ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ನ್ಯಾಯಸ್ಥಾಪಕರು

ಟಿಪ್ಪಣಿಗಳು

No Verse Added

ನ್ಯಾಯಸ್ಥಾಪಕರು ಅಧ್ಯಾಯ 17

1. ಆದರೆ ಎಫ್ರಾಯಾಮ್ ಬೆಟ್ಟದಲ್ಲಿ ವಿಾಕಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. 2. ಅವನು ತನ್ನ ತಾಯಿಗೆ--ನಿನ್ನ ಬಳಿಯಿಂದ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯು ತೆಗೆಯಲ್ಪಟ್ಟಾಗ ನೀನು ಆ ಬೆಳ್ಳಿಯನ್ನು ಕುರಿತು ಶಪಿಸಿ ನನ್ನ ಕಿವಿಗಳಲ್ಲಿ ಮಾತನಾಡಿದಿಯಲ್ಲಾ? ಇಗೋ, ಆ ಬೆಳ್ಳಿಯು ನನ್ನ ಬಳಿಯಲ್ಲಿ ಅದೆ; ನಾನು ಅದನ್ನು ತಕ್ಕೊಂಡೆನು ಅಂದನು. ಅದಕ್ಕೆ ಅವನ ತಾಯಿ--ನನ್ನ ಮಗನೇ, ನೀನು ಕರ್ತನಿಂದ ಆಶೀರ್ವದಿಸಲ್ಪಡುವಿ ಅಂದಳು. 3. ಅವನು ಆ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯನ್ನು ತನ್ನ ತಾಯಿಗೆ ತಿರಿಗಿ ಕೊಟ್ಟಾಗ ಅವನ ತಾಯಿ--ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹವನ್ನೂ ಮಾಡುವದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಕರ್ತನಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದೆನು; ಆದದರಿಂದ ನಾನು ಅದನ್ನು ನಿನಗೆ ತಿರಿಗಿ ಕೊಡುವೆನು ಅಂದಳು. 4. ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರಿಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ಮಾಡಿದನು. ಅವು ವಿಾಕನ ಮನೆಯಲ್ಲಿದ್ದವು. 5. ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು. 6. ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು. 7. ಯೆಹೂದದ ಗೋತ್ರಕ್ಕೆ ಸೇರಿದ ಬೇತ್ಲೆಹೇಮಿನ ಲೇವಿಯನಾದಂಥ ಒಬ್ಬ ಯೌವನಸ್ಥನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು. 8. ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವದಕ್ಕೆ ಯೆಹೂದದ ಬೇತ್ಲೆಹೇಮ್ ಪಟ್ಟಣವನ್ನು ಬಿಟ್ಟುಹೋದನು; ಪ್ರಯಾಣಮಾಡುವಾಗ ಎಫ್ರಾಯಾಮ್ ಬೆಟ್ಟದ ಲ್ಲಿರುವ ವಿಾಕನ ಮನೆಯ ಬಳಿಗೆ ಬಂದನು. 9. ಆಗ ವಿಾಕನು ಅವನಿಗೆ--ನೀನು ಎಲ್ಲಿಂದ ಬಂದಿ ಅಂದನು. ಇವನು ಅವನಿಗೆ--ನಾನು ಯೆಹೂದದ ಬೇತ್ಲೆಹೇಮಿ ನವನಾದ ಲೇವಿಯನು: ನಾನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗಬೇಕೆಂದು ಹೋಗುತ್ತೇನೆ ಅಂದನು. 10. ವಿಾಕನು ಅವನಿಗೆ--ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ ಯಾಜಕನಾ ಗಿಯೂ ಇರು; ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ ಒಂದು ದುಸ್ತು ವಸ್ತ್ರಗಳನ್ನೂ ಆಹಾರ ವನ್ನೂ ಕೊಡುವೆನು ಅಂದನು. ಹಾಗೆಯೇ ಲೇವಿಯನು ಹೋದನು. ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವದಕ್ಕೆ ಸಮ್ಮತಿಪಟ್ಟನು. 11. ಆ ಯೌವ ನಸ್ಥನು ಅವನಿಗೆ ಅವನ ಕುಮಾರರಲ್ಲಿ ಒಬ್ಬನ ಹಾಗೆ ಇದ್ದನು. 12. ವಿಾಕನು ಲೇವಿಯನನ್ನು ಪ್ರತಿಷ್ಠೆಮಾಡಿ ದನು; ಆ ಯೌವನಸ್ಥನು ಅವನಿಗೆ ಯಾಜಕನಾದನು; ಅವನು ವಿಾಕನ ಮನೆಯಲ್ಲಿ ಇದ್ದನು. 13. ಆಗ ವಿಾಕನು--ನನಗೆ ಒಬ್ಬ ಲೇವಿಯನು ಯಾಜಕನಾಗಿ ರುವದರಿಂದ ಕರ್ತನು ನನಗೆ ಒಳ್ಳೇದನ್ನು ಮಾಡು ವನೆಂದು ಈಗ ತಿಳಿಯುತ್ತೇನೆ ಅಂದುಕೊಂಡನು.
1. ಆದರೆ ಎಫ್ರಾಯಾಮ್ ಬೆಟ್ಟದಲ್ಲಿ ವಿಾಕಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. .::. 2. ಅವನು ತನ್ನ ತಾಯಿಗೆ--ನಿನ್ನ ಬಳಿಯಿಂದ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯು ತೆಗೆಯಲ್ಪಟ್ಟಾಗ ನೀನು ಆ ಬೆಳ್ಳಿಯನ್ನು ಕುರಿತು ಶಪಿಸಿ ನನ್ನ ಕಿವಿಗಳಲ್ಲಿ ಮಾತನಾಡಿದಿಯಲ್ಲಾ? ಇಗೋ, ಆ ಬೆಳ್ಳಿಯು ನನ್ನ ಬಳಿಯಲ್ಲಿ ಅದೆ; ನಾನು ಅದನ್ನು ತಕ್ಕೊಂಡೆನು ಅಂದನು. ಅದಕ್ಕೆ ಅವನ ತಾಯಿ--ನನ್ನ ಮಗನೇ, ನೀನು ಕರ್ತನಿಂದ ಆಶೀರ್ವದಿಸಲ್ಪಡುವಿ ಅಂದಳು. .::. 3. ಅವನು ಆ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯನ್ನು ತನ್ನ ತಾಯಿಗೆ ತಿರಿಗಿ ಕೊಟ್ಟಾಗ ಅವನ ತಾಯಿ--ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹವನ್ನೂ ಮಾಡುವದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಕರ್ತನಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದೆನು; ಆದದರಿಂದ ನಾನು ಅದನ್ನು ನಿನಗೆ ತಿರಿಗಿ ಕೊಡುವೆನು ಅಂದಳು. .::. 4. ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರಿಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ಮಾಡಿದನು. ಅವು ವಿಾಕನ ಮನೆಯಲ್ಲಿದ್ದವು. .::. 5. ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು. .::. 6. ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು. .::. 7. ಯೆಹೂದದ ಗೋತ್ರಕ್ಕೆ ಸೇರಿದ ಬೇತ್ಲೆಹೇಮಿನ ಲೇವಿಯನಾದಂಥ ಒಬ್ಬ ಯೌವನಸ್ಥನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು. .::. 8. ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವದಕ್ಕೆ ಯೆಹೂದದ ಬೇತ್ಲೆಹೇಮ್ ಪಟ್ಟಣವನ್ನು ಬಿಟ್ಟುಹೋದನು; ಪ್ರಯಾಣಮಾಡುವಾಗ ಎಫ್ರಾಯಾಮ್ ಬೆಟ್ಟದ ಲ್ಲಿರುವ ವಿಾಕನ ಮನೆಯ ಬಳಿಗೆ ಬಂದನು. .::. 9. ಆಗ ವಿಾಕನು ಅವನಿಗೆ--ನೀನು ಎಲ್ಲಿಂದ ಬಂದಿ ಅಂದನು. ಇವನು ಅವನಿಗೆ--ನಾನು ಯೆಹೂದದ ಬೇತ್ಲೆಹೇಮಿ ನವನಾದ ಲೇವಿಯನು: ನಾನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗಬೇಕೆಂದು ಹೋಗುತ್ತೇನೆ ಅಂದನು. .::. 10. ವಿಾಕನು ಅವನಿಗೆ--ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ ಯಾಜಕನಾ ಗಿಯೂ ಇರು; ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ ಒಂದು ದುಸ್ತು ವಸ್ತ್ರಗಳನ್ನೂ ಆಹಾರ ವನ್ನೂ ಕೊಡುವೆನು ಅಂದನು. ಹಾಗೆಯೇ ಲೇವಿಯನು ಹೋದನು. ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವದಕ್ಕೆ ಸಮ್ಮತಿಪಟ್ಟನು. .::. 11. ಆ ಯೌವ ನಸ್ಥನು ಅವನಿಗೆ ಅವನ ಕುಮಾರರಲ್ಲಿ ಒಬ್ಬನ ಹಾಗೆ ಇದ್ದನು. .::. 12. ವಿಾಕನು ಲೇವಿಯನನ್ನು ಪ್ರತಿಷ್ಠೆಮಾಡಿ ದನು; ಆ ಯೌವನಸ್ಥನು ಅವನಿಗೆ ಯಾಜಕನಾದನು; ಅವನು ವಿಾಕನ ಮನೆಯಲ್ಲಿ ಇದ್ದನು. .::. 13. ಆಗ ವಿಾಕನು--ನನಗೆ ಒಬ್ಬ ಲೇವಿಯನು ಯಾಜಕನಾಗಿ ರುವದರಿಂದ ಕರ್ತನು ನನಗೆ ಒಳ್ಳೇದನ್ನು ಮಾಡು ವನೆಂದು ಈಗ ತಿಳಿಯುತ್ತೇನೆ ಅಂದುಕೊಂಡನು.
  • ನ್ಯಾಯಸ್ಥಾಪಕರು ಅಧ್ಯಾಯ 1  
  • ನ್ಯಾಯಸ್ಥಾಪಕರು ಅಧ್ಯಾಯ 2  
  • ನ್ಯಾಯಸ್ಥಾಪಕರು ಅಧ್ಯಾಯ 3  
  • ನ್ಯಾಯಸ್ಥಾಪಕರು ಅಧ್ಯಾಯ 4  
  • ನ್ಯಾಯಸ್ಥಾಪಕರು ಅಧ್ಯಾಯ 5  
  • ನ್ಯಾಯಸ್ಥಾಪಕರು ಅಧ್ಯಾಯ 6  
  • ನ್ಯಾಯಸ್ಥಾಪಕರು ಅಧ್ಯಾಯ 7  
  • ನ್ಯಾಯಸ್ಥಾಪಕರು ಅಧ್ಯಾಯ 8  
  • ನ್ಯಾಯಸ್ಥಾಪಕರು ಅಧ್ಯಾಯ 9  
  • ನ್ಯಾಯಸ್ಥಾಪಕರು ಅಧ್ಯಾಯ 10  
  • ನ್ಯಾಯಸ್ಥಾಪಕರು ಅಧ್ಯಾಯ 11  
  • ನ್ಯಾಯಸ್ಥಾಪಕರು ಅಧ್ಯಾಯ 12  
  • ನ್ಯಾಯಸ್ಥಾಪಕರು ಅಧ್ಯಾಯ 13  
  • ನ್ಯಾಯಸ್ಥಾಪಕರು ಅಧ್ಯಾಯ 14  
  • ನ್ಯಾಯಸ್ಥಾಪಕರು ಅಧ್ಯಾಯ 15  
  • ನ್ಯಾಯಸ್ಥಾಪಕರು ಅಧ್ಯಾಯ 16  
  • ನ್ಯಾಯಸ್ಥಾಪಕರು ಅಧ್ಯಾಯ 17  
  • ನ್ಯಾಯಸ್ಥಾಪಕರು ಅಧ್ಯಾಯ 18  
  • ನ್ಯಾಯಸ್ಥಾಪಕರು ಅಧ್ಯಾಯ 19  
  • ನ್ಯಾಯಸ್ಥಾಪಕರು ಅಧ್ಯಾಯ 20  
  • ನ್ಯಾಯಸ್ಥಾಪಕರು ಅಧ್ಯಾಯ 21  
Common Bible Languages
West Indian Languages
×

Alert

×

kannada Letters Keypad References