ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಯೆಶಾಯ
1. {ದೇವರು ತನ್ನ ಜನರನ್ನು ಸ್ವದೇಶಕ್ಕೆ ಬರಮಾಡುವನು} [PS] ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ. [QBR2] ಆದ್ದರಿಂದ ನೀನು ಬಹಳವಾಗಿ ಸಂತೋಷಿಸು. ಯೆಹೋವನು ಹೇಳುವುದೇನೆಂದರೆ, [QBR2] “ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.”
2. “ನಿನ್ನ ಡೇರೆಗಳನ್ನು ವಿಸ್ತರಿಸು. [QBR2] ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು. [QBR2] ನಿನ್ನ ಮನೆಯನ್ನು ಅಭಿವೃದ್ಧಿಪಡಿಸು. [QBR] ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು. [QBR2]
3. ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ. [QBR] ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು. [QBR2] ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು. [QBR]
4. ಹೆದರಬೇಡ, ನೀನು ನಿರಾಶಳಾಗುವದಿಲ್ಲ. [QBR] ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ. [QBR2] ನೀನು ಬೇಸರಗೊಳ್ಳುವದಿಲ್ಲ. [QBR] ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು. [QBR2] ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ. [QBR] ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ [QBR2] ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ. [QBR]
5. ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು. [QBR2] ಆತನ ಹೆಸರು ಸರ್ವಶಕ್ತನಾದ ಯೆಹೋವನು. [QBR] ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ. [QBR2] ಆತನನ್ನು ‘ಇಡೀ ಭೂಲೋಕದ ದೇವರು’ ಎಂದು ಕರೆಯುವರು.
6. “ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ. [QBR2] ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ. [QBR] ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು. [QBR2] ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ. [QBR] ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.” [QBR]
7. ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ. [QBR2] ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು. [QBR]
8. ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು. [QBR2] ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.” [QBR] ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು.
9. ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ. [QBR2] ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. [QBR] ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.”
10. ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ [QBR2] ಬೆಟ್ಟಗಳು ಧೂಳಾದರೂ [QBR] ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು. [QBR] ನಾನು ನಿನ್ನೊಂದಿಗೆ ನಿತ್ಯಕಾಲದ [QBR2] ಸಮಾಧಾನದಲ್ಲಿ ಇರುವೆನು.” [QBR] ಯೆಹೋವನು ನಿನಗೆ ಕರುಣೆಯನ್ನು ತೋರುವನು. [QBR2] ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ.
11. “ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ [QBR2] ಯಾರೂ ನಿನ್ನನ್ನು ಸಂತೈಸಲಿಲ್ಲ. [QBR] ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು. [QBR2] ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು. [QBR] ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು. [QBR]
12. ಗೋಡೆಯ ಮೇಲಿರುವ ಕಲ್ಲುಗಳೆಲ್ಲಾ ಕೆಂಪು ಕಲ್ಲುಗಳೇ. [QBR2] ಹೊಳೆಯುವ ವಜ್ರಗಳಿಂದ ನಾನು ಹೊರಬಾಗಲನ್ನು ತಯಾರಿಸುವೆನು. [QBR2] ನಿನ್ನ ಸುತ್ತಲೂ ನಾನು ಅಮೂಲ್ಯವಾದ ಕಲ್ಲುಗಳಿಂದ ಗೋಡೆಯನ್ನು ಕಟ್ಟುವೆನು. [QBR]
13. ನಿನ್ನ ಮಕ್ಕಳು ದೇವರನ್ನು ಅನುಸರಿಸುವರು. [QBR2] ಆತನು ಅವರಿಗೆ ಬೋಧಿಸುವನು. ನಿನ್ನ ಮಕ್ಕಳಿಗೆ ನಿಜವಾದ ಶಾಂತಿ ಇರುವದು. [QBR]
14. ನೀನು ಒಳ್ಳೆಯತನದಿಂದ ಕಟ್ಟಲ್ಪಡುವೆ. [QBR2] ಆದ್ದರಿಂದ ಎಲ್ಲಾ ದುಷ್ಟತ್ವಗಳಿಂದ ನೀನು ಸುರಕ್ಷಿತಳಾಗಿರುವೆ. [QBR] ನೀನು ಯಾವುದಕ್ಕೂ ಹೆದರುವ ಅವಶ್ಯವಿಲ್ಲ. [QBR2] ಯಾವುದೂ ನಿನಗೆ ಹಾನಿಮಾಡದು. [QBR]
15. ನಿನಗೆ ವಿರುದ್ಧವಾಗಿ ನನ್ನ ಯಾವ ಸೈನ್ಯವೂ ಯುದ್ಧಮಾಡದು. [QBR2] ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಆ ಶತ್ರುವನ್ನು ನೀನು ಗೆಲ್ಲುವೆ. [PS]
16. “ಇಗೋ, ನಾನು ಕಮ್ಮಾರನನ್ನು ಮಾಡಿದೆನು. ಅವನು ಬೆಂಕಿಯನ್ನು ಊದಿ ಬಿಸಿಯನ್ನು ಹೆಚ್ಚಿಸುವನು. ಆಮೇಲೆ ಕೆಂಪಾಗಿ ಕಾದ ಕಬ್ಬಿಣವನ್ನು ಹೊರತೆಗೆದು ತನಗಿಷ್ಟವಾದ ಉಪಕರಣವನ್ನು ತಯಾರಿಸುವನು. ಅದೇ ರೀತಿಯಲ್ಲಿ ನಾಶಮಾಡುವ ‘ನಾಶಕನನ್ನು’ ನಾನು ನಿರ್ಮಿಸಿದೆನು. [PE][PS]
17. “ನಿನಗೆ ವಿರುದ್ಧವಾಗಿ ಯುದ್ಧಮಾಡಲು ಜನರು ಆಯುಧಗಳನ್ನು ತಯಾರಿಸುವರು. ಆದರೆ ಆ ಆಯುಧಗಳು ನಿನ್ನನ್ನು ಸೋಲಿಸಲಾರವು. ಅವರು ನಿನಗೆ ವಿರುದ್ಧವಾಗಿ ಮಾತಾಡಿದರೂ ಆ ಮಾತುಗಳು ನಿನ್ನನ್ನು ತಪ್ಪಿತಸ್ಥಳೆಂದು ತೋರಿಸಲಾರವು. [PE][PS] “ಯೆಹೋವನ ಸೇವಕರಿಗೆ ದೊರೆಯುವುದೇನು? ಅವರಿಗೆ ಆತನಿಂದಲೇ ಸುಫಲಗಳು ದೊರೆಯುತ್ತವೆ” ಎಂದು ಯೆಹೋವನು ಅನ್ನುತ್ತಾನೆ. [PE]

ಟಿಪ್ಪಣಿಗಳು

No Verse Added

ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 54 / 66
ಯೆಶಾಯ 54:24
ದೇವರು ತನ್ನ ಜನರನ್ನು ಸ್ವದೇಶಕ್ಕೆ ಬರಮಾಡುವನು 1 ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ. ಆದ್ದರಿಂದ ನೀನು ಬಹಳವಾಗಿ ಸಂತೋಷಿಸು. ಯೆಹೋವನು ಹೇಳುವುದೇನೆಂದರೆ, “ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.” 2 “ನಿನ್ನ ಡೇರೆಗಳನ್ನು ವಿಸ್ತರಿಸು. ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು. ನಿನ್ನ ಮನೆಯನ್ನು ಅಭಿವೃದ್ಧಿಪಡಿಸು. ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು. 3 ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ. ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು. ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು. 4 ಹೆದರಬೇಡ, ನೀನು ನಿರಾಶಳಾಗುವದಿಲ್ಲ. ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ. ನೀನು ಬೇಸರಗೊಳ್ಳುವದಿಲ್ಲ. ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು. ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ. ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ. 5 ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು. ಆತನ ಹೆಸರು ಸರ್ವಶಕ್ತನಾದ ಯೆಹೋವನು. ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ. ಆತನನ್ನು ‘ಇಡೀ ಭೂಲೋಕದ ದೇವರು’ ಎಂದು ಕರೆಯುವರು. 6 “ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ. ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ. ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು. ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ. ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.” 7 ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ. ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು. 8 ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು. ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.” ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು. 9 ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ. ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.” 10 ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ ಬೆಟ್ಟಗಳು ಧೂಳಾದರೂ ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು. ನಾನು ನಿನ್ನೊಂದಿಗೆ ನಿತ್ಯಕಾಲದ ಸಮಾಧಾನದಲ್ಲಿ ಇರುವೆನು.” ಯೆಹೋವನು ನಿನಗೆ ಕರುಣೆಯನ್ನು ತೋರುವನು. ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ. 11 “ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ ಯಾರೂ ನಿನ್ನನ್ನು ಸಂತೈಸಲಿಲ್ಲ. ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು. ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು. ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು. 12 ಗೋಡೆಯ ಮೇಲಿರುವ ಕಲ್ಲುಗಳೆಲ್ಲಾ ಕೆಂಪು ಕಲ್ಲುಗಳೇ. ಹೊಳೆಯುವ ವಜ್ರಗಳಿಂದ ನಾನು ಹೊರಬಾಗಲನ್ನು ತಯಾರಿಸುವೆನು. ನಿನ್ನ ಸುತ್ತಲೂ ನಾನು ಅಮೂಲ್ಯವಾದ ಕಲ್ಲುಗಳಿಂದ ಗೋಡೆಯನ್ನು ಕಟ್ಟುವೆನು. 13 ನಿನ್ನ ಮಕ್ಕಳು ದೇವರನ್ನು ಅನುಸರಿಸುವರು. ಆತನು ಅವರಿಗೆ ಬೋಧಿಸುವನು. ನಿನ್ನ ಮಕ್ಕಳಿಗೆ ನಿಜವಾದ ಶಾಂತಿ ಇರುವದು. 14 ನೀನು ಒಳ್ಳೆಯತನದಿಂದ ಕಟ್ಟಲ್ಪಡುವೆ. ಆದ್ದರಿಂದ ಎಲ್ಲಾ ದುಷ್ಟತ್ವಗಳಿಂದ ನೀನು ಸುರಕ್ಷಿತಳಾಗಿರುವೆ. ನೀನು ಯಾವುದಕ್ಕೂ ಹೆದರುವ ಅವಶ್ಯವಿಲ್ಲ. ಯಾವುದೂ ನಿನಗೆ ಹಾನಿಮಾಡದು. 15 ನಿನಗೆ ವಿರುದ್ಧವಾಗಿ ನನ್ನ ಯಾವ ಸೈನ್ಯವೂ ಯುದ್ಧಮಾಡದು. ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಆ ಶತ್ರುವನ್ನು ನೀನು ಗೆಲ್ಲುವೆ. 16 “ಇಗೋ, ನಾನು ಕಮ್ಮಾರನನ್ನು ಮಾಡಿದೆನು. ಅವನು ಬೆಂಕಿಯನ್ನು ಊದಿ ಬಿಸಿಯನ್ನು ಹೆಚ್ಚಿಸುವನು. ಆಮೇಲೆ ಕೆಂಪಾಗಿ ಕಾದ ಕಬ್ಬಿಣವನ್ನು ಹೊರತೆಗೆದು ತನಗಿಷ್ಟವಾದ ಉಪಕರಣವನ್ನು ತಯಾರಿಸುವನು. ಅದೇ ರೀತಿಯಲ್ಲಿ ನಾಶಮಾಡುವ ‘ನಾಶಕನನ್ನು’ ನಾನು ನಿರ್ಮಿಸಿದೆನು. 17 “ನಿನಗೆ ವಿರುದ್ಧವಾಗಿ ಯುದ್ಧಮಾಡಲು ಜನರು ಆಯುಧಗಳನ್ನು ತಯಾರಿಸುವರು. ಆದರೆ ಆ ಆಯುಧಗಳು ನಿನ್ನನ್ನು ಸೋಲಿಸಲಾರವು. ಅವರು ನಿನಗೆ ವಿರುದ್ಧವಾಗಿ ಮಾತಾಡಿದರೂ ಆ ಮಾತುಗಳು ನಿನ್ನನ್ನು ತಪ್ಪಿತಸ್ಥಳೆಂದು ತೋರಿಸಲಾರವು. “ಯೆಹೋವನ ಸೇವಕರಿಗೆ ದೊರೆಯುವುದೇನು? ಅವರಿಗೆ ಆತನಿಂದಲೇ ಸುಫಲಗಳು ದೊರೆಯುತ್ತವೆ” ಎಂದು ಯೆಹೋವನು ಅನ್ನುತ್ತಾನೆ.
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 54 / 66
Common Bible Languages
West Indian Languages
×

Alert

×

kannada Letters Keypad References