3. ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.
|
7. ಓ ನನ್ನ ಜನರೇ, ಕೇಳಿರಿ, ನಾನು ನುಡಿಯುವೆನು; ಓ ಇಸ್ರಾಯೇಲೇ, ನಿನಗೆ ವಿರೋಧವಾಗಿ ನಾನು ಸಾಕ್ಷಿಕೊಡುವೆನು; ನಾನು ದೇವರು, ಹೌದು ನಿನ್ನ ದೇವರು ನಾನೇ.
|
8. ನಿನ್ನ ಬಲಿಗಳಿಗೋಸ್ಕರ ಇಲ್ಲವೆ ನಿನ್ನ ದಹನಬಲಿಗೋಸ್ಕರ ನಾನು ನಿನ್ನನ್ನು ಗದರಿಸುವ ದಿಲ್ಲ; ಅವು ಯಾವಾಗಲೂ ನನ್ನ ಮುಂದೆ ಇವೆ.
|
16. ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ?
|
20. ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ.
|
21. ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
|
22. ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
|
23. ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
|