ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಆದಿಕಾಂಡ
1. {ಈಜಿಪ್ಟಿನಲ್ಲಿ ಯೋಸೇಫನನ್ನು ಪೋಟೀಫರನಿಗೆ ಮಾರಿದ್ದು} [PS] ಯೋಸೇಫನನ್ನು ಖರೀದಿಮಾಡಿದ ವ್ಯಾಪಾರಿಗಳು ಅವನನ್ನು ಈಜಿಪ್ಟಿಗೆ ತೆಗೆದುಕೊಂಡು ಬಂದು ಫರೋಹನ ಕಾವಲುಗಾರರ ನಾಯಕನಾದ ಪೋಟೀಫರನಿಗೆ ಮಾರಿದರು.
2. ಆದರೆ ಯೆಹೋವನ ಸಹಾಯದಿಂದ ಯೋಸೇಫನು ಏಳಿಗೆಯಾಗಿ ತನ್ನ ಯಜಮಾನನಾದ ಈಜಿಪ್ಟಿನ ಪೋಟೀಫರನ ಮನೆಯಲ್ಲಿ ಸೇವಕನಾದನು. [PE][PS]
3. ಯೆಹೋವನು ಯೋಸೇಫನ ಸಂಗಡವಿದ್ದು ಅವನನ್ನು ಎಲ್ಲಾ ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ಮಾಡುತ್ತಿರುವುದನ್ನು ಪೋಟೀಫರನು ಗಮನಿಸಿದನು.
4. ಪೋಟೀಫರನು ಯೋಸೇಫನ ವಿಷಯದಲ್ಲಿ ತುಂಬ ಸಂತೋಷಪಟ್ಟು ಸ್ವಂತ ಸೇವಕನನ್ನಾಗಿ ಮಾಡಿಕೊಂಡನು; ಅಲ್ಲದೆ ಮನೆಯ ಮೇಲ್ವಿಚಾರಣೆಯನ್ನು ಒಪ್ಪಿಸಿಕೊಟ್ಟನು; ತನ್ನ ಆಸ್ತಿಗೆಲ್ಲಾ ಮೇಲಾಧಿಕಾರಿಯನ್ನಾಗಿ ನೇಮಿಸಿದನು.
5. ಪೋಟೀಫರನು ಯೋಸೇಫನಿಗೆ ಮನೆಯ ಮೇಲ್ವಿಚಾರಣೆಯನ್ನು ಕೊಟ್ಟು ಆಸ್ತಿಗೆ ಅವನನ್ನು ಜವಾಬ್ದಾರನನ್ನಾಗಿ ಮಾಡಿದ ಮೇಲೆ ಯೆಹೋವನು ಪೋಟೀಫರನ ಮನೆಯನ್ನೂ ಬೆಳೆಗಳನ್ನೂ ಆಸ್ತಿಯನ್ನೂ ಆಶೀರ್ವದಿಸಿದನು.
6. ಆದ್ದರಿಂದ ಪೋಟೀಫರನು ತಾನು ಊಟಮಾಡುವ ಆಹಾರವೊಂದನ್ನು ಬಿಟ್ಟು ಉಳಿದೆಲ್ಲದರ ಜವಾಬ್ದಾರಿಯನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಿಂದ ಇದ್ದನು. [PS] ಯೋಸೇಫನು ನೋಡಲು ಸುಂದರನಾಗಿಯೂ ರೂಪವಂತನಾಗಿಯೂ ಇದ್ದನು.
7. {ಯೋಸೇಫನು ಪೋಟೀಫರನ ಹೆಂಡತಿಯನ್ನು ತಿರಸ್ಕರಿಸಿದ್ದು} [PS] ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು. [PE][PS]
8. ಆದರೆ ಯೋಸೇಫನು ತಿರಸ್ಕರಿಸಿದನು. ಅವನು, “ನನ್ನ ಧಣಿಯು ಈ ಮನೆಯ ಜವಾಬ್ದಾರಿಕೆಗಳನ್ನೆಲ್ಲಾ ನನಗೆ ವಹಿಸಿ ನಿಶ್ಚಿಂತೆಯಿಂದಿದ್ದಾನೆ.
9. ನನ್ನ ಧಣಿಯು ಈ ಮನೆಯ ಸರ್ವಾಧಿಕಾರವನ್ನು ನನಗೆ ಕೊಟ್ಟಿದ್ದರೂ ತನ್ನ ಧರ್ಮಪತ್ನಿಯಾದ ನಿನ್ನನ್ನು ನನಗೆ ಅಧೀನಪಡಿಸಿಲ್ಲ. ಹೀಗಿರಲು ಇಂಥಾ ಮಹಾ ದುಷ್ಕೃತ್ಯವನ್ನು ನಡೆಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಉತ್ತರಕೊಟ್ಟನು. [PE][PS]
10. ಆ ಸ್ತ್ರೀಯು ಪ್ರತಿದಿನವೂ ಯೋಸೇಫನನ್ನು ಒತ್ತಾಯಿಸಿದಳು. ಆದರೆ ಯೋಸೇಫನು ಆಕೆಯೊಂದಿಗೆ ಮಲಗಿಕೊಳ್ಳಲು ಒಪ್ಪಲಿಲ್ಲ.
11. ಒಂದು ದಿನ ಯೋಸೇಫನು ತನ್ನ ಕೆಲಸದ ನಿಮಿತ್ತ ಮನೆಯೊಳಗೆ ಹೋದನು. ಆಗ ಮನೆಯಲ್ಲಿ ಇದ್ದವನು ಅವನೊಬ್ಬನೇ.
12. ಅವನ ಧಣಿಯ ಹೆಂಡತಿಯು ಅವನ ಮೇಲಂಗಿಯನ್ನು ಹಿಡಿದುಕೊಂಡು, “ಬಾ ನನ್ನೊಂದಿಗೆ ಮಲಗಿಕೊ” ಎಂದು ಕರೆದಳು. ಕೂಡಲೇ ಯೋಸೇಫನು ತನ್ನ ಮೇಲಂಗಿಯನ್ನೇ ಬಿಟ್ಟು ಅಲ್ಲಿಂದ ಓಡಿಹೋದನು. [PE][PS]
13. ಯೋಸೇಫನು ತನ್ನ ಮೇಲಂಗಿಯನ್ನು ಬಿಟ್ಟು ಓಡಿಹೋದದ್ದರಿಂದ ಸಿಟ್ಟುಗೊಂಡ ಅವಳು
14. ಮನೆಯ ಹೊರಗಿದ್ದ ಸೇವಕರನ್ನು ಕರೆದು, “ನೋಡಿ, ನಮಗೆ ಅವಮಾನ ಮಾಡುವುದಕ್ಕಾಗಿ ಈ ಇಬ್ರಿಯ ಗುಲಾಮನನ್ನು ಇಲ್ಲಿಗೆ ತರಲಾಗಿದೆ. ಅವನು ಮನೆಯೊಳಗೆ ಬಂದು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. ಆಗ ನಾನು ಗಟ್ಟಿಯಾಗಿ ಕೂಗಿಕೊಂಡೆ.
15. ನನ್ನ ಕೂಗಿನಿಂದ ಭಯಗೊಂಡು ತನ್ನ ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು.
16. ಆಕೆ ಆ ಮೇಲಂಗಿಯನ್ನು ತನ್ನ ಗಂಡನೂ ಯೋಸೇಫನಿಗೆ ಧಣಿಯೂ ಆಗಿದ್ದ ಪೋಟೀಫರನು ಬರುವ ತನಕ ಇಟ್ಟುಕೊಂಡಿದ್ದಳು.
17. ಪತಿಯು ಬಂದಾಗ ಆಕೆ ಅದೇ ರೀತಿ ಹೇಳಿ, “ನೀನು ಸೇರಿಸಿಕೊಂಡ ಈ ಇಬ್ರಿಯ ಗುಲಾಮನು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ.
18. ಆದರೆ ನಾನು ಕೂಗಿಕೊಂಡದ್ದರಿಂದ ಅವನು ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು. [PE][PS]
19. ಯೋಸೇಫನ ಧಣಿಯು ತನ್ನ ಹೆಂಡತಿಯ ಮಾತು ಕೇಳಿ ತುಂಬ ಕೋಪಗೊಂಡನು.
20. ರಾಜನ ವೈರಿಗಳನ್ನು ಹಾಕುವ ಒಂದು ಸೆರೆಮನೆಯಿತ್ತು. ಆದ್ದರಿಂದ ಪೋಟೀಫರನು ಯೋಸೇಫನನ್ನು ಆ ಸೆರೆಮನೆಗೆ ಹಾಕಿಸಿದನು. ಅಂದಿನಿಂದ ಯೋಸೇಫನು ಅಲ್ಲಿದ್ದನು. [PS]
21. {ಯೋಸೇಫನಿಗೆ ಸೆರೆವಾಸ} [PS] ಆದರೆ ಯೆಹೋವನು ಯೋಸೇಫನ ಸಂಗಡವಿದ್ದು ಕರುಣೆತೋರಿದನು. ಸ್ವಲ್ಪಕಾಲವಾದ ಮೇಲೆ ಸೆರೆಮನೆಯ ಮುಖ್ಯಾಧಿಕಾರಿಯು ಯೋಸೇಫನನ್ನು ಪ್ರೀತಿಸತೊಡಗಿದನು.
22. ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು.
23. ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು. [PE]
ಒಟ್ಟು 50 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 39 / 50
ಈಜಿಪ್ಟಿನಲ್ಲಿ ಯೋಸೇಫನನ್ನು ಪೋಟೀಫರನಿಗೆ ಮಾರಿದ್ದು 1 ಯೋಸೇಫನನ್ನು ಖರೀದಿಮಾಡಿದ ವ್ಯಾಪಾರಿಗಳು ಅವನನ್ನು ಈಜಿಪ್ಟಿಗೆ ತೆಗೆದುಕೊಂಡು ಬಂದು ಫರೋಹನ ಕಾವಲುಗಾರರ ನಾಯಕನಾದ ಪೋಟೀಫರನಿಗೆ ಮಾರಿದರು. 2 ಆದರೆ ಯೆಹೋವನ ಸಹಾಯದಿಂದ ಯೋಸೇಫನು ಏಳಿಗೆಯಾಗಿ ತನ್ನ ಯಜಮಾನನಾದ ಈಜಿಪ್ಟಿನ ಪೋಟೀಫರನ ಮನೆಯಲ್ಲಿ ಸೇವಕನಾದನು. 3 ಯೆಹೋವನು ಯೋಸೇಫನ ಸಂಗಡವಿದ್ದು ಅವನನ್ನು ಎಲ್ಲಾ ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ಮಾಡುತ್ತಿರುವುದನ್ನು ಪೋಟೀಫರನು ಗಮನಿಸಿದನು. 4 ಪೋಟೀಫರನು ಯೋಸೇಫನ ವಿಷಯದಲ್ಲಿ ತುಂಬ ಸಂತೋಷಪಟ್ಟು ಸ್ವಂತ ಸೇವಕನನ್ನಾಗಿ ಮಾಡಿಕೊಂಡನು; ಅಲ್ಲದೆ ಮನೆಯ ಮೇಲ್ವಿಚಾರಣೆಯನ್ನು ಒಪ್ಪಿಸಿಕೊಟ್ಟನು; ತನ್ನ ಆಸ್ತಿಗೆಲ್ಲಾ ಮೇಲಾಧಿಕಾರಿಯನ್ನಾಗಿ ನೇಮಿಸಿದನು. 5 ಪೋಟೀಫರನು ಯೋಸೇಫನಿಗೆ ಮನೆಯ ಮೇಲ್ವಿಚಾರಣೆಯನ್ನು ಕೊಟ್ಟು ಆಸ್ತಿಗೆ ಅವನನ್ನು ಜವಾಬ್ದಾರನನ್ನಾಗಿ ಮಾಡಿದ ಮೇಲೆ ಯೆಹೋವನು ಪೋಟೀಫರನ ಮನೆಯನ್ನೂ ಬೆಳೆಗಳನ್ನೂ ಆಸ್ತಿಯನ್ನೂ ಆಶೀರ್ವದಿಸಿದನು. 6 ಆದ್ದರಿಂದ ಪೋಟೀಫರನು ತಾನು ಊಟಮಾಡುವ ಆಹಾರವೊಂದನ್ನು ಬಿಟ್ಟು ಉಳಿದೆಲ್ಲದರ ಜವಾಬ್ದಾರಿಯನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಿಂದ ಇದ್ದನು. ಯೋಸೇಫನು ನೋಡಲು ಸುಂದರನಾಗಿಯೂ ರೂಪವಂತನಾಗಿಯೂ ಇದ್ದನು. ಯೋಸೇಫನು ಪೋಟೀಫರನ ಹೆಂಡತಿಯನ್ನು ತಿರಸ್ಕರಿಸಿದ್ದು 7 ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು. 8 ಆದರೆ ಯೋಸೇಫನು ತಿರಸ್ಕರಿಸಿದನು. ಅವನು, “ನನ್ನ ಧಣಿಯು ಈ ಮನೆಯ ಜವಾಬ್ದಾರಿಕೆಗಳನ್ನೆಲ್ಲಾ ನನಗೆ ವಹಿಸಿ ನಿಶ್ಚಿಂತೆಯಿಂದಿದ್ದಾನೆ. 9 ನನ್ನ ಧಣಿಯು ಈ ಮನೆಯ ಸರ್ವಾಧಿಕಾರವನ್ನು ನನಗೆ ಕೊಟ್ಟಿದ್ದರೂ ತನ್ನ ಧರ್ಮಪತ್ನಿಯಾದ ನಿನ್ನನ್ನು ನನಗೆ ಅಧೀನಪಡಿಸಿಲ್ಲ. ಹೀಗಿರಲು ಇಂಥಾ ಮಹಾ ದುಷ್ಕೃತ್ಯವನ್ನು ನಡೆಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಉತ್ತರಕೊಟ್ಟನು. 10 ಆ ಸ್ತ್ರೀಯು ಪ್ರತಿದಿನವೂ ಯೋಸೇಫನನ್ನು ಒತ್ತಾಯಿಸಿದಳು. ಆದರೆ ಯೋಸೇಫನು ಆಕೆಯೊಂದಿಗೆ ಮಲಗಿಕೊಳ್ಳಲು ಒಪ್ಪಲಿಲ್ಲ. 11 ಒಂದು ದಿನ ಯೋಸೇಫನು ತನ್ನ ಕೆಲಸದ ನಿಮಿತ್ತ ಮನೆಯೊಳಗೆ ಹೋದನು. ಆಗ ಮನೆಯಲ್ಲಿ ಇದ್ದವನು ಅವನೊಬ್ಬನೇ. 12 ಅವನ ಧಣಿಯ ಹೆಂಡತಿಯು ಅವನ ಮೇಲಂಗಿಯನ್ನು ಹಿಡಿದುಕೊಂಡು, “ಬಾ ನನ್ನೊಂದಿಗೆ ಮಲಗಿಕೊ” ಎಂದು ಕರೆದಳು. ಕೂಡಲೇ ಯೋಸೇಫನು ತನ್ನ ಮೇಲಂಗಿಯನ್ನೇ ಬಿಟ್ಟು ಅಲ್ಲಿಂದ ಓಡಿಹೋದನು. 13 ಯೋಸೇಫನು ತನ್ನ ಮೇಲಂಗಿಯನ್ನು ಬಿಟ್ಟು ಓಡಿಹೋದದ್ದರಿಂದ ಸಿಟ್ಟುಗೊಂಡ ಅವಳು 14 ಮನೆಯ ಹೊರಗಿದ್ದ ಸೇವಕರನ್ನು ಕರೆದು, “ನೋಡಿ, ನಮಗೆ ಅವಮಾನ ಮಾಡುವುದಕ್ಕಾಗಿ ಈ ಇಬ್ರಿಯ ಗುಲಾಮನನ್ನು ಇಲ್ಲಿಗೆ ತರಲಾಗಿದೆ. ಅವನು ಮನೆಯೊಳಗೆ ಬಂದು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. ಆಗ ನಾನು ಗಟ್ಟಿಯಾಗಿ ಕೂಗಿಕೊಂಡೆ. 15 ನನ್ನ ಕೂಗಿನಿಂದ ಭಯಗೊಂಡು ತನ್ನ ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು. 16 ಆಕೆ ಆ ಮೇಲಂಗಿಯನ್ನು ತನ್ನ ಗಂಡನೂ ಯೋಸೇಫನಿಗೆ ಧಣಿಯೂ ಆಗಿದ್ದ ಪೋಟೀಫರನು ಬರುವ ತನಕ ಇಟ್ಟುಕೊಂಡಿದ್ದಳು. 17 ಪತಿಯು ಬಂದಾಗ ಆಕೆ ಅದೇ ರೀತಿ ಹೇಳಿ, “ನೀನು ಸೇರಿಸಿಕೊಂಡ ಈ ಇಬ್ರಿಯ ಗುಲಾಮನು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. 18 ಆದರೆ ನಾನು ಕೂಗಿಕೊಂಡದ್ದರಿಂದ ಅವನು ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು. 19 ಯೋಸೇಫನ ಧಣಿಯು ತನ್ನ ಹೆಂಡತಿಯ ಮಾತು ಕೇಳಿ ತುಂಬ ಕೋಪಗೊಂಡನು. 20 ರಾಜನ ವೈರಿಗಳನ್ನು ಹಾಕುವ ಒಂದು ಸೆರೆಮನೆಯಿತ್ತು. ಆದ್ದರಿಂದ ಪೋಟೀಫರನು ಯೋಸೇಫನನ್ನು ಆ ಸೆರೆಮನೆಗೆ ಹಾಕಿಸಿದನು. ಅಂದಿನಿಂದ ಯೋಸೇಫನು ಅಲ್ಲಿದ್ದನು. ಯೋಸೇಫನಿಗೆ ಸೆರೆವಾಸ 21 ಆದರೆ ಯೆಹೋವನು ಯೋಸೇಫನ ಸಂಗಡವಿದ್ದು ಕರುಣೆತೋರಿದನು. ಸ್ವಲ್ಪಕಾಲವಾದ ಮೇಲೆ ಸೆರೆಮನೆಯ ಮುಖ್ಯಾಧಿಕಾರಿಯು ಯೋಸೇಫನನ್ನು ಪ್ರೀತಿಸತೊಡಗಿದನು. 22 ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು. 23 ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು.
ಒಟ್ಟು 50 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 39 / 50
×

Alert

×

Kannada Letters Keypad References