1. “ಆದ್ದರಿಂದ ಬೆಚಲೇಲನೂ ಒಹೊಲೀಯಾಬನೂ ಮತ್ತು ಇತರ ಎಲ್ಲಾ ನಿಪುಣರೂ ಯೆಹೋವನು ಆಜ್ಞಾಪಿಸಿದ ಕೆಲಸವನ್ನು ಮಾಡಬೇಕು. ಈ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಅವಶ್ಯವಿರುವ ಎಲ್ಲಾ ಸೂಕ್ಷ್ಮವಾದ ಕೆಲಸವನ್ನು ಮಾಡುವುದಕ್ಕೆ ಯೆಹೋವನು ಈ ಜನರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಅನುಗ್ರಹಿಸಿದ್ದಾನೆ.”
|
2. ಬಳಿಕ ಮೋಶೆಯು ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯೆಹೋವನಿಂದ ವಿಶೇಷ ಜ್ಞಾನ ಹೊಂದಿದ ಇತರ ಎಲ್ಲಾ ನಿಪುಣರನ್ನೂ ಕರೆದನು. ಕೆಲಸದಲ್ಲಿ ಸಹಾಯಮಾಡಲು ಇವರು ಬಯಸಿದ್ದರಿಂದ ಬಂದರು.
|
3. ಇಸ್ರೇಲರು ಕಾಣಿಕೆಗಳಾಗಿ ತಂದ ವಸ್ತುಗಳನ್ನೆಲ್ಲಾ ಮೋಶೆಯು ಅವರಿಗೆ ಕೊಟ್ಟನು. ಅವರು ದೇವರ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಈ ವಸ್ತುಗಳನ್ನು ಉಪಯೋಗಿಸಿದರು. ಪ್ರತಿ ಮುಂಜಾನೆ ಜನರು ಕಾಣಿಕೆಗಳನ್ನು ತರುತ್ತಲೇ ಇದ್ದರು.
|
5. “ಜನರು ಬಹಳ ಹೆಚ್ಚಾಗಿ ತಂದಿದ್ದಾರೆ! ಗುಡಾರದ ಕೆಲಸವನ್ನು ಮುಗಿಸುವುದಕ್ಕೆ ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಇವೆ!” ಎಂದು ಹೇಳಿದರು.
|
6. ಆಗ ಮೋಶೆಯು, “ಪವಿತ್ರಸ್ಥಳದ ಕೆಲಸಕ್ಕಾಗಿ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಇನ್ನು ಮುಂದೆ ಯಾವುದನ್ನೂ ಕಾಣಿಕೆಯಾಗಿ ಸಿದ್ಧಮಾಡಬಾರದು” ಎಂಬ ಸಂದೇಶವನ್ನು ಪಾಳೆಯದಲ್ಲೆಲ್ಲಾ ಕಳುಹಿಸಿದನು. ಆದ್ದರಿಂದ ಜನರು ಹೆಚ್ಚಾಗಿ ಕೊಡುವುದನ್ನು ನಿಲ್ಲಿಸಬೇಕಾಯಿತು.
|
7. ದೇವರ ಪವಿತ್ರಸ್ಥಳವನ್ನು ಕಟ್ಟುವ ಕೆಲಸವನ್ನು ಮುಗಿಸುವುದಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಜನರು ತಂದಿದ್ದರು. ಪವಿತ್ರಗುಡಾರ
|
8. ತರುವಾಯ ನಿಪುಣರು ಪವಿತ್ರಗುಡಾರವನ್ನು ಮಾಡಲು ಪ್ರಾರಂಭಿಸಿದರು. ಅವರು ಶ್ರೇಷ್ಠ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪು ದಾರಗಳಿಂದಲೂ ಹತ್ತು ಪರದೆಗಳನ್ನು ಮಾಡಿದರು. ಅವರು ಕೆರೂಬಿಗಳ ಚಿತ್ರಗಳನ್ನು ಪರದೆಗಳಲ್ಲಿ ಕಸೂತಿ ಹಾಕಿದರು.
|
10. ಕೆಲಸಗಾರರು ಪರದೆಗಳನ್ನು ಒಟ್ಟಾಗಿ ಜೋಡಿಸಿ ಪರದೆಗಳ ಎರಡು ಭಾಗಗಳನ್ನಾಗಿ ಮಾಡಿದರು. ಒಂದು ಭಾಗದಲ್ಲಿ ಐದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಐದು ಪರದೆಗಳನ್ನೂ ಒಟ್ಟಾಗಿ ಜೋಡಿಸಿದರು.
|
11. ಬಳಿಕ ಅವರು ಒಂದು ಗುಂಪಿನ ಕೊನೆಯ ಪರದೆಯ ಅಂಚಿನಲ್ಲಿ ಕುಣಿಕೆಗಳನ್ನು ಮಾಡಲು ನೀಲಿಬಟ್ಟೆಯನ್ನು ಉಪಯೋಗಿಸಿದರು. ಇನ್ನೊಂದು ಗುಂಪಿನಲ್ಲಿದ್ದ ಕೊನೆಯ ಪರದೆಯಲ್ಲೂ ಹಾಗೆಯೇ ಮಾಡಿದರು.
|
12. ಒಂದು ಗುಂಪಿನ ಕೊನೆಯ ಪರದೆಯಲ್ಲೂ ಐವತ್ತು ಕುಣಿಕೆಗಳಿದ್ದವು. ಇನ್ನೊಂದು ಗುಂಪಿನ ಕೊನೆಯ ಪರದೆಯಲ್ಲೂ ಐವತ್ತು ಕುಣಿಕೆಗಳಿದ್ದವು. ಕುಣಿಕೆಗಳನ್ನು ಒಂದಕ್ಕೊಂದು ಎದುರಾಗಿ ಇರಿಸಿದರು.
|
13. ಬಳಿಕ ಅವರು ಐವತ್ತು ಚಿನ್ನದ ಬಳೆಗಳನ್ನು ಮಾಡಿ ಎರಡು ಪರದೆಗಳನ್ನು ಒಟ್ಟಾಗಿ ಸೇರಿಸಿದರು. ಹೀಗೆ ಪವಿತ್ರಗುಡಾರವು ಜೋಡಿಸಲ್ಪಟ್ಟು ಒಂದೇ ಗುಡಾರವಾಯಿತು.
|
14. ಬಳಿಕ ಕೆಲಸಗಾರರು ಪವಿತ್ರಗುಡಾರವನ್ನು ಹೊದಿಸುವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿದರು. ಈ ಗುಡಾರವನ್ನು ಮಾಡಲು ಹನ್ನೊಂದು ಪರದೆಗಳನ್ನು ಉಪಯೋಗಿಸಿದರು. ಅವರು ಆಡುಕೂದಲಿನಿಂದ ಈ ಪರದೆಗಳನ್ನು ಮಾಡಿದರು.
|
16. ಕೆಲಸಗಾರರು ಐದು ಪರದೆಗಳನ್ನು ಒಟ್ಟಾಗಿ ಸೇರಿಸಿ ಒಂದು ಭಾಗವನ್ನಾಗಿ ಮಾಡಿದರು. ಬಳಿಕ ಅವರು ಇತರ ಆರು ಪರದೆಗಳನ್ನು ಒಟ್ಟಾಗಿ ಸೇರಿಸಿ ಇನ್ನೊಂದು ಭಾಗವನ್ನಾಗಿ ಮಾಡಿದರು.
|
17. ಅವರು ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಇಟ್ಟರು. ಇನ್ನೊಂದು ಭಾಗದ ಕೊನೆಯ ಪರದೆಯಲ್ಲಿಯೂ ಅದೇ ರೀತಿಯಾಗಿ ಮಾಡಿದರು.
|
18. ಕೆಲಸಗಾರರು ಎರಡು ಪರದೆಗಳನ್ನು ಒಟ್ಟಾಗಿ ಜೋಡಿಸಲು ಐವತ್ತು ತಾಮ್ರದ ಬಳೆಗಳನ್ನು ಮಾಡಿದರು. ಇದು ಸಮಸ್ತವನ್ನು ಒಂದೇ ಗುಡಾರವಾಗುವಂತೆ ಮಾಡಿತು.
|
19. ಬಳಿಕ ಅವರು ಪವಿತ್ರಗುಡಾರಕ್ಕೆ ಎರಡು ಮೇಲ್ಹೊದಿಕೆಗಳನ್ನು ಮಾಡಿದರು. ಒಂದು ಮೇಲ್ಹೊದಿಕೆಯನ್ನು ಕೆಂಪು ಬಣ್ಣದ ಕುರಿದೊಗಲುಗಳಿಂದ ಮಾಡಿದರು; ಮತ್ತೊಂದು ಮೇಲ್ಹೊದಿಕೆಯನ್ನು ಕಡಲುಹಂದಿಯ ತೊಗಲುಗಳಿಂದ ಮಾಡಿದರು.
|
22. ಎರಡು ಕಂಬಗಳಿಗೆ ಎರಡು ಅಡ್ಡಕಂಬಗಳನ್ನು ಜೋಡಿಸಿ ಚೌಕಟ್ಟನ್ನು ಮಾಡಲಾಗಿತ್ತು. ಪವಿತ್ರಗುಡಾರದ ಪ್ರತಿ ಚೌಕಟ್ಟನ್ನು ಅದೇ ರೀತಿಯಲ್ಲಿ ಮಾಡಲಾಗಿತ್ತು.
|
24. ಬಳಿಕ ಅವರು ಚೌಕಟ್ಟುಗಳಿಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. ಒಂದು ನಿಲುವುಪೆಟ್ಟಿಗೆಗೆ ಒಂದರಂತೆ ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಿದ್ದವು.
|
29. ಈ ಚೌಕಟ್ಟುಗಳು ಕೆಳಭಾಗಕ್ಕೆ ಒಟ್ಟಾಗಿ ಸೇರಿಸಲ್ಪಟ್ಟಿದ್ದವು; ತುದಿಯಲ್ಲಿ ಒಂದು ಬಳೆಯು ಮೂಲೆ ಚೌಕಟ್ಟುಗಳನ್ನು ಒಟ್ಟಿಗೆ ಹಿಡಿದುಕೊಂಡಿತ್ತು. ಅವರು ಎರಡೂ ಮೂಲೆಗಳಿಗೆ ಹಾಗೆಯೇ ಮಾಡಿದರು.
|
30. ಪವಿತ್ರಗುಡಾರದ ಪಶ್ಚಿಮ ದಿಕ್ಕಿನಲ್ಲಿ ಒಟ್ಟು ಎಂಟು ಚೌಕಟ್ಟುಗಳಿದ್ದವು. ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಂತೆ ಹದಿನಾರು ಬೆಳ್ಳಿಯ ಗದ್ದಿಗೇಕಲ್ಲುಗಳಿದ್ದವು.
|
31. ಬಳಿಕ ಕೆಲಸಗಾರರು ಚೌಕಟ್ಟುಗಳಿಗೆ ಅಗುಳಿಗಳನ್ನು ಮಾಡಲು ಜಾಲೀಮರವನ್ನು ಉಪಯೋಗಿಸಿದರು. ಪವಿತ್ರಗುಡಾರದ ಮೊದಲಿನ ಕಡೆಯಲ್ಲಿ ಐದು ಅಗುಳಿಗಳೂ
|
32. ಇನ್ನೊಂದು ಕಡೆಯಲ್ಲಿ ಐದು ಅಗುಳಿಗಳೂ ಪವಿತ್ರಗುಡಾರದ ಹಿಂಭಾಗದಲ್ಲಿ ಅಂದರೆ ಪಶ್ಚಿಮ ಭಾಗದಲ್ಲಿ ಐದು ಅಗುಳಿಗಳೂ ಇದ್ದವು.
|
34. ಅವರು ಈ ಚೌಕಟ್ಟುಗಳನ್ನು ಚಿನ್ನದಿಂದ ಹೊದಿಸಿದರು. ಅಗುಳಿಗಳಿಗಾಗಿ ಚಿನ್ನದ ಕೊಂಡಿಗಳನ್ನು ಮಾಡಿದರು; ಅಗುಳಿಗಳನ್ನು ಚಿನ್ನದಿಂದ ಹೊದಿಸಿದರು.
|
35. ಮಹಾಪವಿತ್ರಸ್ಥಳದ ದ್ವಾರಕ್ಕೆ ವಿಶೇಷ ಪರದೆಯನ್ನು ಮಾಡಲು ಅವರು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಕೆರೂಬಿಗಳ ಚಿತ್ರಗಳನ್ನು ಪರದೆಯಲ್ಲಿ ಕಸೂತಿ ಹಾಕಿದರು.
|
36. ಅವರು ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿದರು ಮತ್ತು ಕಂಬಗಳನ್ನು ಚಿನ್ನದಿಂದ ಹೊದಿಸಿದರು. ಬಳಿಕ ಅವರು ಕಂಬಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿದರು. ಅವರು ಕಂಬಗಳಿಗೆ ನಾಲ್ಕು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು.
|
37. ಬಳಿಕ ಗುಡಾರದ ಬಾಗಿಲಿಗೆ ಪರದೆಯನ್ನು ಮಾಡಿದರು. ಅವರು ಈ ಪರದೆಯನ್ನು ಮಾಡಲು ನೀಲಿ, ನೇರಳೆ, ಕೆಂಪುದಾರವನ್ನು, ಶ್ರೇಷ್ಠ ನಾರುಬಟ್ಟೆಯನ್ನು ಉಪಯೋಗಿಸಿದರು ಮತ್ತು ಅವರು ಚಿತ್ರಗಳನ್ನು ಅದರಲ್ಲಿ ಹೆಣೆದರು.
|
38. ಬಳಿಕ ಅವರು ಐದು ಕಂಬಗಳನ್ನೂ ಬಾಗಿಲಿನ ಪರದೆಗೆ ಕೊಂಡಿಗಳನ್ನೂ ಮಾಡಿದರು. ಅವರು ಕಂಬಗಳ ತುದಿಯನ್ನು ಮತ್ತು ಪರದೆಯ ಕೋಲುಗಳನ್ನು ಚಿನ್ನದಿಂದ ಹೊದಿಸಿದರು. ಅವರು ಕಂಬಗಳಿಗೆ ಐದು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿದರು. ಒಡಂಬಡಿಕೆ ಪೆಟ್ಟಿಗೆ
|