ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
2 ಪೂರ್ವಕಾಲವೃತ್ತಾ
1. {ಅರಸನಾದ ಹಿಜ್ಕೀಯನ ಅಭಿವೃದ್ಧಿಕಾರ್ಯಗಳು} [PS] ಪಸ್ಕಹಬ್ಬದ ಆಚರಣೆಯು ಮುಕ್ತಾಯವಾಯಿತು. ಇಸ್ರೇಲಿನಿಂದ ಜೆರುಸಲೇಮಿಗೆ ಬಂದಿದ್ದವರು ಯೆಹೂದದ ಪಟ್ಟಣಗಳಿಗೆ ಹೋದರು. ಅಲ್ಲಿದ್ದ ಕಲ್ಲಿನ ವಿಗ್ರಹಗಳನ್ನು ಒಡೆದು ನಾಶಮಾಡಿದರು; ಅಶೇರಸ್ತಂಭಗಳನ್ನು ಮತ್ತು ಪೂಜಾಸ್ಥಳಗಳನ್ನು ಕೆಡವಿಹಾಕಿದರು. ಹೀಗೆ ಅವರು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲೆಲ್ಲಾ ಸಂಚಾರ ಮಾಡಿದರು. ಆ ಜನರು ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳಲ್ಲಿಯೂ ಹಾಗೆಯೇ ಮಾಡಿದರು. ವಿಗ್ರಹಗಳನ್ನು ಪೂಜಿಸಲು ಮಾಡಿದ ಎಲ್ಲಾ ವಸ್ತುಗಳನ್ನು ನಾಶಮಾಡಿದರು. ಬಳಿಕ ಆ ಇಸ್ರೇಲರೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು. [PE][PS]
2. ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು.
3. ಹಿಜ್ಕೀಯನು ತನ್ನ ಪಶುಗಳಲ್ಲಿ ಕೆಲವನ್ನು ಸರ್ವಾಂಗಹೋಮಕ್ಕಾಗಿ ಕೊಟ್ಟನು. ಇವುಗಳನ್ನು ಪ್ರತಿನಿತ್ಯದ ಬೆಳಿಗ್ಗೆ ಮತ್ತು ಸಂಜೆ ಸಮರ್ಪಿಸುವ ಸರ್ವಾಂಗಹೋಮಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತು; ಅಲ್ಲದೆ ಸಬ್ಬತ್ ದಿನದಂದೂ ಅಮವಾಸ್ಯೆ ದಿನದಂದೂ ಅವುಗಳನ್ನು ಅರ್ಪಿಸಿದರು. ಇವೆಲ್ಲಾ ದೇವರ ಕಟ್ಟಳೆಗಳಿಗನುಸಾರವಾಗಿದ್ದವು. [PE][PS]
4. ದೇಶದ ಜನರು ಯಾಜಕರಿಗೂ ಲೇವಿಯರಿಗೂ ತಮ್ಮ ಬೆಳೆಯ ಒಂದು ಪಾಲನ್ನು ಕೊಡಬೇಕಾಗಿತ್ತು. ಹಿಜ್ಕೀಯನು ಯಾಜಕರಿಗೂ ಲೇವಿಯರಿಗೂ ಅವರು ಕೊಡಬೇಕಾಗಿದ್ದ ಪಾಲನ್ನು ಕೊಡಬೇಕೆಂದು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರಿಗೆ ಆಜ್ಞಾಪಿಸಿದನು. ಹೀಗಿರುವಾಗ ಯಾಜಕರೂ ಲೇವಿಯರೂ ತಮ್ಮ ಸಮಯವನ್ನೆಲ್ಲಾ ದೇವರ ಸೇವೆಯಲ್ಲಿ ಕಳೆಯಬಹುದು.
5. ದೇಶದ ಜನರೆಲ್ಲಾ ಅರಸನ ಈ ಆಜ್ಞೆಯನ್ನು ಕೇಳಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನುತುಪ್ಪ ಮುಂತಾದ ಎಲ್ಲವುಗಳಲ್ಲಿ ಮತ್ತು ಪ್ರಥಮ ಫಲಗಳಲ್ಲಿ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಕೊಟ್ಟರು.
6. ಇಸ್ರೇಲಿನ ಮತ್ತು ಯೆಹೂದದ ಊರುಗಳಲ್ಲಿ ವಾಸವಾಗಿದ್ದ ಜನರು ತಮ್ಮ ದನಕರುಗಳಲ್ಲಿ ಮತ್ತು ಕುರಿಗಳಲ್ಲಿ ದಶಾಂಶವನ್ನು ತಂದುಕೊಟ್ಟರು. ಯೆಹೋವನಿಗೆ ಮೀಸಲಾಗಿ ವಿಶೇಷ ಸ್ಥಳದಲ್ಲಿ ಇಡತಕ್ಕ ಪವಿತ್ರ ವಸ್ತುಗಳಲ್ಲಿಯೂ ದಶಾಂಶವನ್ನು ತಂದುಕೊಟ್ಟರು. ಇವುಗಳನ್ನೆಲ್ಲ ಅವರು ತಮ್ಮ ದೇವರಾದ ಯೆಹೋವನಿಗೆ ತಂದು ರಾಶಿ ಹಾಕಿದರು. [PE][PS]
7. ವರ್ಷದ ಮೂರನೆಯ ತಿಂಗಳಿನಲ್ಲಿ ಜನರು ತಮ್ಮ ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದರೆ ಅದು ಏಳನೆಯ ತಿಂಗಳಲ್ಲಿ ಮುಗಿಯುತ್ತಿತ್ತು.
8. ಹಿಜ್ಕೀಯನೂ ಪ್ರಧಾನರೂ ಜನರ ಕಾಣಿಕೆಯ ರಾಶಿಯನ್ನು ನೋಡಿ ಯೆಹೋವನಿಗೆ ಸ್ತೋತ್ರ ಮಾಡಿದರು ಮತ್ತು ಅದನ್ನು ಅರ್ಪಿಸಿದ ಜನರಿಗಾಗಿ ಸ್ತೋತ್ರ ಮಾಡಿದರು. [PE][PS]
9. ಹಿಜ್ಕೀಯನು ಕಾಣಿಕೆಯ ರಾಶಿಯ ವಿಷಯವಾಗಿ ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತನಾಡಿದಾಗ
10. ಚಾದೋಕನ ಕುಲದ ಮಹಾಯಾಜಕನಾದ ಅಜರ್ಯನು ಹಿಜ್ಕೀಯನಿಗೆ, “ದೇವಾಲಯಕ್ಕೆ ಜನರು ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದಂದಿನಿಂದ ನಮಗೆ ಊಟಕ್ಕೆ ಯಾವ ಕೊರತೆಯೂ ಇಲ್ಲವಾಗಿದೆ. ನಾವು ತೃಪ್ತಿಯಾಗುವಷ್ಟು ಊಟಮಾಡಿದರೂ ಇನ್ನೂ ಉಳಿದಿರುತ್ತದೆ. ದೇವರು ನಿಜವಾಗಲೂ ತನ್ನ ಜನರನ್ನು ಆಶೀರ್ವದಿಸಿರುತ್ತಾನೆ. ಆದ್ದರಿಂದಲೇ ನಮಗೆ ಹೇರಳವಾಗಿ ಉಳಿದಿದೆ” ಎಂದು ಹೇಳಿದನು. [PE][PS]
11. ಆಗ ಹಿಜ್ಕೀಯನು ದೇವಾಲಯದಲ್ಲಿ ಉಗ್ರಾಣದ ಕೋಣೆಗಳನ್ನು ಕಟ್ಟಲು ಯಾಜಕರಿಗೆ ಆಜ್ಞಾಪಿಸಿದನು. ಅಂತೆಯೇ ಅವುಗಳನ್ನು ಕಟ್ಟಲಾಯಿತು.
12. ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು.
13. ಕೋನನ್ಯ ಮತ್ತು ಶಿಮ್ಮಿಯು ಈ ಜನರ ಮೇಲ್ವಿಚಾರಕರಾಗಿದ್ದರು; ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಾಕ್ಯ, ಮಹತ್ ಮತ್ತು ಬೆನಾಯ ಇವರನ್ನು ಸಹಾಯಕರಾಗಿ ಅರಸನಾದ ಹಿಜ್ಕೀಯನೂ ದೇವಾಲಯದ ಮೇಲ್ವಿಚಾರಕನಾದ ಅಜರ್ಯನೂ ಆರಿಸಿದರು. [PE][PS]
14. ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು.
15. ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಇವರು ಕೋರೆಯ ಸಹಾಯಕರು. ಇವರು ಯಾಜಕರು ವಾಸಿಸುವ ಪಟ್ಟಣಗಳಲ್ಲಿದ್ದು ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಕೂಡಿಸಿದ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಯಾಜಕರ ಕುಟುಂಬದವರಿಗೆ ಪಕ್ಷಪಾತವಿಲ್ಲದೆ ಹಂಚಿದರು. [PE][PS]
16. ಮೂರು ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಗಂಡುಮಕ್ಕಳಿಗೂ ಲೇವಿಯರ ವಂಶಾವಳಿ ಪಟ್ಟಿಯಲ್ಲಿ ಹೆಸರು ದಾಖಲಾದವರೆಲ್ಲರಿಗೂ ಹಂಚಿದರು. ಗಂಡಸರು ದೇವಾಲಯದಲ್ಲಿ ತಮಗೆ ಒಪ್ಪಿಸಿರುವ ಕೆಲಸಗಳನ್ನು ಮಾಡಿದರು.
17. ಒಟ್ಟುಗೂಡಿಸಿದ ಕಾಣಿಕೆಯಲ್ಲಿ ಯಾಜಕರೂ ತಮ್ಮ ಪಾಲನ್ನು ತೆಗೆದುಕೊಂಡರು. ಇದನ್ನು ವಂಶಾವಳಿಗನುಸಾರವಾಗಿ ಮಾಡಲಾಯಿತು. ಲೇವಿಯರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕಿಂತ ಹೆಚ್ಚು ವಯಸ್ಸಾದವರೂ ತಮ್ಮ ಪಾಲನ್ನು ಜವಾಬ್ದಾರಿಗಳಿಗನುಸಾರವಾಗಿಯೂ ತಮ್ಮ ಗುಂಪುಗಳಿಗನುಸಾರವಾಗಿಯೂ ಪಡೆದುಕೊಂಡರು.
18. ಲೇವಿಯರ ಹೆಂಡತಿಯರಿಗೂ ಮಕ್ಕಳಿಗೂ ಎಲ್ಲರಿಗೂ ಅದರಲ್ಲಿ ಪಾಲು ದೊರೆಯಿತು. ಯಾರ್ಯಾರ ಹೆಸರುಗಳು ಲೇವಿಯರ ಕುಟುಂಬದ ಪಟ್ಟಿಯಲ್ಲಿ ಬರೆಯಲ್ಪಟ್ಟಿತ್ತೊ ಅವರೆಲ್ಲರಿಗೆ ಪಾಲು ದೊರೆಯಿತು. ಯಾಕೆಂದರೆ ಲೇವಿಯರು ತಮ್ಮನ್ನು ದೇವಾಲಯದ ಸೇವೆಗೆ ಯಾವಾಗಲೂ ಸಿದ್ಧಪಡಿಸಿಕೊಳ್ಳುತ್ತಿದ್ದರು. [PE][PS]
19. ಆರೋನನ ಸಂತತಿಯ ಕೆಲವು ಯಾಜಕರಿಗೆ ಲೇವಿಯರು ವಾಸಿಸುತ್ತಿದ್ದ ಪಟ್ಟಣಗಳ ಹತ್ತಿರ ಹೊಲಗಳಿದ್ದವು. ಆರೋನನ ಸಂತತಿಯವರಲ್ಲಿ ಕೆಲವರು ಲೇವಿಯರ ಪಟ್ಟಣಗಳಲ್ಲಿಯೂ ವಾಸಮಾಡುತ್ತಿದ್ದರು. ಈ ಆರೋನನ ಸಂತತಿಯವರಿಗೆ ಪಾಲು ಕೊಡಲು ಕೆಲವರನ್ನು ನೇಮಿಸಲಾಯಿತು. ಗಂಡಸರಿಗೆ ಮತ್ತು ವಂಶಾವಳಿಯಲ್ಲಿ ಹೆಸರನ್ನು ಹೊಂದಿದ್ದ ಎಲ್ಲಾ ಲೇವಿಯರಿಗೆ ಸಂಗ್ರಹಿಸಲ್ಪಟ್ಟಿದ್ದರಲ್ಲಿ ಅವರವರ ಪಾಲು ದೊರೆಯಿತು. [PE][PS]
20. ಹೀಗೆ ಅರಸನಾದ ಹಿಜ್ಕೀಯನು ಯೆಹೂದ ದೇಶದಲ್ಲಿ ಈ ಒಳ್ಳೆಯ ಕಾರ್ಯವನ್ನು ಮಾಡಿದನು. ದೇವರಾದ ಯೆಹೋವನ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ನಂಬಿಗಸ್ತಿಕೆಯಿಂದ ಮಾಡಿದನು.
21. ಹಿಜ್ಕೀಯನು ತಾನು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಗಳನ್ನೂ ದೇವಾಲಯದ ಕಾರ್ಯಗಳನ್ನೂ ದೇವರ ಕಟ್ಟಳೆಗಳನ್ನೂ ಅನುಸರಿಸುವದನ್ನು ಪೂರ್ಣಹೃದಯದಿಂದ ಮಾಡಿ ಯಶಸ್ವಿಯಾದನು. [PE]

ಟಿಪ್ಪಣಿಗಳು

No Verse Added

ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 31 / 36
2 ಪೂರ್ವಕಾಲವೃತ್ತಾ 31:20
ಅರಸನಾದ ಹಿಜ್ಕೀಯನ ಅಭಿವೃದ್ಧಿಕಾರ್ಯಗಳು 1 ಪಸ್ಕಹಬ್ಬದ ಆಚರಣೆಯು ಮುಕ್ತಾಯವಾಯಿತು. ಇಸ್ರೇಲಿನಿಂದ ಜೆರುಸಲೇಮಿಗೆ ಬಂದಿದ್ದವರು ಯೆಹೂದದ ಪಟ್ಟಣಗಳಿಗೆ ಹೋದರು. ಅಲ್ಲಿದ್ದ ಕಲ್ಲಿನ ವಿಗ್ರಹಗಳನ್ನು ಒಡೆದು ನಾಶಮಾಡಿದರು; ಅಶೇರಸ್ತಂಭಗಳನ್ನು ಮತ್ತು ಪೂಜಾಸ್ಥಳಗಳನ್ನು ಕೆಡವಿಹಾಕಿದರು. ಹೀಗೆ ಅವರು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲೆಲ್ಲಾ ಸಂಚಾರ ಮಾಡಿದರು. ಆ ಜನರು ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳಲ್ಲಿಯೂ ಹಾಗೆಯೇ ಮಾಡಿದರು. ವಿಗ್ರಹಗಳನ್ನು ಪೂಜಿಸಲು ಮಾಡಿದ ಎಲ್ಲಾ ವಸ್ತುಗಳನ್ನು ನಾಶಮಾಡಿದರು. ಬಳಿಕ ಆ ಇಸ್ರೇಲರೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು. 2 ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು. 3 ಹಿಜ್ಕೀಯನು ತನ್ನ ಪಶುಗಳಲ್ಲಿ ಕೆಲವನ್ನು ಸರ್ವಾಂಗಹೋಮಕ್ಕಾಗಿ ಕೊಟ್ಟನು. ಇವುಗಳನ್ನು ಪ್ರತಿನಿತ್ಯದ ಬೆಳಿಗ್ಗೆ ಮತ್ತು ಸಂಜೆ ಸಮರ್ಪಿಸುವ ಸರ್ವಾಂಗಹೋಮಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತು; ಅಲ್ಲದೆ ಸಬ್ಬತ್ ದಿನದಂದೂ ಅಮವಾಸ್ಯೆ ದಿನದಂದೂ ಅವುಗಳನ್ನು ಅರ್ಪಿಸಿದರು. ಇವೆಲ್ಲಾ ದೇವರ ಕಟ್ಟಳೆಗಳಿಗನುಸಾರವಾಗಿದ್ದವು. 4 ದೇಶದ ಜನರು ಯಾಜಕರಿಗೂ ಲೇವಿಯರಿಗೂ ತಮ್ಮ ಬೆಳೆಯ ಒಂದು ಪಾಲನ್ನು ಕೊಡಬೇಕಾಗಿತ್ತು. ಹಿಜ್ಕೀಯನು ಯಾಜಕರಿಗೂ ಲೇವಿಯರಿಗೂ ಅವರು ಕೊಡಬೇಕಾಗಿದ್ದ ಪಾಲನ್ನು ಕೊಡಬೇಕೆಂದು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರಿಗೆ ಆಜ್ಞಾಪಿಸಿದನು. ಹೀಗಿರುವಾಗ ಯಾಜಕರೂ ಲೇವಿಯರೂ ತಮ್ಮ ಸಮಯವನ್ನೆಲ್ಲಾ ದೇವರ ಸೇವೆಯಲ್ಲಿ ಕಳೆಯಬಹುದು. 5 ದೇಶದ ಜನರೆಲ್ಲಾ ಅರಸನ ಈ ಆಜ್ಞೆಯನ್ನು ಕೇಳಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನುತುಪ್ಪ ಮುಂತಾದ ಎಲ್ಲವುಗಳಲ್ಲಿ ಮತ್ತು ಪ್ರಥಮ ಫಲಗಳಲ್ಲಿ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಕೊಟ್ಟರು. 6 ಇಸ್ರೇಲಿನ ಮತ್ತು ಯೆಹೂದದ ಊರುಗಳಲ್ಲಿ ವಾಸವಾಗಿದ್ದ ಜನರು ತಮ್ಮ ದನಕರುಗಳಲ್ಲಿ ಮತ್ತು ಕುರಿಗಳಲ್ಲಿ ದಶಾಂಶವನ್ನು ತಂದುಕೊಟ್ಟರು. ಯೆಹೋವನಿಗೆ ಮೀಸಲಾಗಿ ವಿಶೇಷ ಸ್ಥಳದಲ್ಲಿ ಇಡತಕ್ಕ ಪವಿತ್ರ ವಸ್ತುಗಳಲ್ಲಿಯೂ ದಶಾಂಶವನ್ನು ತಂದುಕೊಟ್ಟರು. ಇವುಗಳನ್ನೆಲ್ಲ ಅವರು ತಮ್ಮ ದೇವರಾದ ಯೆಹೋವನಿಗೆ ತಂದು ರಾಶಿ ಹಾಕಿದರು. 7 ವರ್ಷದ ಮೂರನೆಯ ತಿಂಗಳಿನಲ್ಲಿ ಜನರು ತಮ್ಮ ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದರೆ ಅದು ಏಳನೆಯ ತಿಂಗಳಲ್ಲಿ ಮುಗಿಯುತ್ತಿತ್ತು. 8 ಹಿಜ್ಕೀಯನೂ ಪ್ರಧಾನರೂ ಜನರ ಕಾಣಿಕೆಯ ರಾಶಿಯನ್ನು ನೋಡಿ ಯೆಹೋವನಿಗೆ ಸ್ತೋತ್ರ ಮಾಡಿದರು ಮತ್ತು ಅದನ್ನು ಅರ್ಪಿಸಿದ ಜನರಿಗಾಗಿ ಸ್ತೋತ್ರ ಮಾಡಿದರು. 9 ಹಿಜ್ಕೀಯನು ಕಾಣಿಕೆಯ ರಾಶಿಯ ವಿಷಯವಾಗಿ ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತನಾಡಿದಾಗ 10 ಚಾದೋಕನ ಕುಲದ ಮಹಾಯಾಜಕನಾದ ಅಜರ್ಯನು ಹಿಜ್ಕೀಯನಿಗೆ, “ದೇವಾಲಯಕ್ಕೆ ಜನರು ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದಂದಿನಿಂದ ನಮಗೆ ಊಟಕ್ಕೆ ಯಾವ ಕೊರತೆಯೂ ಇಲ್ಲವಾಗಿದೆ. ನಾವು ತೃಪ್ತಿಯಾಗುವಷ್ಟು ಊಟಮಾಡಿದರೂ ಇನ್ನೂ ಉಳಿದಿರುತ್ತದೆ. ದೇವರು ನಿಜವಾಗಲೂ ತನ್ನ ಜನರನ್ನು ಆಶೀರ್ವದಿಸಿರುತ್ತಾನೆ. ಆದ್ದರಿಂದಲೇ ನಮಗೆ ಹೇರಳವಾಗಿ ಉಳಿದಿದೆ” ಎಂದು ಹೇಳಿದನು. 11 ಆಗ ಹಿಜ್ಕೀಯನು ದೇವಾಲಯದಲ್ಲಿ ಉಗ್ರಾಣದ ಕೋಣೆಗಳನ್ನು ಕಟ್ಟಲು ಯಾಜಕರಿಗೆ ಆಜ್ಞಾಪಿಸಿದನು. ಅಂತೆಯೇ ಅವುಗಳನ್ನು ಕಟ್ಟಲಾಯಿತು. 12 ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು. 13 ಕೋನನ್ಯ ಮತ್ತು ಶಿಮ್ಮಿಯು ಈ ಜನರ ಮೇಲ್ವಿಚಾರಕರಾಗಿದ್ದರು; ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಾಕ್ಯ, ಮಹತ್ ಮತ್ತು ಬೆನಾಯ ಇವರನ್ನು ಸಹಾಯಕರಾಗಿ ಅರಸನಾದ ಹಿಜ್ಕೀಯನೂ ದೇವಾಲಯದ ಮೇಲ್ವಿಚಾರಕನಾದ ಅಜರ್ಯನೂ ಆರಿಸಿದರು. 14 ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು. 15 ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಇವರು ಕೋರೆಯ ಸಹಾಯಕರು. ಇವರು ಯಾಜಕರು ವಾಸಿಸುವ ಪಟ್ಟಣಗಳಲ್ಲಿದ್ದು ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಕೂಡಿಸಿದ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಯಾಜಕರ ಕುಟುಂಬದವರಿಗೆ ಪಕ್ಷಪಾತವಿಲ್ಲದೆ ಹಂಚಿದರು. 16 ಮೂರು ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಗಂಡುಮಕ್ಕಳಿಗೂ ಲೇವಿಯರ ವಂಶಾವಳಿ ಪಟ್ಟಿಯಲ್ಲಿ ಹೆಸರು ದಾಖಲಾದವರೆಲ್ಲರಿಗೂ ಹಂಚಿದರು. ಗಂಡಸರು ದೇವಾಲಯದಲ್ಲಿ ತಮಗೆ ಒಪ್ಪಿಸಿರುವ ಕೆಲಸಗಳನ್ನು ಮಾಡಿದರು. 17 ಒಟ್ಟುಗೂಡಿಸಿದ ಕಾಣಿಕೆಯಲ್ಲಿ ಯಾಜಕರೂ ತಮ್ಮ ಪಾಲನ್ನು ತೆಗೆದುಕೊಂಡರು. ಇದನ್ನು ವಂಶಾವಳಿಗನುಸಾರವಾಗಿ ಮಾಡಲಾಯಿತು. ಲೇವಿಯರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕಿಂತ ಹೆಚ್ಚು ವಯಸ್ಸಾದವರೂ ತಮ್ಮ ಪಾಲನ್ನು ಜವಾಬ್ದಾರಿಗಳಿಗನುಸಾರವಾಗಿಯೂ ತಮ್ಮ ಗುಂಪುಗಳಿಗನುಸಾರವಾಗಿಯೂ ಪಡೆದುಕೊಂಡರು. 18 ಲೇವಿಯರ ಹೆಂಡತಿಯರಿಗೂ ಮಕ್ಕಳಿಗೂ ಎಲ್ಲರಿಗೂ ಅದರಲ್ಲಿ ಪಾಲು ದೊರೆಯಿತು. ಯಾರ್ಯಾರ ಹೆಸರುಗಳು ಲೇವಿಯರ ಕುಟುಂಬದ ಪಟ್ಟಿಯಲ್ಲಿ ಬರೆಯಲ್ಪಟ್ಟಿತ್ತೊ ಅವರೆಲ್ಲರಿಗೆ ಪಾಲು ದೊರೆಯಿತು. ಯಾಕೆಂದರೆ ಲೇವಿಯರು ತಮ್ಮನ್ನು ದೇವಾಲಯದ ಸೇವೆಗೆ ಯಾವಾಗಲೂ ಸಿದ್ಧಪಡಿಸಿಕೊಳ್ಳುತ್ತಿದ್ದರು. 19 ಆರೋನನ ಸಂತತಿಯ ಕೆಲವು ಯಾಜಕರಿಗೆ ಲೇವಿಯರು ವಾಸಿಸುತ್ತಿದ್ದ ಪಟ್ಟಣಗಳ ಹತ್ತಿರ ಹೊಲಗಳಿದ್ದವು. ಆರೋನನ ಸಂತತಿಯವರಲ್ಲಿ ಕೆಲವರು ಲೇವಿಯರ ಪಟ್ಟಣಗಳಲ್ಲಿಯೂ ವಾಸಮಾಡುತ್ತಿದ್ದರು. ಈ ಆರೋನನ ಸಂತತಿಯವರಿಗೆ ಪಾಲು ಕೊಡಲು ಕೆಲವರನ್ನು ನೇಮಿಸಲಾಯಿತು. ಗಂಡಸರಿಗೆ ಮತ್ತು ವಂಶಾವಳಿಯಲ್ಲಿ ಹೆಸರನ್ನು ಹೊಂದಿದ್ದ ಎಲ್ಲಾ ಲೇವಿಯರಿಗೆ ಸಂಗ್ರಹಿಸಲ್ಪಟ್ಟಿದ್ದರಲ್ಲಿ ಅವರವರ ಪಾಲು ದೊರೆಯಿತು. 20 ಹೀಗೆ ಅರಸನಾದ ಹಿಜ್ಕೀಯನು ಯೆಹೂದ ದೇಶದಲ್ಲಿ ಈ ಒಳ್ಳೆಯ ಕಾರ್ಯವನ್ನು ಮಾಡಿದನು. ದೇವರಾದ ಯೆಹೋವನ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ನಂಬಿಗಸ್ತಿಕೆಯಿಂದ ಮಾಡಿದನು. 21 ಹಿಜ್ಕೀಯನು ತಾನು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಗಳನ್ನೂ ದೇವಾಲಯದ ಕಾರ್ಯಗಳನ್ನೂ ದೇವರ ಕಟ್ಟಳೆಗಳನ್ನೂ ಅನುಸರಿಸುವದನ್ನು ಪೂರ್ಣಹೃದಯದಿಂದ ಮಾಡಿ ಯಶಸ್ವಿಯಾದನು.
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 31 / 36
Common Bible Languages
West Indian Languages
×

Alert

×

kannada Letters Keypad References