ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
2 ಪೂರ್ವಕಾಲವೃತ್ತಾ
1. {ದೇವಾಲಯದ ವಸ್ತುಗಳು} [PS] ಸೊಲೊಮೋನನು ತಾಮ್ರದ ಯಜ್ಞವೇದಿಕೆಯನ್ನು ಮಾಡಿಸಿದನು. ಅದು ಇಪ್ಪತ್ತು ಮೊಳ ಉದ್ದ; ಇಪ್ಪತ್ತು ಮೊಳ ಅಗಲ; ಮತ್ತು ಹತ್ತು ಮೊಳ ಎತ್ತರವಿತ್ತು.
2. ಅವನು ಎರಕಹೊಯ್ದ ದೊಡ್ಡ ಗಾತ್ರದ ನೀರಿನ ಪಾತ್ರೆಯನ್ನು ಮಾಡಿಸಿದನು. ಇದು ದುಂಡಾಕಾರವಾಗಿದ್ದು ಅದರ ಬಾಯಿಯ ಅಂಚಿನಿಂದ ಅಂಚಿಗೆ ಹತ್ತು ಮೊಳ ಅಗಲವಿತ್ತು; ಅದರ ಸುತ್ತಳತೆ ಮೂವತ್ತು ಮೊಳ; ಎತ್ತರ ಐದು ಮೊಳ.
3. ಆ ನೀರಿನ ಪಾತ್ರೆಯನ್ನು ಎರಕ ಹೊಯ್ಯುವಾಗ ಅದರ ಬಾಯಿಯ ಅಂಚಿನ ಕೆಳಗೆ ಸುತ್ತಲೂ ಹೋರಿಯ ಚಿತ್ರವನ್ನು ಎರಡು ಸಾಲಾಗಿ ಹತ್ತು ಮೊಳ ಎರಕ ಹೊಯ್ಸಿದನು.
4. ಆ ಬೃಹದಾಕಾರದ ಪಾತ್ರೆಯನ್ನು ಹನ್ನೆರಡು ದೊಡ್ಡ ಎರಕದ ಹೋರಿಗಳ ಮೇಲೆ ಇಡಲಾಗಿತ್ತು. ಇವುಗಳಲ್ಲಿ ಮೂರು ಹೋರಿಗಳು ಪೂರ್ವದ ಕಡೆಗೂ ಮೂರು ಹೋರಿಗಳು ಪಶ್ಚಿಮದ ಕಡೆಗೂ ಮೂರು ಹೋರಿಗಳು ಉತ್ತರದ ಕಡೆಗೂ ಮೂರು ಹೋರಿಗಳು ದಕ್ಷಿಣದ ಕಡೆಗೂ ಮುಖಮಾಡಿ ನಿಂತಿದ್ದವು. ಎಲ್ಲಾ ಹೋರಿಗಳು ಒಂದಕ್ಕೊಂದಕ್ಕೆ ಮತ್ತು ಮಧ್ಯಭಾಗಕ್ಕೆ ಹಿಮ್ಮುಖವಾಗಿ ನಿಂತುಕೊಂಡಿದ್ದವು.
5. ಈ ತಾಮ್ರದ ಎರಕದ ಪಾತ್ರೆಯು ಮೂರು ಇಂಚು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದರಲ್ಲಿ ಅರವತ್ತಾರು ಸಾವಿರ ಲೀಟರ್ ನೀರನ್ನು ತುಂಬ ಬಹುದಾಗಿತ್ತು. [PE][PS]
6. ಸೊಲೊಮೋನನು ಹತ್ತು ಗಂಗಾಳಗಳನ್ನು ಮಾಡಿಸಿದನು. ಐದು ಗಂಗಾಳಗಳನ್ನು ತಾಮ್ರದ ನೀರಿನ ತೊಟ್ಟಿಯ ಬಲಗಡೆಯಲ್ಲಿಡಿಸಿದನು. ಉಳಿದ ಐದು ಗಂಗಾಳಗಳನ್ನು ಪಾತ್ರೆಯ ಎಡಗಡೆಯಲ್ಲಿಡಿಸಿದನು. ಈ ಗಂಗಾಳಗಳ ನೀರನ್ನು ಯಜ್ಞ ಮಾಡಲಿಕ್ಕಿರುವ ಪದಾರ್ಥಗಳನ್ನು ತೊಳೆಯುವದಕ್ಕಾಗಿ ಉಪಯೋಗಿಸಿದರು. ಯಾಜಕರು ಯಜ್ಞಗಳನ್ನು ಅರ್ಪಿಸುವ ಮೊದಲು ತಮ್ಮನ್ನು ಶುದ್ಧ ಮಾಡಿಕೊಳ್ಳುವದಕ್ಕಾಗಿ ದೊಡ್ಡ ತಾಮ್ರದ ಪಾತ್ರೆಯ ನೀರನ್ನು ಉಪಯೋಗಿಸುತ್ತಿದ್ದರು. [PE][PS]
7. ಸೊಲೊಮೋನನು ಹತ್ತು ದೀಪಸ್ತಂಭಗಳನ್ನು ಬಂಗಾರದಿಂದ ಮಾಡಿಸಿದನು. ಮೊದಲೇ ತೋರಿಸಿದ ಮಾದರಿಯ ಮೇರೆಗೆ ದೀಪಸ್ತಂಭಗಳನ್ನು ಮಾಡಿಸಿದನು. ಇವುಗಳಲ್ಲಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು.
8. ಅವನು ಹತ್ತು ಮೇಜುಗಳನ್ನು ಮಾಡಿಸಿ ಅವುಗಳಲ್ಲಿ ಐದನ್ನು ದೇವಾಲಯದ ಬಲಗಡೆಯಲ್ಲಿಯೂ ಉಳಿದ ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಅನಂತರ ಸೊಲೊಮೋನನು ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
9. ಇದಲ್ಲದೆ ಸೊಲೊಮೋನನು ಯಾಜಕರ ಅಂಗಳವನ್ನೂ ಮಹಾಅಂಗಳವನ್ನೂ ಮಹಾಅಂಗಳಕ್ಕೆ ಬಾಗಿಲುಗಳನ್ನೂ ಸಿದ್ಧಪಡಿಸಿದನು. ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಲಾಗಿದ್ದವು.
10. ಅವನು ಆ ದೊಡ್ಡ ನೀರಿನ ಪಾತ್ರೆಯನ್ನು ದೇವಾಲಯದ ಬಲ ಬದಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು. [PE][PS]
11. ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ [*ಬೋಗುಣಿ ರಕ್ತವನ್ನು ಚಿಮುಕಿಸುವುದಕ್ಕಾಗಿ ಇದನ್ನು ಉಪಯೋಗಿಸಲಾಗುತ್ತಿತ್ತು.] ಮತ್ತು ದೇವಾಲಯದ ಉಪಕರಣಗಳನ್ನೂ ಸೊಲೊಮೋನನು ಹೇಳಿದಂತೆಯೇ ಮಾಡಿ ಮುಗಿಸಿದನು.
12. ಹೂರಾಮನು ದೇವಾಲಯದ ಎದುರಿನಲ್ಲಿಟ್ಟಿದ್ದ ಎತ್ತರದ ಕಂಬಗಳನ್ನೂ ಅವುಗಳ ತುತ್ತತುದಿಯಲ್ಲಿ ಎರಡು ಬೋಗುಣಿಗಳನ್ನೂ ಮಾಡಿಸಿದನು. ಆ ಬೋಗುಣಿಗಳಿಗೆ ಅಲಂಕೃತವಾದ ಜಾಲರಿಗಳನ್ನು ಹೊದಿಸಿದನು.
13. ಆ ಜಾಲರಿಯಲ್ಲಿ ಸಿಕ್ಕಿಸಲು ನಾನೂರು ದಾಳಿಂಬೆಗಳನ್ನು ಮಾಡಿದನು. ಪ್ರತಿಯೊಂದು ಜಾಲರಿಯಲ್ಲಿ ಎರಡು ಸಾಲಾಗಿ ದಾಳಿಂಬೆಗಳನ್ನು ಸಿಕ್ಕಿಸಿಟ್ಟನು. ಈ ಜಾಲರಿಯು ಕಂಬದ ಮೇಲ್ಭಾಗವನ್ನು ಮುಚ್ಚಿತ್ತು.
14. ಹೂರಾಮನು ಪೀಠಗಳನ್ನೂ ಅವುಗಳ ಮೇಲೆ ಬೋಗುಣಿಗಳನ್ನೂ ಮಾಡಿದನು.
15. ಎರಕಹೊಯ್ದ ತಾಮ್ರದ ದೊಡ್ಡ ಪಾತ್ರೆಯನ್ನೂ ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳನ್ನೂ ತಯಾರಿಸಿದನು.
16. ಹಂಡೆ, ಸಲಿಕೆ, ಮುಳ್ಳು ಇವುಗಳನ್ನೆಲ್ಲಾ ದೇವಾಲಯಕ್ಕಾಗಿ ಸೊಲೊಮೋನನು ಹೇಳಿದಂತೆಯೇ ಮಾಡಿದನು. [PS] ಇವೆಲ್ಲವನ್ನು ಹೊಳೆಯುವ ತಾಮ್ರದಿಂದ ಮಾಡಿ ಮುಗಿಸಿದನು.
17. ರಾಜನಾದ ಸೊಲೊಮೋನನು ಈ ಉಪಕರಣಗಳನ್ನೆಲ್ಲಾ ಮೊದಲು ಜೋರ್ಡನ್ ತಗ್ಗಿನ ಸುಕ್ಕೋತ್ ಮತ್ತು ಚೆರೇದ ಸ್ಥಳಗಳಲ್ಲಿ ದೊರಕುವ ಆವೆಮಣ್ಣಿನಿಂದ ಆಕಾರಗಳನ್ನು ಸಿದ್ಧಪಡಿಸಿ ಅದಕ್ಕೆ ಎರಕಹೊಯಿಸಿದನು.
18. ಸೊಲೊಮೋನನು ತಾಮ್ರದಿಂದ ಮಾಡಿಸಿದ ಉಪಕರಣಗಳ ತೂಕಕ್ಕೆ ಲೆಕ್ಕವೇ ಇರಲಿಲ್ಲ. [PE][PS]
19. ಸೊಲೊಮೋನನು ದೇವಾಲಯದೊಳಗೆ ಉಪಯೋಗಿಸುವ ಉಪಕರಣಗಳನ್ನು ಮಾಡಿಸಿದನು. ಅವನು ಬಂಗಾರದ ಯಜ್ಞವೇದಿಕೆಯನ್ನು ಮಾಡಿಸಿದನು; ನೈವೇದ್ಯದ ರೊಟ್ಟಿಗಳನ್ನು ಇಡಲು ಮೇಜುಗಳನ್ನು ಮಾಡಿಸಿದನು;
20. ಅಪ್ಪಟ ಬಂಗಾರದಿಂದ ದೀಪಸ್ತಂಭಗಳನ್ನೂ ದೀಪಗಳನ್ನೂ ಮಾಡಿಸಿದನು. ಈ ದೀಪಸ್ತಂಭಗಳು ಮಹಾಪವಿತ್ರ ಸ್ಥಳದ ಎದುರಿನಲ್ಲಿ ನೇಮಕವಾದ ರೀತಿಯಲ್ಲಿ ಉರಿಯಬೇಕು.
21. ಸೊಲೊಮೋನನು ಹಣತೆ, ಹೂವು, ಅಗ್ಗಿಷ್ಟಿಕೆ ಇವುಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಿದನು;
22. ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾ ಪವಿತ್ರಸ್ಥಳದೊಳಗಣ ಬಾಗಿಲಿನ ಕದಗಳು; ಅಂಗಳದ ಕದಗಳು ಇವುಗಳನ್ನೆಲ್ಲಾ ಅಪ್ಪಟ ಬಂಗಾರದಿಂದ ಮಾಡಿಸಿದನು. [PE]
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 4 / 36
ದೇವಾಲಯದ ವಸ್ತುಗಳು 1 ಸೊಲೊಮೋನನು ತಾಮ್ರದ ಯಜ್ಞವೇದಿಕೆಯನ್ನು ಮಾಡಿಸಿದನು. ಅದು ಇಪ್ಪತ್ತು ಮೊಳ ಉದ್ದ; ಇಪ್ಪತ್ತು ಮೊಳ ಅಗಲ; ಮತ್ತು ಹತ್ತು ಮೊಳ ಎತ್ತರವಿತ್ತು. 2 ಅವನು ಎರಕಹೊಯ್ದ ದೊಡ್ಡ ಗಾತ್ರದ ನೀರಿನ ಪಾತ್ರೆಯನ್ನು ಮಾಡಿಸಿದನು. ಇದು ದುಂಡಾಕಾರವಾಗಿದ್ದು ಅದರ ಬಾಯಿಯ ಅಂಚಿನಿಂದ ಅಂಚಿಗೆ ಹತ್ತು ಮೊಳ ಅಗಲವಿತ್ತು; ಅದರ ಸುತ್ತಳತೆ ಮೂವತ್ತು ಮೊಳ; ಎತ್ತರ ಐದು ಮೊಳ. 3 ಆ ನೀರಿನ ಪಾತ್ರೆಯನ್ನು ಎರಕ ಹೊಯ್ಯುವಾಗ ಅದರ ಬಾಯಿಯ ಅಂಚಿನ ಕೆಳಗೆ ಸುತ್ತಲೂ ಹೋರಿಯ ಚಿತ್ರವನ್ನು ಎರಡು ಸಾಲಾಗಿ ಹತ್ತು ಮೊಳ ಎರಕ ಹೊಯ್ಸಿದನು. 4 ಆ ಬೃಹದಾಕಾರದ ಪಾತ್ರೆಯನ್ನು ಹನ್ನೆರಡು ದೊಡ್ಡ ಎರಕದ ಹೋರಿಗಳ ಮೇಲೆ ಇಡಲಾಗಿತ್ತು. ಇವುಗಳಲ್ಲಿ ಮೂರು ಹೋರಿಗಳು ಪೂರ್ವದ ಕಡೆಗೂ ಮೂರು ಹೋರಿಗಳು ಪಶ್ಚಿಮದ ಕಡೆಗೂ ಮೂರು ಹೋರಿಗಳು ಉತ್ತರದ ಕಡೆಗೂ ಮೂರು ಹೋರಿಗಳು ದಕ್ಷಿಣದ ಕಡೆಗೂ ಮುಖಮಾಡಿ ನಿಂತಿದ್ದವು. ಎಲ್ಲಾ ಹೋರಿಗಳು ಒಂದಕ್ಕೊಂದಕ್ಕೆ ಮತ್ತು ಮಧ್ಯಭಾಗಕ್ಕೆ ಹಿಮ್ಮುಖವಾಗಿ ನಿಂತುಕೊಂಡಿದ್ದವು. 5 ಈ ತಾಮ್ರದ ಎರಕದ ಪಾತ್ರೆಯು ಮೂರು ಇಂಚು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದರಲ್ಲಿ ಅರವತ್ತಾರು ಸಾವಿರ ಲೀಟರ್ ನೀರನ್ನು ತುಂಬ ಬಹುದಾಗಿತ್ತು. 6 ಸೊಲೊಮೋನನು ಹತ್ತು ಗಂಗಾಳಗಳನ್ನು ಮಾಡಿಸಿದನು. ಐದು ಗಂಗಾಳಗಳನ್ನು ತಾಮ್ರದ ನೀರಿನ ತೊಟ್ಟಿಯ ಬಲಗಡೆಯಲ್ಲಿಡಿಸಿದನು. ಉಳಿದ ಐದು ಗಂಗಾಳಗಳನ್ನು ಪಾತ್ರೆಯ ಎಡಗಡೆಯಲ್ಲಿಡಿಸಿದನು. ಈ ಗಂಗಾಳಗಳ ನೀರನ್ನು ಯಜ್ಞ ಮಾಡಲಿಕ್ಕಿರುವ ಪದಾರ್ಥಗಳನ್ನು ತೊಳೆಯುವದಕ್ಕಾಗಿ ಉಪಯೋಗಿಸಿದರು. ಯಾಜಕರು ಯಜ್ಞಗಳನ್ನು ಅರ್ಪಿಸುವ ಮೊದಲು ತಮ್ಮನ್ನು ಶುದ್ಧ ಮಾಡಿಕೊಳ್ಳುವದಕ್ಕಾಗಿ ದೊಡ್ಡ ತಾಮ್ರದ ಪಾತ್ರೆಯ ನೀರನ್ನು ಉಪಯೋಗಿಸುತ್ತಿದ್ದರು. 7 ಸೊಲೊಮೋನನು ಹತ್ತು ದೀಪಸ್ತಂಭಗಳನ್ನು ಬಂಗಾರದಿಂದ ಮಾಡಿಸಿದನು. ಮೊದಲೇ ತೋರಿಸಿದ ಮಾದರಿಯ ಮೇರೆಗೆ ದೀಪಸ್ತಂಭಗಳನ್ನು ಮಾಡಿಸಿದನು. ಇವುಗಳಲ್ಲಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು. 8 ಅವನು ಹತ್ತು ಮೇಜುಗಳನ್ನು ಮಾಡಿಸಿ ಅವುಗಳಲ್ಲಿ ಐದನ್ನು ದೇವಾಲಯದ ಬಲಗಡೆಯಲ್ಲಿಯೂ ಉಳಿದ ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಅನಂತರ ಸೊಲೊಮೋನನು ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು. 9 ಇದಲ್ಲದೆ ಸೊಲೊಮೋನನು ಯಾಜಕರ ಅಂಗಳವನ್ನೂ ಮಹಾಅಂಗಳವನ್ನೂ ಮಹಾಅಂಗಳಕ್ಕೆ ಬಾಗಿಲುಗಳನ್ನೂ ಸಿದ್ಧಪಡಿಸಿದನು. ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಲಾಗಿದ್ದವು. 10 ಅವನು ಆ ದೊಡ್ಡ ನೀರಿನ ಪಾತ್ರೆಯನ್ನು ದೇವಾಲಯದ ಬಲ ಬದಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು. 11 ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ *ಬೋಗುಣಿ ರಕ್ತವನ್ನು ಚಿಮುಕಿಸುವುದಕ್ಕಾಗಿ ಇದನ್ನು ಉಪಯೋಗಿಸಲಾಗುತ್ತಿತ್ತು. ಮತ್ತು ದೇವಾಲಯದ ಉಪಕರಣಗಳನ್ನೂ ಸೊಲೊಮೋನನು ಹೇಳಿದಂತೆಯೇ ಮಾಡಿ ಮುಗಿಸಿದನು. 12 ಹೂರಾಮನು ದೇವಾಲಯದ ಎದುರಿನಲ್ಲಿಟ್ಟಿದ್ದ ಎತ್ತರದ ಕಂಬಗಳನ್ನೂ ಅವುಗಳ ತುತ್ತತುದಿಯಲ್ಲಿ ಎರಡು ಬೋಗುಣಿಗಳನ್ನೂ ಮಾಡಿಸಿದನು. ಆ ಬೋಗುಣಿಗಳಿಗೆ ಅಲಂಕೃತವಾದ ಜಾಲರಿಗಳನ್ನು ಹೊದಿಸಿದನು. 13 ಆ ಜಾಲರಿಯಲ್ಲಿ ಸಿಕ್ಕಿಸಲು ನಾನೂರು ದಾಳಿಂಬೆಗಳನ್ನು ಮಾಡಿದನು. ಪ್ರತಿಯೊಂದು ಜಾಲರಿಯಲ್ಲಿ ಎರಡು ಸಾಲಾಗಿ ದಾಳಿಂಬೆಗಳನ್ನು ಸಿಕ್ಕಿಸಿಟ್ಟನು. ಈ ಜಾಲರಿಯು ಕಂಬದ ಮೇಲ್ಭಾಗವನ್ನು ಮುಚ್ಚಿತ್ತು. 14 ಹೂರಾಮನು ಪೀಠಗಳನ್ನೂ ಅವುಗಳ ಮೇಲೆ ಬೋಗುಣಿಗಳನ್ನೂ ಮಾಡಿದನು. 15 ಎರಕಹೊಯ್ದ ತಾಮ್ರದ ದೊಡ್ಡ ಪಾತ್ರೆಯನ್ನೂ ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳನ್ನೂ ತಯಾರಿಸಿದನು. 16 ಹಂಡೆ, ಸಲಿಕೆ, ಮುಳ್ಳು ಇವುಗಳನ್ನೆಲ್ಲಾ ದೇವಾಲಯಕ್ಕಾಗಿ ಸೊಲೊಮೋನನು ಹೇಳಿದಂತೆಯೇ ಮಾಡಿದನು. ಇವೆಲ್ಲವನ್ನು ಹೊಳೆಯುವ ತಾಮ್ರದಿಂದ ಮಾಡಿ ಮುಗಿಸಿದನು. 17 ರಾಜನಾದ ಸೊಲೊಮೋನನು ಈ ಉಪಕರಣಗಳನ್ನೆಲ್ಲಾ ಮೊದಲು ಜೋರ್ಡನ್ ತಗ್ಗಿನ ಸುಕ್ಕೋತ್ ಮತ್ತು ಚೆರೇದ ಸ್ಥಳಗಳಲ್ಲಿ ದೊರಕುವ ಆವೆಮಣ್ಣಿನಿಂದ ಆಕಾರಗಳನ್ನು ಸಿದ್ಧಪಡಿಸಿ ಅದಕ್ಕೆ ಎರಕಹೊಯಿಸಿದನು. 18 ಸೊಲೊಮೋನನು ತಾಮ್ರದಿಂದ ಮಾಡಿಸಿದ ಉಪಕರಣಗಳ ತೂಕಕ್ಕೆ ಲೆಕ್ಕವೇ ಇರಲಿಲ್ಲ. 19 ಸೊಲೊಮೋನನು ದೇವಾಲಯದೊಳಗೆ ಉಪಯೋಗಿಸುವ ಉಪಕರಣಗಳನ್ನು ಮಾಡಿಸಿದನು. ಅವನು ಬಂಗಾರದ ಯಜ್ಞವೇದಿಕೆಯನ್ನು ಮಾಡಿಸಿದನು; ನೈವೇದ್ಯದ ರೊಟ್ಟಿಗಳನ್ನು ಇಡಲು ಮೇಜುಗಳನ್ನು ಮಾಡಿಸಿದನು; 20 ಅಪ್ಪಟ ಬಂಗಾರದಿಂದ ದೀಪಸ್ತಂಭಗಳನ್ನೂ ದೀಪಗಳನ್ನೂ ಮಾಡಿಸಿದನು. ಈ ದೀಪಸ್ತಂಭಗಳು ಮಹಾಪವಿತ್ರ ಸ್ಥಳದ ಎದುರಿನಲ್ಲಿ ನೇಮಕವಾದ ರೀತಿಯಲ್ಲಿ ಉರಿಯಬೇಕು. 21 ಸೊಲೊಮೋನನು ಹಣತೆ, ಹೂವು, ಅಗ್ಗಿಷ್ಟಿಕೆ ಇವುಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಿದನು; 22 ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾ ಪವಿತ್ರಸ್ಥಳದೊಳಗಣ ಬಾಗಿಲಿನ ಕದಗಳು; ಅಂಗಳದ ಕದಗಳು ಇವುಗಳನ್ನೆಲ್ಲಾ ಅಪ್ಪಟ ಬಂಗಾರದಿಂದ ಮಾಡಿಸಿದನು.
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 4 / 36
×

Alert

×

Kannada Letters Keypad References