1. “ಭೂಲೋಕದಲ್ಲಿ ಮನುಷ್ಯನಿಗೆ ಬಹು ಪ್ರಯಾಸದ ಕೆಲಸವಿದೆ. [QBR2] ಅವನ ಜೀವನವು ಕೂಲಿ ಕೆಲಸದವನ ಜೀವನದಂತಿದೆ. [QBR]
2. ಮನುಷ್ಯನು ಉರಿಬಿಸಿಲಿನಲ್ಲಿ ಪ್ರಯಾಸಪಟ್ಟು ದುಡಿದ ಮೇಲೆ [QBR2] ತಂಪಾದ ನೆರಳನ್ನು ಬಯಸುವ ಗುಲಾಮನಂತಿದ್ದಾನೆ. [QBR2] ಮನುಷ್ಯನು, ದಿನದ ಕೂಲಿಗಾಗಿ ಕಾಯುತ್ತಿರುವ ಕೂಲಿಯವನಂತಿದ್ದಾನೆ. [QBR]
3. ಜಿಗುಪ್ಸೆಯ ತಿಂಗಳುಗಳನ್ನೂ ಸಂಕಟದ ರಾತ್ರಿಗಳನ್ನೂ [QBR2] ನನಗೆ ನೇಮಿಸಲಾಗಿದೆ. [QBR]
4. ಮಲಗಿಕೊಳ್ಳುವಾಗ, [QBR2] ‘ಯಾವಾಗ ಏಳುವೆನೋ’ ಅಂದುಕೊಳ್ಳುವೆನು. [QBR] ರಾತ್ರಿಯು ಬೆಳೆಯುತ್ತಾ ಹೋಗುವುದು; [QBR2] ಸೂರ್ಯೋದಯದವರೆಗೂ ಹೊರಳಾಡುವೆನು. [QBR]
5. ನನ್ನ ದೇಹವು ಹುಳಗಳಿಂದಲೂ ಧೂಳಿನಿಂದಲೂ ಆವರಿಸಿಕೊಂಡಿದೆ. [QBR2] ನನ್ನ ಚರ್ಮವು ಬಿರಿದುಹೋಗಿ ಕೀವು ಸೋರುತ್ತಿರುವ ಕುರುಗಳಿಂದ ತುಂಬಿಹೋಗಿದೆ.
6. “ನನ್ನ ದಿನಗಳು ಮಗ್ಗದ ಲಾಳಿಗಿಂತಲೂ ವೇಗವಾಗಿ ಹೋಗುತ್ತವೆ. [QBR2] ನನ್ನ ಜೀವಿತವು ನಿರೀಕ್ಷೆಯಿಲ್ಲದೆ ಕೊನೆಗೊಳ್ಳುವುದು. [QBR]
7. ದೇವರೆ, ನನ್ನ ಜೀವನವು ಕೇವಲ ಉಸಿರೆಂಬುದನ್ನು ನೆನಸಿಕೊ, [QBR2] ನನ್ನ ಕಣ್ಣುಗಳು ಮತ್ತೆಂದಿಗೂ ಸುಖವನ್ನು ನೋಡುವುದಿಲ್ಲ. [QBR]
8. ನೀನು ನನ್ನನ್ನು ಮತ್ತೆಂದೂ ಕಾಣುವುದಿಲ್ಲ. [QBR2] ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು. [QBR]
9. ಮೋಡವು ಕಣ್ಣಿಗೆ ಕಾಣದೆ ಇಲ್ಲವಾಗುವುದು. [QBR2] ಅದೇ ರೀತಿಯಲ್ಲಿ, ಸತ್ತು ಸಮಾಧಿಯಲ್ಲಿ ಹೂಳಲ್ಪಟ್ಟವನು ಹಿಂತಿರುಗಿ ಬರುವುದಿಲ್ಲ. [QBR]
10. ಅವನು ತನ್ನ ಮನೆಗೆ ಮತ್ತೆಂದಿಗೂ ಹಿಂತಿರುಗಿ ಬರುವುದಿಲ್ಲ. [QBR2] ಇನ್ನು ಮೇಲೆ ಅವನ ಸ್ಥಳವು ಅವನನ್ನು ತಿಳಿದಿರುವುದಿಲ್ಲ.
11. “ಆದ್ದರಿಂದ ನಾನು ಮೌನವಾಗಿರುವುದಿಲ್ಲ, ನಾನು ಮಾತಾಡುವೆನು! [QBR2] ನನ್ನ ಆತ್ಮವು ಸಂಕಟಪಡುತ್ತಿದೆ! [QBR2] ನನ್ನ ಮನಸ್ಸು ನೊಂದು ಹೋಗಿರುವುದರಿಂದ ನಾನು ದೂರು ಹೇಳುವೆನು. [QBR]
12. ದೇವರೇ, ನೀನು ನನ್ನನ್ನು ಕಾಯುವುದೇಕೆ? [QBR2] ನಾನೇನು ಸಮುದ್ರವೇ? ಭಯಂಕರವಾದ ಸಮುದ್ರ ಪ್ರಾಣಿಯೇ? [QBR]
13. ನನ್ನ ಹಾಸಿಗೆಯು ನನ್ನನ್ನು ಸಂತೈಸುತ್ತದೆ; [QBR2] ನನ್ನ ಮಂಚವು ನನಗೆ ವಿಶ್ರಾಂತಿಯನ್ನೂ ಉಪಶಮನವನ್ನೂ ಕೊಡುತ್ತದೆ ಎಂದು [QBR2] ನಾನು ಆಲೋಚಿಸುವಾಗ, [QBR]
14. ನೀನು ಕನಸುಗಳಿಂದ ನನ್ನನ್ನು ಹೆದರಿಸುವೆ; [QBR2] ದರ್ಶನಗಳಿಂದ ನನ್ನನ್ನು ಭಯಗೊಳಿಸುವೆ. [QBR]
15. ನಾನು ಬದುಕುವುದಕ್ಕಿಂತ [QBR2] ಉಸಿರುಕಟ್ಟಿ ಸಾಯುವುದೇ ಮೇಲು. [QBR]
16. ನನ್ನ ಜೀವಿತವು ನನಗೆ ಅಸಹ್ಯವಾಗಿದೆ. [QBR2] ಶಾಶ್ವತವಾಗಿ ಬದುಕಲು ನನಗೆ ಇಷ್ಟವಿಲ್ಲ. [QBR] ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡು! [QBR2] ನನ್ನ ಜೀವಿತಕ್ಕೆ ಅರ್ಥವೇ ಇಲ್ಲ! [QBR]
17. ದೇವರೇ, ಮನುಷ್ಯನು ಎಷ್ಟರವನು? [QBR2] ನೀನು ಅವನ ಕಡೆಗೆ ಗಮನ ಕೊಡುವುದೇಕೆ? [QBR]
18. ನೀನು ಪ್ರತಿ ಮುಂಜಾನೆ ಮನುಷ್ಯನನ್ನು ಪರೀಕ್ಷಿಸುವುದೇಕೆ? [QBR2] ಅವನನ್ನು ಪ್ರತಿಗಳಿಗೆಯಲ್ಲೂ ಪರೀಕ್ಷಿಸುವುದೇಕೆ? [QBR]
19. ದೇವರೇ, ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿಯನ್ನು ತಿರುಗಿಸದೆ ಇರುವೆ? [QBR2] ನೀನು ನನ್ನನ್ನು ಕ್ಷಣ ಕಾಲವಾದರೂ ಒಬ್ಬಂಟಿಗನನ್ನಾಗಿ ಬಿಡುವುದಿಲ್ಲ. [QBR]
20. ಮನುಷ್ಯನನ್ನು ಗಮನಿಸುವವನೇ, [QBR2] ನಾನು ಪಾಪ ಮಾಡಿದ್ದರೆ, ಅದರಿಂದ ನಿನಗೇನಾಯಿತು? [QBR] ದೇವರೇ, ನೀನು ನನ್ನನ್ನು ಗುರಿಯನ್ನಾಗಿ ಮಾಡಿಕೊಂಡದ್ದೇಕೆ? [QBR2] ನಾನು ನಿನಗೆ ಸಮಸ್ಯೆಯಾದೆನೇ? [QBR]
21. ನೀನು ನನ್ನ ತಪ್ಪುಗಳನ್ನು ಮನ್ನಿಸಬಾರದೇಕೆ? [QBR2] ನನ್ನ ಪಾಪಗಳನ್ನು ಕ್ಷಮಿಸಬಾರದೇಕೆ? [QBR] ನಾನು ಬೇಗನೆ ಸತ್ತು ಸಮಾಧಿಯಲ್ಲಿರುವೆನು. [QBR2] ಆಮೇಲೆ ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.” [PE]