ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಯೆಶಾಯ
1. {ಬಾಬಿಲೋನಿಗೆ ದೇವರ ಸಂದೇಶ} [PS] ಆಮೋಚನ ಮಗನಾದ ಯೆಶಾಯನಿಗೆ ಬಾಬಿಲೋನಿನ ಬಗ್ಗೆ ದೊರೆತ ದೈವಸಂದೇಶ:
2. “ಬೋಳುಗುಡ್ಡದ ಮೇಲೆ ಧ್ವಜವನ್ನೆತ್ತಿರಿ. [QBR2] ಜನರನ್ನು ಕರೆಯಿರಿ; [QBR] ಕೈಸನ್ನೆ ಮಾಡಿರಿ; [QBR2] ದ್ವಾರಗಳ ಮೂಲಕ ಪ್ರವೇಶಿಸಲು ಪ್ರಮುಖರಿಗೆ ಹೇಳಿರಿ.
3. “ನಾನು ಅವರನ್ನು ಆ ಜನರಿಂದ ಪ್ರತ್ಯೇಕಿಸಿದ್ದೇನೆ; [QBR2] ನಾನೇ ಅವರಿಗೆ ಆಜ್ಞಾಪಿಸುವೆನು. [QBR] ನಾನು ಕೋಪಗೊಂಡಿರುವುದರಿಂದ ಆ ಜನರನ್ನು ಶಿಕ್ಷಿಸಲು ನನ್ನ ಉತ್ತಮವಾದ ಜನರನ್ನು ಒಟ್ಟಾಗಿ ಸೇರಿಸಿದ್ದೇನೆ. [QBR2] ಉತ್ಸಾಹಶಾಲಿಗಳಾದ ನನ್ನ ಜನರ ಬಗ್ಗೆ ನಾನು ಹೆಮ್ಮೆಪಡುತ್ತೇನೆ.
4. “ಪರ್ವತಗಳಲ್ಲಿ ಒಂದು ದೊಡ್ಡ ಶಬ್ದ ಕೇಳಿಸುತ್ತದೆ. ಆ ಶಬ್ದಕ್ಕೆ ಕಿವಿಗೊಡಿರಿ. [QBR2] ದೊಡ್ಡ ಜನಸಮೂಹದ ಶಬ್ದದಂತೆ ಕೇಳಿಸುತ್ತದೆ. [QBR] ಅನೇಕ ರಾಜ್ಯಗಳ ಜನರು ಒಟ್ಟಾಗಿ ಸೇರುತ್ತಿದ್ದಾರೆ. [QBR2] ಸರ್ವಶಕ್ತನಾದ ಯೆಹೋವನು ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದಾನೆ. [QBR]
5. ಯೆಹೋವನೂ ಆ ಸೈನ್ಯವೂ ದೂರದಿಂದ ಬರುತ್ತಿದ್ದಾರೆ. [QBR2] ದಿಗಂತದ ಆಚೆಯಿಂದ ಅವರು ಬರುತ್ತಿದ್ದಾರೆ. [QBR] ತನ್ನ ಸಿಟ್ಟನ್ನು ಪ್ರದರ್ಶಿಸುವದಕೋಸ್ಕರ ಯೆಹೋವನು ಈ ಸೈನ್ಯವನ್ನು ಉಪಯೋಗಿಸುವನು. [QBR2] ಈ ಸೈನ್ಯವು ಇಡೀ ಭೂಮಿಯನ್ನು ಹಾಳು ಮಾಡುವುದು.” [PS]
6. ಯೆಹೋವನ ದಿನವು ಹತ್ತಿರವಾಗಿದೆ. ಆದ್ದರಿಂದ ದುಃಖಿಸಿರಿ, ರೋಧಿಸಿರಿ. ವೈರಿಯು ಬಂದು ನಿಮ್ಮ ಐಶ್ವರ್ಯವನ್ನು ಸೂರೆಮಾಡುವ ಸಮಯವು ಬರುತ್ತದೆ. ಸರ್ವಶಕ್ತನಾದ ದೇವರು ಅದನ್ನು ನೆರವೇರಿಸುವನು.
7. ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. ಭಯದಿಂದ ಬಲಹೀನರಾಗುವರು.
8. ಪ್ರತಿಯೊಬ್ಬರೂ ಭಯಪೀಡಿತರಾಗುವರು. ಯಾತನೆವೇದನೆಗಳು ಅವರನ್ನು ಆಕ್ರಮಿಸುವವು. ಪ್ರಸವವೇದನೆಯಿಂದ ನರಳುವ ಹೆಂಗಸಿನಂತೆ ಅವರ ಹೊಟ್ಟೆಯಲ್ಲಿ ನೋವು ಉಂಟಾಗುವದು; ಅವರ ಮುಖಗಳು ಬೆಂಕಿಯಂತೆ ಕೆಂಪಗಾಗುವವು. ಭಯದ ಮುಖವು ತಮ್ಮ ನೆರೆಯವರಲ್ಲಿಯೂ ಇರುವದನ್ನು ನೋಡಿ ಜನರು ಆಶ್ಚರ್ಯಪಡುವರು. [PS]
9. {ಬಾಬಿಲೋನಿನ ವಿರುದ್ಧವಾಗಿ ದೇವರ ತೀರ್ಪು} [PS] ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭಯಂಕರವಾದ ದಿನವಾಗಿದೆ. ದೇವರು ಅತ್ಯಂತ ಕೋಪದಿಂದ ದೇಶವನ್ನೆಲ್ಲಾ ನಾಶಮಾಡುವನು; ದುಷ್ಟಜನರನ್ನೆಲ್ಲಾ ದೇಶವನ್ನು ಬಿಟ್ಟುಹೋಗುವಂತೆ ಮಾಡುವನು.
10. ಆಕಾಶವು ಕತ್ತಲಾಗುವದು; ಸೂರ್ಯ, ಚಂದ್ರ, ನಕ್ಷತ್ರಾದಿಗಳು ಪ್ರಕಾಶವನ್ನು ಕಳೆದುಕೊಳ್ಳುವವು. [PE][PS]
11. ದೇವರು ಹೇಳುವುದೇನೆಂದರೆ: “ಈ ಲೋಕಕ್ಕೆ ನಾನು ಕೆಡುಕನ್ನು ಉಂಟುಮಾಡುವೆನು. ದುಷ್ಟಜನರನ್ನು ಅವರ ಪಾಪಗಳಿಗಾಗಿ ನಾನು ಶಿಕ್ಷಿಸುವೆನು. ಅಹಂಕಾರಿಗಳು ಗರ್ವವನ್ನು ಕಳೆದುಕೊಳ್ಳುವಂತೆ ಮಾಡುವೆನು; ಕೀಳುಜನರ ಹೊಗಳಿಕೆಗಳನ್ನು ನಿಲ್ಲಿಸುವೆನು.
12. ಬಂಗಾರವು ಯಾವ ರೀತಿಯಲ್ಲಿ ಅಪರೂಪವಾಗಿ ದೊರಕುವದೋ, ಅದೇ ಪ್ರಕಾರ ದೇಶದಲ್ಲಿ ಬಹು ಸ್ವಲ್ಪವೇ ಜನರು ಉಳಿಯುವದರಿಂದ ಅವರು ನೋಡಸಿಗುವದೇ ಅಪರೂಪ. ಅಂಥವರು ಚೊಕ್ಕಬಂಗಾರಕ್ಕಿಂತಲೂ ಬೆಲೆಬಾಳುವರು.
13. ನನ್ನ ಕೋಪದಿಂದ ಆಕಾಶಮಂಡಲವನ್ನು ನಡುಗಿಸುವೆನು. ಭೂಮಿಯನ್ನು ಅದರ ಸ್ಥಳದಿಂದ ಕದಲಿಸುವೆನು.” [PE][PS] ಸರ್ವಶಕ್ತನಾದ ಯೆಹೋವನು ತನ್ನ ಮಹಾಕೋಪವನ್ನು ಪ್ರದರ್ಶಿಸುವ ದಿನದಲ್ಲಿ ಅದು ನೆರವೇರುವುದು.
14. ಆಗ ಗಾಯಗೊಂಡ ಜಿಂಕೆಯಂತೆ ಬಾಬಿಲೋನು ಓಡಿಹೋಗುವದು. ಅವರು ಕುರುಬನಿಲ್ಲದ ಕುರಿಗಳಂತೆ ಚದರಿ ಹೋಗುವರು. ಪ್ರತಿಯೊಬ್ಬನು ಹಿಂದಿರುಗಿ ತನ್ನ ದೇಶಕ್ಕೂ ತನ್ನ ಜನರ ಬಳಿಗೂ ಓಡುವನು.
15. ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು.
16. ಅವರ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಿತ್ತುಕೊಳ್ಳುವರು; ಅವರ ಹೆಂಡತಿಯರನ್ನು ಬಲಾತ್ಕಾರದಿಂದ ಸಂಭೋಗಿಸುವರು; ಅವರ ಮಕ್ಕಳನ್ನು ಜನರ ಕಣ್ಣೆದುರಿನಲ್ಲಿಯೇ ಹೊಡೆದು ಸಾಯಿಸುವರು. [PE][PS]
17. ದೇವರು ಹೇಳುವುದೇನೆಂದರೆ: “ಮೇದ್ಯರ ಸೈನ್ಯವು ಬಾಬಿಲೋನನ್ನು ಮುತ್ತುವಂತೆ ಮಾಡುವೆನು. ಮೇದ್ಯರ ಸೈನ್ಯಕ್ಕೆ ಬೆಳ್ಳಿಬಂಗಾರ ಸುರಿಸಿದರೂ ಅವರು ಬಾಬಿಲೋನಿನ ಮೇಲೆ ಧಾಳಿ ಮಾಡುವದನ್ನು ನಿಲ್ಲಿಸುವದಿಲ್ಲ.
18. ಸೈನಿಕರು ಬಾಬಿಲೋನಿನ ಯುವಕರನ್ನು ಹಿಡಿದು ಕೊಲ್ಲುವರು. ಶಿಶುಗಳಿಗೂ ದಯೆತೋರುವುದಿಲ್ಲ; ಮಕ್ಕಳಿಗೆ ಕರುಣೆತೋರುವುದಿಲ್ಲ.
19. ಬಾಬಿಲೋನು ಸೊದೋಮ್ ಗೊಮೋರಗಳಂತೆ ನಾಶವಾಗುವದು. ದೇವರೇ ಇದನ್ನು ಮಾಡುವನು. ಆಗ ಅಲ್ಲಿ ಏನೂ ಉಳಿಯದು. [PE][PS] “ಎಲ್ಲಾ ರಾಜ್ಯಗಳಿಗಿಂತ ಬಾಬಿಲೋನ್ ಬಹಳ ಸುಂದರವಾಗಿದೆ. ಬಾಬಿಲೋನಿಯರು ತಮ್ಮ ನಗರದ ಬಗ್ಗೆ ತುಂಬಾ ಹೆಚ್ಚಳಪಡುತ್ತಾರೆ.
20. ಆದರೆ ಬಾಬಿಲೋನ್ ಇನ್ನು ಮುಂದೆ ಸುಂದರವಾಗಿರದು. ಮುಂದಿನ ದಿವಸಗಳಲ್ಲಿ, ಜನರು ಅಲ್ಲಿ ವಾಸಿಸರು. ಅರಬ್ಬಿಯರು ತಮ್ಮ ಗುಡಾರಗಳನ್ನು ಅಲ್ಲಿ ಹಾಕುವದಿಲ್ಲ. ಕುರುಬರು ತಮ್ಮ ಮಂದೆಯನ್ನು ಮೇಯಿಸಲು ಅಲ್ಲಿಗೆ ಬರುವದಿಲ್ಲ.
21. ಅಲ್ಲಿ ಮರುಭೂಮಿಯ ಕಾಡುಪ್ರಾಣಿಗಳು ಮಾತ್ರವೇ ವಾಸಿಸುವವು. ಜನರು ಬಾಬಿಲೋನಿನಲ್ಲಿರುವ ತಮ್ಮ ಮನೆಗಳಲ್ಲಿ ವಾಸಿಸುವದಿಲ್ಲ. ಅವರ ಮನೆಗಳಲ್ಲಿ ಗೂಬೆಗಳು ಮತ್ತು ಉಷ್ಟ್ರಪಕ್ಷಿಗಳು ವಾಸಮಾಡುವವು. ಕಾಡುಮೇಕೆಗಳು ಮನೆಯೊಳಗೆ ಆಡುವವು.
22. ಕಾಡುನಾಯಿ ಮತ್ತು ತೋಳಗಳು ಬಾಬಿಲೋನಿನ ಭವ್ಯಭವನಗಳೊಳಗಿಂದ ಅರಚುವವು. ಬಾಬಿಲೋನ್ ಕೊನೆಗೊಳ್ಳುವುದು. ಅದರ ಅಂತ್ಯವು ಸಮೀಪದಲ್ಲಿಯೇ ಇದೆ. ಅದರ ಪೂರ್ಣ ನಾಶನಕ್ಕಾಗಿ ನಾನು ಇನ್ನು ಹೆಚ್ಚು ಹೊತ್ತು ಕಾಯುವದಿಲ್ಲ.” [PE]

ಟಿಪ್ಪಣಿಗಳು

No Verse Added

ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 13 / 66
ಯೆಶಾಯ 13:24
ಬಾಬಿಲೋನಿಗೆ ದೇವರ ಸಂದೇಶ 1 ಆಮೋಚನ ಮಗನಾದ ಯೆಶಾಯನಿಗೆ ಬಾಬಿಲೋನಿನ ಬಗ್ಗೆ ದೊರೆತ ದೈವಸಂದೇಶ: 2 “ಬೋಳುಗುಡ್ಡದ ಮೇಲೆ ಧ್ವಜವನ್ನೆತ್ತಿರಿ. ಜನರನ್ನು ಕರೆಯಿರಿ; ಕೈಸನ್ನೆ ಮಾಡಿರಿ; ದ್ವಾರಗಳ ಮೂಲಕ ಪ್ರವೇಶಿಸಲು ಪ್ರಮುಖರಿಗೆ ಹೇಳಿರಿ. 3 “ನಾನು ಅವರನ್ನು ಆ ಜನರಿಂದ ಪ್ರತ್ಯೇಕಿಸಿದ್ದೇನೆ; ನಾನೇ ಅವರಿಗೆ ಆಜ್ಞಾಪಿಸುವೆನು. ನಾನು ಕೋಪಗೊಂಡಿರುವುದರಿಂದ ಆ ಜನರನ್ನು ಶಿಕ್ಷಿಸಲು ನನ್ನ ಉತ್ತಮವಾದ ಜನರನ್ನು ಒಟ್ಟಾಗಿ ಸೇರಿಸಿದ್ದೇನೆ. ಉತ್ಸಾಹಶಾಲಿಗಳಾದ ನನ್ನ ಜನರ ಬಗ್ಗೆ ನಾನು ಹೆಮ್ಮೆಪಡುತ್ತೇನೆ. 4 “ಪರ್ವತಗಳಲ್ಲಿ ಒಂದು ದೊಡ್ಡ ಶಬ್ದ ಕೇಳಿಸುತ್ತದೆ. ಆ ಶಬ್ದಕ್ಕೆ ಕಿವಿಗೊಡಿರಿ. ದೊಡ್ಡ ಜನಸಮೂಹದ ಶಬ್ದದಂತೆ ಕೇಳಿಸುತ್ತದೆ. ಅನೇಕ ರಾಜ್ಯಗಳ ಜನರು ಒಟ್ಟಾಗಿ ಸೇರುತ್ತಿದ್ದಾರೆ. ಸರ್ವಶಕ್ತನಾದ ಯೆಹೋವನು ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದಾನೆ. 5 ಯೆಹೋವನೂ ಆ ಸೈನ್ಯವೂ ದೂರದಿಂದ ಬರುತ್ತಿದ್ದಾರೆ. ದಿಗಂತದ ಆಚೆಯಿಂದ ಅವರು ಬರುತ್ತಿದ್ದಾರೆ. ತನ್ನ ಸಿಟ್ಟನ್ನು ಪ್ರದರ್ಶಿಸುವದಕೋಸ್ಕರ ಯೆಹೋವನು ಈ ಸೈನ್ಯವನ್ನು ಉಪಯೋಗಿಸುವನು. ಈ ಸೈನ್ಯವು ಇಡೀ ಭೂಮಿಯನ್ನು ಹಾಳು ಮಾಡುವುದು.” 6 ಯೆಹೋವನ ದಿನವು ಹತ್ತಿರವಾಗಿದೆ. ಆದ್ದರಿಂದ ದುಃಖಿಸಿರಿ, ರೋಧಿಸಿರಿ. ವೈರಿಯು ಬಂದು ನಿಮ್ಮ ಐಶ್ವರ್ಯವನ್ನು ಸೂರೆಮಾಡುವ ಸಮಯವು ಬರುತ್ತದೆ. ಸರ್ವಶಕ್ತನಾದ ದೇವರು ಅದನ್ನು ನೆರವೇರಿಸುವನು. 7 ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. ಭಯದಿಂದ ಬಲಹೀನರಾಗುವರು. 8 ಪ್ರತಿಯೊಬ್ಬರೂ ಭಯಪೀಡಿತರಾಗುವರು. ಯಾತನೆವೇದನೆಗಳು ಅವರನ್ನು ಆಕ್ರಮಿಸುವವು. ಪ್ರಸವವೇದನೆಯಿಂದ ನರಳುವ ಹೆಂಗಸಿನಂತೆ ಅವರ ಹೊಟ್ಟೆಯಲ್ಲಿ ನೋವು ಉಂಟಾಗುವದು; ಅವರ ಮುಖಗಳು ಬೆಂಕಿಯಂತೆ ಕೆಂಪಗಾಗುವವು. ಭಯದ ಮುಖವು ತಮ್ಮ ನೆರೆಯವರಲ್ಲಿಯೂ ಇರುವದನ್ನು ನೋಡಿ ಜನರು ಆಶ್ಚರ್ಯಪಡುವರು. ಬಾಬಿಲೋನಿನ ವಿರುದ್ಧವಾಗಿ ದೇವರ ತೀರ್ಪು 9 ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭಯಂಕರವಾದ ದಿನವಾಗಿದೆ. ದೇವರು ಅತ್ಯಂತ ಕೋಪದಿಂದ ದೇಶವನ್ನೆಲ್ಲಾ ನಾಶಮಾಡುವನು; ದುಷ್ಟಜನರನ್ನೆಲ್ಲಾ ದೇಶವನ್ನು ಬಿಟ್ಟುಹೋಗುವಂತೆ ಮಾಡುವನು. 10 ಆಕಾಶವು ಕತ್ತಲಾಗುವದು; ಸೂರ್ಯ, ಚಂದ್ರ, ನಕ್ಷತ್ರಾದಿಗಳು ಪ್ರಕಾಶವನ್ನು ಕಳೆದುಕೊಳ್ಳುವವು. 11 ದೇವರು ಹೇಳುವುದೇನೆಂದರೆ: “ಈ ಲೋಕಕ್ಕೆ ನಾನು ಕೆಡುಕನ್ನು ಉಂಟುಮಾಡುವೆನು. ದುಷ್ಟಜನರನ್ನು ಅವರ ಪಾಪಗಳಿಗಾಗಿ ನಾನು ಶಿಕ್ಷಿಸುವೆನು. ಅಹಂಕಾರಿಗಳು ಗರ್ವವನ್ನು ಕಳೆದುಕೊಳ್ಳುವಂತೆ ಮಾಡುವೆನು; ಕೀಳುಜನರ ಹೊಗಳಿಕೆಗಳನ್ನು ನಿಲ್ಲಿಸುವೆನು. 12 ಬಂಗಾರವು ಯಾವ ರೀತಿಯಲ್ಲಿ ಅಪರೂಪವಾಗಿ ದೊರಕುವದೋ, ಅದೇ ಪ್ರಕಾರ ದೇಶದಲ್ಲಿ ಬಹು ಸ್ವಲ್ಪವೇ ಜನರು ಉಳಿಯುವದರಿಂದ ಅವರು ನೋಡಸಿಗುವದೇ ಅಪರೂಪ. ಅಂಥವರು ಚೊಕ್ಕಬಂಗಾರಕ್ಕಿಂತಲೂ ಬೆಲೆಬಾಳುವರು. 13 ನನ್ನ ಕೋಪದಿಂದ ಆಕಾಶಮಂಡಲವನ್ನು ನಡುಗಿಸುವೆನು. ಭೂಮಿಯನ್ನು ಅದರ ಸ್ಥಳದಿಂದ ಕದಲಿಸುವೆನು.” ಸರ್ವಶಕ್ತನಾದ ಯೆಹೋವನು ತನ್ನ ಮಹಾಕೋಪವನ್ನು ಪ್ರದರ್ಶಿಸುವ ದಿನದಲ್ಲಿ ಅದು ನೆರವೇರುವುದು. 14 ಆಗ ಗಾಯಗೊಂಡ ಜಿಂಕೆಯಂತೆ ಬಾಬಿಲೋನು ಓಡಿಹೋಗುವದು. ಅವರು ಕುರುಬನಿಲ್ಲದ ಕುರಿಗಳಂತೆ ಚದರಿ ಹೋಗುವರು. ಪ್ರತಿಯೊಬ್ಬನು ಹಿಂದಿರುಗಿ ತನ್ನ ದೇಶಕ್ಕೂ ತನ್ನ ಜನರ ಬಳಿಗೂ ಓಡುವನು. 15 ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು. 16 ಅವರ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಿತ್ತುಕೊಳ್ಳುವರು; ಅವರ ಹೆಂಡತಿಯರನ್ನು ಬಲಾತ್ಕಾರದಿಂದ ಸಂಭೋಗಿಸುವರು; ಅವರ ಮಕ್ಕಳನ್ನು ಜನರ ಕಣ್ಣೆದುರಿನಲ್ಲಿಯೇ ಹೊಡೆದು ಸಾಯಿಸುವರು. 17 ದೇವರು ಹೇಳುವುದೇನೆಂದರೆ: “ಮೇದ್ಯರ ಸೈನ್ಯವು ಬಾಬಿಲೋನನ್ನು ಮುತ್ತುವಂತೆ ಮಾಡುವೆನು. ಮೇದ್ಯರ ಸೈನ್ಯಕ್ಕೆ ಬೆಳ್ಳಿಬಂಗಾರ ಸುರಿಸಿದರೂ ಅವರು ಬಾಬಿಲೋನಿನ ಮೇಲೆ ಧಾಳಿ ಮಾಡುವದನ್ನು ನಿಲ್ಲಿಸುವದಿಲ್ಲ. 18 ಸೈನಿಕರು ಬಾಬಿಲೋನಿನ ಯುವಕರನ್ನು ಹಿಡಿದು ಕೊಲ್ಲುವರು. ಶಿಶುಗಳಿಗೂ ದಯೆತೋರುವುದಿಲ್ಲ; ಮಕ್ಕಳಿಗೆ ಕರುಣೆತೋರುವುದಿಲ್ಲ. 19 ಬಾಬಿಲೋನು ಸೊದೋಮ್ ಗೊಮೋರಗಳಂತೆ ನಾಶವಾಗುವದು. ದೇವರೇ ಇದನ್ನು ಮಾಡುವನು. ಆಗ ಅಲ್ಲಿ ಏನೂ ಉಳಿಯದು. “ಎಲ್ಲಾ ರಾಜ್ಯಗಳಿಗಿಂತ ಬಾಬಿಲೋನ್ ಬಹಳ ಸುಂದರವಾಗಿದೆ. ಬಾಬಿಲೋನಿಯರು ತಮ್ಮ ನಗರದ ಬಗ್ಗೆ ತುಂಬಾ ಹೆಚ್ಚಳಪಡುತ್ತಾರೆ. 20 ಆದರೆ ಬಾಬಿಲೋನ್ ಇನ್ನು ಮುಂದೆ ಸುಂದರವಾಗಿರದು. ಮುಂದಿನ ದಿವಸಗಳಲ್ಲಿ, ಜನರು ಅಲ್ಲಿ ವಾಸಿಸರು. ಅರಬ್ಬಿಯರು ತಮ್ಮ ಗುಡಾರಗಳನ್ನು ಅಲ್ಲಿ ಹಾಕುವದಿಲ್ಲ. ಕುರುಬರು ತಮ್ಮ ಮಂದೆಯನ್ನು ಮೇಯಿಸಲು ಅಲ್ಲಿಗೆ ಬರುವದಿಲ್ಲ. 21 ಅಲ್ಲಿ ಮರುಭೂಮಿಯ ಕಾಡುಪ್ರಾಣಿಗಳು ಮಾತ್ರವೇ ವಾಸಿಸುವವು. ಜನರು ಬಾಬಿಲೋನಿನಲ್ಲಿರುವ ತಮ್ಮ ಮನೆಗಳಲ್ಲಿ ವಾಸಿಸುವದಿಲ್ಲ. ಅವರ ಮನೆಗಳಲ್ಲಿ ಗೂಬೆಗಳು ಮತ್ತು ಉಷ್ಟ್ರಪಕ್ಷಿಗಳು ವಾಸಮಾಡುವವು. ಕಾಡುಮೇಕೆಗಳು ಮನೆಯೊಳಗೆ ಆಡುವವು. 22 ಕಾಡುನಾಯಿ ಮತ್ತು ತೋಳಗಳು ಬಾಬಿಲೋನಿನ ಭವ್ಯಭವನಗಳೊಳಗಿಂದ ಅರಚುವವು. ಬಾಬಿಲೋನ್ ಕೊನೆಗೊಳ್ಳುವುದು. ಅದರ ಅಂತ್ಯವು ಸಮೀಪದಲ್ಲಿಯೇ ಇದೆ. ಅದರ ಪೂರ್ಣ ನಾಶನಕ್ಕಾಗಿ ನಾನು ಇನ್ನು ಹೆಚ್ಚು ಹೊತ್ತು ಕಾಯುವದಿಲ್ಲ.”
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 13 / 66
Common Bible Languages
West Indian Languages
×

Alert

×

kannada Letters Keypad References