ಪವಿತ್ರ ಬೈಬಲ್

ಇಂಡಿಯನ್ ರಿವೈಸ್ಡ್ ವೆರ್ಸನ್ (ISV)
ಯೋಬನು

ಯೋಬನು ಅಧ್ಯಾಯ 26

ಯೋಬನ ಒಂಭತ್ತನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ 1 2 ಆಗ ಯೋಬನು ಹೀಗೆ ಉತ್ತರಕೊಟ್ಟನು, “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು! ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು. 3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ! ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ! 4 ಯಾರಿಗೆ ಮಾತುಗಳನ್ನು ಕಲಿಸಿದ್ದಿ? ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?” ಬಿಲ್ದದನ ಪ್ರತ್ಯುತ್ತರ 5 ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ, ಪ್ರೇತಗಳು ಆತನ ಭಯದಿಂದ ಯಾತನೆಪಡುವವು. 6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ, ನಾಶಲೋಕವು ಮರೆಯಾಗಿಲ್ಲ. 7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ. 8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು. 9 ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು. 10 ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ. 11 ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು. 12 ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು. 13 ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು, ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು. 14 ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?”
ಯೋಬನ ಒಂಭತ್ತನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ 1 .::. 2 ಆಗ ಯೋಬನು ಹೀಗೆ ಉತ್ತರಕೊಟ್ಟನು, “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು! ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು. .::. 3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ! ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ! .::. 4 ಯಾರಿಗೆ ಮಾತುಗಳನ್ನು ಕಲಿಸಿದ್ದಿ? ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?” .::. ಬಿಲ್ದದನ ಪ್ರತ್ಯುತ್ತರ 5 ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ, ಪ್ರೇತಗಳು ಆತನ ಭಯದಿಂದ ಯಾತನೆಪಡುವವು. .::. 6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ, ನಾಶಲೋಕವು ಮರೆಯಾಗಿಲ್ಲ. .::. 7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ. .::. 8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು. .::. 9 ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು. .::. 10 ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ. .::. 11 ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು. .::. 12 ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು. .::. 13 ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು, ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು. .::. 14 ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?”
  • ಕೀರ್ತನೆಗಳು ಅಧ್ಯಾಯ 1  
  • ಕೀರ್ತನೆಗಳು ಅಧ್ಯಾಯ 2  
  • ಕೀರ್ತನೆಗಳು ಅಧ್ಯಾಯ 3  
  • ಕೀರ್ತನೆಗಳು ಅಧ್ಯಾಯ 4  
  • ಕೀರ್ತನೆಗಳು ಅಧ್ಯಾಯ 5  
  • ಕೀರ್ತನೆಗಳು ಅಧ್ಯಾಯ 6  
  • ಕೀರ್ತನೆಗಳು ಅಧ್ಯಾಯ 7  
  • ಕೀರ್ತನೆಗಳು ಅಧ್ಯಾಯ 8  
  • ಕೀರ್ತನೆಗಳು ಅಧ್ಯಾಯ 9  
  • ಕೀರ್ತನೆಗಳು ಅಧ್ಯಾಯ 10  
  • ಕೀರ್ತನೆಗಳು ಅಧ್ಯಾಯ 11  
  • ಕೀರ್ತನೆಗಳು ಅಧ್ಯಾಯ 12  
  • ಕೀರ್ತನೆಗಳು ಅಧ್ಯಾಯ 13  
  • ಕೀರ್ತನೆಗಳು ಅಧ್ಯಾಯ 14  
  • ಕೀರ್ತನೆಗಳು ಅಧ್ಯಾಯ 15  
  • ಕೀರ್ತನೆಗಳು ಅಧ್ಯಾಯ 16  
  • ಕೀರ್ತನೆಗಳು ಅಧ್ಯಾಯ 17  
  • ಕೀರ್ತನೆಗಳು ಅಧ್ಯಾಯ 18  
  • ಕೀರ್ತನೆಗಳು ಅಧ್ಯಾಯ 19  
  • ಕೀರ್ತನೆಗಳು ಅಧ್ಯಾಯ 20  
  • ಕೀರ್ತನೆಗಳು ಅಧ್ಯಾಯ 21  
  • ಕೀರ್ತನೆಗಳು ಅಧ್ಯಾಯ 22  
  • ಕೀರ್ತನೆಗಳು ಅಧ್ಯಾಯ 23  
  • ಕೀರ್ತನೆಗಳು ಅಧ್ಯಾಯ 24  
  • ಕೀರ್ತನೆಗಳು ಅಧ್ಯಾಯ 25  
  • ಕೀರ್ತನೆಗಳು ಅಧ್ಯಾಯ 26  
  • ಕೀರ್ತನೆಗಳು ಅಧ್ಯಾಯ 27  
  • ಕೀರ್ತನೆಗಳು ಅಧ್ಯಾಯ 28  
  • ಕೀರ್ತನೆಗಳು ಅಧ್ಯಾಯ 29  
  • ಕೀರ್ತನೆಗಳು ಅಧ್ಯಾಯ 30  
  • ಕೀರ್ತನೆಗಳು ಅಧ್ಯಾಯ 31  
  • ಕೀರ್ತನೆಗಳು ಅಧ್ಯಾಯ 32  
  • ಕೀರ್ತನೆಗಳು ಅಧ್ಯಾಯ 33  
  • ಕೀರ್ತನೆಗಳು ಅಧ್ಯಾಯ 34  
  • ಕೀರ್ತನೆಗಳು ಅಧ್ಯಾಯ 35  
  • ಕೀರ್ತನೆಗಳು ಅಧ್ಯಾಯ 36  
  • ಕೀರ್ತನೆಗಳು ಅಧ್ಯಾಯ 37  
  • ಕೀರ್ತನೆಗಳು ಅಧ್ಯಾಯ 38  
  • ಕೀರ್ತನೆಗಳು ಅಧ್ಯಾಯ 39  
  • ಕೀರ್ತನೆಗಳು ಅಧ್ಯಾಯ 40  
  • ಕೀರ್ತನೆಗಳು ಅಧ್ಯಾಯ 41  
  • ಕೀರ್ತನೆಗಳು ಅಧ್ಯಾಯ 42  
×

Alert

×

Kannada Letters Keypad References