ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಹೋಶೇ

ಹೋಶೇ ಅಧ್ಯಾಯ 14

1 ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ; 2 ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು. 3 ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ. 4 ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ. 5 ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು. 6 ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು. 7 ಆತನ ನೆರಳಿನಲ್ಲಿ ವಾಸಿಸುವವರು ಹಿಂತಿರುಗುವರು; ಧಾನ್ಯದ ಹಾಗೆ ಉಜ್ಜೀವಿಸುವರು; ದ್ರಾಕ್ಷೆಯ ಬಳ್ಳಿಯ ಹಾಗೆ ಬೆಳೆಯು ವರು. ಅವನ ಸುವಾಸನೆಯು ಲೆಬನೋನಿನ ದ್ರಾಕ್ಷಾ ರಸದ ಹಾಗೆ ಇರುವದು. 8 ಎಫ್ರಾಯಾಮೇ--ನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ. ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದು. 9 ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
1 ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ; .::. 2 ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು. .::. 3 ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ. .::. 4 ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ. .::. 5 ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು. .::. 6 ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು. .::. 7 ಆತನ ನೆರಳಿನಲ್ಲಿ ವಾಸಿಸುವವರು ಹಿಂತಿರುಗುವರು; ಧಾನ್ಯದ ಹಾಗೆ ಉಜ್ಜೀವಿಸುವರು; ದ್ರಾಕ್ಷೆಯ ಬಳ್ಳಿಯ ಹಾಗೆ ಬೆಳೆಯು ವರು. ಅವನ ಸುವಾಸನೆಯು ಲೆಬನೋನಿನ ದ್ರಾಕ್ಷಾ ರಸದ ಹಾಗೆ ಇರುವದು. .::. 8 ಎಫ್ರಾಯಾಮೇ--ನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ. ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದು. .::. 9 ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
  • ಹೋಶೇ ಅಧ್ಯಾಯ 1  
  • ಹೋಶೇ ಅಧ್ಯಾಯ 2  
  • ಹೋಶೇ ಅಧ್ಯಾಯ 3  
  • ಹೋಶೇ ಅಧ್ಯಾಯ 4  
  • ಹೋಶೇ ಅಧ್ಯಾಯ 5  
  • ಹೋಶೇ ಅಧ್ಯಾಯ 6  
  • ಹೋಶೇ ಅಧ್ಯಾಯ 7  
  • ಹೋಶೇ ಅಧ್ಯಾಯ 8  
  • ಹೋಶೇ ಅಧ್ಯಾಯ 9  
  • ಹೋಶೇ ಅಧ್ಯಾಯ 10  
  • ಹೋಶೇ ಅಧ್ಯಾಯ 11  
  • ಹೋಶೇ ಅಧ್ಯಾಯ 12  
  • ಹೋಶೇ ಅಧ್ಯಾಯ 13  
  • ಹೋಶೇ ಅಧ್ಯಾಯ 14  
×

Alert

×

Kannada Letters Keypad References