ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಯಾಜಕಕಾಂಡ

ಯಾಜಕಕಾಂಡ ಅಧ್ಯಾಯ 13

1 ತರುವಾಯ ಕರ್ತನು ಮೋಶೆ ಆರೋನರೊಡನೆ ಮಾತನಾಡಿ ಹೇಳಿದ್ದೇನಂದರೆ 2 ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು. 3 ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು. 4 ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು. 5 ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು. 6 ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು. 7 ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು. 8 ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು. 9 ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು. 10 ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ 11 ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು. 12 ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ 13 ಆಗ ಯಾಜಕನು ಅದನ್ನು ಗಮನಿಸಬೇಕು; ಇಗೋ, ಕುಷ್ಠವು ಅವನ ಮೈಯೆಲ್ಲವನ್ನು ಹರಡಿಕೊಂಡು ಶುದ್ಧನಾಗಿ ರುವನೆಂದು ಯಾಜಕನು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವದರಿಂದ ಅವನು ಶುದ್ಧನಾಗಿರು ವನೆಂದು 14 ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು. 15 ಯಾಜ ಕನು ಹಸಿಮಾಂಸವನ್ನು ನೋಡಿ ಅವನು ಅಶುದ್ಧನೆಂದು ನುಡಿಯಬೇಕು; ಹಸಿಮಾಂಸವು ಅಶುದ್ಧವಾದದ್ದು, ಅದು ಕುಷ್ಠವೇ. 16 ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು. 17 ಆಗ ಯಾಜಕನು ಅವನನ್ನು ನೋಡ ಬೇಕು. ಇಗೋ, ಆ ವ್ಯಾಧಿಯು ಬೆಳ್ಳಗಾಗಿದ್ದರೆ ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ಯಾಜಕನು ನುಡಿಯಬೇಕು; ಅವನು ಶುದ್ಧನೇ. 18 ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ 19 ಆ ಹುಣ್ಣಿನ ಸ್ಥಳದಲ್ಲಿ ಬಿಳಿಯ ಊತವಾಗಲಿ ಬಿಳುಪಾದ ಮಚ್ಚೆಯಾಗಲಿ ಬಿಳಿಯದಾಗಿ ಸ್ವಲ್ಪ ಕೆಂಪಾದದ್ದಾಗಲಿ ಉಂಟಾದರೆ ಅದನ್ನು ಯಾಜಕ ನಿಗೆ ತೋರಿಸಬೇಕು. 20 ಯಾಜಕನು ಅದನ್ನು ನೋಡಿ ದಾಗ ಇಗೋ, ಅದು ಚರ್ಮಕ್ಕಿಂತ ತಗ್ಗಾಗಿ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು; ಅದು ಹುಣ್ಣಿನಿಂದ ಒಡೆದುಹೋದ ಕುಷ್ಠ ವ್ಯಾಧಿಯಾಗಿ ರುವದು. 21 ಆದರೆ ಯಾಜಕನು ಅದನ್ನು ನೋಡಲು ಇಗೋ, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದೆ ಸ್ವಲ್ಪ ಮೊಬ್ಬಾಗಿದ್ದರೆ ಆಗ ಯಾಜಕನು ಅವನನ್ನು ಏಳು ದಿನಗಳು ಮುಚ್ಚಿಡಬೇಕು. 22 ಅದು ಚರ್ಮದ ಹೊರ ಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು, ಅದು ರೋಗವೇ. 23 ಆದರೆ ಆ ಹೊಳಪಾದ ಮಚ್ಚೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು. 24 ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ 25 ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ. 26 ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು. 27 ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ಹೇಳಬೇಕು, ಅದು ಕುಷ್ಠ ವ್ಯಾಧಿಯೇ. 28 ಆ ಹೊಳಪಾದ ಮಚ್ಚೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮೊಬ್ಬಾಗಿದ್ದರೆ ಅದು ಬೊಬ್ಬೆಯ ಊತವೆಂದು ಅವನು ಶುದ್ಧನೆಂದು ಯಾಜಕನು ನುಡಿಯಬೇಕು; ಅದು ಬೆಂಕಿಯ ಬೊಬ್ಬೆಯಾಗಿರುವದು. 29 ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ 30 ಆಗ ಯಾಜಕನು ಆ ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ. 31 ಯಾಜಕನು ಈ ಇಸಬಿನ ವ್ಯಾಧಿಯನ್ನು ನೋಡಿದಾಗ ಇಗೋ, ಅದು ನೋಡಲು ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪು ಕೂದಲು ಇರದಿದ್ದರೆ ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳು ಮುಚ್ಚಿಡಬೇಕು. 32 ಏಳನೇ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ನೋಡಿದಾಗ ಇಗೋ, ಆ ಇಸಬು ಹರಡದೆ ಅದರಲ್ಲಿ ಹಳದಿ ಕೂದಲು ಇರದೆ ಆ ಇಸಬು ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ 33 ಅವನು ಕ್ಷೌರಮಾಡಿಸಿ ಕೊಳ್ಳಲಿ, ಆದರೆ ಅವನು ಇಸಬನ್ನು ಕ್ಷೌರಮಾಡ ಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಮುಚ್ಚಿಡಬೇಕು. 34 ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಇಗೋ, ಆ ಇಸಬು ಚರ್ಮದಲ್ಲಿ ಹರಡದಿದ್ದರೆ ನೋಡಲು ಅದು ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು. 35 ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿದರೆ 36 ಯಾಜಕನು ಅವನನ್ನು ನೋಡಬೇಕು; ಇಗೋ, ಆ ಇಸಬು ಚರ್ಮ ದಲ್ಲಿ ಹರಡಿದ್ದರೆ ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ; ಅವನು ಅಶುದ್ಧನೇ. 37 ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಅದರಲ್ಲಿ ಕಪ್ಪುಕೂದಲು ಬೆಳೆದರೆ ಇಸಬು ವಾಸಿಯಾಯಿತು ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು. 38 ಒಬ್ಬ ಪುರುಷನಿಗಾಗಲಿ ಒಬ್ಬ ಸ್ತ್ರೀಗಾಗಲಿ ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಅಂದರೆ ಬಿಳಿಯ ಹೊಳಪಾದ ಮಚ್ಚೆಗಳು ಇದ್ದರೆ 39 ಅವುಗಳನ್ನು ಯಾಜಕನು ನೋಡಬೇಕು. ಇಗೋ, ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಮೊಬ್ಬಾಗಿ ಬಿಳು ಪಾಗಿದ್ದರೆ ಅದು ಚರ್ಮದ ಮೇಲೆ ಬಿಸಿಲಿನಿಂದಾದ ಮಚ್ಚೆಯಾಗಿರುವದು. ಅವನು ಶುದ್ಧನಾಗಿರುವನು. 40 ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು. 41 ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ. 42 ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪಾದ ಮಚ್ಚೆಯಿದ್ದರೆ ಅದು ಹುಟ್ಟುತ್ತಿರುವ ಕುಷ್ಠವೇ. 43 ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಆ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ 44 ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು. 45 ಆ ವ್ಯಾಧಿ ಇರುವ ಕುಷ್ಠರೋಗಿಯು ತನ್ನ ಬಟ್ಟೆ ಗಳನ್ನು ಹರಿದುಕೊಂಡು ಬರೀ ತಲೆಯಲ್ಲಿ ಮೇಲ್ತುಟಿ ಯನ್ನು ಮುಚ್ಚಿಕೊಂಡು--ನಾನು ಅಶುದ್ಧನು, ಅಶು ದ್ಧನು ಎಂದು ಕೂಗಬೇಕು. 46 ಆ ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು. 47 ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ 48 ಉಣ್ಣೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮ ದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನ ಲ್ಲಾಗಲಿ 49 ವ್ಯಾಧಿಯು ಚರ್ಮದಲ್ಲಾಗಲಿ ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಕುಷ್ಠರೋಗವು; ಅದನ್ನು ಯಾಜಕನಿಗೆ ತೋರಿಸ ಬೇಕು. 50 ಯಾಜಕನು ವ್ಯಾಧಿಯನ್ನು ನೋಡಿ ಅದನ್ನು ಏಳು ದಿನಗಳು ಮುಚ್ಚಿಡಬೇಕು: 51 ಅವನು ಏಳನೆಯ ದಿನದಲ್ಲಿ ವ್ಯಾಧಿಯನ್ನು ನೋಡಬೇಕು. ಆ ವ್ಯಾಧಿಯು ಅವನ ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನ ಲ್ಲಾಗಲಿ ಚರ್ಮದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ಕೆಲಸದಲ್ಲಾಗಲಿ ಹರಡಿದ್ದರೆ ಅದು ಕೆಟ್ಟಕುಷ್ಠವೇ, ಅದು ಅಶುದ್ಧವು. 52 ಆದದರಿಂದ ಅವನು ವ್ಯಾಧಿಯಿ ರುವ ಆ ಉಡುಪುಗಳನ್ನು ಅಂದರೆ ಅದು ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಉಣ್ಣೆಯಲ್ಲಾಗಲಿ ನಾರಿನ ಲ್ಲಾಗಲಿ ಚರ್ಮದ ಯಾವ ವಸ್ತುವಿನಲ್ಲಾಗಲಿ ವ್ಯಾಧಿ ಯಿದೆಯೋ ಅದನ್ನು ಬೆಂಕಿಯಿಂದ ಸುಡಬೇಕು; ಅದು ಕೆಟ್ಟ ಕುಷ್ಠವು, 53 ಯಾಜಕನು ನೋಡಿದಾಗ ಇಗೋ, ಆ ವ್ಯಾಧಿಯು ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮದ ವಸ್ತುಗಳಲ್ಲಾಗಲಿ ಹರಡ ದಿದ್ದರೆ 54 ಯಾಜಕನು ಆ ವ್ಯಾಧಿಯಿರುವವನನ್ನು ತೊಳೆದುಕೊಳ್ಳುವಂತೆ ಆಜ್ಞಾಪಿಸಿ ಅದನ್ನು ಏಳು ದಿನ ಗಳು ಹೆಚ್ಚಾಗಿ ಮುಚ್ಚಿಡಬೇಕು. 55 ಅದನ್ನು ತೊಳೆದಾದ ಮೇಲೆ ಯಾಜಕನು ಆ ವ್ಯಾಧಿಯನ್ನು ನೋಡಬೇಕು: ಇಗೋ, ವ್ಯಾಧಿಯು ತನ್ನ ಬಣ್ಣವನ್ನು ಬದಲಾಯಿಸದೆ ಹರಡದಿದ್ದರೆ ಅದು ಅಶುದ್ಧವಾಗಿರುವದು: ಅದು ಒಳಗಿನಿಂದಾಗಲಿ ಹೊರಗಿನಿಂದಾಗಲಿ ಒಳಗೆ ಕೊರೆ ಯುವದು. ನೀನು ಅದನ್ನು ಬೆಂಕಿಯಿಂದ ಸುಡಬೇಕು. 56 ಯಾಜಕನು ಅದನ್ನು ನೋಡಿದರೆ ಇಗೋ, ವ್ಯಾಧಿಯು ತೊಳೆಯಲ್ಪಟ್ಟ ನಂತರ ಸ್ವಲ್ಪ ಮೊಬ್ಬಾ ಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ ಚರ್ಮ ದಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಹರಿ ದುಹಾಕಬೇಕು. 57 ಅದು ಬಟ್ಟೆಯಲ್ಲಾಗಲಿ ಹಾಸಿ ನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಚರ್ಮದ ಯಾವದರಲ್ಲಿಯಾಗಲಿ ಇನ್ನೂ ಕಂಡುಬಂದರೆ ಅದು ಹರಡುವ ವ್ಯಾಧಿ ಮತ್ತು ವ್ಯಾಧಿಯುಳ್ಳದ್ದನ್ನು ನೀನು ಬೆಂಕಿಯಿಂದ ಸುಡಬೇಕು. 58 ನೀನು ತೊಳೆದ ಮೇಲೆ ಆ ವ್ಯಾಧಿಯು ಯಾವದರಿಂದ ಹೊರಟು ಹೋಯಿತೋ ಆ ಬಟ್ಟೆಯನ್ನೂ ಹಾಸನ್ನೂ ಹೊಕ್ಕನ್ನೂ ಇಲ್ಲವೆ ಚರ್ಮದ ಯಾವದೇ ವಸ್ತುವನ್ನೂ ಎರಡನೆಯ ಸಾರಿ ತೊಳೆಯಬೇಕು, ಆಗ ಅದು ಶುದ್ಧವಾಗಿರುವದು. 59 ಉಣ್ಣೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನ ಹೊಕ್ಕಿನ ಮತ್ತು ಚರ್ಮದಿಂದಾದ ಯಾವದ ರಿಂದಾಗಲಿ ಕುಷ್ಠವ್ಯಾಧಿಯವಿಷಯದಲ್ಲಿ ಅದನ್ನು ಶುದ್ಧವೆಂದು ಅಶುದ್ಧವೆಂದು ನುಡಿಯುವದಕ್ಕೆ ನ್ಯಾಯ ವಿಧಿಯು ಇದೇ.
1. ತರುವಾಯ ಕರ್ತನು ಮೋಶೆ ಆರೋನರೊಡನೆ ಮಾತನಾಡಿ ಹೇಳಿದ್ದೇನಂದರೆ 2. ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು. 3. ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು. 4. ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು. 5. ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು. 6. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು. 7. ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು. 8. ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು. 9. ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು. 10. ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ 11. ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು. 12. ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ 13. ಆಗ ಯಾಜಕನು ಅದನ್ನು ಗಮನಿಸಬೇಕು; ಇಗೋ, ಕುಷ್ಠವು ಅವನ ಮೈಯೆಲ್ಲವನ್ನು ಹರಡಿಕೊಂಡು ಶುದ್ಧನಾಗಿ ರುವನೆಂದು ಯಾಜಕನು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವದರಿಂದ ಅವನು ಶುದ್ಧನಾಗಿರು ವನೆಂದು 14. ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು. 15. ಯಾಜ ಕನು ಹಸಿಮಾಂಸವನ್ನು ನೋಡಿ ಅವನು ಅಶುದ್ಧನೆಂದು ನುಡಿಯಬೇಕು; ಹಸಿಮಾಂಸವು ಅಶುದ್ಧವಾದದ್ದು, ಅದು ಕುಷ್ಠವೇ. 16. ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು. 17. ಆಗ ಯಾಜಕನು ಅವನನ್ನು ನೋಡ ಬೇಕು. ಇಗೋ, ಆ ವ್ಯಾಧಿಯು ಬೆಳ್ಳಗಾಗಿದ್ದರೆ ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ಯಾಜಕನು ನುಡಿಯಬೇಕು; ಅವನು ಶುದ್ಧನೇ. 18. ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ 19. ಆ ಹುಣ್ಣಿನ ಸ್ಥಳದಲ್ಲಿ ಬಿಳಿಯ ಊತವಾಗಲಿ ಬಿಳುಪಾದ ಮಚ್ಚೆಯಾಗಲಿ ಬಿಳಿಯದಾಗಿ ಸ್ವಲ್ಪ ಕೆಂಪಾದದ್ದಾಗಲಿ ಉಂಟಾದರೆ ಅದನ್ನು ಯಾಜಕ ನಿಗೆ ತೋರಿಸಬೇಕು. 20. ಯಾಜಕನು ಅದನ್ನು ನೋಡಿ ದಾಗ ಇಗೋ, ಅದು ಚರ್ಮಕ್ಕಿಂತ ತಗ್ಗಾಗಿ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು; ಅದು ಹುಣ್ಣಿನಿಂದ ಒಡೆದುಹೋದ ಕುಷ್ಠ ವ್ಯಾಧಿಯಾಗಿ ರುವದು. 21. ಆದರೆ ಯಾಜಕನು ಅದನ್ನು ನೋಡಲು ಇಗೋ, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದೆ ಸ್ವಲ್ಪ ಮೊಬ್ಬಾಗಿದ್ದರೆ ಆಗ ಯಾಜಕನು ಅವನನ್ನು ಏಳು ದಿನಗಳು ಮುಚ್ಚಿಡಬೇಕು. 22. ಅದು ಚರ್ಮದ ಹೊರ ಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು, ಅದು ರೋಗವೇ. 23. ಆದರೆ ಆ ಹೊಳಪಾದ ಮಚ್ಚೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು. 24. ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ 25. ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ. 26. ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು. 27. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ಹೇಳಬೇಕು, ಅದು ಕುಷ್ಠ ವ್ಯಾಧಿಯೇ. 28. ಆ ಹೊಳಪಾದ ಮಚ್ಚೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮೊಬ್ಬಾಗಿದ್ದರೆ ಅದು ಬೊಬ್ಬೆಯ ಊತವೆಂದು ಅವನು ಶುದ್ಧನೆಂದು ಯಾಜಕನು ನುಡಿಯಬೇಕು; ಅದು ಬೆಂಕಿಯ ಬೊಬ್ಬೆಯಾಗಿರುವದು. 29. ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ 30. ಆಗ ಯಾಜಕನು ಆ ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ. 31. ಯಾಜಕನು ಈ ಇಸಬಿನ ವ್ಯಾಧಿಯನ್ನು ನೋಡಿದಾಗ ಇಗೋ, ಅದು ನೋಡಲು ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪು ಕೂದಲು ಇರದಿದ್ದರೆ ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳು ಮುಚ್ಚಿಡಬೇಕು. 32. ಏಳನೇ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ನೋಡಿದಾಗ ಇಗೋ, ಆ ಇಸಬು ಹರಡದೆ ಅದರಲ್ಲಿ ಹಳದಿ ಕೂದಲು ಇರದೆ ಆ ಇಸಬು ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ 33. ಅವನು ಕ್ಷೌರಮಾಡಿಸಿ ಕೊಳ್ಳಲಿ, ಆದರೆ ಅವನು ಇಸಬನ್ನು ಕ್ಷೌರಮಾಡ ಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಮುಚ್ಚಿಡಬೇಕು. 34. ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಇಗೋ, ಆ ಇಸಬು ಚರ್ಮದಲ್ಲಿ ಹರಡದಿದ್ದರೆ ನೋಡಲು ಅದು ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು. 35. ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿದರೆ 36. ಯಾಜಕನು ಅವನನ್ನು ನೋಡಬೇಕು; ಇಗೋ, ಆ ಇಸಬು ಚರ್ಮ ದಲ್ಲಿ ಹರಡಿದ್ದರೆ ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ; ಅವನು ಅಶುದ್ಧನೇ. 37. ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಅದರಲ್ಲಿ ಕಪ್ಪುಕೂದಲು ಬೆಳೆದರೆ ಇಸಬು ವಾಸಿಯಾಯಿತು ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು. 38. ಒಬ್ಬ ಪುರುಷನಿಗಾಗಲಿ ಒಬ್ಬ ಸ್ತ್ರೀಗಾಗಲಿ ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಅಂದರೆ ಬಿಳಿಯ ಹೊಳಪಾದ ಮಚ್ಚೆಗಳು ಇದ್ದರೆ 39. ಅವುಗಳನ್ನು ಯಾಜಕನು ನೋಡಬೇಕು. ಇಗೋ, ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಮೊಬ್ಬಾಗಿ ಬಿಳು ಪಾಗಿದ್ದರೆ ಅದು ಚರ್ಮದ ಮೇಲೆ ಬಿಸಿಲಿನಿಂದಾದ ಮಚ್ಚೆಯಾಗಿರುವದು. ಅವನು ಶುದ್ಧನಾಗಿರುವನು. 40. ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು. 41. ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ. 42. ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪಾದ ಮಚ್ಚೆಯಿದ್ದರೆ ಅದು ಹುಟ್ಟುತ್ತಿರುವ ಕುಷ್ಠವೇ. 43. ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಆ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ 44. ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು. 45. ಆ ವ್ಯಾಧಿ ಇರುವ ಕುಷ್ಠರೋಗಿಯು ತನ್ನ ಬಟ್ಟೆ ಗಳನ್ನು ಹರಿದುಕೊಂಡು ಬರೀ ತಲೆಯಲ್ಲಿ ಮೇಲ್ತುಟಿ ಯನ್ನು ಮುಚ್ಚಿಕೊಂಡು--ನಾನು ಅಶುದ್ಧನು, ಅಶು ದ್ಧನು ಎಂದು ಕೂಗಬೇಕು. 46. ಆ ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು. 47. ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ 48. ಉಣ್ಣೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮ ದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನ ಲ್ಲಾಗಲಿ 49. ವ್ಯಾಧಿಯು ಚರ್ಮದಲ್ಲಾಗಲಿ ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಕುಷ್ಠರೋಗವು; ಅದನ್ನು ಯಾಜಕನಿಗೆ ತೋರಿಸ ಬೇಕು. 50. ಯಾಜಕನು ವ್ಯಾಧಿಯನ್ನು ನೋಡಿ ಅದನ್ನು ಏಳು ದಿನಗಳು ಮುಚ್ಚಿಡಬೇಕು: 51. ಅವನು ಏಳನೆಯ ದಿನದಲ್ಲಿ ವ್ಯಾಧಿಯನ್ನು ನೋಡಬೇಕು. ಆ ವ್ಯಾಧಿಯು ಅವನ ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನ ಲ್ಲಾಗಲಿ ಚರ್ಮದಲ್ಲಾಗಲಿ ಚರ್ಮದಿಂದ ಮಾಡಿದ ಯಾವ ಕೆಲಸದಲ್ಲಾಗಲಿ ಹರಡಿದ್ದರೆ ಅದು ಕೆಟ್ಟಕುಷ್ಠವೇ, ಅದು ಅಶುದ್ಧವು. 52. ಆದದರಿಂದ ಅವನು ವ್ಯಾಧಿಯಿ ರುವ ಆ ಉಡುಪುಗಳನ್ನು ಅಂದರೆ ಅದು ಹಾಸಿನಲ್ಲಾ ಗಲಿ ಹೊಕ್ಕಿನಲ್ಲಾಗಲಿ ಉಣ್ಣೆಯಲ್ಲಾಗಲಿ ನಾರಿನ ಲ್ಲಾಗಲಿ ಚರ್ಮದ ಯಾವ ವಸ್ತುವಿನಲ್ಲಾಗಲಿ ವ್ಯಾಧಿ ಯಿದೆಯೋ ಅದನ್ನು ಬೆಂಕಿಯಿಂದ ಸುಡಬೇಕು; ಅದು ಕೆಟ್ಟ ಕುಷ್ಠವು, 53. ಯಾಜಕನು ನೋಡಿದಾಗ ಇಗೋ, ಆ ವ್ಯಾಧಿಯು ಉಡುಪಿನಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಚರ್ಮದ ವಸ್ತುಗಳಲ್ಲಾಗಲಿ ಹರಡ ದಿದ್ದರೆ 54. ಯಾಜಕನು ಆ ವ್ಯಾಧಿಯಿರುವವನನ್ನು ತೊಳೆದುಕೊಳ್ಳುವಂತೆ ಆಜ್ಞಾಪಿಸಿ ಅದನ್ನು ಏಳು ದಿನ ಗಳು ಹೆಚ್ಚಾಗಿ ಮುಚ್ಚಿಡಬೇಕು. 55. ಅದನ್ನು ತೊಳೆದಾದ ಮೇಲೆ ಯಾಜಕನು ಆ ವ್ಯಾಧಿಯನ್ನು ನೋಡಬೇಕು: ಇಗೋ, ವ್ಯಾಧಿಯು ತನ್ನ ಬಣ್ಣವನ್ನು ಬದಲಾಯಿಸದೆ ಹರಡದಿದ್ದರೆ ಅದು ಅಶುದ್ಧವಾಗಿರುವದು: ಅದು ಒಳಗಿನಿಂದಾಗಲಿ ಹೊರಗಿನಿಂದಾಗಲಿ ಒಳಗೆ ಕೊರೆ ಯುವದು. ನೀನು ಅದನ್ನು ಬೆಂಕಿಯಿಂದ ಸುಡಬೇಕು. 56. ಯಾಜಕನು ಅದನ್ನು ನೋಡಿದರೆ ಇಗೋ, ವ್ಯಾಧಿಯು ತೊಳೆಯಲ್ಪಟ್ಟ ನಂತರ ಸ್ವಲ್ಪ ಮೊಬ್ಬಾ ಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ ಚರ್ಮ ದಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಹರಿ ದುಹಾಕಬೇಕು. 57. ಅದು ಬಟ್ಟೆಯಲ್ಲಾಗಲಿ ಹಾಸಿ ನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಚರ್ಮದ ಯಾವದರಲ್ಲಿಯಾಗಲಿ ಇನ್ನೂ ಕಂಡುಬಂದರೆ ಅದು ಹರಡುವ ವ್ಯಾಧಿ ಮತ್ತು ವ್ಯಾಧಿಯುಳ್ಳದ್ದನ್ನು ನೀನು ಬೆಂಕಿಯಿಂದ ಸುಡಬೇಕು. 58. ನೀನು ತೊಳೆದ ಮೇಲೆ ಆ ವ್ಯಾಧಿಯು ಯಾವದರಿಂದ ಹೊರಟು ಹೋಯಿತೋ ಆ ಬಟ್ಟೆಯನ್ನೂ ಹಾಸನ್ನೂ ಹೊಕ್ಕನ್ನೂ ಇಲ್ಲವೆ ಚರ್ಮದ ಯಾವದೇ ವಸ್ತುವನ್ನೂ ಎರಡನೆಯ ಸಾರಿ ತೊಳೆಯಬೇಕು, ಆಗ ಅದು ಶುದ್ಧವಾಗಿರುವದು. 59. ಉಣ್ಣೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನ ಹೊಕ್ಕಿನ ಮತ್ತು ಚರ್ಮದಿಂದಾದ ಯಾವದ ರಿಂದಾಗಲಿ ಕುಷ್ಠವ್ಯಾಧಿಯವಿಷಯದಲ್ಲಿ ಅದನ್ನು ಶುದ್ಧವೆಂದು ಅಶುದ್ಧವೆಂದು ನುಡಿಯುವದಕ್ಕೆ ನ್ಯಾಯ ವಿಧಿಯು ಇದೇ.
  • ಯಾಜಕಕಾಂಡ ಅಧ್ಯಾಯ 1  
  • ಯಾಜಕಕಾಂಡ ಅಧ್ಯಾಯ 2  
  • ಯಾಜಕಕಾಂಡ ಅಧ್ಯಾಯ 3  
  • ಯಾಜಕಕಾಂಡ ಅಧ್ಯಾಯ 4  
  • ಯಾಜಕಕಾಂಡ ಅಧ್ಯಾಯ 5  
  • ಯಾಜಕಕಾಂಡ ಅಧ್ಯಾಯ 6  
  • ಯಾಜಕಕಾಂಡ ಅಧ್ಯಾಯ 7  
  • ಯಾಜಕಕಾಂಡ ಅಧ್ಯಾಯ 8  
  • ಯಾಜಕಕಾಂಡ ಅಧ್ಯಾಯ 9  
  • ಯಾಜಕಕಾಂಡ ಅಧ್ಯಾಯ 10  
  • ಯಾಜಕಕಾಂಡ ಅಧ್ಯಾಯ 11  
  • ಯಾಜಕಕಾಂಡ ಅಧ್ಯಾಯ 12  
  • ಯಾಜಕಕಾಂಡ ಅಧ್ಯಾಯ 13  
  • ಯಾಜಕಕಾಂಡ ಅಧ್ಯಾಯ 14  
  • ಯಾಜಕಕಾಂಡ ಅಧ್ಯಾಯ 15  
  • ಯಾಜಕಕಾಂಡ ಅಧ್ಯಾಯ 16  
  • ಯಾಜಕಕಾಂಡ ಅಧ್ಯಾಯ 17  
  • ಯಾಜಕಕಾಂಡ ಅಧ್ಯಾಯ 18  
  • ಯಾಜಕಕಾಂಡ ಅಧ್ಯಾಯ 19  
  • ಯಾಜಕಕಾಂಡ ಅಧ್ಯಾಯ 20  
  • ಯಾಜಕಕಾಂಡ ಅಧ್ಯಾಯ 21  
  • ಯಾಜಕಕಾಂಡ ಅಧ್ಯಾಯ 22  
  • ಯಾಜಕಕಾಂಡ ಅಧ್ಯಾಯ 23  
  • ಯಾಜಕಕಾಂಡ ಅಧ್ಯಾಯ 24  
  • ಯಾಜಕಕಾಂಡ ಅಧ್ಯಾಯ 25  
  • ಯಾಜಕಕಾಂಡ ಅಧ್ಯಾಯ 26  
  • ಯಾಜಕಕಾಂಡ ಅಧ್ಯಾಯ 27  
×

Alert

×

Kannada Letters Keypad References