ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಯಾಜಕಕಾಂಡ

ಯಾಜಕಕಾಂಡ ಅಧ್ಯಾಯ 12

1 ಕರ್ತನು ಮೋಶೆಯೊಂದಿಗೆ ಮಾತನಾಡಿ -- 2 ಇಸ್ರಾಯೇಲ್ಯರ ಮಕ್ಕಳಿಗೆ ಹೇಳ ಬೇಕಾದದ್ದೇನಂದರೆ--ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು. 3 ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಮಾಡಿಸ ಬೇಕು. 4 ಅವಳು ಮೂವತ್ತಮೂರು ದಿನಗಳು ಶುದ್ಧೀ ಕರಣದಲ್ಲಿ ಮುಂದುವರಿಯಬೇಕು, ಅವಳು ಶುದ್ಧೀ ಕರಣದ ದಿನಗಳು ಪೂರೈಸುವ ತನಕ ಪರಿಶುದ್ಧ ವಾದದ್ದನ್ನು ಮುಟ್ಟಬಾರದು ಪರಿಶುದ್ಧ ಸ್ಥಳಕ್ಕೆ ಬರ ಬಾರದು. 5 ಅವಳು ಹೆಣ್ಣುಮಗುವನ್ನು ಹೆತ್ತರೆ ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರ ಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಸಬೇಕು. 6 ಮಗನಿಗಾಗಿ ಮಗಳಿಗಾಗಿ ಅವಳ ಶುದ್ಧೀಕರಣದ ದಿನಗಳು ಪೂರ್ತಿಯಾದರೆ ಅವಳು ದಹನಬಲಿಗಾಗಿ ಮೊದಲನೇ ವರುಷದ ಕುರಿಮರಿಯನ್ನೂ ಪಾಪದ ಬಲಿಗಾಗಿ ಪಾರಿವಾಳದ ಮರಿಯನ್ನೂ ಒಂದು ಬೆಳವ ವನ್ನೂ ಸಭೆಯ ಗುಡಾರದ ಬಾಗಲಲ್ಲಿ ಯಾಜಕನ ಬಳಿಗೆ ತರಬೇಕು. 7 ಅವನು ಕರ್ತನ ಮುಂದೆ ಅದನ್ನು ಅರ್ಪಿಸಿ ಅವಳಿಗಾಗಿ ಪ್ರಾಯಶ್ಚಿತ್ತಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗುವಳು. ಗಂಡು ಮಗುವನ್ನಾಗಲಿ ಹೆಣ್ಣು ಮಗುವನ್ನಾಗಲಿ ಹೆತ್ತವಳ ನಿಯಮವು ಇದೇ. 8 ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ ದಹನಬಲಿಗಾಗಿ ಒಂದು ಪಾಪದ ಬಲಿಗಾಗಿ ಇನ್ನೊಂದು ಎಂಬಂತೆ ಎರಡು ಬೆಳವಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತಮಾಡಬೇಕು, ಆಗ ಅವಳು ಶುದ್ಧಳಾಗುವಳು.
1 ಕರ್ತನು ಮೋಶೆಯೊಂದಿಗೆ ಮಾತನಾಡಿ -- .::. 2 ಇಸ್ರಾಯೇಲ್ಯರ ಮಕ್ಕಳಿಗೆ ಹೇಳ ಬೇಕಾದದ್ದೇನಂದರೆ--ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು. .::. 3 ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಮಾಡಿಸ ಬೇಕು. .::. 4 ಅವಳು ಮೂವತ್ತಮೂರು ದಿನಗಳು ಶುದ್ಧೀ ಕರಣದಲ್ಲಿ ಮುಂದುವರಿಯಬೇಕು, ಅವಳು ಶುದ್ಧೀ ಕರಣದ ದಿನಗಳು ಪೂರೈಸುವ ತನಕ ಪರಿಶುದ್ಧ ವಾದದ್ದನ್ನು ಮುಟ್ಟಬಾರದು ಪರಿಶುದ್ಧ ಸ್ಥಳಕ್ಕೆ ಬರ ಬಾರದು. .::. 5 ಅವಳು ಹೆಣ್ಣುಮಗುವನ್ನು ಹೆತ್ತರೆ ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರ ಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಸಬೇಕು. .::. 6 ಮಗನಿಗಾಗಿ ಮಗಳಿಗಾಗಿ ಅವಳ ಶುದ್ಧೀಕರಣದ ದಿನಗಳು ಪೂರ್ತಿಯಾದರೆ ಅವಳು ದಹನಬಲಿಗಾಗಿ ಮೊದಲನೇ ವರುಷದ ಕುರಿಮರಿಯನ್ನೂ ಪಾಪದ ಬಲಿಗಾಗಿ ಪಾರಿವಾಳದ ಮರಿಯನ್ನೂ ಒಂದು ಬೆಳವ ವನ್ನೂ ಸಭೆಯ ಗುಡಾರದ ಬಾಗಲಲ್ಲಿ ಯಾಜಕನ ಬಳಿಗೆ ತರಬೇಕು. .::. 7 ಅವನು ಕರ್ತನ ಮುಂದೆ ಅದನ್ನು ಅರ್ಪಿಸಿ ಅವಳಿಗಾಗಿ ಪ್ರಾಯಶ್ಚಿತ್ತಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗುವಳು. ಗಂಡು ಮಗುವನ್ನಾಗಲಿ ಹೆಣ್ಣು ಮಗುವನ್ನಾಗಲಿ ಹೆತ್ತವಳ ನಿಯಮವು ಇದೇ. .::. 8 ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ ದಹನಬಲಿಗಾಗಿ ಒಂದು ಪಾಪದ ಬಲಿಗಾಗಿ ಇನ್ನೊಂದು ಎಂಬಂತೆ ಎರಡು ಬೆಳವಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತಮಾಡಬೇಕು, ಆಗ ಅವಳು ಶುದ್ಧಳಾಗುವಳು.
  • ಯಾಜಕಕಾಂಡ ಅಧ್ಯಾಯ 1  
  • ಯಾಜಕಕಾಂಡ ಅಧ್ಯಾಯ 2  
  • ಯಾಜಕಕಾಂಡ ಅಧ್ಯಾಯ 3  
  • ಯಾಜಕಕಾಂಡ ಅಧ್ಯಾಯ 4  
  • ಯಾಜಕಕಾಂಡ ಅಧ್ಯಾಯ 5  
  • ಯಾಜಕಕಾಂಡ ಅಧ್ಯಾಯ 6  
  • ಯಾಜಕಕಾಂಡ ಅಧ್ಯಾಯ 7  
  • ಯಾಜಕಕಾಂಡ ಅಧ್ಯಾಯ 8  
  • ಯಾಜಕಕಾಂಡ ಅಧ್ಯಾಯ 9  
  • ಯಾಜಕಕಾಂಡ ಅಧ್ಯಾಯ 10  
  • ಯಾಜಕಕಾಂಡ ಅಧ್ಯಾಯ 11  
  • ಯಾಜಕಕಾಂಡ ಅಧ್ಯಾಯ 12  
  • ಯಾಜಕಕಾಂಡ ಅಧ್ಯಾಯ 13  
  • ಯಾಜಕಕಾಂಡ ಅಧ್ಯಾಯ 14  
  • ಯಾಜಕಕಾಂಡ ಅಧ್ಯಾಯ 15  
  • ಯಾಜಕಕಾಂಡ ಅಧ್ಯಾಯ 16  
  • ಯಾಜಕಕಾಂಡ ಅಧ್ಯಾಯ 17  
  • ಯಾಜಕಕಾಂಡ ಅಧ್ಯಾಯ 18  
  • ಯಾಜಕಕಾಂಡ ಅಧ್ಯಾಯ 19  
  • ಯಾಜಕಕಾಂಡ ಅಧ್ಯಾಯ 20  
  • ಯಾಜಕಕಾಂಡ ಅಧ್ಯಾಯ 21  
  • ಯಾಜಕಕಾಂಡ ಅಧ್ಯಾಯ 22  
  • ಯಾಜಕಕಾಂಡ ಅಧ್ಯಾಯ 23  
  • ಯಾಜಕಕಾಂಡ ಅಧ್ಯಾಯ 24  
  • ಯಾಜಕಕಾಂಡ ಅಧ್ಯಾಯ 25  
  • ಯಾಜಕಕಾಂಡ ಅಧ್ಯಾಯ 26  
  • ಯಾಜಕಕಾಂಡ ಅಧ್ಯಾಯ 27  
×

Alert

×

Kannada Letters Keypad References