ಪವಿತ್ರ ಬೈಬಲ್

ಇಂಡಿಯನ್ ರಿವೈಸ್ಡ್ ವೆರ್ಸನ್ (ISV)
1 ಕೊರಿಂಥದವರಿಗೆ

1 ಕೊರಿಂಥದವರಿಗೆ ಅಧ್ಯಾಯ 10

ಕ್ರೈಸ್ತರ ಎಚ್ಚರಿಕೆಗಾಗಿ ಪೌಲನು ಇಸ್ರಾಯೇಲ್ಯರ ದೃಷ್ಟಾಂತವನ್ನು ಸೂಚಿಸಿದ್ದು 1 ಸಹೋದರರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪೂರ್ವಿಕರೆಲ್ಲರೂ * ವಿಮೋ 13:21 ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು. 2 ವಿಮೋ 14:22 ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು. 3 ಅವರೆಲ್ಲರೂ ಯೋಹಾ 6:31 ಆತ್ಮೀಕವಾದ § ವಿಮೋ 16:15,35 ಒಂದೇ ಆಹಾರವನ್ನು ತಿಂದರು. 4 * ವಿಮೋ 17:6 ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು. ಹೇಗೆಂದರೆ ಅವರನ್ನು ಹಿಂಬಾಲಿಸುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು. ಆ ಬಂಡೆ ಕ್ರಿಸ್ತನೇ. 5 ಆದರೂ ಅವರಲ್ಲಿ ಬಹು ಮಂದಿಯನ್ನು ದೇವರು ಮೆಚ್ಚಲಿಲ್ಲ. ಅರಣ್ಯ 14:16,19 ಆದ್ದರಿಂದ ಅವರು ಸಂಹರಿಸಲ್ಪಟ್ಟರು ಮತ್ತು ಅವರ ಶವಗಳು ಅಡವಿಯಲ್ಲೆಲ್ಲ ಬಿದ್ದವು. 6 ಅರಣ್ಯ 11:4,33; ಕೀರ್ತ 106:14 ಅವರು ಕೆಟ್ಟ ವಿಷಯಗಳನ್ನು ಮೋಹಿಸದಂತೆ ನಾವು ಮೋಹಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. 7 ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, § ವಿಮೋ 32:6 “ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು” ಎಂದು ಬರೆದಿದೆಯಲ್ಲಾ. * 1 ಕೊರಿ 10:14 ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ. 8 ಅರಣ್ಯ 25:1-9 ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ‡ 1 ಕೊರಿ 6:18 ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ. 9 § ಅರಣ್ಯ 21:5,6 ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು. ನಾವು ಪರೀಕ್ಷಿಸದೆ ಇರೋಣ. 10 * ಅರಣ್ಯ 14:2, 29-37 ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ. 11 ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ. ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಇದು ರೋಮಾ. 4:23,24 ಎಚ್ಚರಿಕೆಯ ಮಾತುಗಳಾಗಿ ಬರೆದಿವೆ. 12 ರೋಮಾ. 11:20 ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. 13 ಮನುಷ್ಯರಿಗೆ ಸಾಧಾರಣವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲವಲ್ಲ. § 1 ಕೊರಿ 1:9 ದೇವರು ನಂಬಿಗಸ್ತನು. ನಿಮ್ಮ ಶಕ್ತಿಗೆ ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ * 2 ಪೇತ್ರ. 2:9 ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು. ಕ್ರಿಸ್ತ ಸೇವೆಗೂ ವಿಗ್ರಹಾರಾಧನೆಗೂ ಸಂಬಂಧವೇನೂ ಇರಬಾರದೆಂಬ ಬೋಧನೆ 14 ಆದ್ದರಿಂದ ಪ್ರಿಯರೇ, 1 ಕೊರಿ 10:7 ವಿಗ್ರಹಾರಾಧನೆಯನ್ನು ಬಿಟ್ಟು ದೂರವಾಗಿರಿ. 15 ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ. ನಾನು ಹೇಳುವುದನ್ನು ನೀವೇ ಯೋಚಿಸಿರಿ. 16 ಮತ್ತಾ 26:27,28 ನಾವು ದೇವರ ಸ್ತೋತ್ರಮಾಡಿ ಪಾನಪಾತ್ರೆಯಲ್ಲಿ ಪಾನ ಮಾಡುವುದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? § ಮತ್ತಾ 26:27; 1 ಕೊರಿ 11:23,24 ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? 17 ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು * 1 ಕೊರಿ 12:12,13; ರೋಮಾ. 12:5; ಕೊಲೊ 3:15 ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ. 18 ಇಸ್ರಾಯೇಲ್ಯ ಜನರ ಕುರಿತು ಯೋಚಿಸಿರಿ. ಯಾಜ 3:7,15 ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಪಾಲುಗಾರರಾಗಿದ್ದಾರಲ್ಲವೇ. 19 ಹಾಗಾದರೆ ನಾನು ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥವು ವಾಸ್ತವವೆಂದೋ ಅಥವಾ ವಿಗ್ರಹವು ಅಥವಾ ವಿಶೇಷ ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ, 20 ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, § ಧರ್ಮೋ 32:17, ಕೀರ್ತ 106:37 ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ. 21 * 2 ಕೊರಿ 6:15,16 ನೀವು ಕರ್ತನ ಪಾನಪಾತ್ರೆಯಲ್ಲಿಯೂ ಹಾಗೂ ದೆವ್ವಗಳ ಪಾನಪಾತ್ರೆಯಲ್ಲಿಯೂ ಕುಡಿಯಲಾರಿರಿ. ಕರ್ತನ ಪಂಕ್ತಿಯಲ್ಲಿಯೂ ಮತ್ತು ದೆವ್ವಗಳ ಪಂಕ್ತಿಯಲ್ಲಿಯೂ ಊಟಮಾಡಲಾರಿರಿ. 22 ಧರ್ಮೋ 32:21 ಕರ್ತನಿಗೆ ಕೋಪವನ್ನುಂಟುಮಾಡಿ ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೋ? ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನಬಹುದೋ ಬಾರದೋ ಎಂಬ ವಿಚಾರದಲ್ಲಿ ಪರರ ಹಿತವನ್ನು ಲಕ್ಷಿಸುವುದೇ ಮುಖ್ಯವಾದದ್ದು 23 1 ಕೊರಿ 6:18; 8:9 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಅಧಿಕಾರವುಂಟು.” ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಅಧಿಕಾರವುಂಟು” ಆದರೆ ಎಲ್ಲವೂ ಜನರನ್ನು ಭಕ್ತಿಯಲ್ಲಿ ಬೆಳೆಸುವುದಿಲ್ಲ. 24 § ವ 33 ನೋಡಿರಿ ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ. 25 * 1 ಕೊರಿ 8:7: ಮಾಂಸದ ಅಂಗಡಿಯಲ್ಲಿ ಮಾರುವಂಥದ್ದು ಏನಿದ್ದರೂ ಅದನ್ನು ಮನಸ್ಸಾಕ್ಷಿಯಲ್ಲಿ ಸಂಶಯ ಹುಟ್ಟಿಸುವಂತೆ ವಿಚಾರ ಮಾಡದೇ ತಿನ್ನಿರಿ. 26 ಕೀರ್ತ 24:1; ಕೀರ್ತ 50:12 “ಭೂಮಿಯು ಅದರಲ್ಲಿರುವ ಸಮಸ್ತವೂ ಕರ್ತನದಲ್ಲವೇ.” 27 ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವುದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ಅದನ್ನು ತಿನ್ನಿರಿ. 28 ಆದರೆ ಒಬ್ಬನು ನಿಮಗೆ “ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು” ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿಮಿತ್ತವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ. 29 1 ಕೊರಿ 8:9-12: ಅದು ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸ್ಸಾಕ್ಷಿಗಾಗಿಯೇ ಹೇಳಲಾಗಿದೆ. § ರೋಮಾ. 14:16: ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು? 30 ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿಮಿತ್ತ ನನಗೆ ಯಾಕೆ ದೂಷಣೆಯಾಗಬೇಕು? 31 ಹೀಗಿರಲಾಗಿ ನೀವು ತಿಂದರೂ, ಕುಡಿದರೂ, ಇನ್ನೇನು ಮಾಡಿದರೂ * 1 ಕೊರಿ 9:22: ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ. 32 ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. 33 ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.
ಕ್ರೈಸ್ತರ ಎಚ್ಚರಿಕೆಗಾಗಿ ಪೌಲನು ಇಸ್ರಾಯೇಲ್ಯರ ದೃಷ್ಟಾಂತವನ್ನು ಸೂಚಿಸಿದ್ದು 1 ಸಹೋದರರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪೂರ್ವಿಕರೆಲ್ಲರೂ * ವಿಮೋ 13:21 ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು. .::. 2 ವಿಮೋ 14:22 ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು. .::. 3 ಅವರೆಲ್ಲರೂ ಯೋಹಾ 6:31 ಆತ್ಮೀಕವಾದ § ವಿಮೋ 16:15,35 ಒಂದೇ ಆಹಾರವನ್ನು ತಿಂದರು. .::. 4 * ವಿಮೋ 17:6 ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು. ಹೇಗೆಂದರೆ ಅವರನ್ನು ಹಿಂಬಾಲಿಸುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು. ಆ ಬಂಡೆ ಕ್ರಿಸ್ತನೇ. .::. 5 ಆದರೂ ಅವರಲ್ಲಿ ಬಹು ಮಂದಿಯನ್ನು ದೇವರು ಮೆಚ್ಚಲಿಲ್ಲ. ಅರಣ್ಯ 14:16,19 ಆದ್ದರಿಂದ ಅವರು ಸಂಹರಿಸಲ್ಪಟ್ಟರು ಮತ್ತು ಅವರ ಶವಗಳು ಅಡವಿಯಲ್ಲೆಲ್ಲ ಬಿದ್ದವು. .::. 6 ಅರಣ್ಯ 11:4,33; ಕೀರ್ತ 106:14 ಅವರು ಕೆಟ್ಟ ವಿಷಯಗಳನ್ನು ಮೋಹಿಸದಂತೆ ನಾವು ಮೋಹಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. .::. 7 ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, § ವಿಮೋ 32:6 “ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು” ಎಂದು ಬರೆದಿದೆಯಲ್ಲಾ. * 1 ಕೊರಿ 10:14 ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ. .::. 8 ಅರಣ್ಯ 25:1-9 ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ‡ 1 ಕೊರಿ 6:18 ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ. .::. 9 § ಅರಣ್ಯ 21:5,6 ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು. ನಾವು ಪರೀಕ್ಷಿಸದೆ ಇರೋಣ. .::. 10 * ಅರಣ್ಯ 14:2, 29-37 ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ. .::. 11 ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ. ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಇದು ರೋಮಾ. 4:23,24 ಎಚ್ಚರಿಕೆಯ ಮಾತುಗಳಾಗಿ ಬರೆದಿವೆ. .::. 12 ರೋಮಾ. 11:20 ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. .::. 13 ಮನುಷ್ಯರಿಗೆ ಸಾಧಾರಣವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲವಲ್ಲ. § 1 ಕೊರಿ 1:9 ದೇವರು ನಂಬಿಗಸ್ತನು. ನಿಮ್ಮ ಶಕ್ತಿಗೆ ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ * 2 ಪೇತ್ರ. 2:9 ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು. .::. ಕ್ರಿಸ್ತ ಸೇವೆಗೂ ವಿಗ್ರಹಾರಾಧನೆಗೂ ಸಂಬಂಧವೇನೂ ಇರಬಾರದೆಂಬ ಬೋಧನೆ 14 ಆದ್ದರಿಂದ ಪ್ರಿಯರೇ, 1 ಕೊರಿ 10:7 ವಿಗ್ರಹಾರಾಧನೆಯನ್ನು ಬಿಟ್ಟು ದೂರವಾಗಿರಿ. .::. 15 ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ. ನಾನು ಹೇಳುವುದನ್ನು ನೀವೇ ಯೋಚಿಸಿರಿ. .::. 16 ಮತ್ತಾ 26:27,28 ನಾವು ದೇವರ ಸ್ತೋತ್ರಮಾಡಿ ಪಾನಪಾತ್ರೆಯಲ್ಲಿ ಪಾನ ಮಾಡುವುದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? § ಮತ್ತಾ 26:27; 1 ಕೊರಿ 11:23,24 ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? .::. 17 ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು * 1 ಕೊರಿ 12:12,13; ರೋಮಾ. 12:5; ಕೊಲೊ 3:15 ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ. .::. 18 ಇಸ್ರಾಯೇಲ್ಯ ಜನರ ಕುರಿತು ಯೋಚಿಸಿರಿ. ಯಾಜ 3:7,15 ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಪಾಲುಗಾರರಾಗಿದ್ದಾರಲ್ಲವೇ. .::. 19 ಹಾಗಾದರೆ ನಾನು ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥವು ವಾಸ್ತವವೆಂದೋ ಅಥವಾ ವಿಗ್ರಹವು ಅಥವಾ ವಿಶೇಷ ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ, .::. 20 ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, § ಧರ್ಮೋ 32:17, ಕೀರ್ತ 106:37 ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ. .::. 21 * 2 ಕೊರಿ 6:15,16 ನೀವು ಕರ್ತನ ಪಾನಪಾತ್ರೆಯಲ್ಲಿಯೂ ಹಾಗೂ ದೆವ್ವಗಳ ಪಾನಪಾತ್ರೆಯಲ್ಲಿಯೂ ಕುಡಿಯಲಾರಿರಿ. ಕರ್ತನ ಪಂಕ್ತಿಯಲ್ಲಿಯೂ ಮತ್ತು ದೆವ್ವಗಳ ಪಂಕ್ತಿಯಲ್ಲಿಯೂ ಊಟಮಾಡಲಾರಿರಿ. .::. 22 ಧರ್ಮೋ 32:21 ಕರ್ತನಿಗೆ ಕೋಪವನ್ನುಂಟುಮಾಡಿ ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೋ? .::. ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನಬಹುದೋ ಬಾರದೋ ಎಂಬ ವಿಚಾರದಲ್ಲಿ ಪರರ ಹಿತವನ್ನು ಲಕ್ಷಿಸುವುದೇ ಮುಖ್ಯವಾದದ್ದು 23 1 ಕೊರಿ 6:18; 8:9 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಅಧಿಕಾರವುಂಟು.” ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಅಧಿಕಾರವುಂಟು” ಆದರೆ ಎಲ್ಲವೂ ಜನರನ್ನು ಭಕ್ತಿಯಲ್ಲಿ ಬೆಳೆಸುವುದಿಲ್ಲ. .::. 24 § ವ 33 ನೋಡಿರಿ ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ. .::. 25 * 1 ಕೊರಿ 8:7: ಮಾಂಸದ ಅಂಗಡಿಯಲ್ಲಿ ಮಾರುವಂಥದ್ದು ಏನಿದ್ದರೂ ಅದನ್ನು ಮನಸ್ಸಾಕ್ಷಿಯಲ್ಲಿ ಸಂಶಯ ಹುಟ್ಟಿಸುವಂತೆ ವಿಚಾರ ಮಾಡದೇ ತಿನ್ನಿರಿ. .::. 26 ಕೀರ್ತ 24:1; ಕೀರ್ತ 50:12 “ಭೂಮಿಯು ಅದರಲ್ಲಿರುವ ಸಮಸ್ತವೂ ಕರ್ತನದಲ್ಲವೇ.” .::. 27 ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವುದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ಅದನ್ನು ತಿನ್ನಿರಿ. .::. 28 ಆದರೆ ಒಬ್ಬನು ನಿಮಗೆ “ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು” ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿಮಿತ್ತವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ. .::. 29 1 ಕೊರಿ 8:9-12: ಅದು ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸ್ಸಾಕ್ಷಿಗಾಗಿಯೇ ಹೇಳಲಾಗಿದೆ. § ರೋಮಾ. 14:16: ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು? .::. 30 ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿಮಿತ್ತ ನನಗೆ ಯಾಕೆ ದೂಷಣೆಯಾಗಬೇಕು? .::. 31 ಹೀಗಿರಲಾಗಿ ನೀವು ತಿಂದರೂ, ಕುಡಿದರೂ, ಇನ್ನೇನು ಮಾಡಿದರೂ * 1 ಕೊರಿ 9:22: ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ. .::. 32 ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. .::. 33 ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.
  • 1 ಕೊರಿಂಥದವರಿಗೆ ಅಧ್ಯಾಯ 1  
  • 1 ಕೊರಿಂಥದವರಿಗೆ ಅಧ್ಯಾಯ 2  
  • 1 ಕೊರಿಂಥದವರಿಗೆ ಅಧ್ಯಾಯ 3  
  • 1 ಕೊರಿಂಥದವರಿಗೆ ಅಧ್ಯಾಯ 4  
  • 1 ಕೊರಿಂಥದವರಿಗೆ ಅಧ್ಯಾಯ 5  
  • 1 ಕೊರಿಂಥದವರಿಗೆ ಅಧ್ಯಾಯ 6  
  • 1 ಕೊರಿಂಥದವರಿಗೆ ಅಧ್ಯಾಯ 7  
  • 1 ಕೊರಿಂಥದವರಿಗೆ ಅಧ್ಯಾಯ 8  
  • 1 ಕೊರಿಂಥದವರಿಗೆ ಅಧ್ಯಾಯ 9  
  • 1 ಕೊರಿಂಥದವರಿಗೆ ಅಧ್ಯಾಯ 10  
  • 1 ಕೊರಿಂಥದವರಿಗೆ ಅಧ್ಯಾಯ 11  
  • 1 ಕೊರಿಂಥದವರಿಗೆ ಅಧ್ಯಾಯ 12  
  • 1 ಕೊರಿಂಥದವರಿಗೆ ಅಧ್ಯಾಯ 13  
  • 1 ಕೊರಿಂಥದವರಿಗೆ ಅಧ್ಯಾಯ 14  
  • 1 ಕೊರಿಂಥದವರಿಗೆ ಅಧ್ಯಾಯ 15  
  • 1 ಕೊರಿಂಥದವರಿಗೆ ಅಧ್ಯಾಯ 16  
×

Alert

×

Kannada Letters Keypad References