ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಯೋಹಾನನು

ಯೋಹಾನನು ಅಧ್ಯಾಯ 2

1 ಮೂರನೆಯ ದಿನದಲ್ಲಿ ಗಲಿಲಾಯದ ಕಾನಾದಲ್ಲಿ ಒಂದು ಮದುವೆ ಆಯಿತು. ಅಲ್ಲಿ ಯೇಸುವಿನ ತಾಯಿಯು ಇದ್ದಳು. 2 ಇದಲ್ಲದೆ ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದಿ ದ್ದರು. 3 ಆಗ ಅವರಿಗೆ ದ್ರಾಕ್ಷಾರಸವು ಸಾಲದೆ ಹೋದ ದ್ದರಿಂದ ಯೇಸುವಿನ ತಾಯಿಯು ಆತನಿಗೆ--ಅವರಿಗೆ ದ್ರಾಕ್ಷಾರಸವು ಇಲ್ಲ ಅಂದಳು. 4 ಯೇಸು ಆಕೆಗೆ-- ಸ್ತ್ರೀಯೇ, ನನ್ನ ಗೊಡವೆ ನಿನಗೆ ಯಾಕೆ? ನನ್ನ ಗಳಿಗೆ ಯು ಇನ್ನೂ ಬಂದಿಲ್ಲ ಅಂದನು. 5 ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು. 6 ಯೆಹೂದ್ಯರ ಶುದ್ಧೀ ಕರಣದ ಪ್ರಕಾರ ಅಲ್ಲಿ ಪ್ರತಿಯೊಂದು ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವಷ್ಟು ಆರು ಕಲ್ಲಿನ ಬಾನೆಗಳು ಇದ್ದವು. 7 ಯೇಸು ಅವರಿಗೆ--ಆ ಬಾನೆ ಗಳಲ್ಲಿ ನೀರು ತುಂಬಿರಿ ಅಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದ್ದರು. 8 ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು. 9 ಔತಣದ ಪಾರುಪತ್ಯ ಗಾರನು ದ್ರಾಕ್ಷಾರಸವಾದ ನೀರನ್ನು ರುಚಿ ನೋಡಿದಾಗ ಅದು ಎಲ್ಲಿಂದ ಬಂತೆಂದು ತಿಳಿಯದವನಾಗಿ (ನೀರನ್ನು ತೋಡಿಕೊಂಡ ಸೇವಕರಿಗೆ ತಿಳಿದಿತ್ತು) ಮದಲಿಂಗನನ್ನು ಕರೆದು 10 ಅವನಿಗೆ--ಪ್ರತಿ ಮನುಷ್ಯನು ಮೊದಲು ಒಳ್ಳೇ ದ್ರಾಕ್ಷಾರಸವನ್ನು ಕೊಟ್ಟು ಜನರು ಚೆನ್ನಾಗಿ ಕುಡಿದ ಮೇಲೆ ಕನಿಷ್ಠವಾದದ್ದನ್ನು ಕೊಡುತ್ತಾನೆ; ಆದರೆ ನೀನು ಇದು ವರೆಗೆ ಒಳ್ಳೇ ದ್ರಾಕ್ಷಾರಸವನ್ನು ಇಟ್ಟು ಕೊಂಡಿದ್ದೀ ಅಂದನು. 11 ಯೇಸು ಈ ಮೊದಲನೆಯ ಅದ್ಭುತ ಕಾರ್ಯವನ್ನು ಗಲಿಲಾಯದ ಕಾನಾದಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು. 12 ಇದಾದ ಮೇಲೆ ಆತನೂ ಆತನ ತಾಯಿಯೂ ಆತನ ಸಹೋದರರೂ ಆತನ ಶಿಷ್ಯರೂ ಕಪೆರ್ನೌಮಿಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು. 13 ಯೆಹೂದ್ಯರ ಪಸ್ಕವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋಗಿ 14 ದೇವಾಲಯದಲ್ಲಿ ಎತ್ತು ಕುರಿ ಪಾರಿವಾಳ ಇವುಗಳನ್ನು ಮಾರುವವ ರನ್ನೂ ಹಣ ಬದಲಾಯಿಸುವವರು ಕೂತಿರುವದನೂ ಕಂಡನು; 15 ಆಗ ಆತನು ಸಣ್ಣ ಹಗ್ಗಗಳಿಂದ ಕೊರಡೆ ಮಾಡಿ ಕುರಿ ಎತ್ತು ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ಹಣವನ್ನು ಚೆಲ್ಲಿ ಮೇಜು ಗಳನ್ನು ಕೆಡವಿದನು. 16 ಆತನು ಪಾರಿವಾಳ ಮಾರುವ ವರಿಗೆ--ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯ ನ್ನಾಗಿ ಮಾಡಬೇಡಿರಿ ಅಂದನು. 17 ಆಗ ಆತನ ಶಿಷ್ಯರು--ನಿನ್ನ ಆಲಯದ ಆಸಕ್ತಿಯು ನನ್ನನ್ನು ದಹಿಸಿ ಬಿಟ್ಟಿದೆ ಎಂದು ಬರೆದಿರುವದನ್ನು ಜ್ಞಾಪಕಮಾಡಿ ಕೊಂಡರು. 18 ಆಗ ಯೆಹೂದ್ಯರು ಆತನಿಗೆ--ನೀನು ಇವುಗಳನ್ನು ಮಾಡುವದಕ್ಕೆ ಯಾವ ಸೂಚಕಕಾರ್ಯ ವನ್ನು ನಮಗೆ ತೋರಿಸುತ್ತೀ ಎಂದು ಕೇಳಿದರು. 19 ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ದೇವಾಲ ಯವನ್ನು ಕೆಡವಿದರೆ ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು ಅಂದನು. 20 ಅದಕ್ಕೆ ಯೆಹೂದ್ಯರು-- ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷಗಳು ಹಿಡಿದವು; ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ ಅಂದರು. 21 ಆದರೆ ಆತನು ತನ್ನ ದೇಹವೆಂಬ ಆಲಯವನ್ನು ಕುರಿತು ಹೇಳಿದನು. 22 ಆದದರಿಂದ ಆತನು ಸತ್ತವರೊಳಗಿಂದ ಎದ್ದಮೇಲೆ ಆತನ ಶಿಷ್ಯರು ತಮಗೆ ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಬರಹವನ್ನೂ ಯೇಸು ತಮಗೆ ಹೇಳಿದ್ದನ್ನೂ ನಂಬಿದರು. 23 ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು. 24 ಆದರೆ ಯೇಸು ತನ್ನನ್ನು ಅವರಿಗೆ ವಶಪಡಿಸಿ ಕೊಳ್ಳಲಿಲ್ಲ; ಯಾಕಂದರೆ ಆತನು ಎಲ್ಲರನ್ನೂ ಅರಿತ ವನಾಗಿದ್ದನು. 25 ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.
1. ಮೂರನೆಯ ದಿನದಲ್ಲಿ ಗಲಿಲಾಯದ ಕಾನಾದಲ್ಲಿ ಒಂದು ಮದುವೆ ಆಯಿತು. ಅಲ್ಲಿ ಯೇಸುವಿನ ತಾಯಿಯು ಇದ್ದಳು. 2. ಇದಲ್ಲದೆ ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದಿ ದ್ದರು. 3. ಆಗ ಅವರಿಗೆ ದ್ರಾಕ್ಷಾರಸವು ಸಾಲದೆ ಹೋದ ದ್ದರಿಂದ ಯೇಸುವಿನ ತಾಯಿಯು ಆತನಿಗೆ--ಅವರಿಗೆ ದ್ರಾಕ್ಷಾರಸವು ಇಲ್ಲ ಅಂದಳು. 4. ಯೇಸು ಆಕೆಗೆ-- ಸ್ತ್ರೀಯೇ, ನನ್ನ ಗೊಡವೆ ನಿನಗೆ ಯಾಕೆ? ನನ್ನ ಗಳಿಗೆ ಯು ಇನ್ನೂ ಬಂದಿಲ್ಲ ಅಂದನು. 5. ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು. 6. ಯೆಹೂದ್ಯರ ಶುದ್ಧೀ ಕರಣದ ಪ್ರಕಾರ ಅಲ್ಲಿ ಪ್ರತಿಯೊಂದು ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವಷ್ಟು ಆರು ಕಲ್ಲಿನ ಬಾನೆಗಳು ಇದ್ದವು. 7. ಯೇಸು ಅವರಿಗೆ--ಆ ಬಾನೆ ಗಳಲ್ಲಿ ನೀರು ತುಂಬಿರಿ ಅಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದ್ದರು. 8. ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು. 9. ಔತಣದ ಪಾರುಪತ್ಯ ಗಾರನು ದ್ರಾಕ್ಷಾರಸವಾದ ನೀರನ್ನು ರುಚಿ ನೋಡಿದಾಗ ಅದು ಎಲ್ಲಿಂದ ಬಂತೆಂದು ತಿಳಿಯದವನಾಗಿ (ನೀರನ್ನು ತೋಡಿಕೊಂಡ ಸೇವಕರಿಗೆ ತಿಳಿದಿತ್ತು) ಮದಲಿಂಗನನ್ನು ಕರೆದು 10. ಅವನಿಗೆ--ಪ್ರತಿ ಮನುಷ್ಯನು ಮೊದಲು ಒಳ್ಳೇ ದ್ರಾಕ್ಷಾರಸವನ್ನು ಕೊಟ್ಟು ಜನರು ಚೆನ್ನಾಗಿ ಕುಡಿದ ಮೇಲೆ ಕನಿಷ್ಠವಾದದ್ದನ್ನು ಕೊಡುತ್ತಾನೆ; ಆದರೆ ನೀನು ಇದು ವರೆಗೆ ಒಳ್ಳೇ ದ್ರಾಕ್ಷಾರಸವನ್ನು ಇಟ್ಟು ಕೊಂಡಿದ್ದೀ ಅಂದನು. 11. ಯೇಸು ಈ ಮೊದಲನೆಯ ಅದ್ಭುತ ಕಾರ್ಯವನ್ನು ಗಲಿಲಾಯದ ಕಾನಾದಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು. 12. ಇದಾದ ಮೇಲೆ ಆತನೂ ಆತನ ತಾಯಿಯೂ ಆತನ ಸಹೋದರರೂ ಆತನ ಶಿಷ್ಯರೂ ಕಪೆರ್ನೌಮಿಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು. 13. ಯೆಹೂದ್ಯರ ಪಸ್ಕವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋಗಿ 14. ದೇವಾಲಯದಲ್ಲಿ ಎತ್ತು ಕುರಿ ಪಾರಿವಾಳ ಇವುಗಳನ್ನು ಮಾರುವವ ರನ್ನೂ ಹಣ ಬದಲಾಯಿಸುವವರು ಕೂತಿರುವದನೂ ಕಂಡನು; 15. ಆಗ ಆತನು ಸಣ್ಣ ಹಗ್ಗಗಳಿಂದ ಕೊರಡೆ ಮಾಡಿ ಕುರಿ ಎತ್ತು ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ಹಣವನ್ನು ಚೆಲ್ಲಿ ಮೇಜು ಗಳನ್ನು ಕೆಡವಿದನು. 16. ಆತನು ಪಾರಿವಾಳ ಮಾರುವ ವರಿಗೆ--ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯ ನ್ನಾಗಿ ಮಾಡಬೇಡಿರಿ ಅಂದನು. 17. ಆಗ ಆತನ ಶಿಷ್ಯರು--ನಿನ್ನ ಆಲಯದ ಆಸಕ್ತಿಯು ನನ್ನನ್ನು ದಹಿಸಿ ಬಿಟ್ಟಿದೆ ಎಂದು ಬರೆದಿರುವದನ್ನು ಜ್ಞಾಪಕಮಾಡಿ ಕೊಂಡರು. 18. ಆಗ ಯೆಹೂದ್ಯರು ಆತನಿಗೆ--ನೀನು ಇವುಗಳನ್ನು ಮಾಡುವದಕ್ಕೆ ಯಾವ ಸೂಚಕಕಾರ್ಯ ವನ್ನು ನಮಗೆ ತೋರಿಸುತ್ತೀ ಎಂದು ಕೇಳಿದರು. 19. ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ದೇವಾಲ ಯವನ್ನು ಕೆಡವಿದರೆ ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು ಅಂದನು. 20. ಅದಕ್ಕೆ ಯೆಹೂದ್ಯರು-- ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷಗಳು ಹಿಡಿದವು; ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ ಅಂದರು. 21. ಆದರೆ ಆತನು ತನ್ನ ದೇಹವೆಂಬ ಆಲಯವನ್ನು ಕುರಿತು ಹೇಳಿದನು. 22. ಆದದರಿಂದ ಆತನು ಸತ್ತವರೊಳಗಿಂದ ಎದ್ದಮೇಲೆ ಆತನ ಶಿಷ್ಯರು ತಮಗೆ ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಬರಹವನ್ನೂ ಯೇಸು ತಮಗೆ ಹೇಳಿದ್ದನ್ನೂ ನಂಬಿದರು. 23. ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು. 24. ಆದರೆ ಯೇಸು ತನ್ನನ್ನು ಅವರಿಗೆ ವಶಪಡಿಸಿ ಕೊಳ್ಳಲಿಲ್ಲ; ಯಾಕಂದರೆ ಆತನು ಎಲ್ಲರನ್ನೂ ಅರಿತ ವನಾಗಿದ್ದನು. 25. ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.
  • ಯೋಹಾನನು ಅಧ್ಯಾಯ 1  
  • ಯೋಹಾನನು ಅಧ್ಯಾಯ 2  
  • ಯೋಹಾನನು ಅಧ್ಯಾಯ 3  
  • ಯೋಹಾನನು ಅಧ್ಯಾಯ 4  
  • ಯೋಹಾನನು ಅಧ್ಯಾಯ 5  
  • ಯೋಹಾನನು ಅಧ್ಯಾಯ 6  
  • ಯೋಹಾನನು ಅಧ್ಯಾಯ 7  
  • ಯೋಹಾನನು ಅಧ್ಯಾಯ 8  
  • ಯೋಹಾನನು ಅಧ್ಯಾಯ 9  
  • ಯೋಹಾನನು ಅಧ್ಯಾಯ 10  
  • ಯೋಹಾನನು ಅಧ್ಯಾಯ 11  
  • ಯೋಹಾನನು ಅಧ್ಯಾಯ 12  
  • ಯೋಹಾನನು ಅಧ್ಯಾಯ 13  
  • ಯೋಹಾನನು ಅಧ್ಯಾಯ 14  
  • ಯೋಹಾನನು ಅಧ್ಯಾಯ 15  
  • ಯೋಹಾನನು ಅಧ್ಯಾಯ 16  
  • ಯೋಹಾನನು ಅಧ್ಯಾಯ 17  
  • ಯೋಹಾನನು ಅಧ್ಯಾಯ 18  
  • ಯೋಹಾನನು ಅಧ್ಯಾಯ 19  
  • ಯೋಹಾನನು ಅಧ್ಯಾಯ 20  
  • ಯೋಹಾನನು ಅಧ್ಯಾಯ 21  
×

Alert

×

Kannada Letters Keypad References