ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಆದಿಕಾಂಡ

ಆದಿಕಾಂಡ ಅಧ್ಯಾಯ 22

1 ಇವುಗಳಾದ ಮೇಲೆ ದೇವರು ಅಬ್ರಹಾಮನನ್ನು ಶೋಧಿಸುವದಕ್ಕಾಗಿ ಆತನು ಅವನಿಗೆ--ಅಬ್ರಹಾಮನೇ ಅಂದನು. ಅದಕ್ಕವನು --ಇಗೋ, ಇಲ್ಲಿದ್ದೇನೆ ಅಂದನು. 2 ಆಗ ಆತನು --ನೀನು ಪ್ರೀತಿಮಾಡುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಈಗ ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು ಅಂದನು. 3 ಅಬ್ರಹಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಗೆ ತಡಿಹಾಕಿಸಿ ತನ್ನ ಯುವಕರಲ್ಲಿ ಇಬ್ಬರನ್ನೂ ತನ್ನ ಮಗನಾದ ಇಸಾಕನನ್ನೂ ಕರೆದು ಕೊಂಡು ದಹನಬಲಿಗಾಗಿ ಕಟ್ಟಿಗೆಗಳನ್ನು ಒಡಿಸಿ ಎದ್ದು ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು. 4 ಮೂರನೆಯ ದಿನದಲ್ಲಿ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ಆ ಸ್ಥಳವನ್ನು ದೂರದಿಂದ ನೋಡಿದನು. 5 ಅಬ್ರಹಾಮನು ತನ್ನ ಯುವಕರಿಗೆ--ಕತ್ತೆಯ ಸಂಗಡ ಇಲ್ಲಿಯೇ ಇರ್ರಿ. ನಾನೂ ಹುಡುಗನೂ ಅಲ್ಲಿಗೆ ಹೋಗಿ ಆರಾಧನೆ ಮಾಡಿ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇವೆ ಅಂದನು. 6 ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು. 7 ಆಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ--ನನ್ನ ತಂದೆಯೇ ಅಂದನು. ಆಗ ಅವನು--ನನ್ನ ಮಗನೇ, ಇದ್ದೇನೆ ಅಂದನು. ಅವನು--ಇಗೋ, ಬೆಂಕಿಯೂ ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ ಅಂದನು. 8 ಅಬ್ರಹಾಮನು--ನನ್ನ ಮಗನೇ, ದೇವರು ತಾನೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿ ಸುವನು ಅಂದನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು. 9 ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು. 10 ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವದಕ್ಕೆ ಕತ್ತಿ ತೆಗೆದುಕೊಂಡನು. 11 ಆಗ ಕರ್ತನ ದೂತನು ಆಕಾಶದೊಳಗಿಂದ ಅವನನ್ನು ಕರೆದು--ಅಬ್ರಹಾಮನೇ, ಅಬ್ರಹಾಮನೇ ಅಂದಾಗ ಅವನು--ಇಲ್ಲಿ ಇದ್ದೇನೆ ಅಂದನು. 12 ಆಗ ಅವನು --ಹುಡಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ. ನೀನು ದೇವರಿಗೆ ಭಯ ಪಡುತ್ತೀಯೆಂದು ಈಗ ನಾನು ತಿಳಿದಿದ್ದೇನೆ. ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವದಕ್ಕೆ ಹಿಂತೆಗೆಯಲಿಲ್ಲ ಅಂದನು. 13 ಆಗ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ನೋಡಿದನು; ಇಗೋ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು. 14 ಅಬ್ರಹಾಮನು ಆ ಸ್ಥಳಕ್ಕೆ ಯೆಹೋವಯಾರೆ ಎಂದು ಹೆಸರನ್ನು ಇಟ್ಟದ್ದರಿಂದ ಕರ್ತನ ಪರ್ವತದಲ್ಲಿ ಅದು ಕಾಣಲ್ಪಡುವದು ಎಂದು ಇಂದಿನ ವರೆಗೂ ಹೇಳುತ್ತಾರೆ. 15 ಕರ್ತನ ದೂತನು ಆಕಾಶದೊಳಗಿಂದ ಎರಡ ನೆಯ ಸಾರಿ ಅಬ್ರಹಾಮನನ್ನು ಕರೆದನು. 16 ಅವನು ಹೇಳಿದ್ದೇನಂದರೆ--ನಾನು ನನ್ನ ಮೇಲೆ ನಾನೇ ಆಣೆಯಿಟ್ಟು ಕೊಂಡಿದ್ದೇನೆ ಎಂದು ಕರ್ತನು ಹೇಳು ತ್ತಾನೆ. ಯಾಕಂದರೆ ನೀನು ಈ ಕಾರ್ಯವನ್ನು ಮಾಡಿ ನಿನ್ನ ಒಬ್ಬನೇ ಮಗನನ್ನು ನನಗೆ ಕೊಡುವದಕ್ಕೆ ಹಿಂತೆಗೆಯದೆ ಇದ್ದದರಿಂದ 17 ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು. 18 ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ. 19 ತರುವಾಯ ಅಬ್ರಹಾಮನು ತನ್ನ ಯುವಕರ ಬಳಿಗೆ ಹಿಂತಿರುಗಿ ಬಂದನು. ಅವರು ಎದ್ದು ಅವ ರೊಂದಿಗೆ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು. 20 ಇವುಗಳಾದ ಮೇಲೆ ಅಬ್ರಹಾಮನಿಗೆ--ಇಗೋ, ಮಿಲ್ಕಳು ಸಹ ನಿನ್ನ ಸಹೋದರನಾದ ನಾಹೋರನಿಗೆ ಮಕ್ಕಳನ್ನು ಹೆತ್ತಿದ್ದಾಳೆ ಎಂದು ತಿಳಿಸಲ್ಪಟ್ಟಿತು. 21 ಅವರು ಯಾರಂದರೆ ಅವನ ಚೊಚ್ಚಲು ಮಗ ಊಚನು ಅವನ ಸಹೋದರನಾದ ಬೂಜನು, ಅರಾಮನ ತಂದೆಯಾದ ಕೆಮೂವೇಲನು, 22 ಕೆಸೆದನು ಹಜೋ ವನು ಪಿಲ್ದಾಷನು ಇದ್ಲಾಫನು ಬೆತೊವೇಲನು; 23 ಬೆತೊವೇಲನಿಂದ ರೆಬೆಕ್ಕಳು ಹುಟ್ಟಿದಳು. ಈ ಎಂಟು ಮಂದಿಯನ್ನು ಮಿಲ್ಕಳು ಅಬ್ರಹಾಮನ ಸಹೋದರನಾದ ನಾಹೋರನಿಗೆ ಹೆತ್ತಳು. 24 ಅವನ ಉಪಪತ್ನಿಯಾದ ರೂಮಳೆಂಬವಳು ಸಹ ಟೆಬಹನನ್ನೂ ಗಹಮನನ್ನೂ ತಹಷನನ್ನೂ ಮಾಕಾನನ್ನೂ ಹೆತ್ತಳು.
1. ಇವುಗಳಾದ ಮೇಲೆ ದೇವರು ಅಬ್ರಹಾಮನನ್ನು ಶೋಧಿಸುವದಕ್ಕಾಗಿ ಆತನು ಅವನಿಗೆ--ಅಬ್ರಹಾಮನೇ ಅಂದನು. ಅದಕ್ಕವನು --ಇಗೋ, ಇಲ್ಲಿದ್ದೇನೆ ಅಂದನು. 2. ಆಗ ಆತನು --ನೀನು ಪ್ರೀತಿಮಾಡುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಈಗ ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು ಅಂದನು. 3. ಅಬ್ರಹಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಗೆ ತಡಿಹಾಕಿಸಿ ತನ್ನ ಯುವಕರಲ್ಲಿ ಇಬ್ಬರನ್ನೂ ತನ್ನ ಮಗನಾದ ಇಸಾಕನನ್ನೂ ಕರೆದು ಕೊಂಡು ದಹನಬಲಿಗಾಗಿ ಕಟ್ಟಿಗೆಗಳನ್ನು ಒಡಿಸಿ ಎದ್ದು ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು. 4. ಮೂರನೆಯ ದಿನದಲ್ಲಿ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ಆ ಸ್ಥಳವನ್ನು ದೂರದಿಂದ ನೋಡಿದನು. 5. ಅಬ್ರಹಾಮನು ತನ್ನ ಯುವಕರಿಗೆ--ಕತ್ತೆಯ ಸಂಗಡ ಇಲ್ಲಿಯೇ ಇರ್ರಿ. ನಾನೂ ಹುಡುಗನೂ ಅಲ್ಲಿಗೆ ಹೋಗಿ ಆರಾಧನೆ ಮಾಡಿ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇವೆ ಅಂದನು. 6. ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು. 7. ಆಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ--ನನ್ನ ತಂದೆಯೇ ಅಂದನು. ಆಗ ಅವನು--ನನ್ನ ಮಗನೇ, ಇದ್ದೇನೆ ಅಂದನು. ಅವನು--ಇಗೋ, ಬೆಂಕಿಯೂ ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ ಅಂದನು. 8. ಅಬ್ರಹಾಮನು--ನನ್ನ ಮಗನೇ, ದೇವರು ತಾನೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿ ಸುವನು ಅಂದನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು. 9. ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು. 10. ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವದಕ್ಕೆ ಕತ್ತಿ ತೆಗೆದುಕೊಂಡನು. 11. ಆಗ ಕರ್ತನ ದೂತನು ಆಕಾಶದೊಳಗಿಂದ ಅವನನ್ನು ಕರೆದು--ಅಬ್ರಹಾಮನೇ, ಅಬ್ರಹಾಮನೇ ಅಂದಾಗ ಅವನು--ಇಲ್ಲಿ ಇದ್ದೇನೆ ಅಂದನು. 12. ಆಗ ಅವನು --ಹುಡಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ. ನೀನು ದೇವರಿಗೆ ಭಯ ಪಡುತ್ತೀಯೆಂದು ಈಗ ನಾನು ತಿಳಿದಿದ್ದೇನೆ. ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವದಕ್ಕೆ ಹಿಂತೆಗೆಯಲಿಲ್ಲ ಅಂದನು. 13. ಆಗ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ನೋಡಿದನು; ಇಗೋ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು. 14. ಅಬ್ರಹಾಮನು ಆ ಸ್ಥಳಕ್ಕೆ ಯೆಹೋವಯಾರೆ ಎಂದು ಹೆಸರನ್ನು ಇಟ್ಟದ್ದರಿಂದ ಕರ್ತನ ಪರ್ವತದಲ್ಲಿ ಅದು ಕಾಣಲ್ಪಡುವದು ಎಂದು ಇಂದಿನ ವರೆಗೂ ಹೇಳುತ್ತಾರೆ. 15. ಕರ್ತನ ದೂತನು ಆಕಾಶದೊಳಗಿಂದ ಎರಡ ನೆಯ ಸಾರಿ ಅಬ್ರಹಾಮನನ್ನು ಕರೆದನು. 16. ಅವನು ಹೇಳಿದ್ದೇನಂದರೆ--ನಾನು ನನ್ನ ಮೇಲೆ ನಾನೇ ಆಣೆಯಿಟ್ಟು ಕೊಂಡಿದ್ದೇನೆ ಎಂದು ಕರ್ತನು ಹೇಳು ತ್ತಾನೆ. ಯಾಕಂದರೆ ನೀನು ಈ ಕಾರ್ಯವನ್ನು ಮಾಡಿ ನಿನ್ನ ಒಬ್ಬನೇ ಮಗನನ್ನು ನನಗೆ ಕೊಡುವದಕ್ಕೆ ಹಿಂತೆಗೆಯದೆ ಇದ್ದದರಿಂದ 17. ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು. 18. ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ. 19. ತರುವಾಯ ಅಬ್ರಹಾಮನು ತನ್ನ ಯುವಕರ ಬಳಿಗೆ ಹಿಂತಿರುಗಿ ಬಂದನು. ಅವರು ಎದ್ದು ಅವ ರೊಂದಿಗೆ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು. 20. ಇವುಗಳಾದ ಮೇಲೆ ಅಬ್ರಹಾಮನಿಗೆ--ಇಗೋ, ಮಿಲ್ಕಳು ಸಹ ನಿನ್ನ ಸಹೋದರನಾದ ನಾಹೋರನಿಗೆ ಮಕ್ಕಳನ್ನು ಹೆತ್ತಿದ್ದಾಳೆ ಎಂದು ತಿಳಿಸಲ್ಪಟ್ಟಿತು. 21. ಅವರು ಯಾರಂದರೆ ಅವನ ಚೊಚ್ಚಲು ಮಗ ಊಚನು ಅವನ ಸಹೋದರನಾದ ಬೂಜನು, ಅರಾಮನ ತಂದೆಯಾದ ಕೆಮೂವೇಲನು, 22. ಕೆಸೆದನು ಹಜೋ ವನು ಪಿಲ್ದಾಷನು ಇದ್ಲಾಫನು ಬೆತೊವೇಲನು; 23. ಬೆತೊವೇಲನಿಂದ ರೆಬೆಕ್ಕಳು ಹುಟ್ಟಿದಳು. ಈ ಎಂಟು ಮಂದಿಯನ್ನು ಮಿಲ್ಕಳು ಅಬ್ರಹಾಮನ ಸಹೋದರನಾದ ನಾಹೋರನಿಗೆ ಹೆತ್ತಳು. 24. ಅವನ ಉಪಪತ್ನಿಯಾದ ರೂಮಳೆಂಬವಳು ಸಹ ಟೆಬಹನನ್ನೂ ಗಹಮನನ್ನೂ ತಹಷನನ್ನೂ ಮಾಕಾನನ್ನೂ ಹೆತ್ತಳು.
  • ಆದಿಕಾಂಡ ಅಧ್ಯಾಯ 1  
  • ಆದಿಕಾಂಡ ಅಧ್ಯಾಯ 2  
  • ಆದಿಕಾಂಡ ಅಧ್ಯಾಯ 3  
  • ಆದಿಕಾಂಡ ಅಧ್ಯಾಯ 4  
  • ಆದಿಕಾಂಡ ಅಧ್ಯಾಯ 5  
  • ಆದಿಕಾಂಡ ಅಧ್ಯಾಯ 6  
  • ಆದಿಕಾಂಡ ಅಧ್ಯಾಯ 7  
  • ಆದಿಕಾಂಡ ಅಧ್ಯಾಯ 8  
  • ಆದಿಕಾಂಡ ಅಧ್ಯಾಯ 9  
  • ಆದಿಕಾಂಡ ಅಧ್ಯಾಯ 10  
  • ಆದಿಕಾಂಡ ಅಧ್ಯಾಯ 11  
  • ಆದಿಕಾಂಡ ಅಧ್ಯಾಯ 12  
  • ಆದಿಕಾಂಡ ಅಧ್ಯಾಯ 13  
  • ಆದಿಕಾಂಡ ಅಧ್ಯಾಯ 14  
  • ಆದಿಕಾಂಡ ಅಧ್ಯಾಯ 15  
  • ಆದಿಕಾಂಡ ಅಧ್ಯಾಯ 16  
  • ಆದಿಕಾಂಡ ಅಧ್ಯಾಯ 17  
  • ಆದಿಕಾಂಡ ಅಧ್ಯಾಯ 18  
  • ಆದಿಕಾಂಡ ಅಧ್ಯಾಯ 19  
  • ಆದಿಕಾಂಡ ಅಧ್ಯಾಯ 20  
  • ಆದಿಕಾಂಡ ಅಧ್ಯಾಯ 21  
  • ಆದಿಕಾಂಡ ಅಧ್ಯಾಯ 22  
  • ಆದಿಕಾಂಡ ಅಧ್ಯಾಯ 23  
  • ಆದಿಕಾಂಡ ಅಧ್ಯಾಯ 24  
  • ಆದಿಕಾಂಡ ಅಧ್ಯಾಯ 25  
  • ಆದಿಕಾಂಡ ಅಧ್ಯಾಯ 26  
  • ಆದಿಕಾಂಡ ಅಧ್ಯಾಯ 27  
  • ಆದಿಕಾಂಡ ಅಧ್ಯಾಯ 28  
  • ಆದಿಕಾಂಡ ಅಧ್ಯಾಯ 29  
  • ಆದಿಕಾಂಡ ಅಧ್ಯಾಯ 30  
  • ಆದಿಕಾಂಡ ಅಧ್ಯಾಯ 31  
  • ಆದಿಕಾಂಡ ಅಧ್ಯಾಯ 32  
  • ಆದಿಕಾಂಡ ಅಧ್ಯಾಯ 33  
  • ಆದಿಕಾಂಡ ಅಧ್ಯಾಯ 34  
  • ಆದಿಕಾಂಡ ಅಧ್ಯಾಯ 35  
  • ಆದಿಕಾಂಡ ಅಧ್ಯಾಯ 36  
  • ಆದಿಕಾಂಡ ಅಧ್ಯಾಯ 37  
  • ಆದಿಕಾಂಡ ಅಧ್ಯಾಯ 38  
  • ಆದಿಕಾಂಡ ಅಧ್ಯಾಯ 39  
  • ಆದಿಕಾಂಡ ಅಧ್ಯಾಯ 40  
  • ಆದಿಕಾಂಡ ಅಧ್ಯಾಯ 41  
  • ಆದಿಕಾಂಡ ಅಧ್ಯಾಯ 42  
  • ಆದಿಕಾಂಡ ಅಧ್ಯಾಯ 43  
  • ಆದಿಕಾಂಡ ಅಧ್ಯಾಯ 44  
  • ಆದಿಕಾಂಡ ಅಧ್ಯಾಯ 45  
  • ಆದಿಕಾಂಡ ಅಧ್ಯಾಯ 46  
  • ಆದಿಕಾಂಡ ಅಧ್ಯಾಯ 47  
  • ಆದಿಕಾಂಡ ಅಧ್ಯಾಯ 48  
  • ಆದಿಕಾಂಡ ಅಧ್ಯಾಯ 49  
  • ಆದಿಕಾಂಡ ಅಧ್ಯಾಯ 50  
×

Alert

×

Kannada Letters Keypad References