ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಆದಿಕಾಂಡ
1. ದೇವರು ಯಾಕೋಬನಿಗೆ--ಎದ್ದು ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು; ನೀನು ನಿನ್ನ ಸಹೋದರನಾದ ಏಸಾವನೆದುರಿನಿಂದ ಓಡಿ ಹೋಗುತ್ತಿದ್ದಾಗ ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟು ಅಂದನು.
2. ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;
3. ನಾವು ಎದ್ದು ಬೇತೇಲಿಗೆ ಹೋಗೋಣ; ಶ್ರಮೆಯ ದಿನದಲ್ಲಿ ನನ್ನನ್ನು ಆಲೈಸಿ ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಯಜ್ಞವೇದಿಯನ್ನು ಕಟ್ಟುವೆನು ಅಂದನು.
4. ಆಗ ಅವರು ತಮ್ಮ ಕೈಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವು ಗಳನ್ನೂ ತೆಗೆದು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮಿಗೆ ಸವಿಾಪವಾಗಿದ್ದ ಏಲಾಮರದ ಕೆಳಗೆ ಹೂಣಿಟ್ಟನು.
5. ತರುವಾಯ ಅವರು ಪ್ರಯಾಣ ವಾಗಿ ಹೊರಟರು. ಆಗ ದೇವರ ಭಯವು ಸುತ್ತಲಿರುವ ಪಟ್ಟಣಗಳವರ ಮೇಲೆ ಇದ್ದದರಿಂದ ಅವರು ಯಾಕೋ ಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.
6. ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್.
7. ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
8. ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಸತ್ತಳು. ಬೇತೇಲಿನ ಕೆಳಗಿದ್ದ ಅಲ್ಲೋನ್ ಮರದ ಬುಡದಲ್ಲಿ ಆಕೆಯನ್ನು ಹೂಣಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಾಯಿತು.
9. ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು.
10. ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.
11. ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
12. ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.
13. ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು.
14. ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.
15. ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು.
16. ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು.
17. ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.
18. (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
19. ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್.
20. ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
21. ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು.
22. ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
23. ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.
24. ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು.
25. ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು.
26. ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು.
27. ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಯಾದ ಇಸಾಕನ ಬಳಿಗೆ ಅಬ್ರಹಾಮನೂ ಇಸಾಕನೂ ಪ್ರವಾಸವಾಗಿದ್ದ ಹೆಬ್ರೋನ್ ಎಂಬ ಅರ್ಬದ ಪಟ್ಟಣಕ್ಕೆ ಬಂದನು.
28. ಆಗ ಇಸಾಕನ ದಿನಗಳು ನೂರ ಎಂಭತ್ತು ವರುಷಗಳಾಗಿದ್ದವು.
29. ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.

ಟಿಪ್ಪಣಿಗಳು

No Verse Added

ಒಟ್ಟು 50 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 35 / 50
ಆದಿಕಾಂಡ 35:26
1 ದೇವರು ಯಾಕೋಬನಿಗೆ--ಎದ್ದು ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು; ನೀನು ನಿನ್ನ ಸಹೋದರನಾದ ಏಸಾವನೆದುರಿನಿಂದ ಓಡಿ ಹೋಗುತ್ತಿದ್ದಾಗ ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟು ಅಂದನು. 2 ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ; 3 ನಾವು ಎದ್ದು ಬೇತೇಲಿಗೆ ಹೋಗೋಣ; ಶ್ರಮೆಯ ದಿನದಲ್ಲಿ ನನ್ನನ್ನು ಆಲೈಸಿ ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಯಜ್ಞವೇದಿಯನ್ನು ಕಟ್ಟುವೆನು ಅಂದನು. 4 ಆಗ ಅವರು ತಮ್ಮ ಕೈಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವು ಗಳನ್ನೂ ತೆಗೆದು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮಿಗೆ ಸವಿಾಪವಾಗಿದ್ದ ಏಲಾಮರದ ಕೆಳಗೆ ಹೂಣಿಟ್ಟನು. 5 ತರುವಾಯ ಅವರು ಪ್ರಯಾಣ ವಾಗಿ ಹೊರಟರು. ಆಗ ದೇವರ ಭಯವು ಸುತ್ತಲಿರುವ ಪಟ್ಟಣಗಳವರ ಮೇಲೆ ಇದ್ದದರಿಂದ ಅವರು ಯಾಕೋ ಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ. 6 ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್. 7 ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು. 8 ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಸತ್ತಳು. ಬೇತೇಲಿನ ಕೆಳಗಿದ್ದ ಅಲ್ಲೋನ್ ಮರದ ಬುಡದಲ್ಲಿ ಆಕೆಯನ್ನು ಹೂಣಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಾಯಿತು. 9 ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು. 10 ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು. 11 ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು. 12 ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು. 13 ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು. 14 ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು. 15 ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು. 16 ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು. 17 ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು. 18 (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು. 19 ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್. 20 ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ. 21 ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು. 22 ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು. 23 ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು. 24 ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು. 25 ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು. 26 ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು. 27 ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಯಾದ ಇಸಾಕನ ಬಳಿಗೆ ಅಬ್ರಹಾಮನೂ ಇಸಾಕನೂ ಪ್ರವಾಸವಾಗಿದ್ದ ಹೆಬ್ರೋನ್ ಎಂಬ ಅರ್ಬದ ಪಟ್ಟಣಕ್ಕೆ ಬಂದನು. 28 ಆಗ ಇಸಾಕನ ದಿನಗಳು ನೂರ ಎಂಭತ್ತು ವರುಷಗಳಾಗಿದ್ದವು. 29 ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.
ಒಟ್ಟು 50 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 35 / 50
Common Bible Languages
West Indian Languages
×

Alert

×

kannada Letters Keypad References