ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
1 ಅರಸುಗಳು
1. {ಸೊಲೊಮೋನನ ಅರಮನೆ} [PS] ಸೊಲೊಮೋನನು ತನಗಾಗಿ ಒಂದು ಅರಮನೆಯನ್ನು ನಿರ್ಮಿಸಿದನು. ಸೊಲೊಮೋನನ ಅರಮನೆಯನ್ನು ನಿರ್ಮಿಸಲು ಹದಿಮೂರು ವರ್ಷ ಹಿಡಿಯಿತು.
2. ಅವನು “ಲೆಬನೋನಿನ ಅರಣ್ಯದ ಮನೆ” ಎಂಬ ಕಟ್ಟಡವನ್ನೂ ಕಟ್ಟಿಸಿದನು. ಅದರ ಉದ್ದ ನೂರೈವತ್ತು ಅಡಿಗಳು; ಅಗಲ ಎಪ್ಪತ್ತೈದು ಅಡಿಗಳು; ಎತ್ತರ ನಲವತ್ತೈದು ಅಡಿಗಳು. ಅದರಲ್ಲಿ ನಾಲ್ಕು ಸಾಲಿನ ದೇವದಾರು ಮರದ ಕಂಬಗಳಿದ್ದವು ಆ ಕಂಬಗಳ ಮೇಲೆ ದೇವದಾರು ಮರದ ಬೋದಿಗೆಗಳಿದ್ದವು.
3. ಈ ಸಾಲು ಕಂಬಗಳ ಮೇಲೆ ದೇವದಾರು ಮರದ ತೊಲೆಗಳನ್ನು ಜೋಡಿಸಿದ್ದರು. ಈ ತೊಲೆಗಳ ಮೇಲ್ಭಾಗದ ಮಾಳಿಗೆಗೆ ದೇವದಾರು ಮರದ ಹಲಗೆಗಳನ್ನು ಹಾಸಿದ್ದರು. ಈ ಕಂಬಗಳ ಪ್ರತಿಯೊಂದು ಸಾಲಿನಲ್ಲೂ ಹದಿನೈದು ತೊಲೆಗಳಿದ್ದವು. ಅಲ್ಲಿ ಒಟ್ಟು ನಲವತ್ತೈದು ತೊಲೆಗಳಿದ್ದವು.
4. ಗೋಡೆಯ ಪ್ರತಿಯೊಂದು ಕಡೆಯಲ್ಲಿ ಮೂರು ಸಾಲು ಕಿಟಕಿಗಳಿದ್ದವು. ಈ ಕಿಟಕಿಗಳು ಎದುರು ಬದುರಾಗಿದ್ದವು. [PE][PS]
5. ಗೋಡೆಯ ಪ್ರತಿಯೊಂದು ಕೊನೆಯಲ್ಲೂ ಮೂರು ಬಾಗಿಲುಗಳಿದ್ದವು. ಎಲ್ಲ ಬಾಗಿಲುಗಳ ಚೌಕಟ್ಟುಗಳೂ ಚತುಷ್ಕೋಣಾಕಾರವಾಗಿದ್ದವು. [PE][PS]
6. ಸೊಲೊಮೋನನು, “ಕಂಬಮಂಟಪ”ವನ್ನು ಸಹ ಕಟ್ಟಿಸಿದನು. ಅದರ ಉದ್ದ ಎಪ್ಪತೈದು ಅಡಿ ಮತ್ತು ಅಗಲ ನಲವತೈದು ಅಡಿ. ಅದರ ಮುಂಭಾಗದಲ್ಲೂ ಕಂಬಗಳಿಂದ ಕೂಡಿದ ಪಡಸಾಲೆಯಿತ್ತು. [PE][PS]
7. ಸೊಲೊಮೋನನು ಜನರಿಗೆ ತೀರ್ಪುನೀಡಲು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಇದನ್ನು, “ನ್ಯಾಯಮಂದಿರ” ಎಂದೂ ಕರೆದನು. ಈ ಕೋಣೆಗೆ ನೆಲದಿಂದ ಮಾಳಿಗೆಯವರೆಗೆ ದೇವದಾರು ಮರದ ಹಲಗೆಗಳನ್ನು ಹೊದಿಸಲಾಗಿತ್ತು. [PE][PS]
8. ಸೊಲೊಮೋನನು ವಾಸಿಸುತ್ತಿದ್ದ ಮನೆಯು “ನ್ಯಾಯಮಂದಿರ”ದ ಒಳಗಿನ ಪ್ರಾಕಾರದಲ್ಲಿತ್ತು. ಈ ಮನೆಯನ್ನು “ನ್ಯಾಯಮಂದಿರ”ದಂತೆಯೇ ಕಟ್ಟಿಸಿದನು. ಇದಲ್ಲದೆ ಅವನು ಈಜಿಪ್ಟಿನ ಫರೋಹನ ಮಗಳಾದ ತನ್ನ ಹೆಂಡತಿಗೂ ಇದೇ ರೀತಿಯ ಮನೆಯನ್ನು ಕಟ್ಟಿಸಿದನು. [PE][PS]
9. ಈ ಎಲ್ಲಾ ಕಟ್ಟಡಗಳನ್ನು ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿಸಿದನು. ಈ ಕಲ್ಲುಗಳನ್ನು ಸರಿಯಾದ ಅಳತೆಗೆ ಗರಗಸದಿಂದ ಕತ್ತರಿಸಿದನು. ಅವುಗಳನ್ನು ಮುಂದುಗಡೆ ಮತ್ತು ಹಿಂದುಗಡೆ ಸಮನಾಗಿ ಕತ್ತರಿಸಿದ್ದನು. ಶ್ರೇಷ್ಠವಾದ ಈ ಕಲ್ಲುಗಳು ಅಡಿಪಾಯದಿಂದ ಗೋಡೆಯ ತುದಿಯವರೆಗೆ ಇದ್ದವು. ಅಂಗಳದ ಸುತ್ತಲೂ ಇದ್ದ ಗೋಡೆಯನ್ನು ಸಹ ಶ್ರೇಷ್ಠವಾದ ಕತ್ತರಿಸಿದ ಕಲ್ಲುಗಳಿಂದ ಕಟ್ಟಲಾಗಿತ್ತು.
10. ಅಡಿಪಾಯವನ್ನು ಅಗಲವಾದ ಮತ್ತು ಬೆಲೆಬಾಳುವ ಕಲ್ಲುಗಳಿಂದ ಹಾಕಿದರು. ಕೆಲವು ಕಲ್ಲುಗಳು ಹದಿನೈದು ಅಡಿ ಉದ್ದವಾಗಿದ್ದರೆ, ಉಳಿದವು ಹನ್ನೆರಡು ಅಡಿ ಉದ್ದವಾಗಿದ್ದವು.
11. ಈ ಕಲ್ಲುಗಳ ಮೇಲಿನ ತುದಿಯಲ್ಲಿ ಇತರ ಶ್ರೇಷ್ಠವಾದ ಕಲ್ಲುಗಳು ಮತ್ತು ದೇವದಾರು ಮರದ ತೊಲೆಗಳಿದ್ದವು.
12. ಅರಮನೆಯ ಅಂಗಳದ, ದೇವಾಲಯದ ಅಂಗಳದ ಮತ್ತು ದೇವಾಲಯದ ಮಂಟಪದ ಸುತ್ತಲೂ ಗೋಡೆಗಳಿದ್ದವು. ಈ ಗೋಡೆಗಳನ್ನು ಮೂರು ಸಾಲು ಕಲ್ಲುಗಳಿಂದ ಮತ್ತು ಒಂದು ಸಾಲು ದೇವದಾರು ಮರಗಳಿಂದ ಕಟ್ಟಿಸಿದ್ದನು. [PE][PS]
13. ರಾಜನಾದ ಸೊಲೊಮೋನನು ತೂರಿನಲ್ಲಿದ್ದ ಹೀರಾಮ್ ಎಂಬವನಿಗೆ ಸಂದೇಶವನ್ನು ಕಳುಹಿಸಿ ಅವನನ್ನು ಜೆರುಸಲೇಮಿಗೆ ಕರೆಸಿದನು.
14. ಹೀರಾಮನ ತಾಯಿಯು ನಫ್ತಾಲಿ ಕುಲದವಳಾಗಿದ್ದಳು ಮತ್ತು ಇಸ್ರೇಲಿನವಳಾಗಿದ್ದಳು. ಅವನ ದಿವಂಗತ ತಂದೆಯು ತೂರಿನವನಾಗಿದ್ದನು. ಹೀರಾಮನು ಹಿತ್ತಾಳೆಯಿಂದ ವಸ್ತುಗಳನ್ನು ತಯಾರಿಸುತ್ತಿದ್ದನು. ಅವನು ಕುಶಲಕರ್ಮಿಯೂ ಅನುಭವಿಯೂ ಆದ ಕೆಲಸಗಾರನಾಗಿದ್ದನು. ರಾಜನಾದ ಸೊಲೊಮೋನನು ಹೀರಾಮನಿಗೆ ಬರಲು ಹೇಳಿದಾಗ, ಅವನು ಒಪ್ಪಿಕೊಂಡನು. ರಾಜನಾದ ಸೊಲೊಮೋನನು ಎಲ್ಲಾ ಹಿತ್ತಾಳೆಯ ಕಾರ್ಯಗಳಿಗೆ ಹೀರಾಮನನ್ನು ಮೇಲ್ವಿಚಾರಕನನ್ನಾಗಿ ನೇಮಿಸಿದನು. ಹೀರಾಮನು ಹಿತ್ತಾಳೆಯ ವಸ್ತುಗಳನ್ನು ನಿರ್ಮಿಸಿದನು. [PE][PS]
15. ಹೀರಾಮನು ಎರಡು ಹಿತ್ತಾಳೆಯ ಕಂಬಗಳನ್ನು ನಿರ್ಮಿಸಿದನು, ಪ್ರತಿಯೊಂದು ಕಂಬದ ಎತ್ತರ ಇಪ್ಪತ್ತೇಳು ಅಡಿ; ಸುತ್ತಳತೆ ಹದಿನೆಂಟು ಅಡಿ. ಈ ಕಂಬಗಳು ಟೊಳ್ಳಾಗಿದ್ದವು; ಲೋಹವು ಮೂರು ಇಂಚು ದಪ್ಪವಾಗಿತ್ತು.
16. ಹೀರಾಮನು ಏಳೂವರೆ ಅಡಿ ಉದ್ದದ ಎರಡು ಹಿತ್ತಾಳೆಯ ಬೋದಿಗೆಗಳನ್ನು ಮಾಡಿದನು. ಹೀರಾಮನು ಈ ಬೋದಿಗೆಗಳನ್ನು ಕಂಬಗಳ ಮೇಲಿಟ್ಟನು.
17. ನಂತರ ಅವನು ಕಂಬಗಳ ಮೇಲಿನ ಈ ಬೋದಿಗೆಗಳಿಗೆ ಸರಪಣಿಯ ಎರಡು ಜಾಲರಿಗಳನ್ನು ಮಾಡಿದನು.
18. ಇದಲ್ಲದೆ ಅವನು ತಾಮ್ರದ ದಾಳಿಂಬೆ ಹಣ್ಣುಗಳನ್ನು ಮಾಡಿ ಅವುಗಳನ್ನು ಮಾಡಿದನು. ಈ ದಾಳಿಂಬೆಯ ಅಲಂಕರಣಗಳನ್ನು ಕಂಬಗಳ ಮೇಲಿನ ಬೋದಿಗೆ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು.
19. ಕಂಬಗಳ ಮೇಲಿದ್ದ ಏಳುವರೆ ಅಡಿ ಎತ್ತರದ ಈ ಬೋದಿಗೆಗಳು ಹೂಗಳಂತೆ ಕಾಣುತ್ತಿದ್ದವು.
20. ಈ ಬೋದಿಗೆಗಳು ಕಂಬಗಳ ಮೇಲಿನ ತುದಿಯಲ್ಲಿದ್ದವು. ಅವು ವೃತ್ತಾಕಾರದ ಜಾಲರಿಯ ಮೇಲಿದ್ದವು. ಆ ಸ್ಥಳದಲ್ಲಿ ಬೋದಿಗೆಯ ಸುತ್ತಲೂ ಇನ್ನೂರು ದಾಳಿಂಬೆ ಹಣ್ಣುಗಳ ಸಾಲುಗಳಿದ್ದವು.
21. ಹೀರಾಮನು ಈ ಹಿತ್ತಾಳೆಯ ಕಂಬಗಳನ್ನು ದೇವಾಲಯದ ಮಂಟಪದಲ್ಲಿ ಇಟ್ಟನು. ಒಂದು ಸ್ತಂಭವನ್ನು ಪ್ರವೇಶದ್ವಾರದ ದಕ್ಷಿಣದಿಕ್ಕಿನ ಕಡೆಯಲ್ಲೂ ಮತ್ತೊಂದನ್ನು ಉತ್ತರದಿಕ್ಕಿನ ಕಡೆಯಲ್ಲೂ ಇಟ್ಟನು. ದಕ್ಷಿಣದ ಸ್ತಂಭಕ್ಕೆ ಯಾಕೀನ್ ಎಂದು ಹೆಸರಿಟ್ಟನು. ಉತ್ತರದ ಸ್ತಂಭಕ್ಕೆ ಬೋವಜ್ ಎಂದು ಹೆಸರಿಟ್ಟನು.
22. ಅವರು ಹೂ ಆಕಾರದ ಬೋದಿಗೆಗಳನ್ನು ಸ್ತಂಭಗಳ ಮೇಲಿನ ತುದಿಯಲ್ಲಿಟ್ಟರು. ಆ ಎರಡು ಸ್ತಂಭಗಳ ಕೆಲಸವು ಮುಗಿಯಿತು. [PE][PS]
23. ನಂತರ ಹೀರಾಮನು ವೃತ್ತಾಕಾರದ ಹಿತ್ತಾಳೆಯ ತೊಟ್ಟಿಯನ್ನು ಮಾಡಿದನು. ಅವರು ಈ ತೊಟ್ಟಿಯನ್ನು “ಸಮುದ್ರ”ವೆಂದು ಕರೆದರು. ಆ ತೊಟ್ಟಿಯ ಸುತ್ತಳತೆಯು ನಲವತ್ತೈದು ಅಡಿಗಳು. ಅದರ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ ಹದಿನೈದು ಅಡಿಗಳು ಮತ್ತು ಆಳ ಏಳುವರೆ ಅಡಿಗಳು.
24. ಆ ತೊಟ್ಟಿಯ ಹೊರಅಂಚಿನ ಸುತ್ತಲೂ ಒಂದು ಕಂಠವಿತ್ತು. ಈ ಕಂಠದ ಕೆಳಗಡೆಯಲ್ಲಿ ತೊಟ್ಟಿಯನ್ನು ಸುತ್ತುವರಿದಂತೆ ಎರಡು ಸಾಲು ಹಿತ್ತಾಳೆಯ ಬಳ್ಳಿಗಳಿದ್ದವು. ಈ ಹಿತ್ತಾಳೆಯ ಬಳ್ಳಿಗಳನ್ನು ತೊಟ್ಟಿಯ ಮೇಲ್ಭಾಗದಲ್ಲಿ ಎರಕಹೊಯ್ದಿದ್ದನು.
25. ಈ ತೊಟ್ಟಿಯು ಹನ್ನೆರಡು ಹಿತ್ತಾಳೆಯ ಹೋರಿಗಳ ಬೆನ್ನಿನ ಮೇಲಿತ್ತು. ಈ ಹನ್ನೆರಡು ಹೋರಿಗಳೂ ತೊಟ್ಟಿಗೆ ದೂರವಾಗಿದ್ದ ಹೊರಭಾಗವನ್ನು ನೋಡುತ್ತಿರುವಂತೆ ಕಾಣುತ್ತಿದ್ದವು. ಮೂರು ಉತ್ತರದ ಕಡೆಗೂ ಮೂರು ಪೂರ್ವದ ಕಡೆಗೂ ಮೂರು ದಕ್ಷಿಣದ ಕಡೆಗೂ ಮೂರು ಪಶ್ಚಿಮದ ಕಡೆಗೂ ನೋಡುತ್ತಿದ್ದವು.
26. ಈ ತೊಟ್ಟಿಯ ಪಾರ್ಶ್ವಗಳು ಮೂರು ಇಂಚು ದಪ್ಪವಾಗಿತ್ತು. ಈ ತೊಟ್ಟಿಯ ಕಂಠವು ಲೋಟದ ಕಂಠದಂತೆ ಅಥವಾ ಹೂಗಳ ದಳದಂತೆ ಇತ್ತು. ಈ ತೊಟ್ಟಿಯಲ್ಲಿ ಹನ್ನೊಂದು ಸಾವಿರ ಗ್ಯಾಲನ್ ನೀರನ್ನು ತುಂಬಬಹುದಾಗಿತ್ತು. [PE][PS]
27. ಹೀರಾಮನು ಹತ್ತು ಬಂಡಿಗಳನ್ನು ಮಾಡಿದನು. ಪ್ರತಿಯೊಂದರ ಉದ್ದ ಆರು ಅಡಿಗಳು; ಅಗಲ ಆರು ಅಡಿಗಳು; ಮತ್ತು ಎತ್ತರ ನಾಲ್ಕುವರೆ ಅಡಿಗಳು.
28. ಈ ಬಂಡಿಗಳನ್ನು ಚೌಕಾಕಾರದ ಚೌಕಟ್ಟಿನ ಅಂಕಣದಿಂದ ಮಾಡಿದ್ದನು.
29. ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು.
30. ಪ್ರತಿಯೊಂದು ಬಂಡಿಗೂ ನಾಲ್ಕು ಹಿತ್ತಾಳೆಯ ಗಾಲಿಗಳು ಮತ್ತು ಅಚ್ಚುಗಳು ಇದ್ದವು. ಆ ದೊಡ್ಡ ಪಾತ್ರೆಯ ಮೂಲೆಗಳಲ್ಲಿ ಹಿತ್ತಾಳೆಯ ಆಧಾರ ಕಂಬಗಳಿದ್ದವು. ಈ ಕಂಬಗಳ ಹಿತ್ತಾಳೆಯ ಮೇಲ್ಭಾಗವು ಹೂವಿನಾಕಾರದಲ್ಲಿ ಕೆತ್ತಲಾಗಿತ್ತು.
31. ಈ ಪಾತ್ರೆಯ ಮೇಲೆ ಒಂದು ಚೌಕಟ್ಟಿತ್ತು. ಅದು ಪಾತ್ರೆಯ ಮೇಲೆ ಹದಿನೆಂಟು ಇಂಚು ಎತ್ತರವಾಗಿತ್ತು. ಆ ಪಾತ್ರೆಯ ಬಾಯಿಯು ಇಪ್ಪತ್ತೇಳು ಇಂಚು ವ್ಯಾಸದೊಂದಿಗೆ ವೃತ್ತಾಕಾರವಾಗಿತ್ತು. ಆ ಚೌಕಟ್ಟಿನ ಹಿತ್ತಾಳೆಯ ಮೇಲೆ ಚಿತ್ರ ವಿನ್ಯಾಸಗಳನ್ನು ಬಿಡಿಸಲಾಗಿತ್ತು. ಈ ಚೌಕಟ್ಟು ವೃತ್ತಾಕಾರವಾಗಿರದೆ ಚೌಕಾಕಾರವಾಗಿತ್ತು.
32. ಈ ಚೌಕಟ್ಟಿನ ಕೆಳಗಡೆ ನಾಲ್ಕು ಚಕ್ರಗಳಿದ್ದವು. ಈ ಚಕ್ರಗಳ ವ್ಯಾಸವು ಇಪ್ಪತ್ತೇಳು ಇಂಚುಗಳು. ಈ ಚಕ್ರಗಳ ಅಚ್ಚುಗಳನ್ನು ಬಂಡಿಯೊಂದಿಗೇ ಸೇರಿಸಿ ಅಖಂಡವಾಗಿ ನಿರ್ಮಿಸಿದ್ದರು.
33. ಈ ಚಕ್ರಗಳು ರಥದ ಮೇಲಿನ ಚಕ್ರಗಳಂತಿದ್ದುವು. ಈ ಚಕ್ರಗಳ ಮೇಲಿನ ಅಚ್ಚುಗಳನ್ನು, ಕಂಠಗಳನ್ನು, ಅರೆಯಕಾಲುಗಳನ್ನು ಮತ್ತು ಕಂಬಗಳನ್ನು ಹಿತ್ತಾಳೆಯಿಂದ ಮಾಡಿದ್ದರು. [PE][PS]
34. ಪ್ರತಿ ಬಂಡಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಧಾರ ಕಂಬಗಳಿದ್ದವು. ಅವುಗಳನ್ನು ಬಂಡಿಯೊಂದಿಗೆ ಅಖಂಡವಾಗಿ ನಿರ್ಮಿಸಿದ್ದರು.
35. ಪ್ರತಿಯೊಂದು ಬಂಡಿಯ ಮೇಲ್ಗಡೆ ಸುತ್ತಲೂ ಒಂದು ಹಿತ್ತಾಳೆಯ ಪಟ್ಟಿಯಿತ್ತು. ಅದನ್ನು ಬಂಡಿಯೊಂದಿಗೆ ಅಖಂಡವಾಗಿ ಮಾಡಿದ್ದರು.
36. ಬಂಡಿಯ ಪಾರ್ಶ್ವಗಳ ಮೇಲೆ ಮತ್ತು ಚೌಕಟ್ಟುಗಳ ಮೇಲೆ ಕೆರೂಬಿಗಳ, ಸಿಂಹಗಳ, ಖರ್ಜೂರ ಗಿಡಗಳ ಚಿತ್ರಗಳನ್ನು ಹಿತ್ತಾಳೆಯಲ್ಲಿ ಕೆತ್ತಿದ್ದರು. ಈ ಚಿತ್ರಗಳನ್ನು ಬಂಡಿಯಲ್ಲಿ ಅವಕಾಶವಿದ್ದ ಭಾಗಗಳಲ್ಲೆಲ್ಲಾ ಕೆತ್ತಿದ್ದರು. ಬಂಡಿಯ ಸುತ್ತಲಿನ ಚೌಕಟ್ಟಿನ ಮೇಲೆ ಹೂಗಳನ್ನು ಕೆತ್ತಿದ್ದರು.
37. ಹೀರಾಮನು ಹತ್ತು ಬಂಡಿಗಳನ್ನು ಮಾಡಿದನು. ಅವುಗಳೆಲ್ಲ ಒಂದೇ ತೆರನಾಗಿದ್ದವು. ಪ್ರತಿಯೊಂದನ್ನು ಹಿತ್ತಾಳೆಯಿಂದ ಮಾಡಿದ್ದನು. ಹಿತ್ತಾಳೆಯನ್ನು ಕರಗಿಸಿ, ಅಚ್ಚಿನಲ್ಲಿ ಎರಕ ಹೊಯ್ದಿದ್ದನು. ಆದ್ದರಿಂದ ಬಂಡಿಗಳ ಗಾತ್ರ ಮತ್ತು ಆಕಾರವು ಒಂದೇ ಆಗಿತ್ತು. [PE][PS]
38. ಹೀರಾಮನು ಹತ್ತು ಗಂಗಾಳಗಳನ್ನು ಮಾಡಿದನು. ಹತ್ತು ಬಂಡಿಗಳಲ್ಲಿ ಒಂದೊಂದು ಬಂಡಿಗೆ ಒಂದೊಂದು ಗಂಗಾಳವಿತ್ತು. ಪ್ರತಿಯೊಂದು ಗಂಗಾಳದ ಅಗಲವು ಆರು ಅಡಿಗಳು. ಪ್ರತಿ ಗಂಗಾಳವು ಇನ್ನೂರ ಮೂವತ್ತು ಗ್ಯಾಲನ್ ನೀರನ್ನು ಹಿಡಿಯುತ್ತಿತ್ತು.
39. ಹೀರಾಮನು ದೇವಾಲಯದ ದಕ್ಷಿಣದ ಕಡೆಗೆ ಐದು ಬಂಡಿಗಳನ್ನು ಮತ್ತು ಇತರ ಐದು ಬಂಡಿಗಳನ್ನು ಉತ್ತರದ ಕಡೆಗೆ ಇಟ್ಟನು. ಅವನು ಆ ದೊಡ್ಡ ಜಲಾಶಯವನ್ನು ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಇಟ್ಟನು.
40. ಹೀರಾಮನು ಗುಂಬಗಳನ್ನು, ಚಿಕ್ಕ ಸಲಿಕೆಗಳನ್ನು ಮತ್ತು ಚಿಕ್ಕ ಗಂಗಾಳಗಳನ್ನು ಮಾಡಿದನು. ರಾಜನಾದ ಸೊಲೊಮೋನನು ಅಪೇಕ್ಷಿಸಿದ್ದ ವಸ್ತುಗಳನ್ನೆಲ್ಲ ಹೀರಾಮನು ಮಾಡಿ ಮುಗಿಸಿದನು. ಯೆಹೋವನ ದೇವಾಲಯಕ್ಕಾಗಿ ಹೀರಾಮನು ಮಾಡಿದ ವಸ್ತುಗಳ ಪಟ್ಟಿ ಹೀಗಿದೆ:
41. ಎರಡು ಸ್ತಂಭಗಳು; ಈ ಸ್ತಂಭಗಳ ಮೇಲೆ ಮಡಕೆಯ ಆಕಾರದ ಎರಡು ಬೋದಿಗೆಗಳು; ಬೋದಿಗೆಯ ಸುತ್ತಲೂ ಹಬ್ಬಿದಂತಿರುವ ಎರಡು ಜಾಲರಿಗಳು;
42. ಎರಡು ಜಾಲರಿಗಳನ್ನೂ ನಾನೂರು ದಾಳಿಂಬೆ ಹಣ್ಣುಗಳೂ ಅಂದರೆ ಕಂಬಗಳ ಮೇಲಿರುವ ಎರಡು ಪಾತ್ರೆಗಳನ್ನು ಮುಚ್ಚುವಂತೆ ಪ್ರತಿಯೊಂದು ಜಾಲರಿಗೂ ಎರಡೆರಡು ಸಾಲು ದಾಳಿಂಬೆ ಹಣ್ಣುಗಳು;
43. ಒಂದೊಂದು ಗಂಗಾಳವನ್ನು ಒಳಗೊಂಡ ಹತ್ತು ಬಂಡಿಗಳು;
44. ಹನ್ನೆರಡು ಹೋರಿಗಳು ಹೊತ್ತುಕೊಂಡಿರುವ ಒಂದು ಜಲಾಶಯ.
45. ಗುಂಬಗಳು, ಚಿಕ್ಕಸಲಿಕೆಗಳು, ಚಿಕ್ಕಗಂಗಾಳಗಳು ಮತ್ತು ಯೆಹೋವನ ಆಲಯಕ್ಕೆ ಅಗತ್ಯವಾದ ಎಲ್ಲಾ ಪಾತ್ರೆಗಳು. [PS] ರಾಜನಾದ ಸೊಲೊಮೋನನು ಅಪೇಕ್ಷಿಸಿದ ವಸ್ತುಗಳನ್ನೆಲ್ಲಾ ಹೀರಾಮನು ಮಾಡಿದನು. ಈ ವಸ್ತುಗಳನ್ನೆಲ್ಲಾ ನಯಗೊಳಿಸಿದ ಹಿತ್ತಾಳೆಯಿಂದ ಮಾಡಿದನು.
46. (46-47) ಈ ವಸ್ತುಗಳನ್ನು ಮಾಡಲು ಉಪಯೋಗಿಸಿದ ಹಿತ್ತಾಳೆಯನ್ನು ಸೊಲೊಮೋನನು ತೂಕಹಾಕಲೇ ಇಲ್ಲ. ಯಾಕೆಂದರೆ ತೂಕ ಮಾಡಲಾಗದಷ್ಟು ವಸ್ತುಗಳು ಅಲ್ಲಿದ್ದವು. ಆದ್ದರಿಂದ ಹಿತ್ತಾಳೆಯ ಒಟ್ಟು ತೂಕವು ತಿಳಿಯಲೇ ಇಲ್ಲ. ಈ ವಸ್ತುಗಳನ್ನು ಸುಕ್ಕೋತ್ ಮತ್ತು ಚಾರೇತಾನ್‌ಗಳ ನಡುವೆ ಜೋರ್ಡನ್ ನದಿಯ ಹತ್ತಿರ ತಯಾರಿಸಲು ರಾಜನು ಆಜ್ಞಾಪಿಸಿದನು. ಅವರು ಹಿತ್ತಾಳೆಯನ್ನು ಕರಗಿಸಿ, ಅದನ್ನು ಮಣ್ಣಿನ ನೆಲದ ಅಚ್ಚುಗಳಲ್ಲಿ ಸುರಿದು ಈ ವಸ್ತುಗಳನ್ನು ಮಾಡಿದರು. [PE][PS]
47.
48. (48-50) ದೇವಾಲಯಕ್ಕಾಗಿ ಅನೇಕ ವಸ್ತುಗಳನ್ನು ಬಂಗಾರದಿಂದ ಮಾಡಲು ಸೊಲೊಮೋನನು ಆಜ್ಞಾಪಿಸಿದನು. ದೇವಾಲಯಕ್ಕಾಗಿ ಸೊಲೊಮೋನನು ಬಂಗಾರದಿಂದ ಮಾಡಿಸಿದ ವಸ್ತುಗಳು ಹೀಗಿವೆ: ಬಂಗಾರದ ಯಜ್ಞವೇದಿಕೆ; ಬಂಗಾರದ ಮೇಜು (ದೇವರಿಗೆ ವಿಶೇಷ ರೊಟ್ಟಿಯನ್ನು ಈ ಮೇಜಿನ ಮೇಲೆ ಅರ್ಪಿಸುತ್ತಾರೆ); ಅಪ್ಪಟ ಬಂಗಾರದ ದೀಪಸ್ತಂಭಗಳು (ಮಹಾ ಪವಿತ್ರಸ್ಥಳದ ಎದುರಿನಲ್ಲಿ ದಕ್ಷಿಣದ ಕಡೆಗೆ ಐದು ಮತ್ತು ಉತ್ತರದ ಕಡೆಗೆ ಐದು.) ಬಂಗಾರದ ಹೂಗಳು, ಹಣತೆಗಳು ಮತ್ತು ಇಕ್ಕುಳಗಳು; ಅಪ್ಪಟ ಬಂಗಾರದ ಬಟ್ಟಲುಗಳು; ದೀಪಗಳನ್ನು ಪ್ರಕಾಶಮಾನವಾಗಿ ಮಾಡಲು ಉಪಯೋಗಿಸುವ ಉಪಕರಣಗಳು; ಚಿಕ್ಕ ಗಂಗಾಳಗಳು; ಚಪ್ಪಟೆಯಾದ ಲೋಹದಿಂದ ಮಾಡಿದ ಪಾತ್ರೆಗಳು; ಬೂದಿಯನ್ನು ತೆಗೆದುಕೊಂಡು ಹೋಗಲು ಶುದ್ಧಬಂಗಾರದ ಪಾತ್ರೆಗಳು; ದೇವಾಲಯದ ಪ್ರವೇಶದ್ವಾರದ ಬಾಗಿಲುಗಳು. [PS]
49.
50.
51. ಯೆಹೋವನ ದೇವಾಲಯಕ್ಕಾಗಿ ರಾಜನಾದ ಸೊಲೊಮೋನನು ಮಾಡಬೇಕೆಂದಿದ್ದ ಕಾರ್ಯವನ್ನು ಮುಗಿಸಿದನು. ಈ ವಿಶೇಷ ಕಾರ್ಯಕ್ಕಾಗಿ ತನ್ನ ತಂದೆಯಾದ ದಾವೀದನು ಮೀಸಲಾಗಿಟ್ಟಿದ್ದ ವಸ್ತುಗಳನ್ನೆಲ್ಲ ರಾಜನಾದ ಸೊಲೊಮೋನನು ಪಡೆದುಕೊಂಡು ದೇವಾಲಯದೊಳಕ್ಕೆ ತಂದನು. ಅವನು ಬೆಳ್ಳಿಬಂಗಾರಗಳನ್ನು ಯೆಹೋವನ ದೇವಾಲಯದ ಭಂಡಾರಕ್ಕೆ ಸೇರಿಸಿದನು. [PE]

ಟಿಪ್ಪಣಿಗಳು

No Verse Added

ಒಟ್ಟು 22 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 7 / 22
1 ಅರಸುಗಳು 7:38
ಸೊಲೊಮೋನನ ಅರಮನೆ 1 ಸೊಲೊಮೋನನು ತನಗಾಗಿ ಒಂದು ಅರಮನೆಯನ್ನು ನಿರ್ಮಿಸಿದನು. ಸೊಲೊಮೋನನ ಅರಮನೆಯನ್ನು ನಿರ್ಮಿಸಲು ಹದಿಮೂರು ವರ್ಷ ಹಿಡಿಯಿತು. 2 ಅವನು “ಲೆಬನೋನಿನ ಅರಣ್ಯದ ಮನೆ” ಎಂಬ ಕಟ್ಟಡವನ್ನೂ ಕಟ್ಟಿಸಿದನು. ಅದರ ಉದ್ದ ನೂರೈವತ್ತು ಅಡಿಗಳು; ಅಗಲ ಎಪ್ಪತ್ತೈದು ಅಡಿಗಳು; ಎತ್ತರ ನಲವತ್ತೈದು ಅಡಿಗಳು. ಅದರಲ್ಲಿ ನಾಲ್ಕು ಸಾಲಿನ ದೇವದಾರು ಮರದ ಕಂಬಗಳಿದ್ದವು ಆ ಕಂಬಗಳ ಮೇಲೆ ದೇವದಾರು ಮರದ ಬೋದಿಗೆಗಳಿದ್ದವು. 3 ಈ ಸಾಲು ಕಂಬಗಳ ಮೇಲೆ ದೇವದಾರು ಮರದ ತೊಲೆಗಳನ್ನು ಜೋಡಿಸಿದ್ದರು. ಈ ತೊಲೆಗಳ ಮೇಲ್ಭಾಗದ ಮಾಳಿಗೆಗೆ ದೇವದಾರು ಮರದ ಹಲಗೆಗಳನ್ನು ಹಾಸಿದ್ದರು. ಈ ಕಂಬಗಳ ಪ್ರತಿಯೊಂದು ಸಾಲಿನಲ್ಲೂ ಹದಿನೈದು ತೊಲೆಗಳಿದ್ದವು. ಅಲ್ಲಿ ಒಟ್ಟು ನಲವತ್ತೈದು ತೊಲೆಗಳಿದ್ದವು. 4 ಗೋಡೆಯ ಪ್ರತಿಯೊಂದು ಕಡೆಯಲ್ಲಿ ಮೂರು ಸಾಲು ಕಿಟಕಿಗಳಿದ್ದವು. ಈ ಕಿಟಕಿಗಳು ಎದುರು ಬದುರಾಗಿದ್ದವು. 5 ಗೋಡೆಯ ಪ್ರತಿಯೊಂದು ಕೊನೆಯಲ್ಲೂ ಮೂರು ಬಾಗಿಲುಗಳಿದ್ದವು. ಎಲ್ಲ ಬಾಗಿಲುಗಳ ಚೌಕಟ್ಟುಗಳೂ ಚತುಷ್ಕೋಣಾಕಾರವಾಗಿದ್ದವು. 6 ಸೊಲೊಮೋನನು, “ಕಂಬಮಂಟಪ”ವನ್ನು ಸಹ ಕಟ್ಟಿಸಿದನು. ಅದರ ಉದ್ದ ಎಪ್ಪತೈದು ಅಡಿ ಮತ್ತು ಅಗಲ ನಲವತೈದು ಅಡಿ. ಅದರ ಮುಂಭಾಗದಲ್ಲೂ ಕಂಬಗಳಿಂದ ಕೂಡಿದ ಪಡಸಾಲೆಯಿತ್ತು. 7 ಸೊಲೊಮೋನನು ಜನರಿಗೆ ತೀರ್ಪುನೀಡಲು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಇದನ್ನು, “ನ್ಯಾಯಮಂದಿರ” ಎಂದೂ ಕರೆದನು. ಈ ಕೋಣೆಗೆ ನೆಲದಿಂದ ಮಾಳಿಗೆಯವರೆಗೆ ದೇವದಾರು ಮರದ ಹಲಗೆಗಳನ್ನು ಹೊದಿಸಲಾಗಿತ್ತು. 8 ಸೊಲೊಮೋನನು ವಾಸಿಸುತ್ತಿದ್ದ ಮನೆಯು “ನ್ಯಾಯಮಂದಿರ”ದ ಒಳಗಿನ ಪ್ರಾಕಾರದಲ್ಲಿತ್ತು. ಈ ಮನೆಯನ್ನು “ನ್ಯಾಯಮಂದಿರ”ದಂತೆಯೇ ಕಟ್ಟಿಸಿದನು. ಇದಲ್ಲದೆ ಅವನು ಈಜಿಪ್ಟಿನ ಫರೋಹನ ಮಗಳಾದ ತನ್ನ ಹೆಂಡತಿಗೂ ಇದೇ ರೀತಿಯ ಮನೆಯನ್ನು ಕಟ್ಟಿಸಿದನು. 9 ಈ ಎಲ್ಲಾ ಕಟ್ಟಡಗಳನ್ನು ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿಸಿದನು. ಈ ಕಲ್ಲುಗಳನ್ನು ಸರಿಯಾದ ಅಳತೆಗೆ ಗರಗಸದಿಂದ ಕತ್ತರಿಸಿದನು. ಅವುಗಳನ್ನು ಮುಂದುಗಡೆ ಮತ್ತು ಹಿಂದುಗಡೆ ಸಮನಾಗಿ ಕತ್ತರಿಸಿದ್ದನು. ಶ್ರೇಷ್ಠವಾದ ಈ ಕಲ್ಲುಗಳು ಅಡಿಪಾಯದಿಂದ ಗೋಡೆಯ ತುದಿಯವರೆಗೆ ಇದ್ದವು. ಅಂಗಳದ ಸುತ್ತಲೂ ಇದ್ದ ಗೋಡೆಯನ್ನು ಸಹ ಶ್ರೇಷ್ಠವಾದ ಕತ್ತರಿಸಿದ ಕಲ್ಲುಗಳಿಂದ ಕಟ್ಟಲಾಗಿತ್ತು. 10 ಅಡಿಪಾಯವನ್ನು ಅಗಲವಾದ ಮತ್ತು ಬೆಲೆಬಾಳುವ ಕಲ್ಲುಗಳಿಂದ ಹಾಕಿದರು. ಕೆಲವು ಕಲ್ಲುಗಳು ಹದಿನೈದು ಅಡಿ ಉದ್ದವಾಗಿದ್ದರೆ, ಉಳಿದವು ಹನ್ನೆರಡು ಅಡಿ ಉದ್ದವಾಗಿದ್ದವು. 11 ಈ ಕಲ್ಲುಗಳ ಮೇಲಿನ ತುದಿಯಲ್ಲಿ ಇತರ ಶ್ರೇಷ್ಠವಾದ ಕಲ್ಲುಗಳು ಮತ್ತು ದೇವದಾರು ಮರದ ತೊಲೆಗಳಿದ್ದವು. 12 ಅರಮನೆಯ ಅಂಗಳದ, ದೇವಾಲಯದ ಅಂಗಳದ ಮತ್ತು ದೇವಾಲಯದ ಮಂಟಪದ ಸುತ್ತಲೂ ಗೋಡೆಗಳಿದ್ದವು. ಈ ಗೋಡೆಗಳನ್ನು ಮೂರು ಸಾಲು ಕಲ್ಲುಗಳಿಂದ ಮತ್ತು ಒಂದು ಸಾಲು ದೇವದಾರು ಮರಗಳಿಂದ ಕಟ್ಟಿಸಿದ್ದನು. 13 ರಾಜನಾದ ಸೊಲೊಮೋನನು ತೂರಿನಲ್ಲಿದ್ದ ಹೀರಾಮ್ ಎಂಬವನಿಗೆ ಸಂದೇಶವನ್ನು ಕಳುಹಿಸಿ ಅವನನ್ನು ಜೆರುಸಲೇಮಿಗೆ ಕರೆಸಿದನು. 14 ಹೀರಾಮನ ತಾಯಿಯು ನಫ್ತಾಲಿ ಕುಲದವಳಾಗಿದ್ದಳು ಮತ್ತು ಇಸ್ರೇಲಿನವಳಾಗಿದ್ದಳು. ಅವನ ದಿವಂಗತ ತಂದೆಯು ತೂರಿನವನಾಗಿದ್ದನು. ಹೀರಾಮನು ಹಿತ್ತಾಳೆಯಿಂದ ವಸ್ತುಗಳನ್ನು ತಯಾರಿಸುತ್ತಿದ್ದನು. ಅವನು ಕುಶಲಕರ್ಮಿಯೂ ಅನುಭವಿಯೂ ಆದ ಕೆಲಸಗಾರನಾಗಿದ್ದನು. ರಾಜನಾದ ಸೊಲೊಮೋನನು ಹೀರಾಮನಿಗೆ ಬರಲು ಹೇಳಿದಾಗ, ಅವನು ಒಪ್ಪಿಕೊಂಡನು. ರಾಜನಾದ ಸೊಲೊಮೋನನು ಎಲ್ಲಾ ಹಿತ್ತಾಳೆಯ ಕಾರ್ಯಗಳಿಗೆ ಹೀರಾಮನನ್ನು ಮೇಲ್ವಿಚಾರಕನನ್ನಾಗಿ ನೇಮಿಸಿದನು. ಹೀರಾಮನು ಹಿತ್ತಾಳೆಯ ವಸ್ತುಗಳನ್ನು ನಿರ್ಮಿಸಿದನು. 15 ಹೀರಾಮನು ಎರಡು ಹಿತ್ತಾಳೆಯ ಕಂಬಗಳನ್ನು ನಿರ್ಮಿಸಿದನು, ಪ್ರತಿಯೊಂದು ಕಂಬದ ಎತ್ತರ ಇಪ್ಪತ್ತೇಳು ಅಡಿ; ಸುತ್ತಳತೆ ಹದಿನೆಂಟು ಅಡಿ. ಈ ಕಂಬಗಳು ಟೊಳ್ಳಾಗಿದ್ದವು; ಲೋಹವು ಮೂರು ಇಂಚು ದಪ್ಪವಾಗಿತ್ತು. 16 ಹೀರಾಮನು ಏಳೂವರೆ ಅಡಿ ಉದ್ದದ ಎರಡು ಹಿತ್ತಾಳೆಯ ಬೋದಿಗೆಗಳನ್ನು ಮಾಡಿದನು. ಹೀರಾಮನು ಈ ಬೋದಿಗೆಗಳನ್ನು ಕಂಬಗಳ ಮೇಲಿಟ್ಟನು. 17 ನಂತರ ಅವನು ಕಂಬಗಳ ಮೇಲಿನ ಈ ಬೋದಿಗೆಗಳಿಗೆ ಸರಪಣಿಯ ಎರಡು ಜಾಲರಿಗಳನ್ನು ಮಾಡಿದನು. 18 ಇದಲ್ಲದೆ ಅವನು ತಾಮ್ರದ ದಾಳಿಂಬೆ ಹಣ್ಣುಗಳನ್ನು ಮಾಡಿ ಅವುಗಳನ್ನು ಮಾಡಿದನು. ಈ ದಾಳಿಂಬೆಯ ಅಲಂಕರಣಗಳನ್ನು ಕಂಬಗಳ ಮೇಲಿನ ಬೋದಿಗೆ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು. 19 ಕಂಬಗಳ ಮೇಲಿದ್ದ ಏಳುವರೆ ಅಡಿ ಎತ್ತರದ ಈ ಬೋದಿಗೆಗಳು ಹೂಗಳಂತೆ ಕಾಣುತ್ತಿದ್ದವು. 20 ಈ ಬೋದಿಗೆಗಳು ಕಂಬಗಳ ಮೇಲಿನ ತುದಿಯಲ್ಲಿದ್ದವು. ಅವು ವೃತ್ತಾಕಾರದ ಜಾಲರಿಯ ಮೇಲಿದ್ದವು. ಆ ಸ್ಥಳದಲ್ಲಿ ಬೋದಿಗೆಯ ಸುತ್ತಲೂ ಇನ್ನೂರು ದಾಳಿಂಬೆ ಹಣ್ಣುಗಳ ಸಾಲುಗಳಿದ್ದವು. 21 ಹೀರಾಮನು ಈ ಹಿತ್ತಾಳೆಯ ಕಂಬಗಳನ್ನು ದೇವಾಲಯದ ಮಂಟಪದಲ್ಲಿ ಇಟ್ಟನು. ಒಂದು ಸ್ತಂಭವನ್ನು ಪ್ರವೇಶದ್ವಾರದ ದಕ್ಷಿಣದಿಕ್ಕಿನ ಕಡೆಯಲ್ಲೂ ಮತ್ತೊಂದನ್ನು ಉತ್ತರದಿಕ್ಕಿನ ಕಡೆಯಲ್ಲೂ ಇಟ್ಟನು. ದಕ್ಷಿಣದ ಸ್ತಂಭಕ್ಕೆ ಯಾಕೀನ್ ಎಂದು ಹೆಸರಿಟ್ಟನು. ಉತ್ತರದ ಸ್ತಂಭಕ್ಕೆ ಬೋವಜ್ ಎಂದು ಹೆಸರಿಟ್ಟನು. 22 ಅವರು ಹೂ ಆಕಾರದ ಬೋದಿಗೆಗಳನ್ನು ಸ್ತಂಭಗಳ ಮೇಲಿನ ತುದಿಯಲ್ಲಿಟ್ಟರು. ಆ ಎರಡು ಸ್ತಂಭಗಳ ಕೆಲಸವು ಮುಗಿಯಿತು. 23 ನಂತರ ಹೀರಾಮನು ವೃತ್ತಾಕಾರದ ಹಿತ್ತಾಳೆಯ ತೊಟ್ಟಿಯನ್ನು ಮಾಡಿದನು. ಅವರು ಈ ತೊಟ್ಟಿಯನ್ನು “ಸಮುದ್ರ”ವೆಂದು ಕರೆದರು. ಆ ತೊಟ್ಟಿಯ ಸುತ್ತಳತೆಯು ನಲವತ್ತೈದು ಅಡಿಗಳು. ಅದರ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ ಹದಿನೈದು ಅಡಿಗಳು ಮತ್ತು ಆಳ ಏಳುವರೆ ಅಡಿಗಳು. 24 ಆ ತೊಟ್ಟಿಯ ಹೊರಅಂಚಿನ ಸುತ್ತಲೂ ಒಂದು ಕಂಠವಿತ್ತು. ಈ ಕಂಠದ ಕೆಳಗಡೆಯಲ್ಲಿ ತೊಟ್ಟಿಯನ್ನು ಸುತ್ತುವರಿದಂತೆ ಎರಡು ಸಾಲು ಹಿತ್ತಾಳೆಯ ಬಳ್ಳಿಗಳಿದ್ದವು. ಈ ಹಿತ್ತಾಳೆಯ ಬಳ್ಳಿಗಳನ್ನು ತೊಟ್ಟಿಯ ಮೇಲ್ಭಾಗದಲ್ಲಿ ಎರಕಹೊಯ್ದಿದ್ದನು. 25 ಈ ತೊಟ್ಟಿಯು ಹನ್ನೆರಡು ಹಿತ್ತಾಳೆಯ ಹೋರಿಗಳ ಬೆನ್ನಿನ ಮೇಲಿತ್ತು. ಈ ಹನ್ನೆರಡು ಹೋರಿಗಳೂ ತೊಟ್ಟಿಗೆ ದೂರವಾಗಿದ್ದ ಹೊರಭಾಗವನ್ನು ನೋಡುತ್ತಿರುವಂತೆ ಕಾಣುತ್ತಿದ್ದವು. ಮೂರು ಉತ್ತರದ ಕಡೆಗೂ ಮೂರು ಪೂರ್ವದ ಕಡೆಗೂ ಮೂರು ದಕ್ಷಿಣದ ಕಡೆಗೂ ಮೂರು ಪಶ್ಚಿಮದ ಕಡೆಗೂ ನೋಡುತ್ತಿದ್ದವು. 26 ಈ ತೊಟ್ಟಿಯ ಪಾರ್ಶ್ವಗಳು ಮೂರು ಇಂಚು ದಪ್ಪವಾಗಿತ್ತು. ಈ ತೊಟ್ಟಿಯ ಕಂಠವು ಲೋಟದ ಕಂಠದಂತೆ ಅಥವಾ ಹೂಗಳ ದಳದಂತೆ ಇತ್ತು. ಈ ತೊಟ್ಟಿಯಲ್ಲಿ ಹನ್ನೊಂದು ಸಾವಿರ ಗ್ಯಾಲನ್ ನೀರನ್ನು ತುಂಬಬಹುದಾಗಿತ್ತು. 27 ಹೀರಾಮನು ಹತ್ತು ಬಂಡಿಗಳನ್ನು ಮಾಡಿದನು. ಪ್ರತಿಯೊಂದರ ಉದ್ದ ಆರು ಅಡಿಗಳು; ಅಗಲ ಆರು ಅಡಿಗಳು; ಮತ್ತು ಎತ್ತರ ನಾಲ್ಕುವರೆ ಅಡಿಗಳು. 28 ಈ ಬಂಡಿಗಳನ್ನು ಚೌಕಾಕಾರದ ಚೌಕಟ್ಟಿನ ಅಂಕಣದಿಂದ ಮಾಡಿದ್ದನು. 29 ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು. 30 ಪ್ರತಿಯೊಂದು ಬಂಡಿಗೂ ನಾಲ್ಕು ಹಿತ್ತಾಳೆಯ ಗಾಲಿಗಳು ಮತ್ತು ಅಚ್ಚುಗಳು ಇದ್ದವು. ಆ ದೊಡ್ಡ ಪಾತ್ರೆಯ ಮೂಲೆಗಳಲ್ಲಿ ಹಿತ್ತಾಳೆಯ ಆಧಾರ ಕಂಬಗಳಿದ್ದವು. ಈ ಕಂಬಗಳ ಹಿತ್ತಾಳೆಯ ಮೇಲ್ಭಾಗವು ಹೂವಿನಾಕಾರದಲ್ಲಿ ಕೆತ್ತಲಾಗಿತ್ತು. 31 ಈ ಪಾತ್ರೆಯ ಮೇಲೆ ಒಂದು ಚೌಕಟ್ಟಿತ್ತು. ಅದು ಪಾತ್ರೆಯ ಮೇಲೆ ಹದಿನೆಂಟು ಇಂಚು ಎತ್ತರವಾಗಿತ್ತು. ಆ ಪಾತ್ರೆಯ ಬಾಯಿಯು ಇಪ್ಪತ್ತೇಳು ಇಂಚು ವ್ಯಾಸದೊಂದಿಗೆ ವೃತ್ತಾಕಾರವಾಗಿತ್ತು. ಆ ಚೌಕಟ್ಟಿನ ಹಿತ್ತಾಳೆಯ ಮೇಲೆ ಚಿತ್ರ ವಿನ್ಯಾಸಗಳನ್ನು ಬಿಡಿಸಲಾಗಿತ್ತು. ಈ ಚೌಕಟ್ಟು ವೃತ್ತಾಕಾರವಾಗಿರದೆ ಚೌಕಾಕಾರವಾಗಿತ್ತು. 32 ಈ ಚೌಕಟ್ಟಿನ ಕೆಳಗಡೆ ನಾಲ್ಕು ಚಕ್ರಗಳಿದ್ದವು. ಈ ಚಕ್ರಗಳ ವ್ಯಾಸವು ಇಪ್ಪತ್ತೇಳು ಇಂಚುಗಳು. ಈ ಚಕ್ರಗಳ ಅಚ್ಚುಗಳನ್ನು ಬಂಡಿಯೊಂದಿಗೇ ಸೇರಿಸಿ ಅಖಂಡವಾಗಿ ನಿರ್ಮಿಸಿದ್ದರು. 33 ಈ ಚಕ್ರಗಳು ರಥದ ಮೇಲಿನ ಚಕ್ರಗಳಂತಿದ್ದುವು. ಈ ಚಕ್ರಗಳ ಮೇಲಿನ ಅಚ್ಚುಗಳನ್ನು, ಕಂಠಗಳನ್ನು, ಅರೆಯಕಾಲುಗಳನ್ನು ಮತ್ತು ಕಂಬಗಳನ್ನು ಹಿತ್ತಾಳೆಯಿಂದ ಮಾಡಿದ್ದರು. 34 ಪ್ರತಿ ಬಂಡಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಧಾರ ಕಂಬಗಳಿದ್ದವು. ಅವುಗಳನ್ನು ಬಂಡಿಯೊಂದಿಗೆ ಅಖಂಡವಾಗಿ ನಿರ್ಮಿಸಿದ್ದರು. 35 ಪ್ರತಿಯೊಂದು ಬಂಡಿಯ ಮೇಲ್ಗಡೆ ಸುತ್ತಲೂ ಒಂದು ಹಿತ್ತಾಳೆಯ ಪಟ್ಟಿಯಿತ್ತು. ಅದನ್ನು ಬಂಡಿಯೊಂದಿಗೆ ಅಖಂಡವಾಗಿ ಮಾಡಿದ್ದರು. 36 ಬಂಡಿಯ ಪಾರ್ಶ್ವಗಳ ಮೇಲೆ ಮತ್ತು ಚೌಕಟ್ಟುಗಳ ಮೇಲೆ ಕೆರೂಬಿಗಳ, ಸಿಂಹಗಳ, ಖರ್ಜೂರ ಗಿಡಗಳ ಚಿತ್ರಗಳನ್ನು ಹಿತ್ತಾಳೆಯಲ್ಲಿ ಕೆತ್ತಿದ್ದರು. ಈ ಚಿತ್ರಗಳನ್ನು ಬಂಡಿಯಲ್ಲಿ ಅವಕಾಶವಿದ್ದ ಭಾಗಗಳಲ್ಲೆಲ್ಲಾ ಕೆತ್ತಿದ್ದರು. ಬಂಡಿಯ ಸುತ್ತಲಿನ ಚೌಕಟ್ಟಿನ ಮೇಲೆ ಹೂಗಳನ್ನು ಕೆತ್ತಿದ್ದರು. 37 ಹೀರಾಮನು ಹತ್ತು ಬಂಡಿಗಳನ್ನು ಮಾಡಿದನು. ಅವುಗಳೆಲ್ಲ ಒಂದೇ ತೆರನಾಗಿದ್ದವು. ಪ್ರತಿಯೊಂದನ್ನು ಹಿತ್ತಾಳೆಯಿಂದ ಮಾಡಿದ್ದನು. ಹಿತ್ತಾಳೆಯನ್ನು ಕರಗಿಸಿ, ಅಚ್ಚಿನಲ್ಲಿ ಎರಕ ಹೊಯ್ದಿದ್ದನು. ಆದ್ದರಿಂದ ಬಂಡಿಗಳ ಗಾತ್ರ ಮತ್ತು ಆಕಾರವು ಒಂದೇ ಆಗಿತ್ತು. 38 ಹೀರಾಮನು ಹತ್ತು ಗಂಗಾಳಗಳನ್ನು ಮಾಡಿದನು. ಹತ್ತು ಬಂಡಿಗಳಲ್ಲಿ ಒಂದೊಂದು ಬಂಡಿಗೆ ಒಂದೊಂದು ಗಂಗಾಳವಿತ್ತು. ಪ್ರತಿಯೊಂದು ಗಂಗಾಳದ ಅಗಲವು ಆರು ಅಡಿಗಳು. ಪ್ರತಿ ಗಂಗಾಳವು ಇನ್ನೂರ ಮೂವತ್ತು ಗ್ಯಾಲನ್ ನೀರನ್ನು ಹಿಡಿಯುತ್ತಿತ್ತು. 39 ಹೀರಾಮನು ದೇವಾಲಯದ ದಕ್ಷಿಣದ ಕಡೆಗೆ ಐದು ಬಂಡಿಗಳನ್ನು ಮತ್ತು ಇತರ ಐದು ಬಂಡಿಗಳನ್ನು ಉತ್ತರದ ಕಡೆಗೆ ಇಟ್ಟನು. ಅವನು ಆ ದೊಡ್ಡ ಜಲಾಶಯವನ್ನು ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಇಟ್ಟನು. 40 ಹೀರಾಮನು ಗುಂಬಗಳನ್ನು, ಚಿಕ್ಕ ಸಲಿಕೆಗಳನ್ನು ಮತ್ತು ಚಿಕ್ಕ ಗಂಗಾಳಗಳನ್ನು ಮಾಡಿದನು. ರಾಜನಾದ ಸೊಲೊಮೋನನು ಅಪೇಕ್ಷಿಸಿದ್ದ ವಸ್ತುಗಳನ್ನೆಲ್ಲ ಹೀರಾಮನು ಮಾಡಿ ಮುಗಿಸಿದನು. ಯೆಹೋವನ ದೇವಾಲಯಕ್ಕಾಗಿ ಹೀರಾಮನು ಮಾಡಿದ ವಸ್ತುಗಳ ಪಟ್ಟಿ ಹೀಗಿದೆ: 41 ಎರಡು ಸ್ತಂಭಗಳು; ಈ ಸ್ತಂಭಗಳ ಮೇಲೆ ಮಡಕೆಯ ಆಕಾರದ ಎರಡು ಬೋದಿಗೆಗಳು; ಬೋದಿಗೆಯ ಸುತ್ತಲೂ ಹಬ್ಬಿದಂತಿರುವ ಎರಡು ಜಾಲರಿಗಳು; 42 ಎರಡು ಜಾಲರಿಗಳನ್ನೂ ನಾನೂರು ದಾಳಿಂಬೆ ಹಣ್ಣುಗಳೂ ಅಂದರೆ ಕಂಬಗಳ ಮೇಲಿರುವ ಎರಡು ಪಾತ್ರೆಗಳನ್ನು ಮುಚ್ಚುವಂತೆ ಪ್ರತಿಯೊಂದು ಜಾಲರಿಗೂ ಎರಡೆರಡು ಸಾಲು ದಾಳಿಂಬೆ ಹಣ್ಣುಗಳು; 43 ಒಂದೊಂದು ಗಂಗಾಳವನ್ನು ಒಳಗೊಂಡ ಹತ್ತು ಬಂಡಿಗಳು; 44 ಹನ್ನೆರಡು ಹೋರಿಗಳು ಹೊತ್ತುಕೊಂಡಿರುವ ಒಂದು ಜಲಾಶಯ. 45 ಗುಂಬಗಳು, ಚಿಕ್ಕಸಲಿಕೆಗಳು, ಚಿಕ್ಕಗಂಗಾಳಗಳು ಮತ್ತು ಯೆಹೋವನ ಆಲಯಕ್ಕೆ ಅಗತ್ಯವಾದ ಎಲ್ಲಾ ಪಾತ್ರೆಗಳು. ರಾಜನಾದ ಸೊಲೊಮೋನನು ಅಪೇಕ್ಷಿಸಿದ ವಸ್ತುಗಳನ್ನೆಲ್ಲಾ ಹೀರಾಮನು ಮಾಡಿದನು. ಈ ವಸ್ತುಗಳನ್ನೆಲ್ಲಾ ನಯಗೊಳಿಸಿದ ಹಿತ್ತಾಳೆಯಿಂದ ಮಾಡಿದನು. 46 (46-47) ಈ ವಸ್ತುಗಳನ್ನು ಮಾಡಲು ಉಪಯೋಗಿಸಿದ ಹಿತ್ತಾಳೆಯನ್ನು ಸೊಲೊಮೋನನು ತೂಕಹಾಕಲೇ ಇಲ್ಲ. ಯಾಕೆಂದರೆ ತೂಕ ಮಾಡಲಾಗದಷ್ಟು ವಸ್ತುಗಳು ಅಲ್ಲಿದ್ದವು. ಆದ್ದರಿಂದ ಹಿತ್ತಾಳೆಯ ಒಟ್ಟು ತೂಕವು ತಿಳಿಯಲೇ ಇಲ್ಲ. ಈ ವಸ್ತುಗಳನ್ನು ಸುಕ್ಕೋತ್ ಮತ್ತು ಚಾರೇತಾನ್‌ಗಳ ನಡುವೆ ಜೋರ್ಡನ್ ನದಿಯ ಹತ್ತಿರ ತಯಾರಿಸಲು ರಾಜನು ಆಜ್ಞಾಪಿಸಿದನು. ಅವರು ಹಿತ್ತಾಳೆಯನ್ನು ಕರಗಿಸಿ, ಅದನ್ನು ಮಣ್ಣಿನ ನೆಲದ ಅಚ್ಚುಗಳಲ್ಲಿ ಸುರಿದು ಈ ವಸ್ತುಗಳನ್ನು ಮಾಡಿದರು. 47 48 (48-50) ದೇವಾಲಯಕ್ಕಾಗಿ ಅನೇಕ ವಸ್ತುಗಳನ್ನು ಬಂಗಾರದಿಂದ ಮಾಡಲು ಸೊಲೊಮೋನನು ಆಜ್ಞಾಪಿಸಿದನು. ದೇವಾಲಯಕ್ಕಾಗಿ ಸೊಲೊಮೋನನು ಬಂಗಾರದಿಂದ ಮಾಡಿಸಿದ ವಸ್ತುಗಳು ಹೀಗಿವೆ: ಬಂಗಾರದ ಯಜ್ಞವೇದಿಕೆ; ಬಂಗಾರದ ಮೇಜು (ದೇವರಿಗೆ ವಿಶೇಷ ರೊಟ್ಟಿಯನ್ನು ಈ ಮೇಜಿನ ಮೇಲೆ ಅರ್ಪಿಸುತ್ತಾರೆ); ಅಪ್ಪಟ ಬಂಗಾರದ ದೀಪಸ್ತಂಭಗಳು (ಮಹಾ ಪವಿತ್ರಸ್ಥಳದ ಎದುರಿನಲ್ಲಿ ದಕ್ಷಿಣದ ಕಡೆಗೆ ಐದು ಮತ್ತು ಉತ್ತರದ ಕಡೆಗೆ ಐದು.) ಬಂಗಾರದ ಹೂಗಳು, ಹಣತೆಗಳು ಮತ್ತು ಇಕ್ಕುಳಗಳು; ಅಪ್ಪಟ ಬಂಗಾರದ ಬಟ್ಟಲುಗಳು; ದೀಪಗಳನ್ನು ಪ್ರಕಾಶಮಾನವಾಗಿ ಮಾಡಲು ಉಪಯೋಗಿಸುವ ಉಪಕರಣಗಳು; ಚಿಕ್ಕ ಗಂಗಾಳಗಳು; ಚಪ್ಪಟೆಯಾದ ಲೋಹದಿಂದ ಮಾಡಿದ ಪಾತ್ರೆಗಳು; ಬೂದಿಯನ್ನು ತೆಗೆದುಕೊಂಡು ಹೋಗಲು ಶುದ್ಧಬಂಗಾರದ ಪಾತ್ರೆಗಳು; ದೇವಾಲಯದ ಪ್ರವೇಶದ್ವಾರದ ಬಾಗಿಲುಗಳು. 49 50 51 ಯೆಹೋವನ ದೇವಾಲಯಕ್ಕಾಗಿ ರಾಜನಾದ ಸೊಲೊಮೋನನು ಮಾಡಬೇಕೆಂದಿದ್ದ ಕಾರ್ಯವನ್ನು ಮುಗಿಸಿದನು. ಈ ವಿಶೇಷ ಕಾರ್ಯಕ್ಕಾಗಿ ತನ್ನ ತಂದೆಯಾದ ದಾವೀದನು ಮೀಸಲಾಗಿಟ್ಟಿದ್ದ ವಸ್ತುಗಳನ್ನೆಲ್ಲ ರಾಜನಾದ ಸೊಲೊಮೋನನು ಪಡೆದುಕೊಂಡು ದೇವಾಲಯದೊಳಕ್ಕೆ ತಂದನು. ಅವನು ಬೆಳ್ಳಿಬಂಗಾರಗಳನ್ನು ಯೆಹೋವನ ದೇವಾಲಯದ ಭಂಡಾರಕ್ಕೆ ಸೇರಿಸಿದನು.
ಒಟ್ಟು 22 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 7 / 22
Common Bible Languages
West Indian Languages
×

Alert

×

kannada Letters Keypad References