ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಧರ್ಮೋಪದೇಶಕಾಂಡ
1. {ಸಾಲಗಳನ್ನು ವಜಾಮಾಡುವ ವಿಶೇಷ ವರ್ಷ} [PS] “ಪ್ರತೀ ಏಳು ವರ್ಷಗಳ ಅಂತ್ಯದಲ್ಲಿ ನೀವು ಕೊಟ್ಟ ಸಾಲಗಳನ್ನು ವಜಾಮಾಡಬೇಕು.
2. ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ಆ ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ.
3. ಸಾಲಗಾರನು ಪರದೇಶಿಯಾಗಿದ್ದರೆ ಅವನು ಸಾಲ ಹಿಂತಿರುಗಿಸಬೇಕು. ಆದರೆ ಇಸ್ರೇಲರಲ್ಲಿ ಯಾರಾದರೂ ನಿಮ್ಮಿಂದ ಸಾಲ ತೆಗೆದುಕೊಂಡಿದ್ದರೆ ಅದನ್ನು ವಜಾ ಮಾಡಬೇಕು.
4. ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕೆಂದರೆ ಯೆಹೋವನೇ ನಿಮಗೆ ಈ ದೇಶವನ್ನು ಕೊಡುತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ.
5. ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿದ್ದಲ್ಲಿ, ಆತನ ವಿಧಿಕ್ರಮಗಳಿಗೆ ವಿಧೇಯರಾಗಿದ್ದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವನು.
6. ಆತನು ಮಾಡಿದ ವಾಗ್ದಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಚ್ಛವಾಗಿ ಹಣವಿರುವುದು. ನಿಮಗೆ ಬೇರೆಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೀವು ಎಷ್ಟೋ ದೇಶಗಳನ್ನು ಆಳುವಿರಿ. ಆದರೆ ಆ ದೇಶಗಳು ನಿಮ್ಮನ್ನು ಆಳವು. [PE][PS]
7. “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ಒಂದುವೇಳೆ ನಿಮ್ಮ ಮಧ್ಯದಲ್ಲಿ ಒಬ್ಬ ಬಡವನಿರಬಹುದು. ನೀವು ಸ್ವಾರ್ಥರಾಗಿ, ಅವನಿಗೆ ಸಹಾಯಮಾಡಲು ನಿರಾಕರಿಸಬಾರದು.
8. ನಿಮ್ಮಲ್ಲಿರುವುದನ್ನು ನೀವು ಅವನೊಂದಿಗೆ ಹಂಚಿಕೊಳ್ಳಿ. ಅವನ ಅಗತ್ಯತೆಗೆ ತಕ್ಕಂತೆ ಸಾಲಕೊಡಿರಿ. [PE][PS]
9. “ಸಾಲ ವಜಾಮಾಡುವ ಏಳನೆಯ ವರ್ಷ ಸಮೀಪವಾಯಿತೆಂದು ನೀವು ಯಾರಿಗೂ ಸಾಲ ಕೊಡದೇ ಸಹಾಯ ಮಾಡದೇ ಇರಬಾರದು. ಅಂಥಾ ದುಷ್ಟ ಆಲೋಚನೆ ನಿಮ್ಮ ಮನಸ್ಸಿನೊಳಗೆ ಹುಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಕೆಟ್ಟ ಆಲೋಚನೆಯೂ ಇರಬಾರದು. ನೀವು ಆ ಬಡ ವ್ಯಕ್ತಿಗೆ ಸಹಾಯ ಮಾಡದಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರು ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ. [PE][PS]
10. “ಆ ಬಡ ಮನುಷ್ಯನಿಗೆ ನಿಮ್ಮಿಂದ ಎಷ್ಟು ಸಹಾಯ ಮಾಡಲು ಸಾಧ್ಯವಿದೆಯೋ ಅಷ್ಟು ಸಹಾಯಮಾಡಿ; ಕೊಡುವುದಕ್ಕೆ ಬೇಸರಪಡಬೇಡಿ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಒಳ್ಳೆಯ ಕಾರ್ಯಗಳಿಗಾಗಿ ನಿಮ್ಮನ್ನು ಆಶೀರ್ವದಿಸುವನು; ನಿಮ್ಮ ಕೆಲಸವನ್ನೆಲ್ಲಾ ಸಫಲಪಡಿಸುವನು.
11. ನಿಮ್ಮ ದೇಶದಲ್ಲಿ ಯಾವಾಗಲೂ ಬಡಜನರು ಇರುತ್ತಾರೆ. ಅದಕ್ಕಾಗಿಯೇ ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕೆಂದು ನಿಮಗೆ ಆಜ್ಞಾಪಿಸುತ್ತೇನೆ. [PS]
12. {ಗುಲಾಮರನ್ನು ಸ್ವತಂತ್ರರನ್ನಾಗಿ ಮಾಡುವುದು} [PS] “ನೀವು ಹೀಬ್ರೂ ಮನುಷ್ಯನನ್ನೋ ಸ್ತ್ರೀಯನ್ನೋ ನಿಮ್ಮ ಗುಲಾಮರಾಗಿ ಕ್ರಯಕ್ಕೆ ತೆಗೆದುಕೊಳ್ಳಬಹುದು. ಅವರನ್ನು ನಿಮ್ಮ ಗುಲಾಮರಾಗಿ ಆರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಆದರೆ ಏಳನೆಯ ವರ್ಷದಲ್ಲಿ ನೀವು ಅವರನ್ನು ಸ್ವತಂತ್ರರಾಗಿ ಬಿಟ್ಟುಬಿಡಬೇಕು.
13. ಅವರನ್ನು ಹಿಂದಕ್ಕೆ ಕಳುಹಿಸುವಾಗ ಬರೀಗೈಯಲ್ಲಿ ಕಳುಹಿಸಬಾರದು.
14. ನೀವು ಅವರಿಗೆ ನಿಮ್ಮ ಪಶುಗಳಲ್ಲಿ ಕೆಲವನ್ನು, ಸ್ವಲ್ಪ ಧಾನ್ಯವನ್ನು ಮತ್ತು ಸ್ವಲ್ಪ ದ್ರಾಕ್ಷಾರಸವನ್ನು ಕೊಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಹೇರಳವಾಗಿ ಅನುಗ್ರಹಿಸಿದ್ದಾನೆ. ಆದ್ದರಿಂದ ನಿಮ್ಮ ಗುಲಾಮರಿಗೆ ಒಳ್ಳೆಯವುಗಳನ್ನು ಹೇರಳವಾಗಿ ಕೊಡಿರಿ.
15. ನೀವು ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದುದನ್ನು ನೆನಪುಮಾಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನು. ಆದ್ದರಿಂದಲೇ ನಾನು ಈ ಆಜ್ಞೆಯನ್ನು ನಿಮಗೆ ಕೊಡುತ್ತಿದ್ದೇನೆ. [PE][PS]
16. “ಆದರೆ ನಿಮ್ಮ ಗುಲಾಮರಲ್ಲಿ ಒಬ್ಬನು, ‘ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ’ ಎಂದು ಹೇಳಿದರೆ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅವನು ಪ್ರೀತಿಸುವುದರಿಂದ ಮತ್ತು ನಿಮ್ಮೊಂದಿಗೆ ಒಳ್ಳೆಯ ಜೀವಿತವನ್ನು ಅವನು ಅನುಭವಿಸಿದ್ದರಿಂದ ಅವನು ನಿಮ್ಮೊಂದಿಗೆ ಇರಲು ಇಷ್ಟಪಟ್ಟರೆ,
17. ಅವನನ್ನು ನಿಮ್ಮ ಬಾಗಿಲಿನ ನಿಲುವು ಕಂಬದ ಬಳಿಯಲ್ಲಿ ನಿಲ್ಲಿಸಿ ಅವನ ಕಿವಿಯನ್ನು ಒಂದು ಹರಿತವಾದ ಸಾಧನದಿಂದ ರಂಧ್ರ ಮಾಡಬೇಕು. ಇದು, ಅವನು ನಿಮ್ಮ ಶಾಶ್ವತ ಗುಲಾಮನು ಎಂದು ತೋರಿಸುವುದು. ಗುಲಾಮಳಿಗೂ ಇದು ಅನ್ವಯಿಸುತ್ತದೆ. [PE][PS]
18. “ನಿಮ್ಮ ಗುಲಾಮರನ್ನು ಸ್ವತಂತ್ರರಾಗಿ ಬಿಡಬೇಕಲ್ಲಾ ಎಂದು ಬೇಸರಪಡಬೇಡಿ. ಅವರು ಅರ್ಧಕೂಲಿ ತೆಗೆದುಕೊಂಡು ಆರು ವರ್ಷ ನಿಮ್ಮ ಸೇವೆ ಮಾಡಿದ್ದಾರಲ್ಲಾ? ನಿಮ್ಮ ಕಾರ್ಯಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವನು ಸಫಲಪಡಿಸುವನು. [PS]
19. {ಚೊಚ್ಚಲ ಪ್ರಾಣಿಗಳ ಬಗ್ಗೆ ನಿಯಮಗಳು} [PS] “ನಿಮ್ಮ ಹಿಂಡಿನಲ್ಲಾಗಲಿ ಹಟ್ಟಿಯಲ್ಲಾಗಲಿ ಚೊಚ್ಚಲ ಮರಿಗಳು ನನಗೆ ವಿಶೇಷವಾದವುಗಳು. ನೀವು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. ಅಂಥಾ ಪ್ರಾಣಿಗಳನ್ನು ನಿಮ್ಮ ಕೆಲಸಕಾರ್ಯಗಳಿಗಾಗಿ ಉಪಯೋಗಿಸಕೂಡದು. ಮತ್ತು ಅಂಥಾ ಕುರಿಮರಿಗಳ ಉಣ್ಣೆಯನ್ನು ಕತ್ತರಿಸಬಾರದು.
20. ಪ್ರತಿ ವರ್ಷ, ಚೊಚ್ಚಲು ಪ್ರಾಣಿಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿದ ಸ್ಥಳದಲ್ಲಿ ನೀವು ನಿಮ್ಮ ಹೆಂಡತಿ ಮಕ್ಕಳೊಂದಿಗೆ ತಿನ್ನಬೇಕು. [PE][PS]
21. “ಆದರೆ ಆ ಚೊಚ್ಚಲು ಪ್ರಾಣಿಗಳು ಕುಂಟಾಗಿದ್ದರೆ, ಕುರುಡಾಗಿದ್ದರೆ ಅಥವಾ ಬೇರೆ ಯಾವ ಅಂಗವಿಕಲತೆಗೆ ಒಳಗಾಗಿದ್ದರೆ, ನಿಮ್ಮ ದೇವರಾದ ಯೆಹೋವನಿಗೆ ಅವುಗಳನ್ನು ಸಮರ್ಪಿಸಕೂಡದು.
22. ಅವುಗಳನ್ನು ನಿಮ್ಮ ಮನೆಗಳಲ್ಲಿಯೇ ಬೇಕಾದರೆ ತಿನ್ನಬಹುದು. ಅದನ್ನು ಯಾರು ಬೇಕಾದರೂ ಅಂದರೆ ಶುದ್ಧರೂ ಅಶುದ್ಧರೂ ತಿನ್ನಬಹುದು. ಜಿಂಕೆಯನ್ನು, ಟಗರನ್ನು ತಿನ್ನಲು ಯಾವ ನಿಯಮಗಳು ಇವೆಯೋ, ಅದೇ ನಿಯಮಗಳು ಇದಕ್ಕೂ ಅನ್ವಯಿಸುತ್ತವೆ.
23. ಅವುಗಳ ರಕ್ತವನ್ನು ತಿನ್ನಬಾರದು. ಅದನ್ನು ನೀರಿನಂತೆ ನೆಲದ ಮೇಲೆ ಚೆಲ್ಲಿಬಿಡಬೇಕು. [PE]

Notes

No Verse Added

Total 34 Chapters, Current Chapter 15 of Total Chapters 34
ಧರ್ಮೋಪದೇಶಕಾಂಡ 15:62
1. {ಸಾಲಗಳನ್ನು ವಜಾಮಾಡುವ ವಿಶೇಷ ವರ್ಷ} PS “ಪ್ರತೀ ಏಳು ವರ್ಷಗಳ ಅಂತ್ಯದಲ್ಲಿ ನೀವು ಕೊಟ್ಟ ಸಾಲಗಳನ್ನು ವಜಾಮಾಡಬೇಕು.
2. ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ.
3. ಸಾಲಗಾರನು ಪರದೇಶಿಯಾಗಿದ್ದರೆ ಅವನು ಸಾಲ ಹಿಂತಿರುಗಿಸಬೇಕು. ಆದರೆ ಇಸ್ರೇಲರಲ್ಲಿ ಯಾರಾದರೂ ನಿಮ್ಮಿಂದ ಸಾಲ ತೆಗೆದುಕೊಂಡಿದ್ದರೆ ಅದನ್ನು ವಜಾ ಮಾಡಬೇಕು.
4. ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕೆಂದರೆ ಯೆಹೋವನೇ ನಿಮಗೆ ದೇಶವನ್ನು ಕೊಡುತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ.
5. ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿದ್ದಲ್ಲಿ, ಆತನ ವಿಧಿಕ್ರಮಗಳಿಗೆ ವಿಧೇಯರಾಗಿದ್ದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವನು.
6. ಆತನು ಮಾಡಿದ ವಾಗ್ದಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಚ್ಛವಾಗಿ ಹಣವಿರುವುದು. ನಿಮಗೆ ಬೇರೆಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೀವು ಎಷ್ಟೋ ದೇಶಗಳನ್ನು ಆಳುವಿರಿ. ಆದರೆ ದೇಶಗಳು ನಿಮ್ಮನ್ನು ಆಳವು. PEPS
7. “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ಒಂದುವೇಳೆ ನಿಮ್ಮ ಮಧ್ಯದಲ್ಲಿ ಒಬ್ಬ ಬಡವನಿರಬಹುದು. ನೀವು ಸ್ವಾರ್ಥರಾಗಿ, ಅವನಿಗೆ ಸಹಾಯಮಾಡಲು ನಿರಾಕರಿಸಬಾರದು.
8. ನಿಮ್ಮಲ್ಲಿರುವುದನ್ನು ನೀವು ಅವನೊಂದಿಗೆ ಹಂಚಿಕೊಳ್ಳಿ. ಅವನ ಅಗತ್ಯತೆಗೆ ತಕ್ಕಂತೆ ಸಾಲಕೊಡಿರಿ. PEPS
9. “ಸಾಲ ವಜಾಮಾಡುವ ಏಳನೆಯ ವರ್ಷ ಸಮೀಪವಾಯಿತೆಂದು ನೀವು ಯಾರಿಗೂ ಸಾಲ ಕೊಡದೇ ಸಹಾಯ ಮಾಡದೇ ಇರಬಾರದು. ಅಂಥಾ ದುಷ್ಟ ಆಲೋಚನೆ ನಿಮ್ಮ ಮನಸ್ಸಿನೊಳಗೆ ಹುಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಕೆಟ್ಟ ಆಲೋಚನೆಯೂ ಇರಬಾರದು. ನೀವು ಬಡ ವ್ಯಕ್ತಿಗೆ ಸಹಾಯ ಮಾಡದಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರು ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ. PEPS
10. “ಆ ಬಡ ಮನುಷ್ಯನಿಗೆ ನಿಮ್ಮಿಂದ ಎಷ್ಟು ಸಹಾಯ ಮಾಡಲು ಸಾಧ್ಯವಿದೆಯೋ ಅಷ್ಟು ಸಹಾಯಮಾಡಿ; ಕೊಡುವುದಕ್ಕೆ ಬೇಸರಪಡಬೇಡಿ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಒಳ್ಳೆಯ ಕಾರ್ಯಗಳಿಗಾಗಿ ನಿಮ್ಮನ್ನು ಆಶೀರ್ವದಿಸುವನು; ನಿಮ್ಮ ಕೆಲಸವನ್ನೆಲ್ಲಾ ಸಫಲಪಡಿಸುವನು.
11. ನಿಮ್ಮ ದೇಶದಲ್ಲಿ ಯಾವಾಗಲೂ ಬಡಜನರು ಇರುತ್ತಾರೆ. ಅದಕ್ಕಾಗಿಯೇ ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕೆಂದು ನಿಮಗೆ ಆಜ್ಞಾಪಿಸುತ್ತೇನೆ. PS
12. {ಗುಲಾಮರನ್ನು ಸ್ವತಂತ್ರರನ್ನಾಗಿ ಮಾಡುವುದು} PS “ನೀವು ಹೀಬ್ರೂ ಮನುಷ್ಯನನ್ನೋ ಸ್ತ್ರೀಯನ್ನೋ ನಿಮ್ಮ ಗುಲಾಮರಾಗಿ ಕ್ರಯಕ್ಕೆ ತೆಗೆದುಕೊಳ್ಳಬಹುದು. ಅವರನ್ನು ನಿಮ್ಮ ಗುಲಾಮರಾಗಿ ಆರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಆದರೆ ಏಳನೆಯ ವರ್ಷದಲ್ಲಿ ನೀವು ಅವರನ್ನು ಸ್ವತಂತ್ರರಾಗಿ ಬಿಟ್ಟುಬಿಡಬೇಕು.
13. ಅವರನ್ನು ಹಿಂದಕ್ಕೆ ಕಳುಹಿಸುವಾಗ ಬರೀಗೈಯಲ್ಲಿ ಕಳುಹಿಸಬಾರದು.
14. ನೀವು ಅವರಿಗೆ ನಿಮ್ಮ ಪಶುಗಳಲ್ಲಿ ಕೆಲವನ್ನು, ಸ್ವಲ್ಪ ಧಾನ್ಯವನ್ನು ಮತ್ತು ಸ್ವಲ್ಪ ದ್ರಾಕ್ಷಾರಸವನ್ನು ಕೊಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಹೇರಳವಾಗಿ ಅನುಗ್ರಹಿಸಿದ್ದಾನೆ. ಆದ್ದರಿಂದ ನಿಮ್ಮ ಗುಲಾಮರಿಗೆ ಒಳ್ಳೆಯವುಗಳನ್ನು ಹೇರಳವಾಗಿ ಕೊಡಿರಿ.
15. ನೀವು ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದುದನ್ನು ನೆನಪುಮಾಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನು. ಆದ್ದರಿಂದಲೇ ನಾನು ಆಜ್ಞೆಯನ್ನು ನಿಮಗೆ ಕೊಡುತ್ತಿದ್ದೇನೆ. PEPS
16. “ಆದರೆ ನಿಮ್ಮ ಗುಲಾಮರಲ್ಲಿ ಒಬ್ಬನು, ‘ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ’ ಎಂದು ಹೇಳಿದರೆ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅವನು ಪ್ರೀತಿಸುವುದರಿಂದ ಮತ್ತು ನಿಮ್ಮೊಂದಿಗೆ ಒಳ್ಳೆಯ ಜೀವಿತವನ್ನು ಅವನು ಅನುಭವಿಸಿದ್ದರಿಂದ ಅವನು ನಿಮ್ಮೊಂದಿಗೆ ಇರಲು ಇಷ್ಟಪಟ್ಟರೆ,
17. ಅವನನ್ನು ನಿಮ್ಮ ಬಾಗಿಲಿನ ನಿಲುವು ಕಂಬದ ಬಳಿಯಲ್ಲಿ ನಿಲ್ಲಿಸಿ ಅವನ ಕಿವಿಯನ್ನು ಒಂದು ಹರಿತವಾದ ಸಾಧನದಿಂದ ರಂಧ್ರ ಮಾಡಬೇಕು. ಇದು, ಅವನು ನಿಮ್ಮ ಶಾಶ್ವತ ಗುಲಾಮನು ಎಂದು ತೋರಿಸುವುದು. ಗುಲಾಮಳಿಗೂ ಇದು ಅನ್ವಯಿಸುತ್ತದೆ. PEPS
18. “ನಿಮ್ಮ ಗುಲಾಮರನ್ನು ಸ್ವತಂತ್ರರಾಗಿ ಬಿಡಬೇಕಲ್ಲಾ ಎಂದು ಬೇಸರಪಡಬೇಡಿ. ಅವರು ಅರ್ಧಕೂಲಿ ತೆಗೆದುಕೊಂಡು ಆರು ವರ್ಷ ನಿಮ್ಮ ಸೇವೆ ಮಾಡಿದ್ದಾರಲ್ಲಾ? ನಿಮ್ಮ ಕಾರ್ಯಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವನು ಸಫಲಪಡಿಸುವನು. PS
19. {ಚೊಚ್ಚಲ ಪ್ರಾಣಿಗಳ ಬಗ್ಗೆ ನಿಯಮಗಳು} PS “ನಿಮ್ಮ ಹಿಂಡಿನಲ್ಲಾಗಲಿ ಹಟ್ಟಿಯಲ್ಲಾಗಲಿ ಚೊಚ್ಚಲ ಮರಿಗಳು ನನಗೆ ವಿಶೇಷವಾದವುಗಳು. ನೀವು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. ಅಂಥಾ ಪ್ರಾಣಿಗಳನ್ನು ನಿಮ್ಮ ಕೆಲಸಕಾರ್ಯಗಳಿಗಾಗಿ ಉಪಯೋಗಿಸಕೂಡದು. ಮತ್ತು ಅಂಥಾ ಕುರಿಮರಿಗಳ ಉಣ್ಣೆಯನ್ನು ಕತ್ತರಿಸಬಾರದು.
20. ಪ್ರತಿ ವರ್ಷ, ಚೊಚ್ಚಲು ಪ್ರಾಣಿಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿದ ಸ್ಥಳದಲ್ಲಿ ನೀವು ನಿಮ್ಮ ಹೆಂಡತಿ ಮಕ್ಕಳೊಂದಿಗೆ ತಿನ್ನಬೇಕು. PEPS
21. “ಆದರೆ ಚೊಚ್ಚಲು ಪ್ರಾಣಿಗಳು ಕುಂಟಾಗಿದ್ದರೆ, ಕುರುಡಾಗಿದ್ದರೆ ಅಥವಾ ಬೇರೆ ಯಾವ ಅಂಗವಿಕಲತೆಗೆ ಒಳಗಾಗಿದ್ದರೆ, ನಿಮ್ಮ ದೇವರಾದ ಯೆಹೋವನಿಗೆ ಅವುಗಳನ್ನು ಸಮರ್ಪಿಸಕೂಡದು.
22. ಅವುಗಳನ್ನು ನಿಮ್ಮ ಮನೆಗಳಲ್ಲಿಯೇ ಬೇಕಾದರೆ ತಿನ್ನಬಹುದು. ಅದನ್ನು ಯಾರು ಬೇಕಾದರೂ ಅಂದರೆ ಶುದ್ಧರೂ ಅಶುದ್ಧರೂ ತಿನ್ನಬಹುದು. ಜಿಂಕೆಯನ್ನು, ಟಗರನ್ನು ತಿನ್ನಲು ಯಾವ ನಿಯಮಗಳು ಇವೆಯೋ, ಅದೇ ನಿಯಮಗಳು ಇದಕ್ಕೂ ಅನ್ವಯಿಸುತ್ತವೆ.
23. ಅವುಗಳ ರಕ್ತವನ್ನು ತಿನ್ನಬಾರದು. ಅದನ್ನು ನೀರಿನಂತೆ ನೆಲದ ಮೇಲೆ ಚೆಲ್ಲಿಬಿಡಬೇಕು. PE
Total 34 Chapters, Current Chapter 15 of Total Chapters 34
×

Alert

×

kannada Letters Keypad References