1. {ಇಸ್ರೇಲನ ಗಂಡುಮಕ್ಕಳು} [PS] ಇಸ್ರೇಲನ ಗಂಡುಮಕ್ಕಳು ಯಾರೆಂದರೆ: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,
2. ದಾನ್, ಯೋಸೇಫ್, ಬೆನ್ಯಾಮಾನ್, ನಫ್ತಾಲಿ, ಗಾದ್ ಮತ್ತು ಅಶೇರ್.
3. {ಯೆಹೂದನ ಗಂಡುಮಕ್ಕಳು} [PS] ಯೆಹೂದನ ಗಂಡುಮಕ್ಕಳು ಯಾರೆಂದರೆ: ಏರ್, ಓನಾನ್ ಮತ್ತು ಶೆಲಾಹ. ಬತ್ಷೂವಳು ಇವರ ತಾಯಿ. ಈಕೆ ಕಾನಾನ್ಯಳು. ಯೆಹೂದನ ಚೊಚ್ಚಲ ಮಗ ಏರ್. ಯೆಹೋವನ ದೃಷ್ಟಿಯಲ್ಲಿ ಇವನು ಕೆಟ್ಟವನಾಗಿದ್ದ ಕಾರಣ ಕೊಲ್ಲಲ್ಪಟ್ಟನು.
4. ಯೆಹೂದನ ಸೊಸೆಯಾಗಿದ್ದ ತಾಮಾರಳು ಯೆಹೂದನಿಂದ ಪೆರೆಚ್ ಮತ್ತು ಜೆರಹ ಎಂಬ ಇಬ್ಬರು ಗಂಡುಮಕ್ಕಳನ್ನು ಹೆತ್ತಳು. ಹೀಗೆ ಯೆಹೂದನಿಗೆ ಐದು ಗಂಡುಮಕ್ಕಳಾದವು.
5. ಪೆರೆಚನ ಗಂಡುಮಕ್ಕಳು ಯಾರೆಂದರೆ: ಹೆಚ್ರೋನ್ ಮತ್ತು ಹಾಮೂಲ್.
6. ಜೆರಹನಿಗೆ ಐದು ಗಂಡುಮಕ್ಕಳು. ಅವರು ಯಾರೆಂದರೆ: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರ.
7. (ಕರ್ಮೀಯು ಜಿಮ್ರಿಯ ಮಗನು.) ಜಿಮ್ರಿಯು ಆಕಾನನ ಮಗನು. ಈ ಆಕಾನನು ಯುದ್ಧದಲ್ಲಿ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರೇಲರಿಗೆ ದೊಡ್ಡ ಆಪತ್ತನ್ನು ತಂದವನು.
8. ಅಜರ್ಯನು ಏತಾನನ ಮಗನು.
9. ಹೆಚ್ರೋನನ ಗಂಡುಮಕ್ಕಳು ಯಾರೆಂದರೆ: ಯೆರಹ್ಮೇಲ್, ರಾಮ್ ಮತ್ತು ಕಾಲೇಬ್.
10. {ರಾಮನ ಸಂತತಿಯವರು} [PS] ರಾಮನು ಅಮ್ಮೀನಾದ್ವಾನ ತಂದೆ. ಇವನು ನಹಶೋನನ ತಂದೆ. ನಹಶೋನನು ಯೆಹೂದ ಕುಲದ ನಾಯಕನಾಗಿದ್ದನು.
11. ನಹಶೋನನು ಸಲ್ಮೋನನ ತಂದೆ. ಸಲ್ಮೋನನು ಬೋವಜನ ತಂದೆ.
12. (12-13) ಬೋವಜನು ಓಬೇದನ ತಂದೆ. ಓಬೇದನು ಇಷಯನ ತಂದೆ. ಇಷಯನು ಎಲೀಯಾಬನ ತಂದೆ. ಎಲೀಯಾಬನು ಇಷಯನ ಚೊಚ್ಚಲಮಗನು; ಎರಡನೆಯವನು ಅಬೀನಾದ್ವಾ್; ಮೂರನೆಯವನು ಶಿಮ್ಮ;
13.
14. ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ
15. ಆರನೆಯವನು ಓಚೆಮ್, ಏಳನೆಯವನು ದಾವೀದ.
16. ಅವರ ತಂಗಿಯಂದಿರು ಯಾರೆಂದರೆ, ಚೆರೂಯ ಮತ್ತು ಅಬೀಗೈಲ್, ಚೆರೂಯಳ ಮೂರುಮಕ್ಕಳು ಯಾರೆಂದರೆ, ಅಬ್ಷೈ, ಯೋವಾಬ್ ಮತ್ತು ಅಸಾಹೇಲ್.
17. ಅಬೀಗೈಲಳು ಅಮಾಸನ ತಾಯಿ. ಅಮಾಸನ ತಂದೆ ಯೆತೆರ್, ಇವನು ಇಷ್ಮಾಯೇಲ್ಯನು.
18. {ಕಾಲೇಬನ ಸಂತತಿಯವರು} [PS] ಕಾಲೇಬನು ಹೆಚ್ರೋನನ ಮಗನು. ಅವನ ಹೆಂಡತಿಯಾದ ಅಜೂಬಳಲ್ಲಿ ಅವನಿಗೆ ಹುಟ್ಟಿದ ಗಂಡುಮಕ್ಕಳು ಯಾರೆಂದರೆ, ಯೇಷೆರ್, ಶೋಬಾಬ್ ಮತ್ತು ಅರ್ದೋನ್.
19. ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವರಿಗೆ ಹೂರ್ ಎಂಬ ಮಗನು ಹುಟ್ಟಿದನು.
20. ಹೂರನು ಊರಿಯನ ತಂದೆ. ಊರಿಯು ಬೆಚಲೇಲನ ತಂದೆ.
21. ಹೆಚ್ರೋನನು ಅರವತ್ತು ವರ್ಷ ಪ್ರಾಯದವನಾದಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಆಕೆಯಲ್ಲಿ ಹೆಚ್ರೋನನು ಸೆಗೂಬನನ್ನು ಪಡೆದಳು.
22. ಸೆಗೂಬನು ಯಾಯೀರನ ತಂದೆ. ಇವನಿಗೆ ಗಿಲ್ಯಾದ್ ಪ್ರಾಂತ್ಯದಲ್ಲಿ ಇಪ್ಪತ್ತಮೂರು ಪಟ್ಟಣಗಳಿದ್ದವು.
23. ಆದರೆ ಗೆಷೂರ್ ಮತ್ತು ಅರಾಮನು ಯಾಯೀರನ ಊರುಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಕೆನತ್ ಮತ್ತು ಅದರ ಸುತ್ತಮುತ್ತಲಿದ್ದ ಕೆಲವು ಹಳ್ಳಿಗಳು ಸೇರಿದ್ದವು. ಒಟ್ಟು ಅರವತ್ತು ಸಣ್ಣ ಪಟ್ಟಣಗಳಿದ್ದವು. ಇವೆಲ್ಲವೂ ಗಿಲ್ಯಾದನ ತಂದೆಯಾದ ಮಾಕೀರನಿಗೆ ಸೇರಿದವುಗಳಾಗಿದ್ದವು.
24. (ಹೆಚ್ರೋನನ ಹೆಂಡತಿ ಅಬೀಯ.) ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನು. ಅವನ ಮರಣದನಂತರ ಅಬೀಯಳು ಅವನಿಗೆ ಅಷ್ಹೂರ್ ಎಂಬ ಮಗನನ್ನು ಹೆತ್ತಳು. ಅಷ್ಹೂರನು ತೆಕೋವನ ತಂದೆ.
25. {ಯೆರಹ್ಮೇಲನ ಸಂತತಿಯವರು} [PS] ಹೆಚ್ರೋನನ ಚೊಚ್ಚಲಮಗನು ಯೆರಹ್ಮೇಲ. ಇವನ ಗಂಡುಮಕ್ಕಳು ಯಾರೆಂದರೆ: ರಾಮ್, ಬೂನ, ಓರೆನ್, ಓಚೆಮ್ ಮತ್ತು ಅಹೀಯ. ರಾಮನು ಯೆರಹ್ಮೇಲನ ಚೊಚ್ಚಲಮಗನು.
26. ಯೆರಹ್ಮೇಲನ ಎರಡನೆಯ ಹೆಂಡತಿಯಾಗಿದ್ದ ಅಟಾರಳಲ್ಲಿ ಓನಾಮ್ ಹುಟ್ಟಿದನು.
27. ಯೆರಹ್ಮೇಲನ ಚೊಚ್ಚಲಮಗನಾದ ರಾಮನಿಗೆ ಮಾಚ್, ಯಾಮೀನ್ ಮತ್ತು ಏಕೆರ್ ಎಂಬ ಮಕ್ಕಳಿದ್ದರು.
28. ಓನಾಮನ ಗಂಡುಮಕ್ಕಳು ಯಾರೆಂದರೆ: ಶಮ್ಮೈ ಮತ್ತು ಯಾದ. ಶಮ್ಮೈಯ ಮಕ್ಕಳು: ನಾದ್ವಾ್ ಮತ್ತು ಅಬೀಷೂರ್.
29. ಅಬೀಷೂರನ ಹೆಂಡತಿಯ ಹೆಸರು ಅಬೀಹೈಲ್. ಇವರಿಗೆ ಅಹ್ಬಾನ್ ಮತ್ತು ಮೋಲೀದ್ ಎಂಬ ಗಂಡುಮಕ್ಕಳು ಇದ್ದರು.
30. ನಾದ್ವಾನ ಮಕ್ಕಳು ಯಾರೆಂದರೆ: ಸೆಲೆದ್ ಮತ್ತು ಅಪ್ಪಯಿಮ್. ಸೆಲೆದನು ಮಕ್ಕಳಿಲ್ಲದೆ ಸತ್ತನು.
31. ಅಪ್ಪಯಿಮನ ಮಗ ಇಷ್ಷೀ; ಇಷ್ಷೀಯ ಮಗನು ಶೇಷಾನ್; ಶೇಷಾನನ ಮಗ ಅಹ್ಲೈ.
32. ಶಮ್ಮ್ಯೆಯ ತಮ್ಮನ ಹೆಸರು ಯಾದ. ಇವನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಯೆತೆರನು ಮಕ್ಕಳಿಲ್ಲದೆ ಸತ್ತನು.
33. ಯೋನಾತಾನನ ಗಂಡುಮಕ್ಕಳು: ಪೆಲೆತ್ ಮತ್ತು ಜಾಜ. ಇದು ಯೆರಹ್ಮೇಲನ ಮಕ್ಕಳ ಪಟ್ಟಿ.
34. ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ. ಹೆಣ್ಣುಮಕ್ಕಳೇ ಇದ್ದರು. ಇವನಿಗೆ ಈಜಿಪ್ಟಿನ ಯರ್ಹ ಎಂಬ ಸೇವಕನು ಇದ್ದನು.
35. ಶೇಷಾನ ತನ್ನ ಮಗಳನ್ನು ಯರ್ಹನಿಗೆ ಕೊಟ್ಟು ಮದುವೆ ಮಾಡಿಸಿದನು. ಇವರಿಗೆ ಅತ್ತ್ಯೆ ಎಂಬ ಮಗನು ಹುಟ್ಟಿದನು.
36. ಅತ್ತ್ಯೆ ನಾತಾನನ ತಂದೆ. ನಾತಾನನು ಜಾಬಾದನ ತಂದೆ.
37. ಜಾಬಾದನು ಎಫ್ಲಾಲನ ತಂದೆ. ಎಫ್ಲಾಲನು ಓಬೇದನ ತಂದೆ.
38. ಓಬೇದನು ಯೇಹೂವಿನ ತಂದೆ; ಯೇಹೂವು ಅಜರ್ಯನ ತಂದೆ.
39. ಅಜರ್ಯನು ಹೆಲೆಚನ ತಂದೆ; ಹೆಲೆಚನು ಎಲ್ಲಾಸನ ತಂದೆ.
40. ಎಲ್ಲಾಸನು ಸಿಸ್ಮೈನ ತಂದೆ; ಸಿಸ್ಮೈನು ಶಲ್ಲೂಮನ ತಂದೆ.
41. ಶಲ್ಲೂಮನು ಯೆಕಮ್ಯಾಹನ ತಂದೆ. ಯೆಕಮ್ಯಾಹನು ಎಲೀಷಾಮನ ತಂದೆ.
42. {ಕಾಲೇಬನ ಕುಟುಂಬ} [PS] ಕಾಲೇಬನು ಯೆರಹ್ಮೇಲನ ತಮ್ಮ. ಅವನಿಗೆ ಕೆಲವು ಗಂಡುಮಕ್ಕಳಿದ್ದರು. ಚೊಚ್ಚಲಮಗನು ಮೇಷ. ಮೇಷನು ಜೀಫ್ಯನ ತಂದೆ. ಮಾರೇಷನು ಸಹ ಕಾಲೇಬನ ಮಗ. ಮಾರೇಷನು ಹೆಬ್ರೋನನ ತಂದೆ.
43. ಹೆಬ್ರೋನನ ಗಂಡುಮಕ್ಕಳು ಯಾರೆಂದರೆ: ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ.
44. ಶೆಮನ ಮಗನು ರಹಮ್ಯ. ರಹಮ್ಯನು ಯೊರ್ಕೆಯಾಮ್ಯನ ತಂದೆ. ರೆಕೆಮನು ಶಮ್ಮೈಯನ ತಂದೆ.
45. ಶಮ್ಮೈಯನ ಮಗ ಮಾವೋನ್, ಇವನ ಮಗನು ಬೇತ್ಸೂರ್.
46. ಕಾಲೇಬನ ದಾಸಿಯ ಹೆಸರು ಏಫ. ಈಕೆಯು ಹಾರಾನ್, ಮೋಚ ಮತ್ತು ಗಾಜೇಜನ ತಾಯಿ.
47. ಯಾದೈಯಳ ಗಂಡುಮಕ್ಕಳು ಯಾರೆಂದರೆ: ರೆಗೆಮ್, ಯೋತಾವ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್.
48. ಮಾಕಳು ಕಾಲೇಬನ ಇನ್ನೊಬ್ಬ ದಾಸಿ. ಈಕೆ ಶೆಬೆರ್ ಮತ್ತು ತಿರ್ಹನ ಎಂಬವರ ತಾಯಿ.
49. ಈಕೆಯು ಶಾಫ್ ಮತ್ತು ಶೆವನ ತಾಯಿಯೂ ಆಗಿದ್ದಳು. ಶಾಫನ ಮಗ ಮದ್ಮನ್ನ. ಶೆವನು ಮಕ್‌ಬೇನ ಮತ್ತು ಗಿಬ್ಯನ ತಂದೆ. ಕಾಲೇಬನ ಮಗಳ ಹೆಸರು ಅಕ್ಸಾಹ.
50. ಇದು ಕಾಲೇಬನ ಸಂತತಿಯವರ ಪಟ್ಟಿ; ಕಾಲೇಬನ ಚೊಚ್ಚಲಮಗನು ಹೂರ. ಇವನು ಎಫ್ರಾತಳಿಗೆ ಹುಟ್ಟಿದವನು. ಹೂರನ ಗಂಡುಮಕ್ಕಳು ಯಾರೆಂದರೆ, ಕಿರ್ಯತ್ಯಾರೀಮ್ ಕಟ್ಟಿದವನಾದ ಶೋಬಾಲ್ ಮತ್ತು
51. ಬೆತ್ಲೆಹೇಮನ್ನು ಕಟ್ಟಿದವನಾದ ಸಲ್ಮ ಮತ್ತು ಬೇತ್ಗಾದೇರ್ ಕಟ್ಟಿದವನಾದ ಹಾರೇಫ್.
52. ಶೋಬಾಲನು ಕಿರ್ಯತ್ಯಾರೀಮನ್ನು ಕಟ್ಟಿದನು. ಇದು ಶೋಬಾಲನ ಸಂತತಿಯವರ ಪಟ್ಟಿ: ಹಾರೋಯೆ ಮತ್ತು ಮಾನಹತಿ ಊರಿನ ಅರ್ಧಜನರು;
53. ಮತ್ತು ಕಿರ್ಯತ್ಯಾರೀಮಿನ ಕುಟುಂಬದವರು. ಇವರು ಯೆತೆರಿಯರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು. ಇವರಿಂದ ಚೊರ್ರಾತ್ಯರು ಮತ್ತು ಎಷ್ಟಾವೋಲ್ಯರು ಬಂದರು.
54. ಸಲ್ಮನ ಸಂತತಿಯವರ ಪಟ್ಟಿ; ಬೆತ್ಲೆಹೇಮಿನ ನಿವಾಸಿಗಳು, ನೆಟೋಫಾ, ಅಟರೋತ್, ಬೇತ್ಯೋವಾಬ್, ಮಾನಹತಿಯ ಅರ್ಧಜನರು, ಚೊರ್ಗಯಿತರು,
55. ಶಾಸ್ತ್ರಿಗಳ ಸಂತಾನ ಯಾಬೇಚ್, ತಿರ್ರಾತ್ಯ, ಶಿಮ್ಗಾತ್ಯ ಮತ್ತು ಸೂಕಾತ್ಯ ಎಂಬ ಸ್ಥಳಗಳಲ್ಲಿ ವಾಸಿಸುವರು. ಇವರು ಹಮಾತಿನಿಂದ ಬಂದ ಕೇನ್ಯರು. ಬೆತ್‌ರೇಕಾಬನ್ನು ಹಮಾತನು ಸ್ಥಾಪಿಸಿದನು. [PE]