ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
1 ಥೆಸಲೊನೀಕದವರಿಗೆ
1. ನಾವು ನಿಮ್ಮ ಬಳಿಗೆ ಬರಲಾಗಲಿಲ್ಲ, ಆದರೆ ಇನ್ನೂ ಹೆಚ್ಚುಕಾಲ ಕಾಯಲು ಬಹಳ ಕಷ್ಟಕರವಾಗಿದೆ.
2. ಆದುದರಿಂದ ಅಥೆನ್ಸಿನಲ್ಲಿ ಉಳಿದುಕೊಂಡು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಲು ತೀರ್ಮಾನಿಸಿದೆವು. ತಿಮೊಥೆಯನು ನಮ್ಮ ಸಹೋದರ. ಅವನು ದೇವರಿಗೋಸ್ಕರ ನಮ್ಮೊಡನೆ ಕೆಲಸ ಮಾಡುತ್ತಿದ್ದಾನೆ. ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವನು ನಮಗೆ ಸಹಾಯ ಮಾಡುತ್ತಿದ್ದಾನೆ. ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ನಿಮ್ಮನ್ನು ಸಂತೈಸಲು ತಿಮೊಥೆಯನನ್ನು ಕಳುಹಿಸಿದ್ದೇವೆ.
3. ನಮಗೀಗ ಬಂದಿರುವ ಕಷ್ಟಗಳಿಂದ ನಿಮ್ಮಲ್ಲಿ ಯಾರೂ ತಳಮಳಗೊಳ್ಳಬಾರದೆಂದು ತಿಮೊಥೆಯನನ್ನು ಕಳುಹಿಸಿದ್ದೇವೆ. ನಮಗೆ ಇಂಥಾ ಕಷ್ಟಗಳು ಬರಲೇಬೇಕೆಂದು ನಿಮಗೇ ತಿಳಿದಿದೆ.
4. ನಾವು ನಿಮ್ಮೊಡನಿದ್ದಾಗ, ನಾವೆಲ್ಲರೂ ಹಿಂಸೆಯನ್ನು ಅನುಭವಿಸಬೇಕಾಗುತ್ತದೆಯೆಂದು ನಿಮಗೆ ತಿಳಿಸಿದೆವು. ನಾವು ಹೇಳಿದಂತೆಯೇ ಅದು ಸಂಭವಿಸಿತು ಎಂಬುದು ನಿಮಗೆ ತಿಳಿದಿದೆ.
5. ನಿಮ್ಮ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣದಿಂದಲೇ ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆನು. ಇನ್ನೂ ಹೆಚ್ಚುಕಾಲ ಕಾಯಲು ಸಾಧ್ಯವಿಲ್ಲವೆನಿಸಿದ್ದರಿಂದಲೇ ನಾನು ಅವನನ್ನು ಕಳುಹಿಸಿದೆನು. ಜನರನ್ನು ಶೋಧನೆಗೆ ಒಳಪಡಿಸುವ ಸೈತಾನನು ನಿಮ್ಮನ್ನು ಈಗಾಗಲೇ ಶೋಧನೆಗಳಿಂದ ಸೋಲಿಸಿರಬಹುದೆಂಬ ಭಯ ನನಗಿತ್ತು. ಒಂದುವೇಳೆ, ಹಾಗೇನಾದರೂ ಆಗಿದ್ದರೆ ನಮ್ಮ ಪ್ರಯಾಸವೆಲ್ಲಾ ನಿರರ್ಥಕವಾಗುತ್ತಿತ್ತು. [PE][PS]
6. ಆದರೆ ತಿಮೊಥೆಯನು ನಿಮ್ಮಿಂದ ನಮ್ಮ ಬಳಿಗೆ ಹಿಂತಿರುಗಿ ಬಂದಾಗ, ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಬಗ್ಗೆ ಶುಭವಾರ್ತೆಯನ್ನು ನಮಗೆ ಹೇಳಿದನು. ನೀವು ಯಾವಾಗಲೂ ನಮ್ಮನ್ನು ಜ್ಞಾಪಿಸಿಕೊಳ್ಳುವಿರೆಂತಲೂ ನಮ್ಮನ್ನು ಮತ್ತೆ ನೋಡಲು ಅತ್ಯಾಸೆಯಿಂದ ಇದ್ದೀರೆಂತಲೂ ಅವನು ನಮಗೆ ತಿಳಿಸಿದನು. ಅದೇ ರೀತಿಯಲ್ಲಿ ನಾವೂ ನಿಮ್ಮನ್ನು ನೋಡಲು ಅತ್ಯಾಸೆಯಿಂದ ಇದ್ದೇವೆ.
7. ಸಹೋದರ ಸಹೋದರಿಯರೇ, ನಿಮ್ಮ ನಂಬಿಕೆಯ ದೆಸೆಯಿಂದ ನಿಮ್ಮ ವಿಷಯದಲ್ಲಿ ಪ್ರೋತ್ಸಾಹಗೊಂಡೆವು. ನಮಗೆ ಬಹಳ ತೊಂದರೆಯಿದ್ದರೂ ಹಿಂಸೆಯಿದ್ದರೂ ಆದರಣೆಯಾಯಿತು.
8. ನೀವು ಪ್ರಭುವಿನಲ್ಲಿ ಬಲವಾಗಿದ್ದರೆ, ನಮ್ಮಲ್ಲಿ ಜೀವ ತುಂಬಿದಂತಿರುವುದು.
9. ನಿಮ್ಮ ನಿಮಿತ್ತದಿಂದ ದೇವರ ಸನ್ನಿಧಿಯಲ್ಲಿ ಬಹಳ ಹರ್ಷಿತರಾಗಿದ್ದೇವೆ! ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನಮಗಿರುವ ಆನಂದಕ್ಕೆ ಸರಿಸಮವಾಗಿ ಕೃತಜ್ಞತಾಸ್ತುತಿ ಸಲ್ಲಿಸಲು ನಮಗೆ ಹೇಗೆ ಸಾಧ್ಯವಾದೀತು?
10. ಹಗಲಿರುಳು ನಿಮ್ಮ ವಿಷಯದಲ್ಲಿ ಬಹಳವಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ನಂಬಿಕೆಯಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ. [PE][PS]
11. ನಾವು ನಿಮ್ಮ ಬಳಿಗೆ ಬರಲು ಮಾರ್ಗವನ್ನು ಸರಾಗಗೊಳಿಸುವಂತೆ ನಮ್ಮ ತಂದೆಯಾದ ದೇವರಿಗೂ ಪ್ರಭುವಾದ ಯೇಸುವಿಗೂ ಪ್ರಾರ್ಥಿಸುತ್ತೇವೆ.
12. ನಾವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಪ್ರೀತಿಯು ವೃದ್ಧಿಯಾಗಿ ಒಬ್ಬೊಬ್ಬರ ಮೇಲೆಯೂ ಇತರ ಜನರೆಲ್ಲರ ಮೇಲೆಯೂ ಹೆಚ್ಚಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ.
13. ನಿಮ್ಮ ಹೃದಯಗಳು ಬಲಗೊಳ್ಳಲೆಂದು ಹೀಗೆ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭುವಾದ ಯೇಸುವು ತನ್ನ ಪವಿತ್ರ ಜನರೊಂದಿಗೆ ಪ್ರತ್ಯಕ್ಷನಾದಾಗ ನೀವು ತಂದೆಯಾದ ದೇವರ ಸನ್ನಿಧಿಯಲ್ಲಿ ಪರಿಶುದ್ಧರೂ ತಪ್ಪಿಲ್ಲದವರೂ ಆಗಿರುವಿರಿ. [PE]

ಟಿಪ್ಪಣಿಗಳು

No Verse Added

ಒಟ್ಟು 5 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 3 / 5
1 2 3 4 5
1 ಥೆಸಲೊನೀಕದವರಿಗೆ 3:1
1 ನಾವು ನಿಮ್ಮ ಬಳಿಗೆ ಬರಲಾಗಲಿಲ್ಲ, ಆದರೆ ಇನ್ನೂ ಹೆಚ್ಚುಕಾಲ ಕಾಯಲು ಬಹಳ ಕಷ್ಟಕರವಾಗಿದೆ. 2 ಆದುದರಿಂದ ಅಥೆನ್ಸಿನಲ್ಲಿ ಉಳಿದುಕೊಂಡು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಲು ತೀರ್ಮಾನಿಸಿದೆವು. ತಿಮೊಥೆಯನು ನಮ್ಮ ಸಹೋದರ. ಅವನು ದೇವರಿಗೋಸ್ಕರ ನಮ್ಮೊಡನೆ ಕೆಲಸ ಮಾಡುತ್ತಿದ್ದಾನೆ. ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವನು ನಮಗೆ ಸಹಾಯ ಮಾಡುತ್ತಿದ್ದಾನೆ. ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ನಿಮ್ಮನ್ನು ಸಂತೈಸಲು ತಿಮೊಥೆಯನನ್ನು ಕಳುಹಿಸಿದ್ದೇವೆ. 3 ನಮಗೀಗ ಬಂದಿರುವ ಕಷ್ಟಗಳಿಂದ ನಿಮ್ಮಲ್ಲಿ ಯಾರೂ ತಳಮಳಗೊಳ್ಳಬಾರದೆಂದು ತಿಮೊಥೆಯನನ್ನು ಕಳುಹಿಸಿದ್ದೇವೆ. ನಮಗೆ ಇಂಥಾ ಕಷ್ಟಗಳು ಬರಲೇಬೇಕೆಂದು ನಿಮಗೇ ತಿಳಿದಿದೆ. 4 ನಾವು ನಿಮ್ಮೊಡನಿದ್ದಾಗ, ನಾವೆಲ್ಲರೂ ಹಿಂಸೆಯನ್ನು ಅನುಭವಿಸಬೇಕಾಗುತ್ತದೆಯೆಂದು ನಿಮಗೆ ತಿಳಿಸಿದೆವು. ನಾವು ಹೇಳಿದಂತೆಯೇ ಅದು ಸಂಭವಿಸಿತು ಎಂಬುದು ನಿಮಗೆ ತಿಳಿದಿದೆ. 5 ನಿಮ್ಮ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣದಿಂದಲೇ ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆನು. ಇನ್ನೂ ಹೆಚ್ಚುಕಾಲ ಕಾಯಲು ಸಾಧ್ಯವಿಲ್ಲವೆನಿಸಿದ್ದರಿಂದಲೇ ನಾನು ಅವನನ್ನು ಕಳುಹಿಸಿದೆನು. ಜನರನ್ನು ಶೋಧನೆಗೆ ಒಳಪಡಿಸುವ ಸೈತಾನನು ನಿಮ್ಮನ್ನು ಈಗಾಗಲೇ ಶೋಧನೆಗಳಿಂದ ಸೋಲಿಸಿರಬಹುದೆಂಬ ಭಯ ನನಗಿತ್ತು. ಒಂದುವೇಳೆ, ಹಾಗೇನಾದರೂ ಆಗಿದ್ದರೆ ನಮ್ಮ ಪ್ರಯಾಸವೆಲ್ಲಾ ನಿರರ್ಥಕವಾಗುತ್ತಿತ್ತು. 6 ಆದರೆ ತಿಮೊಥೆಯನು ನಿಮ್ಮಿಂದ ನಮ್ಮ ಬಳಿಗೆ ಹಿಂತಿರುಗಿ ಬಂದಾಗ, ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಬಗ್ಗೆ ಶುಭವಾರ್ತೆಯನ್ನು ನಮಗೆ ಹೇಳಿದನು. ನೀವು ಯಾವಾಗಲೂ ನಮ್ಮನ್ನು ಜ್ಞಾಪಿಸಿಕೊಳ್ಳುವಿರೆಂತಲೂ ನಮ್ಮನ್ನು ಮತ್ತೆ ನೋಡಲು ಅತ್ಯಾಸೆಯಿಂದ ಇದ್ದೀರೆಂತಲೂ ಅವನು ನಮಗೆ ತಿಳಿಸಿದನು. ಅದೇ ರೀತಿಯಲ್ಲಿ ನಾವೂ ನಿಮ್ಮನ್ನು ನೋಡಲು ಅತ್ಯಾಸೆಯಿಂದ ಇದ್ದೇವೆ. 7 ಸಹೋದರ ಸಹೋದರಿಯರೇ, ನಿಮ್ಮ ನಂಬಿಕೆಯ ದೆಸೆಯಿಂದ ನಿಮ್ಮ ವಿಷಯದಲ್ಲಿ ಪ್ರೋತ್ಸಾಹಗೊಂಡೆವು. ನಮಗೆ ಬಹಳ ತೊಂದರೆಯಿದ್ದರೂ ಹಿಂಸೆಯಿದ್ದರೂ ಆದರಣೆಯಾಯಿತು. 8 ನೀವು ಪ್ರಭುವಿನಲ್ಲಿ ಬಲವಾಗಿದ್ದರೆ, ನಮ್ಮಲ್ಲಿ ಜೀವ ತುಂಬಿದಂತಿರುವುದು. 9 ನಿಮ್ಮ ನಿಮಿತ್ತದಿಂದ ದೇವರ ಸನ್ನಿಧಿಯಲ್ಲಿ ಬಹಳ ಹರ್ಷಿತರಾಗಿದ್ದೇವೆ! ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನಮಗಿರುವ ಆನಂದಕ್ಕೆ ಸರಿಸಮವಾಗಿ ಕೃತಜ್ಞತಾಸ್ತುತಿ ಸಲ್ಲಿಸಲು ನಮಗೆ ಹೇಗೆ ಸಾಧ್ಯವಾದೀತು? 10 ಹಗಲಿರುಳು ನಿಮ್ಮ ವಿಷಯದಲ್ಲಿ ಬಹಳವಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ನಂಬಿಕೆಯಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ. 11 ನಾವು ನಿಮ್ಮ ಬಳಿಗೆ ಬರಲು ಮಾರ್ಗವನ್ನು ಸರಾಗಗೊಳಿಸುವಂತೆ ನಮ್ಮ ತಂದೆಯಾದ ದೇವರಿಗೂ ಪ್ರಭುವಾದ ಯೇಸುವಿಗೂ ಪ್ರಾರ್ಥಿಸುತ್ತೇವೆ. 12 ನಾವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಪ್ರೀತಿಯು ವೃದ್ಧಿಯಾಗಿ ಒಬ್ಬೊಬ್ಬರ ಮೇಲೆಯೂ ಇತರ ಜನರೆಲ್ಲರ ಮೇಲೆಯೂ ಹೆಚ್ಚಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. 13 ನಿಮ್ಮ ಹೃದಯಗಳು ಬಲಗೊಳ್ಳಲೆಂದು ಹೀಗೆ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭುವಾದ ಯೇಸುವು ತನ್ನ ಪವಿತ್ರ ಜನರೊಂದಿಗೆ ಪ್ರತ್ಯಕ್ಷನಾದಾಗ ನೀವು ತಂದೆಯಾದ ದೇವರ ಸನ್ನಿಧಿಯಲ್ಲಿ ಪರಿಶುದ್ಧರೂ ತಪ್ಪಿಲ್ಲದವರೂ ಆಗಿರುವಿರಿ.
ಒಟ್ಟು 5 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 3 / 5
1 2 3 4 5
Common Bible Languages
West Indian Languages
×

Alert

×

kannada Letters Keypad References