1. ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು?
|
3. ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
|
4. ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ.
|
5. ಕೇಡಿನ ಸಮಯದಲ್ಲಿ ಆತನು ತನ್ನ ಗುಡಾರದಲ್ಲಿ ನನ್ನನ್ನು ಬಚ್ಚಿಡುವನು. ತನ್ನ ಗುಪ್ತವಾದ ಡೇರೆಯಲ್ಲಿ ನನ್ನನ್ನು ಮರೆಮಾಡುವನು; ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವನು.
|
6. ಈಗ ನನ್ನ ಸುತ್ತಲಿರುವ ಶತ್ರುಗಳ ಮೇಲೆ ನನ್ನ ತಲೆಯು ಎತ್ತಲ್ಪಟ್ಟಿರುವದು. ಆದದರಿಂದ ಆತನ ಗುಡಾರದಲ್ಲಿ ಉತ್ಸಾಹದ ಬಲಿಗಳನ್ನು ಅರ್ಪಿ ಸುವೆನು; ಹೌದು, ಕರ್ತನಿಗೆ ಹಾಡಿ ಕೀರ್ತಿಸುವೆನು.
|
8. ನೀನು--ನನ್ನ ಮುಖವನ್ನು ನೀವು ಹುಡುಕಿರಿ ಎಂದು ಹೇಳಿದಿಯಲ್ಲಾ. ಕರ್ತನೇ, ನಿನ್ನ ಮುಖವನ್ನು ಹುಡು ಕುವೆನು ಎಂದು ನನ್ನ ಹೃದಯವು ನಿನಗೆ ಹೇಳಿತು.
|
9. ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ; ನೀನು ನನಗೆ ಸಹಾಯಕನಾಗಿದ್ದೀ; ನನ್ನನ್ನು ವಿಸರ್ಜಿಸಬೇಡ; ನನ್ನ ರಕ್ಷಣೆಯ ಓ ದೇವರೇ, ನನ್ನನ್ನು ಬಿಟ್ಟುಬಿಡಬೇಡ.
|
12. ನನ್ನ ವೈರಿಗಳ ಇಷ್ಟಕ್ಕೆ ನನ್ನನ್ನು ಕೊಟ್ಟುಬಿಡಬೇಡ; ಸುಳ್ಳು ಸಾಕ್ಷಿಗಳೂ ಕ್ರೂರತ್ವದ ಶ್ವಾಸಬಿಡುವವರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
|
13. ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
|
14. ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
|