್ಟರು. ಒಟ್ಟಿನಲ್ಲಿ ಆಶೇರರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
32. ನಫ್ತಾಲಿ ಕುಲದವರು ಗಲಿಲಾಯದ ಆಶ್ರಯನಗರವಾದ ಕೆದೆಷ್, ಹಮ್ಮೋತ್‌ದೋರ್, ಕರ್ತಾನ್ ಎಂಬವುಗಳನ್ನು ಕೊಟ್ಟರು. ಒಟ್ಟಿನಲ್ಲಿ ನಫ್ತಾಲಿಯರು ಮೂರು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
33. ಒಟ್ಟಿನಲ್ಲಿ ಗೇರ್ಷೋನ್ಯರಿಗೆ ಹದಿಮೂರು ಪಟ್ಟಣಗಳು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯು ಸಿಕ್ಕಿತು. [PE][PS]
34. ಲೇವಿಯರ ಮತ್ತೊಂದು ಗೋತ್ರವು ಮೆರಾರೀ ಎಂಬುದು. ಆ ಗೋತ್ರಕ್ಕೆ ದೊರೆತ ಪಟ್ಟಣಗಳು ಇಂತಿವೆ: ಜೆಬುಲೂನ್ ಕುಲದವರು ಅವರಿಗೆ ಚೂಕ್ನೀಮ್, ಕರ್ತಾ,
35. ದಿಮ್ನಾ, ನಹಲಾಲ್‌ಗಳನ್ನು ಕೊಟ್ಟರು. ಒಟ್ಟಿನಲ್ಲಿ ಜೆಬುಲೂನ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
36. ರೂಬೇನ್ಯರು ಅವರಿಗೆ ಬೆಚೆರ್, ಯಹಚಾ,
37. ಕೆದೇಮೋತ್, ಮೇಫಾಗತ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ರೂಬೇನ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
38. ಗಾದ್ಯರು ಅವರಿಗೆ ಗಿಲ್ಯಾದಿನ ಆಶ್ರಯನಗರವಾದ ರಾಮೋತ್, ಮಹನಯೀಮ್,
39. ಹೆಷ್ಬೋನ್, ಯಗ್ಜೇರ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಗಾದ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. [PE][PS]
40. ಲೇವಿಯರ ಕೊನೆಯ ಗೋತ್ರದವರಾದ ಮೆರಾರೀಯರು ಒಟ್ಟಿನಲ್ಲಿ ಹನ್ನೆರಡು ಪಟ್ಟಣಗಳನ್ನು ಪಡೆದುಕೊಂಡರು. [PE][PS]
41. ಹೀಗೆ ಲೇವಿಯರು ಒಟ್ಟಿನಲ್ಲಿ ನಲವತ್ತೆಂಟು ಪಟ್ಟಣಗಳನ್ನು ಮತ್ತು ತಮ್ಮ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಪಡೆದರು. ಈ ಎಲ್ಲ ಪಟ್ಟಣಗಳು ಬೇರೆ ಕುಲದವರ ಪ್ರದೇಶಗಳಲ್ಲಿದ್ದವು.
42. ಪ್ರತಿಯೊಂದು ಪಟ್ಟಣದಲ್ಲಿ ಪಶುಗಳಿಗಾಗಿ ಸ್ವಲ್ಪ ಭೂಮಿ ಇತ್ತು. ಇದು ಪ್ರತಿಯೊಂದು ಪಟ್ಟಣಕ್ಕೂ ಅನ್ವಯಿಸುತ್ತಿತ್ತು. [PE][PS]
43. ಹೀಗೆ ಯೆಹೋವನು ಇಸ್ರೇಲರಿಗೆ ಮಾಡಿದ ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದನು. ಆತನು ಅವರಿಗೆ ವಾಗ್ದಾನ ಮಾಡಿದ ದೇಶವನ್ನು ಕೊಟ್ಟನು. ಅವರು ಅದನ್ನು ಹಂಚಿಕೊಂಡು ವಾಸವಾಗಿದ್ದರು.
44. ಯೆಹೋವನು ಅವರ ಪೂರ್ವಿಕರಿಗೆ ಪ್ರಮಾಣ ಮಾಡಿದಂತೆ ಅವರ ಪ್ರದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದನು. ಅವರ ಯಾವ ಶತ್ರುಗಳೂ ಅವರನ್ನು ಸೋಲಿಸಲಿಲ್ಲ. ಇಸ್ರೇಲರು ತಮ್ಮ ಎಲ್ಲ ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು.
45. ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದನು. ಆತನು ಕಾರ್ಯರೂಪಕ್ಕೆ ತರದ ವಾಗ್ದನವೇ ಉಳಿಯಲಿಲ್ಲ. ಪ್ರತಿಯೊಂದು ವಾಗ್ದಾನವೂ ನೆರವೇರಿತು. [PE]

ಟಿಪ್ಪಣಿಗಳು

No Verse Added

ಒಟ್ಟು 24 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 21 / 24
ಯೆಹೋಶುವ 21:39
ಯಾಜಕರಿಗೆ ಮತ್ತು ಲೇವಿಕುಲದವರಿಗೆ ಪಟ್ಟಣಗಳು 1 ಲೇವಿ ಕುಲಾಧಿಪತಿಗಳು ಮಾತಾಡುವುದಕ್ಕಾಗಿ ಯಾಜಕನಾದ ಎಲ್ಲಾಜಾರನ, ನೂನನ ಮಗನಾದ ಯೆಹೋಶುವನ ಮತ್ತು ಇಸ್ರೇಲಿನ ಬೇರೆ ಕುಲಾಧಿಪತಿಗಳ ಬಳಿಗೆ ಹೋದರು. 2 ಇದು ಕಾನಾನ್ ದೇಶದ ಶೀಲೋವಿನಲ್ಲಿ ನಡೆಯಿತು. ಲೇವಿ ಕುಲಾಧಿಪತಿಗಳು ಅವರಿಗೆ, “ಯೆಹೋವನು ಮೋಶೆಗೆ ಆಜ್ಞಾಪಿಸಿರುವಂತೆ ನೀವು ನಮಗೆ ವಾಸಮಾಡುವುದಕ್ಕೆ ಪಟ್ಟಣಗಳನ್ನೂ ನಮ್ಮ ಪಶುಗಳು ಮೇಯುವುದಕ್ಕಾಗಿ ಹೊಲಗಳನ್ನೂ ಕೊಡಬೇಕು” ಎಂದು ಹೇಳಿದರು. 3 ಇಸ್ರೇಲರು ಯೆಹೋವನ ಈ ಆಜ್ಞೆಯನ್ನು ಪಾಲಿಸಿದರು. ಅವರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಅವುಗಳ ಸುತ್ತಮುತ್ತಲಿನ ಭೂಮಿಯನ್ನು ಕೊಟ್ಟರು: 4 ಕೆಹಾತ್ಯರ ಒಂದು ಭಾಗಕ್ಕೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳ ಭೂ ಭಾಗದಿಂದ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು, ಕೆಹಾತ್ಯರು ಲೇವಿ ಕುಲದವನೂ ಯಾಜಕನೂ ಆದ ಆರೋನನ ಸಂತತಿಯವರಾಗಿದ್ದರು. 5 ಉಳಿದೆಲ್ಲ ಕೆಹಾತ್ಯರಿಗೆ ಎಫ್ರಾಯೀಮ್, ದಾನ್ ಮತ್ತು ಮನಸ್ಸೆಯ ಅರ್ಧಕುಲದ ಪ್ರದೇಶಗಳಿಂದ ಹತ್ತು ಪಟ್ಟಣಗಳನ್ನು ಕೊಡಲಾಯಿತು. 6 ಗೇರ್ಷೋನ್ಯ ಗೋತ್ರದವರಿಗೆ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು. ಈ ಪಟ್ಟಣಗಳು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧಕುಲದವರಿಗೆ ಸೇರಿದ ಪ್ರದೇಶಗಳಲ್ಲಿದ್ದವು. 7 ಮೆರಾರೀ ಗೋತ್ರದವರಿಗೆ ಹನ್ನೆರಡು ಪಟ್ಟಣಗಳನ್ನು ಕೊಡಲಾಯಿತು. ಈ ಹನ್ನೆರಡು ಪಟ್ಟಣಗಳು ರೂಬೇನ್, ಗಾದ್ ಮತ್ತು ಜೆಬುಲೂನ್ ಕುಲಗಳಿಗೆ ಸೇರಿದ ಪ್ರದೇಶಗಳಲ್ಲಿದ್ದವು. 8 ಹೀಗೆ ಇಸ್ರೇಲರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಕೊಟ್ಟರು; ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಯನ್ನು ಪಾಲಿಸಿದರು. 9 ಯೆಹೂದ ಮತ್ತು ಸಿಮೆಯೋನ್ ಕುಲದವರ ಪ್ರದೇಶಗಳಲ್ಲಿ ಬರುವ ಪಟ್ಟಣಗಳ ಹೆಸರುಗಳು ಇಂತಿವೆ: 10 ಪಟ್ಟಣಗಳನ್ನು ಆರಿಸಿಕೊಳ್ಳುವ ಮೊದಲ ಅಧಿಕಾರವನ್ನು ಕೆಹಾತ್ಯ ಗೋತ್ರದ ಲೇವಿಯರಿಗೆ ಕೊಡಲಾಯಿತು. 11 ಅವರಿಗೆ ಹೆಬ್ರೋನ್ ಎಂಬ ಕಿರ್ಯತರ್ಬನಗರ (ಇದಕ್ಕೆ ಅನಾಕನ ತಂದೆಯಾದ ಅರ್ಬನ ಹೆಸರಿಡಲಾಗಿತ್ತು.) ಮತ್ತು ಅವರ ಪಶುಗಳಿಗಾಗಿ ಆ ನಗರದ ಹತ್ತಿರದ ಸ್ವಲ್ಪ ಭೂಮಿಯನ್ನು ಕೊಡಲಾಯಿತು. 12 ಆದರೆ ಕಿರ್ಯತರ್ಬ ನಗರದ ಸುತ್ತಮುತ್ತಲಿನ ಸಣ್ಣಸಣ್ಣ ಊರುಗಳು ಮತ್ತು ಅವುಗಳಿಗೆ ಸೇರಿದ ಭೂಮಿಯು ಯೆಫುನ್ನೆಯ ಮಗನಾದ ಕಾಲೇಬನಿಗೆ ಸೇರಿತ್ತು. 13 ಆದ್ದರಿಂದ ಆರೋನನ ಸಂತತಿಯವರಿಗೆ ಆಶ್ರಯನಗರವಾದ ಹೆಬ್ರೋನ್ ನಗರವನ್ನು ಕೊಡಲಾಯಿತು. ಆರೋನನ ಸಂತತಿಯವರಿಗೆ ಅವರು ಲಿಬ್ನಾ, 14 ಯತ್ತೀರ್, ಎಷ್ಟೆಮೋಹ, 15 ಹೋಲೋನ್, ದೆಬೀರ್, 16 ಆಯಿನ್, ಯುಟ್ಟಾ ಮತ್ತು ಬೇತ್‌ಷೆಮೆಷ್ ಎಂಬ ಪಟ್ಟಣಗಳನ್ನು ಸಹ ಕೊಟ್ಟರು. ಅವರ ಪಶುಗಳಿಗಾಗಿ ಪಟ್ಟಣಗಳ ಸಮೀಪದಲ್ಲಿದ್ದ ಭೂಮಿಯನ್ನು ಸಹ ಕೊಟ್ಟರು. ಈ ಎರಡು ಗುಂಪುಗಳಿಗೆ ಅವರು ಒಂಭತ್ತು ಪಟ್ಟಣಗಳನ್ನು ಕೊಟ್ಟರು. 17 ಬೆನ್ಯಾಮೀನ್ ಕುಲದವರಿಗೆ ಸೇರಿದ ನಗರಗಳನ್ನು ಸಹ ಆರೋನನ ಸಂತತಿಯವರಿಗೆ ಕೊಡಲಾಯಿತು. ಅವು ಯಾವುವೆಂದರೆ: ಗಿಬ್ಯೋನ್, ಗೆಬ, 18 ಅನಾತೋತ್ ಮತ್ತು ಅಲ್ಮೋನ್. ಈ ನಾಲ್ಕು ಪಟ್ಟಣಗಳನ್ನೂ ಅವರ ಪಶುಗಳಿಗಾಗಿ ಆ ಪಟ್ಟಣಗಳ ಸಮೀಪದಲ್ಲಿದ್ದ ಸ್ವಲ್ಪ ಭೂಮಿಯನ್ನೂ ಅವರಿಗೆ ಕೊಡಲಾಯಿತು. 19 ಒಟ್ಟಿನಲ್ಲಿ ಆರೋನನ ಸಂತತಿಯವರಾದ ಎಲ್ಲಾ ಯಾಜಕರಿಗೆ ಅವರು ಹದಿಮೂರು ಪಟ್ಟಣಗಳನ್ನು ಕೊಟ್ಟರು. ಅವರ ಪಶುಗಳಿಗಾಗಿ ಪಟ್ಟಣದ ಸಮೀಪದಲ್ಲಿದ್ದ ಸ್ವಲ್ಪ ಭೂಮಿಯನ್ನು ಅವರಿಗೆ ಕೊಡಲಾಯಿತು. 20 ಕೆಹಾತ್ಯರ ಕುಟುಂಬಕ್ಕೆ ಸೇರಿದ ಇತರ ಜನರಿಗೆ ಎಫ್ರಾಯೀಮ್ ಕುಲದವರ ಪ್ರದೇಶದಿಂದ ಕೆಲವು ಪಟ್ಟಣಗಳನ್ನು ಕೊಡಲಾಯಿತು. ಅವರು ಪಡೆದ ಪಟ್ಟಣಗಳು ಇವು: 21 ಎಫ್ರಾಯೀಮ್ ಪ್ರದೇಶದ ಬೆಟ್ಟದಲ್ಲಿರುವ ಆಶ್ರಯನಗರವಾದ ಶೆಕೆಮ್, ಗೆಜೆರ್, 22 ಕಿಬ್‌ಚೈಮ್ ಮತ್ತು ಬೇತ್‌ಹೋರೋನ್. ಒಟ್ಟಿನಲ್ಲಿ ಎಫ್ರಾಯೀಮರು ಅವರಿಗೆ ನಾಲ್ಕು ಪಟ್ಟಣಗಳನ್ನೂ ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನೂ ಕೊಟ್ಟರು. 23 ದಾನ್ ಕುಲದವರು ಅವರಿಗೆ ಎಲ್ತೆಕೇ, ಗಿಬ್ಬೆತೋನ್, 24 ಅಯ್ಯಾಲೋನ್ ಮತ್ತು ಗತ್‌ರಿಮ್ಮೋನ್ ಎಂಬ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 25 ಮನಸ್ಸೆಕುಲದ ಅರ್ಧಜನರು ಅವರಿಗೆ ತಾನಾಕ್ ಮತ್ತು ಗತ್‌ರಿಮ್ಮೋನ್ ಎಂಬ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಮನಸ್ಸೆಕುಲದ ಅರ್ಧಜನರು ಅವರಿಗೆ ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 26 ಕೆಹಾತ್ಯ ಕುಟುಂಬದ ಉಳಿದ ಜನರು ಒಟ್ಟಿನಲ್ಲಿ ಹತ್ತು ಪಟ್ಟಣಗಳನ್ನು ಮತ್ತು ತಮ್ಮ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪಭೂಮಿಯನ್ನು ಪಡೆದರು. 27 ಲೇವಿಯ ಸಂತತಿಯವರಾದ ಗೇರ್ಷೋನ್ಯರಿಗೆ ಈ ಊರುಗಳನ್ನು ಕೊಡಲಾಯಿತು: ಮನಸ್ಸೆಕುಲದ ಅರ್ಧಜನರು ಅವರಿಗೆ ಬಾಷಾನಿನಲ್ಲಿದ್ದ ಆಶ್ರಯನಗರವಾದ ಗೋಲಾನ್ ನಗರವನ್ನು ಕೊಟ್ಟರು. ಮನಸ್ಸೆಯವರು ಬೆಯೆಷ್ಟೆರಾವನ್ನು ಸಹ ಅವರಿಗೆ ಕೊಟ್ಟರು. ಒಟ್ಟಿನಲ್ಲಿ ಈ ಮನಸ್ಸೆಕುಲದ ಅರ್ಧಜನರು ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 28 ಇಸ್ಸಾಕಾರ್ ಕುಲದವರು ಕಿಷ್ಯೋನ್, ದ್ವಾೆರತ್, 29 ಯರ್ಮೂತ್, ಏಂಗನ್ನೀಮ್ ಎಂಬ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಇಸ್ಸಾಕಾರ್ ಕುಲದವರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 30 ಆಶೇರ್ ಕುಲದವರು ಮಿಷಾಲ್, ಅಬ್ದೋನ್, 31 ಹೆಲ್ಕಾತ್, ರೆಹೋಬ್‌ಗಳನ್ನು ಕೊಟ್ಟರು. ಒಟ್ಟಿನಲ್ಲಿ ಆಶೇರರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 32 ನಫ್ತಾಲಿ ಕುಲದವರು ಗಲಿಲಾಯದ ಆಶ್ರಯನಗರವಾದ ಕೆದೆಷ್, ಹಮ್ಮೋತ್‌ದೋರ್, ಕರ್ತಾನ್ ಎಂಬವುಗಳನ್ನು ಕೊಟ್ಟರು. ಒಟ್ಟಿನಲ್ಲಿ ನಫ್ತಾಲಿಯರು ಮೂರು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 33 ಒಟ್ಟಿನಲ್ಲಿ ಗೇರ್ಷೋನ್ಯರಿಗೆ ಹದಿಮೂರು ಪಟ್ಟಣಗಳು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯು ಸಿಕ್ಕಿತು. 34 ಲೇವಿಯರ ಮತ್ತೊಂದು ಗೋತ್ರವು ಮೆರಾರೀ ಎಂಬುದು. ಆ ಗೋತ್ರಕ್ಕೆ ದೊರೆತ ಪಟ್ಟಣಗಳು ಇಂತಿವೆ: ಜೆಬುಲೂನ್ ಕುಲದವರು ಅವರಿಗೆ ಚೂಕ್ನೀಮ್, ಕರ್ತಾ, 35 ದಿಮ್ನಾ, ನಹಲಾಲ್‌ಗಳನ್ನು ಕೊಟ್ಟರು. ಒಟ್ಟಿನಲ್ಲಿ ಜೆಬುಲೂನ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 36 ರೂಬೇನ್ಯರು ಅವರಿಗೆ ಬೆಚೆರ್, ಯಹಚಾ, 37 ಕೆದೇಮೋತ್, ಮೇಫಾಗತ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ರೂಬೇನ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 38 ಗಾದ್ಯರು ಅವರಿಗೆ ಗಿಲ್ಯಾದಿನ ಆಶ್ರಯನಗರವಾದ ರಾಮೋತ್, ಮಹನಯೀಮ್, 39 ಹೆಷ್ಬೋನ್, ಯಗ್ಜೇರ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಗಾದ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 40 ಲೇವಿಯರ ಕೊನೆಯ ಗೋತ್ರದವರಾದ ಮೆರಾರೀಯರು ಒಟ್ಟಿನಲ್ಲಿ ಹನ್ನೆರಡು ಪಟ್ಟಣಗಳನ್ನು ಪಡೆದುಕೊಂಡರು. 41 ಹೀಗೆ ಲೇವಿಯರು ಒಟ್ಟಿನಲ್ಲಿ ನಲವತ್ತೆಂಟು ಪಟ್ಟಣಗಳನ್ನು ಮತ್ತು ತಮ್ಮ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಪಡೆದರು. ಈ ಎಲ್ಲ ಪಟ್ಟಣಗಳು ಬೇರೆ ಕುಲದವರ ಪ್ರದೇಶಗಳಲ್ಲಿದ್ದವು. 42 ಪ್ರತಿಯೊಂದು ಪಟ್ಟಣದಲ್ಲಿ ಪಶುಗಳಿಗಾಗಿ ಸ್ವಲ್ಪ ಭೂಮಿ ಇತ್ತು. ಇದು ಪ್ರತಿಯೊಂದು ಪಟ್ಟಣಕ್ಕೂ ಅನ್ವಯಿಸುತ್ತಿತ್ತು. 43 ಹೀಗೆ ಯೆಹೋವನು ಇಸ್ರೇಲರಿಗೆ ಮಾಡಿದ ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದನು. ಆತನು ಅವರಿಗೆ ವಾಗ್ದಾನ ಮಾಡಿದ ದೇಶವನ್ನು ಕೊಟ್ಟನು. ಅವರು ಅದನ್ನು ಹಂಚಿಕೊಂಡು ವಾಸವಾಗಿದ್ದರು. 44 ಯೆಹೋವನು ಅವರ ಪೂರ್ವಿಕರಿಗೆ ಪ್ರಮಾಣ ಮಾಡಿದಂತೆ ಅವರ ಪ್ರದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದನು. ಅವರ ಯಾವ ಶತ್ರುಗಳೂ ಅವರನ್ನು ಸೋಲಿಸಲಿಲ್ಲ. ಇಸ್ರೇಲರು ತಮ್ಮ ಎಲ್ಲ ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು. 45 ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದನು. ಆತನು ಕಾರ್ಯರೂಪಕ್ಕೆ ತರದ ವಾಗ್ದನವೇ ಉಳಿಯಲಿಲ್ಲ. ಪ್ರತಿಯೊಂದು ವಾಗ್ದಾನವೂ ನೆರವೇರಿತು.
ಒಟ್ಟು 24 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 21 / 24
Common Bible Languages
West Indian Languages
×

Alert

×

kannada Letters Keypad References