1. {ಯೋಬನ ವಾದ} [PS] ಬಳಿಕ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:
2. “ಹೌದು, ನೀನು ಹೇಳಿದ್ದು ಸತ್ಯವೇ ಸರಿ! [QBR2] ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ? [QBR]
3. ಒಬ್ಬನು ದೇವರೊಂದಿಗೆ ವಾದಿಸಬಯಸಿದರೆ, [QBR2] ದೇವರ ಸಾವಿರ ಪ್ರಶ್ನೆಗಳಲ್ಲಿ ಮನುಷ್ಯನು ಒಂದಕ್ಕೂ ಉತ್ತರ ಕೊಡಲಾರನು. [QBR]
4. ದೇವರ ಜ್ಞಾನವು ಅಗಾಧವಾದದ್ದು; [QBR2] ಆತನ ಶಕ್ತಿಯು ಮಹತ್ವವಾದದ್ದು; ಯಾವನೂ ದೇವರಿಗೆ ವಿರೋಧವಾಗಿ ಜಯಗಳಿಸಲಾರನು. [QBR]
5. ದೇವರು ಪರ್ವತಗಳನ್ನು ಅವುಗಳಿಗೇ ತಿಳಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುವನು. [QBR]
6. ಆತನು ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುವನು; [QBR2] ಅದರ ಅಸ್ತಿವಾರಗಳನ್ನು ನಡುಗಿಸುವನು. [QBR]
7. ಆತನು ಆಜ್ಞಾಪಿಸಿದರೆ, ಆತನ ಆಜ್ಞೆಯಂತೆಯೇ ಸೂರ್ಯೋದಯವಾಗದು. [QBR2] ನಕ್ಷತ್ರಗಳು ಪ್ರಕಾಶಿಸದಂತೆ ಆತನು ಅವುಗಳನ್ನು ಮುಚ್ಚಿಟ್ಟು ಮುದ್ರೆ ಹಾಕಬಲ್ಲನು. [QBR]
8. ಆಕಾಶಮಂಡಲವನ್ನು ಸೃಷ್ಟಿಸಿದವನು ಆತನೇ. [QBR2] ಆತನು ಭೋರ್ಗರೆಯುತ್ತಿರುವ ಸಮುದ್ರದ ಮೇಲೆ ನಡೆಯಬಲ್ಲನು.
9. “ಆತನೇ ಬೇರ್, ಒರೈಯನ್ ಮತ್ತು ಪ್ಲೈಯಡ್ಸ್ [*ಬೇರ್, ಒರೈಯನ್ ಮತ್ತು ಪ್ಲೈಯಡ್ಸ್ ಇವು ಸಪ್ತರ್ಷಿ, ಮೃಗಶಿರ ಮತ್ತು ಕೃತ್ತಿಕೆ ಎಂಬ ನಕ್ಷತ್ರಸಮೂಹಗಳು.] ಎಂಬ ನಕ್ಷತ್ರಸಮೂಹಗಳನ್ನು ಸೃಷ್ಟಿಮಾಡಿದನು. [QBR2] ದಕ್ಷಿಣ ಆಕಾಶದಲ್ಲಿ ನಕ್ಷತ್ರವ್ಯೂಹಗಳನ್ನು ಸೃಷ್ಟಿಸಿದವನು ಆತನೇ. [QBR]
10. ಗ್ರಹಿಸಲಶಕ್ಯವಾದ ಅದ್ಭುತಕಾರ್ಯಗಳನ್ನೂ [QBR2] ಅಸಂಖ್ಯಾತವಾದ ಮಹತ್ಕಾರ್ಯಗಳನ್ನೂ ಆತನು ಮಾಡುವನು. [QBR]
11. ದೇವರು ನನ್ನ ಸಮೀಪದಲ್ಲಿ ಹಾದುಹೋದರೂ ನನಗೆ ಕಾಣಿಸದು; [QBR2] ನನ್ನ ಮುಂದೆ ಹೋದರೂ ನನಗೆ ತಿಳಿಯದು. [QBR]
12. ದೇವರೇ ತೆಗೆದುಕೊಳ್ಳುವುದಾದರೆ, ಆತನನ್ನು ತಡೆಯಬಲ್ಲವರು ಯಾರು? [QBR2] ‘ನೀನು ಏನು ಮಾಡುತ್ತಿರುವೆ’ ಎಂದು ಆತನನ್ನು ಕೇಳುವವರು ಯಾರು? [QBR]
13. ದೇವರು ತನ್ನ ಕೋಪವನ್ನು ತಡೆಹಿಡಿದುಕೊಳ್ಳುವುದಿಲ್ಲ. [QBR2] ರಹಬನ ಸಹಾಯಕರು ಸಹ ದೇವರ ಮುಂದೆ ಭಯದಿಂದ ಅಡ್ಡಬೀಳುವರು. [QBR]
14. ಆದ್ದರಿಂದ ನಾನು ದೇವರೊಂದಿಗೆ ವಾದ ಮಾಡಲಾರೆ. [QBR2] ಆತನಿಗೆ ಉತ್ತರ ಕೊಡುವುದಕ್ಕೂ ನಾನು ಅಶಕ್ತನಾಗಿರುವೆ. [QBR]
15. ಯೋಬನಾದ ನಾನು ನಿರಪರಾಧಿಯಾಗಿದ್ದರೂ ಆತನಿಗೆ ಉತ್ತರವನ್ನು ಕೊಡಲಾರೆ. [QBR2] ನನಗೆ ಕರುಣೆ ತೋರುವಂತೆ ನ್ಯಾಯಾಧಿಪತಿಯಾದ ದೇವರನ್ನು ಬೇಡಿಕೊಳ್ಳುವೆನು. [QBR]
16. ನಾನು ಆತನಿಗೆ ಮೊರೆಯಿಟ್ಟಿದ್ದರೂ, ಆತನು ನನಗೆ ಉತ್ತರ ಕೊಟ್ಟಿದ್ದರೂ [QBR2] ಈಗ ಆತನು ನನಗೆ ಕಿವಿಗೊಡುತ್ತಾನೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. [QBR]
17. ನನ್ನನ್ನು ಜಜ್ಜುವುದಕ್ಕಾಗಿ ದೇವರು ಬಿರುಗಾಳಿಗಳನ್ನು ಕಳುಹಿಸುವನು; [QBR2] ನಿಷ್ಕಾರಣವಾಗಿ ನನಗೆ ಗಾಯಮಾಡುವನು. [QBR]
18. ಉಸಿರೆಳೆದುಕೊಳ್ಳಲೂ ಬಿಡುವು ನೀಡದೆ [QBR2] ಕಷ್ಟದ ಮೇಲೆ ಕಷ್ಟವನ್ನು ಕೊಡುವನು. [QBR]
19. ಆತನನ್ನು ಸೋಲಿಸೋಣವೆಂದರೆ [QBR2] ಆತನೇ ಬಲಿಷ್ಠನಾಗಿದ್ದಾನೆ; [QBR] ನ್ಯಾಯಾಲಯಕ್ಕೆ ಹೋಗೋಣವೆಂದರೆ [QBR2] ಆತನನ್ನು ನ್ಯಾಯಾಲಯಕ್ಕೆ ಬರಮಾಡುವವನು ಯಾರು? [QBR]
20. ನಾನು ನಿರಪರಾಧಿಯಾಗಿದ್ದರೂ ನನ್ನ ಬಾಯಿ ನನ್ನನ್ನು ಖಂಡಿಸುವುದು; [QBR2] ನಾನು ನಿರ್ದೋಷಿಯಾಗಿದ್ದರೂ ನನ್ನ ಬಾಯಿ ನನ್ನನ್ನು ದೋಷಿಯೆಂದು ಹೇಳುವುದು. [QBR]
21. ನಾನು ನಿರಪರಾಧಿಯಾಗಿದ್ದರೂ ನನ್ನ ಬಗ್ಗೆ ಚಿಂತಿಸುವುದಿಲ್ಲ; [QBR2] ನನ್ನ ಜೀವಿತವನ್ನೇ ತುಚ್ಫೀಕರಿಸುವೆನು. [QBR]
22. ‘ಜೀವಿತದಲ್ಲಿ ಎಲ್ಲರೂ ಒಂದೇ. [QBR2] ಆದ್ದರಿಂದ ಆತನು ಅಪರಾಧಿಗಳನ್ನೂ ನಿರಪರಾಧಿಗಳನ್ನೂ ನಾಶಮಾಡುತ್ತಾನೆ’ [QBR2] ಎಂಬುದು ನನ್ನ ಆಲೋಚನೆ. [QBR]
23. ಪಕ್ಕನೆ ಆಪತ್ತಿಗೊಳಗಾಗಿ ನಿರಪರಾಧಿಯು ಸತ್ತರೆ, ದೇವರು ಅವನನ್ನು ನೋಡುತ್ತಾ ನಗುವನೇ? [QBR]
24. ದುಷ್ಟನು ಭೂಮಿಯನ್ನು ಆಕ್ರಮಿಸಿಕೊಂಡಾಗ, ದೇವರು ಅದನ್ನು ನ್ಯಾಯಾಧಿಪತಿಗಳಿಗೆ ಮರೆಮಾಡುವನೇ? [QBR2] ಇದು ಸತ್ಯವಾಗಿದ್ದರೆ, ಇದನ್ನು ದೇವರಲ್ಲದೆ ಇನ್ಯಾರು ಮಾಡಿದರು?
25. “ನನ್ನ ದಿನಗಳು ಓಟಗಾರನಿಗಿಂತಲೂ ವೇಗವಾಗಿ ಹೋಗುತ್ತಿವೆ. [QBR2] ಸುಖವಿಲ್ಲದ ನನ್ನ ದಿನಗಳು ಹಾರಿಹೋಗುತ್ತಿವೆ. [QBR]
26. ಜಂಬುಗಿಡದಿಂದ ಮಾಡಿದ ದೋಣಿಗಳಂತೆಯೂ [QBR2] ಹದ್ದು ತನ್ನ ಬೇಟೆಯ ಮೇಲೆ ಎರಗಲು ಹಾರಿಹೋಗುವಂತೆಯೂ [QBR2] ನನ್ನ ದಿನಗಳು ವೇಗವಾಗಿ ಹೋಗುತ್ತಿವೆ.
27. “ನಾನು ದೂರು ಹೇಳುವುದಿಲ್ಲ. [QBR2] ನನ್ನ ನೋವನ್ನು ಮರೆತು ನನ್ನ ಮುಖವನ್ನು ಮಾರ್ಪಡಿಸಿಕೊಂಡು ನಗುವೆನೆಂದರೆ, [QBR]
28. ನನ್ನ ಎಲ್ಲಾ ಸಂಕಟಗಳಿಂದ ಇನ್ನೂ ಭಯಗೊಂಡಿರುವೆ. [QBR2] ಯಾಕೆಂದರೆ ನನ್ನನ್ನು ಅಪರಾಧಿಯೆಂದು ದೇವರು ಹೇಳುತ್ತಿದ್ದಾನೆ. [QBR]
29. ಅಪರಾಧಿಯೆಂದು ಈಗಾಗಲೇ ನನಗೆ ತೀರ್ಪಾಗಿದೆ. [QBR2] ಹೀಗಿರಲು ನಾನೇಕೆ ವ್ಯರ್ಥ ಪ್ರಯತ್ನ ಮಾಡಲಿ? [QBR]
30. ನಾನು ಹಿಮದಿಂದ ಸ್ನಾನಮಾಡಿದರೂ [QBR2] ಸಾಬೂನಿನಿಂದ ಕೈತೊಳೆದುಕೊಂಡರೂ [QBR]
31. ದೇವರು ನನ್ನನ್ನು ಮಣ್ಣಿನ ಗುಂಡಿಗೆ ತಳ್ಳಿ [QBR2] ನನ್ನ ಬಟ್ಟೆಗಳಿಗೇ ನಾನು ಅಸಹ್ಯವಾಗುವಂತೆ ಮಾಡುವನು. [QBR]
32. ದೇವರು ನನ್ನಂಥ ಮನುಷ್ಯನಲ್ಲ; ನಾನು ಆತನಿಗೆ ಉತ್ತರಿಸಲಾರೆ. [QBR2] ನಾವು ನ್ಯಾಯಾಲಯದಲ್ಲಿ ಒಬ್ಬರನ್ನೊಬ್ಬರು ಸಂಧಿಸಲಾರೆವು. [QBR]
33. ನಮ್ಮಿಬ್ಬರಿಗೆ ಮಧ್ಯಸ್ಥಗಾರನಿದ್ದರೆ, ನಮ್ಮಿಬ್ಬರ ಮೇಲೆ ಅಧಿಕಾರವುಳ್ಳವನಿದ್ದರೆ [QBR2] ಎಷ್ಟೋ ಚೆನ್ನಾಗಿರುತ್ತಿತ್ತು. (ಆದರೆ ಅಂಥವರು ಯಾರೂ ಇಲ್ಲ.) [QBR]
34. ದೇವರ ದಂಡವನ್ನು ತೆಗೆದುಹಾಕುವ ಮಧ್ಯಸ್ಥಗಾರನಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. [QBR2] ಆಗ ಆತನು ನನ್ನನ್ನು ಹೆದರಿಸುತ್ತಿರಲಿಲ್ಲ. [QBR]
35. ಆಗ ನಾನು ಭಯವಿಲ್ಲದೆ ಮಾತಾಡುತ್ತಿದ್ದೆನು; [QBR2] ಆದರೆ ಈಗ ನನಗೆ ಸಾಧ್ಯವೇ ಇಲ್ಲ.” [PE]