ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಕೀರ್ತನೆಗಳು

ಕೀರ್ತನೆಗಳು ಅಧ್ಯಾಯ 109

1 ನಾನು ಸ್ತುತಿಸುವ ದೇವರೇ, ನೀವು ಮೌನವಾಗಿರಬೇಡಿರಿ. 2 ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ. 3 ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ. 4 ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ; ಆದರೆ ನಾನು ಪ್ರಾರ್ಥನೆಯ ಮನುಷ್ಯನು. 5 ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ, ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ. 6 ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ. 7 ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ; ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ. 8 ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ. 9 ಅವನ ಮಕ್ಕಳು ದಿಕ್ಕಿಲ್ಲದವರಾಗಲಿ, ಅವನ ಹೆಂಡತಿ ವಿಧವೆಯೂ ಆಗಲಿ. 10 ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ, ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ. 11 ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ. 12 ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ. 13 ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ. 14 ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ. 15 ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ; ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ. 16 ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ. ಬಡವನನ್ನೂ, ದೀನನನ್ನೂ, ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು. 17 ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ. 18 ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು. 19 ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ, ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ. 20 ಇದು ನನಗೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ. 21 ಆದರೆ ಸಾರ್ವಭೌಮ ಯೆಹೋವ ದೇವರೇ, ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ. ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ. 22 ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ; ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ. 23 ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ; ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ. 24 ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ; ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು. 25 ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ; ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ. 26 ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ. 27 ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ, ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ. 28 ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ. ನನಗೆ ಹಾನಿಮಾಡುವವರು ನಾಚಿಕೆಪಡಲಿ; ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ. 29 ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ, ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ. 30 ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು. 31 ದೇವರು ಬಡವನ ಬಲಗಡೆಯಲ್ಲಿ ನಿಂತು, ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.
1. ನಾನು ಸ್ತುತಿಸುವ ದೇವರೇ, ನೀವು ಮೌನವಾಗಿರಬೇಡಿರಿ. 2. ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ. 3. ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ. 4. ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ; ಆದರೆ ನಾನು ಪ್ರಾರ್ಥನೆಯ ಮನುಷ್ಯನು. 5. ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ, ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ. 6. ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ. 7. ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ; ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ. 8. ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ. 9. ಅವನ ಮಕ್ಕಳು ದಿಕ್ಕಿಲ್ಲದವರಾಗಲಿ, ಅವನ ಹೆಂಡತಿ ವಿಧವೆಯೂ ಆಗಲಿ. 10. ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ, ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ. 11. ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ. 12. ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ. 13. ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ. 14. ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ. 15. ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ; ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ. 16. ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ. ಬಡವನನ್ನೂ, ದೀನನನ್ನೂ, ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು. 17. ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ. 18. ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು. 19. ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ, ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ. 20. ಇದು ನನಗೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ. 21. ಆದರೆ ಸಾರ್ವಭೌಮ ಯೆಹೋವ ದೇವರೇ, ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ. ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ. 22. ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ; ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ. 23. ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ; ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ. 24. ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ; ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು. 25. ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ; ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ. 26. ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ. 27. ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ, ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ. 28. ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ. ನನಗೆ ಹಾನಿಮಾಡುವವರು ನಾಚಿಕೆಪಡಲಿ; ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ. 29. ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ, ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ. 30. ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು. 31. ದೇವರು ಬಡವನ ಬಲಗಡೆಯಲ್ಲಿ ನಿಂತು, ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.
  • ಕೀರ್ತನೆಗಳು ಅಧ್ಯಾಯ 1  
  • ಕೀರ್ತನೆಗಳು ಅಧ್ಯಾಯ 2  
  • ಕೀರ್ತನೆಗಳು ಅಧ್ಯಾಯ 3  
  • ಕೀರ್ತನೆಗಳು ಅಧ್ಯಾಯ 4  
  • ಕೀರ್ತನೆಗಳು ಅಧ್ಯಾಯ 5  
  • ಕೀರ್ತನೆಗಳು ಅಧ್ಯಾಯ 6  
  • ಕೀರ್ತನೆಗಳು ಅಧ್ಯಾಯ 7  
  • ಕೀರ್ತನೆಗಳು ಅಧ್ಯಾಯ 8  
  • ಕೀರ್ತನೆಗಳು ಅಧ್ಯಾಯ 9  
  • ಕೀರ್ತನೆಗಳು ಅಧ್ಯಾಯ 10  
  • ಕೀರ್ತನೆಗಳು ಅಧ್ಯಾಯ 11  
  • ಕೀರ್ತನೆಗಳು ಅಧ್ಯಾಯ 12  
  • ಕೀರ್ತನೆಗಳು ಅಧ್ಯಾಯ 13  
  • ಕೀರ್ತನೆಗಳು ಅಧ್ಯಾಯ 14  
  • ಕೀರ್ತನೆಗಳು ಅಧ್ಯಾಯ 15  
  • ಕೀರ್ತನೆಗಳು ಅಧ್ಯಾಯ 16  
  • ಕೀರ್ತನೆಗಳು ಅಧ್ಯಾಯ 17  
  • ಕೀರ್ತನೆಗಳು ಅಧ್ಯಾಯ 18  
  • ಕೀರ್ತನೆಗಳು ಅಧ್ಯಾಯ 19  
  • ಕೀರ್ತನೆಗಳು ಅಧ್ಯಾಯ 20  
  • ಕೀರ್ತನೆಗಳು ಅಧ್ಯಾಯ 21  
  • ಕೀರ್ತನೆಗಳು ಅಧ್ಯಾಯ 22  
  • ಕೀರ್ತನೆಗಳು ಅಧ್ಯಾಯ 23  
  • ಕೀರ್ತನೆಗಳು ಅಧ್ಯಾಯ 24  
  • ಕೀರ್ತನೆಗಳು ಅಧ್ಯಾಯ 25  
  • ಕೀರ್ತನೆಗಳು ಅಧ್ಯಾಯ 26  
  • ಕೀರ್ತನೆಗಳು ಅಧ್ಯಾಯ 27  
  • ಕೀರ್ತನೆಗಳು ಅಧ್ಯಾಯ 28  
  • ಕೀರ್ತನೆಗಳು ಅಧ್ಯಾಯ 29  
  • ಕೀರ್ತನೆಗಳು ಅಧ್ಯಾಯ 30  
  • ಕೀರ್ತನೆಗಳು ಅಧ್ಯಾಯ 31  
  • ಕೀರ್ತನೆಗಳು ಅಧ್ಯಾಯ 32  
  • ಕೀರ್ತನೆಗಳು ಅಧ್ಯಾಯ 33  
  • ಕೀರ್ತನೆಗಳು ಅಧ್ಯಾಯ 34  
  • ಕೀರ್ತನೆಗಳು ಅಧ್ಯಾಯ 35  
  • ಕೀರ್ತನೆಗಳು ಅಧ್ಯಾಯ 36  
  • ಕೀರ್ತನೆಗಳು ಅಧ್ಯಾಯ 37  
  • ಕೀರ್ತನೆಗಳು ಅಧ್ಯಾಯ 38  
  • ಕೀರ್ತನೆಗಳು ಅಧ್ಯಾಯ 39  
  • ಕೀರ್ತನೆಗಳು ಅಧ್ಯಾಯ 40  
  • ಕೀರ್ತನೆಗಳು ಅಧ್ಯಾಯ 41  
  • ಕೀರ್ತನೆಗಳು ಅಧ್ಯಾಯ 42  
  • ಕೀರ್ತನೆಗಳು ಅಧ್ಯಾಯ 43  
  • ಕೀರ್ತನೆಗಳು ಅಧ್ಯಾಯ 44  
  • ಕೀರ್ತನೆಗಳು ಅಧ್ಯಾಯ 45  
  • ಕೀರ್ತನೆಗಳು ಅಧ್ಯಾಯ 46  
  • ಕೀರ್ತನೆಗಳು ಅಧ್ಯಾಯ 47  
  • ಕೀರ್ತನೆಗಳು ಅಧ್ಯಾಯ 48  
  • ಕೀರ್ತನೆಗಳು ಅಧ್ಯಾಯ 49  
  • ಕೀರ್ತನೆಗಳು ಅಧ್ಯಾಯ 50  
  • ಕೀರ್ತನೆಗಳು ಅಧ್ಯಾಯ 51  
  • ಕೀರ್ತನೆಗಳು ಅಧ್ಯಾಯ 52  
  • ಕೀರ್ತನೆಗಳು ಅಧ್ಯಾಯ 53  
  • ಕೀರ್ತನೆಗಳು ಅಧ್ಯಾಯ 54  
  • ಕೀರ್ತನೆಗಳು ಅಧ್ಯಾಯ 55  
  • ಕೀರ್ತನೆಗಳು ಅಧ್ಯಾಯ 56  
  • ಕೀರ್ತನೆಗಳು ಅಧ್ಯಾಯ 57  
  • ಕೀರ್ತನೆಗಳು ಅಧ್ಯಾಯ 58  
  • ಕೀರ್ತನೆಗಳು ಅಧ್ಯಾಯ 59  
  • ಕೀರ್ತನೆಗಳು ಅಧ್ಯಾಯ 60  
  • ಕೀರ್ತನೆಗಳು ಅಧ್ಯಾಯ 61  
  • ಕೀರ್ತನೆಗಳು ಅಧ್ಯಾಯ 62  
  • ಕೀರ್ತನೆಗಳು ಅಧ್ಯಾಯ 63  
  • ಕೀರ್ತನೆಗಳು ಅಧ್ಯಾಯ 64  
  • ಕೀರ್ತನೆಗಳು ಅಧ್ಯಾಯ 65  
  • ಕೀರ್ತನೆಗಳು ಅಧ್ಯಾಯ 66  
  • ಕೀರ್ತನೆಗಳು ಅಧ್ಯಾಯ 67  
  • ಕೀರ್ತನೆಗಳು ಅಧ್ಯಾಯ 68  
  • ಕೀರ್ತನೆಗಳು ಅಧ್ಯಾಯ 69  
  • ಕೀರ್ತನೆಗಳು ಅಧ್ಯಾಯ 70  
  • ಕೀರ್ತನೆಗಳು ಅಧ್ಯಾಯ 71  
  • ಕೀರ್ತನೆಗಳು ಅಧ್ಯಾಯ 72  
  • ಕೀರ್ತನೆಗಳು ಅಧ್ಯಾಯ 73  
  • ಕೀರ್ತನೆಗಳು ಅಧ್ಯಾಯ 74  
  • ಕೀರ್ತನೆಗಳು ಅಧ್ಯಾಯ 75  
  • ಕೀರ್ತನೆಗಳು ಅಧ್ಯಾಯ 76  
  • ಕೀರ್ತನೆಗಳು ಅಧ್ಯಾಯ 77  
  • ಕೀರ್ತನೆಗಳು ಅಧ್ಯಾಯ 78  
  • ಕೀರ್ತನೆಗಳು ಅಧ್ಯಾಯ 79  
  • ಕೀರ್ತನೆಗಳು ಅಧ್ಯಾಯ 80  
  • ಕೀರ್ತನೆಗಳು ಅಧ್ಯಾಯ 81  
  • ಕೀರ್ತನೆಗಳು ಅಧ್ಯಾಯ 82  
  • ಕೀರ್ತನೆಗಳು ಅಧ್ಯಾಯ 83  
  • ಕೀರ್ತನೆಗಳು ಅಧ್ಯಾಯ 84  
  • ಕೀರ್ತನೆಗಳು ಅಧ್ಯಾಯ 85  
  • ಕೀರ್ತನೆಗಳು ಅಧ್ಯಾಯ 86  
  • ಕೀರ್ತನೆಗಳು ಅಧ್ಯಾಯ 87  
  • ಕೀರ್ತನೆಗಳು ಅಧ್ಯಾಯ 88  
  • ಕೀರ್ತನೆಗಳು ಅಧ್ಯಾಯ 89  
  • ಕೀರ್ತನೆಗಳು ಅಧ್ಯಾಯ 90  
  • ಕೀರ್ತನೆಗಳು ಅಧ್ಯಾಯ 91  
  • ಕೀರ್ತನೆಗಳು ಅಧ್ಯಾಯ 92  
  • ಕೀರ್ತನೆಗಳು ಅಧ್ಯಾಯ 93  
  • ಕೀರ್ತನೆಗಳು ಅಧ್ಯಾಯ 94  
  • ಕೀರ್ತನೆಗಳು ಅಧ್ಯಾಯ 95  
  • ಕೀರ್ತನೆಗಳು ಅಧ್ಯಾಯ 96  
  • ಕೀರ್ತನೆಗಳು ಅಧ್ಯಾಯ 97  
  • ಕೀರ್ತನೆಗಳು ಅಧ್ಯಾಯ 98  
  • ಕೀರ್ತನೆಗಳು ಅಧ್ಯಾಯ 99  
  • ಕೀರ್ತನೆಗಳು ಅಧ್ಯಾಯ 100  
  • ಕೀರ್ತನೆಗಳು ಅಧ್ಯಾಯ 101  
  • ಕೀರ್ತನೆಗಳು ಅಧ್ಯಾಯ 102  
  • ಕೀರ್ತನೆಗಳು ಅಧ್ಯಾಯ 103  
  • ಕೀರ್ತನೆಗಳು ಅಧ್ಯಾಯ 104  
  • ಕೀರ್ತನೆಗಳು ಅಧ್ಯಾಯ 105  
  • ಕೀರ್ತನೆಗಳು ಅಧ್ಯಾಯ 106  
  • ಕೀರ್ತನೆಗಳು ಅಧ್ಯಾಯ 107  
  • ಕೀರ್ತನೆಗಳು ಅಧ್ಯಾಯ 108  
  • ಕೀರ್ತನೆಗಳು ಅಧ್ಯಾಯ 109  
  • ಕೀರ್ತನೆಗಳು ಅಧ್ಯಾಯ 110  
  • ಕೀರ್ತನೆಗಳು ಅಧ್ಯಾಯ 111  
  • ಕೀರ್ತನೆಗಳು ಅಧ್ಯಾಯ 112  
  • ಕೀರ್ತನೆಗಳು ಅಧ್ಯಾಯ 113  
  • ಕೀರ್ತನೆಗಳು ಅಧ್ಯಾಯ 114  
  • ಕೀರ್ತನೆಗಳು ಅಧ್ಯಾಯ 115  
  • ಕೀರ್ತನೆಗಳು ಅಧ್ಯಾಯ 116  
  • ಕೀರ್ತನೆಗಳು ಅಧ್ಯಾಯ 117  
  • ಕೀರ್ತನೆಗಳು ಅಧ್ಯಾಯ 118  
  • ಕೀರ್ತನೆಗಳು ಅಧ್ಯಾಯ 119  
  • ಕೀರ್ತನೆಗಳು ಅಧ್ಯಾಯ 120  
  • ಕೀರ್ತನೆಗಳು ಅಧ್ಯಾಯ 121  
  • ಕೀರ್ತನೆಗಳು ಅಧ್ಯಾಯ 122  
  • ಕೀರ್ತನೆಗಳು ಅಧ್ಯಾಯ 123  
  • ಕೀರ್ತನೆಗಳು ಅಧ್ಯಾಯ 124  
  • ಕೀರ್ತನೆಗಳು ಅಧ್ಯಾಯ 125  
  • ಕೀರ್ತನೆಗಳು ಅಧ್ಯಾಯ 126  
  • ಕೀರ್ತನೆಗಳು ಅಧ್ಯಾಯ 127  
  • ಕೀರ್ತನೆಗಳು ಅಧ್ಯಾಯ 128  
  • ಕೀರ್ತನೆಗಳು ಅಧ್ಯಾಯ 129  
  • ಕೀರ್ತನೆಗಳು ಅಧ್ಯಾಯ 130  
  • ಕೀರ್ತನೆಗಳು ಅಧ್ಯಾಯ 131  
  • ಕೀರ್ತನೆಗಳು ಅಧ್ಯಾಯ 132  
  • ಕೀರ್ತನೆಗಳು ಅಧ್ಯಾಯ 133  
  • ಕೀರ್ತನೆಗಳು ಅಧ್ಯಾಯ 134  
  • ಕೀರ್ತನೆಗಳು ಅಧ್ಯಾಯ 135  
  • ಕೀರ್ತನೆಗಳು ಅಧ್ಯಾಯ 136  
  • ಕೀರ್ತನೆಗಳು ಅಧ್ಯಾಯ 137  
  • ಕೀರ್ತನೆಗಳು ಅಧ್ಯಾಯ 138  
  • ಕೀರ್ತನೆಗಳು ಅಧ್ಯಾಯ 139  
  • ಕೀರ್ತನೆಗಳು ಅಧ್ಯಾಯ 140  
  • ಕೀರ್ತನೆಗಳು ಅಧ್ಯಾಯ 141  
  • ಕೀರ್ತನೆಗಳು ಅಧ್ಯಾಯ 142  
  • ಕೀರ್ತನೆಗಳು ಅಧ್ಯಾಯ 143  
  • ಕೀರ್ತನೆಗಳು ಅಧ್ಯಾಯ 144  
  • ಕೀರ್ತನೆಗಳು ಅಧ್ಯಾಯ 145  
  • ಕೀರ್ತನೆಗಳು ಅಧ್ಯಾಯ 146  
  • ಕೀರ್ತನೆಗಳು ಅಧ್ಯಾಯ 147  
  • ಕೀರ್ತನೆಗಳು ಅಧ್ಯಾಯ 148  
  • ಕೀರ್ತನೆಗಳು ಅಧ್ಯಾಯ 149  
  • ಕೀರ್ತನೆಗಳು ಅಧ್ಯಾಯ 150  
×

Alert

×

Kannada Letters Keypad References