ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಯೆರೆಮಿಯ

ಯೆರೆಮಿಯ ಅಧ್ಯಾಯ 35

1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ದಿನಗಳಲ್ಲಿ, ಕರ್ತನಿಂದ ಯೆರೆವಿಾಯನಿಗೆ ಉಂಟಾದ ವಾಕ್ಯವೇನಂದರೆ-- 2 ರೇಕಾಬ್ಯರ ಮನೆಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಕರ್ತನ ಆಲಯದ ಕೊಠಡಿಗಳಲ್ಲಿ ಒಂದಕ್ಕೆ ಕರೆದುಕೊಂಡು ಹೋಗಿ ಅವರಿಗೆ ದ್ರಾಕ್ಷಾರಸವನ್ನು ಕುಡಿಯ ಕೊಡು 3 ಆಗ ನಾನು ಹಬಚ್ಚೆನ್ಯನ ಮಗನಾದ ಯೆರೆವಿಾಯನ ಮಗನಾದ ಯಾಜನ್ಯನನ್ನೂ ಅವನ ಸಹೋದರರನ್ನೂ ಕುಮಾರರೆಲ್ಲರನ್ನೂ ರೇಕಾಬ್ಯರ ಸಮಸ್ತ ಮನೆಯ ವರನೂ 4 ಕರೆದುಕೊಂಡು ಕರ್ತನ ಆಲಯಕ್ಕೆ ದ್ವಾರ ಪಾಲಕನಾದ ಶಲ್ಲೂಮನ ಮಗನಾದ ಮಾಸೇಯನ ಕೊಠಡಿಯ ಮೇಲಿರುವ ಪ್ರಧಾನರ ಕೊಠಡಿಯ ಬಳಿಯಲ್ಲಿರುವ ದೇವರ ಮನುಷ್ಯನಾದ ಇಗ್ದಲ್ಯನ ಮಗನಾದ 5 ಹಾನಾನನ ಕುಮಾರರ ಕೊಠಡಿಗೆ ತಂದು ರೇಕಾಬ್ಯರ ಮನೆಯ ಕುಮಾರರ ಮುಂದೆ ದ್ರಾಕ್ಷಾರಸ ತುಂಬಿದ ಕೂಜೆಗಳನ್ನೂ ಪಂಚಪಾತ್ರೆಗಳನ್ನೂ ಇಟ್ಟು ಅವರಿಗೆ--ದ್ರಾಕ್ಷಾರಸ ಕುಡಿಯಿರಿ ಅಂದನು. 6 ಆದರೆ ಅವರು ಹೇಳಿದ್ದೇನಂದರೆ--ನಾವು ದ್ರಾಕ್ಷಾರಸ ಕುಡಿಯುವದಿಲ್ಲ; ನಮ್ಮ ತಂದೆಯಾದ ರೇಕಾಬನ ಮಗನಾದ ಯೋನಾದಾಬನು ನಮಗೆ ಈ ಆಜ್ಞೆ ಕೊಟ್ಟನು; ಏನಂದರೆ--ನೀವಾದರೂ ನಿಮ್ಮ ಮಕ್ಕಳಾ ದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯ ಬೇಡಿರಿ; 7 ಮನೆಗಳನ್ನು ಕಟ್ಟಬೇಡಿರಿ; ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷೇ ತೋಟಗಳನ್ನು ನೆಡಬೇಡಿರಿ; ಅಂಥದ್ದು ನಿಮಗಿರಬಾರದು; ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿನಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು. 8 ಈ ಪ್ರಕಾರ ನಾವು ನಮ್ಮ ತಂದೆಯಾದ ರೇಕಾಬನ ಮಗನಾದ ಯೋನಾದಾಬನ ಮಾತನ್ನು ಅವನು ನಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನಾವೂ ನಮ್ಮ ಹೆಂಡತಿಯರೂ ಕುಮಾರ ಕುಮಾರ್ತೆಯರೂ ನಮ್ಮ ದಿನಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ 9 ವಾಸಮಾಡು ವದಕ್ಕೆ ಮನೆಗಳನ್ನು ಕಟ್ಟದ ಹಾಗೆಯೂ ನಾವು ಕೇಳಿ ದ್ದೇವೆ; ನಮಗೆ ದ್ರಾಕ್ಷೇ ತೋಟಗಳೂ ಹೊಲಗಳೂ ಬೀಜವೂ ಇಲ್ಲ. 10 ಗುಡಾರಗಳಲ್ಲಿ ವಾಸಮಾಡುತ್ತೇವೆ; ನಮ್ಮ ತಂದೆಯಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಕೇಳಿ ಮಾಡಿದ್ದೇವೆ. 11 ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ ನಾವು--ಬನ್ನಿ, ಕಸ್ದೀಯರ ದಂಡಿಗೂ ಅರಾಮಿನ ದಂಡಿಗೂ ಎಡೆಯಾಗಿ ಯೆರೂಸ ಲೇಮಿಗೆ ಹೋಗೋಣ ಅಂದೆವು. ಹೀಗೆ ಯೆರೂಸ ಲೇಮಿನಲ್ಲಿ ವಾಸಮಾಡುತ್ತೇವೆ ಅಂದರು. 12 ಆಗ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವ ರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- 13 ನೀನು ಹೋಗಿ ಯೆಹೂದದ ಮನುಷ್ಯರಿಗೂ ಯೆರೂಸಲೇ ಮಿನ ನಿವಾಸಿಗಳಿಗೂ ಹೇಳತಕ್ಕದ್ದೇನಂದರೆ--ನೀವು ನನ್ನ ವಾಕ್ಯಗಳನ್ನು ಕೇಳುವ ಹಾಗೆ ಶಿಕ್ಷಣ ತಕ್ಕೊಳ್ಳು ವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ. 14 ರೇಕಾಬನ ಮಗನಾದ ಯೋನಾದಾಬನು ತನ್ನ ಕುಮಾರರಿಗೆ ಅವರು ದ್ರಾಕ್ಷಾರಸ ಕುಡಿಯದ ಹಾಗೆ ಆಜ್ಞಾಪಿಸಿದ ಮಾತುಗಳು ನಡಿಸಲ್ಪಟ್ಟಿವೆ; ಅವರು ಇಂದಿನ ವರೆಗೂ ಅದನ್ನು ಕುಡಿಯದೆ ತಮ್ಮ ತಂದೆಯ ಆಜ್ಞೆಗೆ ವಿಧೇಯರಾಗಿದ್ದಾರೆ; ಆದರೆ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತನಾಡಿದಾಗ್ಯೂ ನೀವು ನನಗೆ ಕಿವಿಗೊಡಲಿಲ್ಲ. 15 ಬೆಳಿಗ್ಗೆ ಎದ್ದು ನನ್ನ ಸಕಲ ಸೇವಕರಾದ ಪ್ರವಾದಿಗಳನ್ನು ಸಹ ನಿಮ್ಮ ಬಳಿಗೆ ಕಳುಹಿಸಿ--ಒಬ್ಬೊಬ್ಬನು ತನ್ನ ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿ ನಿಮ್ಮ ಕ್ರಿಯೆಗಳನ್ನು ಸರಿಮಾಡಿ ಬೇರೆ ದೇವರುಗಳನ್ನು ಸೇವಿಸದೆ ಅವುಗಳನ್ನು ಹಿಂಬಾಲಿಸದೆ ಇರ್ರಿ; ಆಗ ನಾನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ವಾಸವಾಗಿರುವಿರಿ ಎಂದು ನಿಮಗೆ ಹೇಳಿಸಿದರೂ ನೀವು ಕಿವಿಗೊಡಲಿಲ್ಲ ನನ್ನ ಮಾತನ್ನೂ ಕೇಳಲಿಲ್ಲ. 16 ಆದುದರಿಂದ ತಮ್ಮ ಪಿತೃಗಳು ತಮಗೆ ಆಜ್ಞಾಪಿಸಿದ ಆಜ್ಞೆಯನ್ನು ರೇಕಾಬಿನ ಮಗನಾದ ಯೋನಾದಾಬನ ಕುಮಾರರು ಅನುಸರಿಸಿದ್ದರಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದದರಿಂದಲೂ 17 ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರಾದ ಕರ್ತನೂ ಹೇಳುವದೇನಂದರೆ--ಇಗೋ, ನಾನು ಯೆಹೂದದ ಮೇಲೆಯೂ ಯೆರೂಸಲೇಮಿನ ನಿವಾಸಿ ಗಳೆಲ್ಲರ ಮೇಲೆಯೂ ಅವರ ವಿಷಯವಾಗಿ ಹೇಳಿದ ಕೇಡನ್ನೆಲ್ಲಾ ಬರಮಾಡುತ್ತೇನೆ; ನಾನು ಅವರ ಸಂಗಡ ಮಾತನಾಡುವಾಗ ಅವರು ಕೇಳಲಿಲ್ಲ ಅವರನ್ನು ಕರೆಯು ವಾಗ ಉತ್ತರ ಕೊಡಲಿಲ್ಲ. 18 ರೇಕಾಬ್ಯರ ಮನೆಯವರಿಗೆ ಯೆರೆವಿಾಯನು ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನೀವು ನಿಮ್ಮ ಪಿತೃಗಳಾದ ಯೋನಾದಾಬನ ಆಜ್ಞೆ ಯನ್ನು ಕೇಳಿ ಅವನ ಆಜ್ಞೆಗಳನೆಲ್ಲಾ ಕೈಕೊಂಡು ಅವನು ನಿಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದರಿಂದ, 19 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ರೇಕಾಬನ ಮಗನಾದ ಯೋನಾ ದಾಬ ಸಂತಾನದವರೊಳಗೆ ನನ್ನ ಮುಂದೆ ನಿಲ್ಲತಕ್ಕ ಮನುಷ್ಯನು ಎಂದಿಗೂ ಇಲ್ಲದೆ ಹೋಗುವದಿಲ್ಲ.
1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ದಿನಗಳಲ್ಲಿ, ಕರ್ತನಿಂದ ಯೆರೆವಿಾಯನಿಗೆ ಉಂಟಾದ ವಾಕ್ಯವೇನಂದರೆ-- .::. 2 ರೇಕಾಬ್ಯರ ಮನೆಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಕರ್ತನ ಆಲಯದ ಕೊಠಡಿಗಳಲ್ಲಿ ಒಂದಕ್ಕೆ ಕರೆದುಕೊಂಡು ಹೋಗಿ ಅವರಿಗೆ ದ್ರಾಕ್ಷಾರಸವನ್ನು ಕುಡಿಯ ಕೊಡು .::. 3 ಆಗ ನಾನು ಹಬಚ್ಚೆನ್ಯನ ಮಗನಾದ ಯೆರೆವಿಾಯನ ಮಗನಾದ ಯಾಜನ್ಯನನ್ನೂ ಅವನ ಸಹೋದರರನ್ನೂ ಕುಮಾರರೆಲ್ಲರನ್ನೂ ರೇಕಾಬ್ಯರ ಸಮಸ್ತ ಮನೆಯ ವರನೂ .::. 4 ಕರೆದುಕೊಂಡು ಕರ್ತನ ಆಲಯಕ್ಕೆ ದ್ವಾರ ಪಾಲಕನಾದ ಶಲ್ಲೂಮನ ಮಗನಾದ ಮಾಸೇಯನ ಕೊಠಡಿಯ ಮೇಲಿರುವ ಪ್ರಧಾನರ ಕೊಠಡಿಯ ಬಳಿಯಲ್ಲಿರುವ ದೇವರ ಮನುಷ್ಯನಾದ ಇಗ್ದಲ್ಯನ ಮಗನಾದ .::. 5 ಹಾನಾನನ ಕುಮಾರರ ಕೊಠಡಿಗೆ ತಂದು ರೇಕಾಬ್ಯರ ಮನೆಯ ಕುಮಾರರ ಮುಂದೆ ದ್ರಾಕ್ಷಾರಸ ತುಂಬಿದ ಕೂಜೆಗಳನ್ನೂ ಪಂಚಪಾತ್ರೆಗಳನ್ನೂ ಇಟ್ಟು ಅವರಿಗೆ--ದ್ರಾಕ್ಷಾರಸ ಕುಡಿಯಿರಿ ಅಂದನು. .::. 6 ಆದರೆ ಅವರು ಹೇಳಿದ್ದೇನಂದರೆ--ನಾವು ದ್ರಾಕ್ಷಾರಸ ಕುಡಿಯುವದಿಲ್ಲ; ನಮ್ಮ ತಂದೆಯಾದ ರೇಕಾಬನ ಮಗನಾದ ಯೋನಾದಾಬನು ನಮಗೆ ಈ ಆಜ್ಞೆ ಕೊಟ್ಟನು; ಏನಂದರೆ--ನೀವಾದರೂ ನಿಮ್ಮ ಮಕ್ಕಳಾ ದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯ ಬೇಡಿರಿ; .::. 7 ಮನೆಗಳನ್ನು ಕಟ್ಟಬೇಡಿರಿ; ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷೇ ತೋಟಗಳನ್ನು ನೆಡಬೇಡಿರಿ; ಅಂಥದ್ದು ನಿಮಗಿರಬಾರದು; ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿನಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು. .::. 8 ಈ ಪ್ರಕಾರ ನಾವು ನಮ್ಮ ತಂದೆಯಾದ ರೇಕಾಬನ ಮಗನಾದ ಯೋನಾದಾಬನ ಮಾತನ್ನು ಅವನು ನಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನಾವೂ ನಮ್ಮ ಹೆಂಡತಿಯರೂ ಕುಮಾರ ಕುಮಾರ್ತೆಯರೂ ನಮ್ಮ ದಿನಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ .::. 9 ವಾಸಮಾಡು ವದಕ್ಕೆ ಮನೆಗಳನ್ನು ಕಟ್ಟದ ಹಾಗೆಯೂ ನಾವು ಕೇಳಿ ದ್ದೇವೆ; ನಮಗೆ ದ್ರಾಕ್ಷೇ ತೋಟಗಳೂ ಹೊಲಗಳೂ ಬೀಜವೂ ಇಲ್ಲ. .::. 10 ಗುಡಾರಗಳಲ್ಲಿ ವಾಸಮಾಡುತ್ತೇವೆ; ನಮ್ಮ ತಂದೆಯಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಕೇಳಿ ಮಾಡಿದ್ದೇವೆ. .::. 11 ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ ನಾವು--ಬನ್ನಿ, ಕಸ್ದೀಯರ ದಂಡಿಗೂ ಅರಾಮಿನ ದಂಡಿಗೂ ಎಡೆಯಾಗಿ ಯೆರೂಸ ಲೇಮಿಗೆ ಹೋಗೋಣ ಅಂದೆವು. ಹೀಗೆ ಯೆರೂಸ ಲೇಮಿನಲ್ಲಿ ವಾಸಮಾಡುತ್ತೇವೆ ಅಂದರು. .::. 12 ಆಗ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವ ರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- .::. 13 ನೀನು ಹೋಗಿ ಯೆಹೂದದ ಮನುಷ್ಯರಿಗೂ ಯೆರೂಸಲೇ ಮಿನ ನಿವಾಸಿಗಳಿಗೂ ಹೇಳತಕ್ಕದ್ದೇನಂದರೆ--ನೀವು ನನ್ನ ವಾಕ್ಯಗಳನ್ನು ಕೇಳುವ ಹಾಗೆ ಶಿಕ್ಷಣ ತಕ್ಕೊಳ್ಳು ವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ. .::. 14 ರೇಕಾಬನ ಮಗನಾದ ಯೋನಾದಾಬನು ತನ್ನ ಕುಮಾರರಿಗೆ ಅವರು ದ್ರಾಕ್ಷಾರಸ ಕುಡಿಯದ ಹಾಗೆ ಆಜ್ಞಾಪಿಸಿದ ಮಾತುಗಳು ನಡಿಸಲ್ಪಟ್ಟಿವೆ; ಅವರು ಇಂದಿನ ವರೆಗೂ ಅದನ್ನು ಕುಡಿಯದೆ ತಮ್ಮ ತಂದೆಯ ಆಜ್ಞೆಗೆ ವಿಧೇಯರಾಗಿದ್ದಾರೆ; ಆದರೆ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತನಾಡಿದಾಗ್ಯೂ ನೀವು ನನಗೆ ಕಿವಿಗೊಡಲಿಲ್ಲ. .::. 15 ಬೆಳಿಗ್ಗೆ ಎದ್ದು ನನ್ನ ಸಕಲ ಸೇವಕರಾದ ಪ್ರವಾದಿಗಳನ್ನು ಸಹ ನಿಮ್ಮ ಬಳಿಗೆ ಕಳುಹಿಸಿ--ಒಬ್ಬೊಬ್ಬನು ತನ್ನ ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿ ನಿಮ್ಮ ಕ್ರಿಯೆಗಳನ್ನು ಸರಿಮಾಡಿ ಬೇರೆ ದೇವರುಗಳನ್ನು ಸೇವಿಸದೆ ಅವುಗಳನ್ನು ಹಿಂಬಾಲಿಸದೆ ಇರ್ರಿ; ಆಗ ನಾನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ವಾಸವಾಗಿರುವಿರಿ ಎಂದು ನಿಮಗೆ ಹೇಳಿಸಿದರೂ ನೀವು ಕಿವಿಗೊಡಲಿಲ್ಲ ನನ್ನ ಮಾತನ್ನೂ ಕೇಳಲಿಲ್ಲ. .::. 16 ಆದುದರಿಂದ ತಮ್ಮ ಪಿತೃಗಳು ತಮಗೆ ಆಜ್ಞಾಪಿಸಿದ ಆಜ್ಞೆಯನ್ನು ರೇಕಾಬಿನ ಮಗನಾದ ಯೋನಾದಾಬನ ಕುಮಾರರು ಅನುಸರಿಸಿದ್ದರಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದದರಿಂದಲೂ .::. 17 ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರಾದ ಕರ್ತನೂ ಹೇಳುವದೇನಂದರೆ--ಇಗೋ, ನಾನು ಯೆಹೂದದ ಮೇಲೆಯೂ ಯೆರೂಸಲೇಮಿನ ನಿವಾಸಿ ಗಳೆಲ್ಲರ ಮೇಲೆಯೂ ಅವರ ವಿಷಯವಾಗಿ ಹೇಳಿದ ಕೇಡನ್ನೆಲ್ಲಾ ಬರಮಾಡುತ್ತೇನೆ; ನಾನು ಅವರ ಸಂಗಡ ಮಾತನಾಡುವಾಗ ಅವರು ಕೇಳಲಿಲ್ಲ ಅವರನ್ನು ಕರೆಯು ವಾಗ ಉತ್ತರ ಕೊಡಲಿಲ್ಲ. .::. 18 ರೇಕಾಬ್ಯರ ಮನೆಯವರಿಗೆ ಯೆರೆವಿಾಯನು ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನೀವು ನಿಮ್ಮ ಪಿತೃಗಳಾದ ಯೋನಾದಾಬನ ಆಜ್ಞೆ ಯನ್ನು ಕೇಳಿ ಅವನ ಆಜ್ಞೆಗಳನೆಲ್ಲಾ ಕೈಕೊಂಡು ಅವನು ನಿಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದರಿಂದ, .::. 19 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ರೇಕಾಬನ ಮಗನಾದ ಯೋನಾ ದಾಬ ಸಂತಾನದವರೊಳಗೆ ನನ್ನ ಮುಂದೆ ನಿಲ್ಲತಕ್ಕ ಮನುಷ್ಯನು ಎಂದಿಗೂ ಇಲ್ಲದೆ ಹೋಗುವದಿಲ್ಲ.
  • ಯೆರೆಮಿಯ ಅಧ್ಯಾಯ 1  
  • ಯೆರೆಮಿಯ ಅಧ್ಯಾಯ 2  
  • ಯೆರೆಮಿಯ ಅಧ್ಯಾಯ 3  
  • ಯೆರೆಮಿಯ ಅಧ್ಯಾಯ 4  
  • ಯೆರೆಮಿಯ ಅಧ್ಯಾಯ 5  
  • ಯೆರೆಮಿಯ ಅಧ್ಯಾಯ 6  
  • ಯೆರೆಮಿಯ ಅಧ್ಯಾಯ 7  
  • ಯೆರೆಮಿಯ ಅಧ್ಯಾಯ 8  
  • ಯೆರೆಮಿಯ ಅಧ್ಯಾಯ 9  
  • ಯೆರೆಮಿಯ ಅಧ್ಯಾಯ 10  
  • ಯೆರೆಮಿಯ ಅಧ್ಯಾಯ 11  
  • ಯೆರೆಮಿಯ ಅಧ್ಯಾಯ 12  
  • ಯೆರೆಮಿಯ ಅಧ್ಯಾಯ 13  
  • ಯೆರೆಮಿಯ ಅಧ್ಯಾಯ 14  
  • ಯೆರೆಮಿಯ ಅಧ್ಯಾಯ 15  
  • ಯೆರೆಮಿಯ ಅಧ್ಯಾಯ 16  
  • ಯೆರೆಮಿಯ ಅಧ್ಯಾಯ 17  
  • ಯೆರೆಮಿಯ ಅಧ್ಯಾಯ 18  
  • ಯೆರೆಮಿಯ ಅಧ್ಯಾಯ 19  
  • ಯೆರೆಮಿಯ ಅಧ್ಯಾಯ 20  
  • ಯೆರೆಮಿಯ ಅಧ್ಯಾಯ 21  
  • ಯೆರೆಮಿಯ ಅಧ್ಯಾಯ 22  
  • ಯೆರೆಮಿಯ ಅಧ್ಯಾಯ 23  
  • ಯೆರೆಮಿಯ ಅಧ್ಯಾಯ 24  
  • ಯೆರೆಮಿಯ ಅಧ್ಯಾಯ 25  
  • ಯೆರೆಮಿಯ ಅಧ್ಯಾಯ 26  
  • ಯೆರೆಮಿಯ ಅಧ್ಯಾಯ 27  
  • ಯೆರೆಮಿಯ ಅಧ್ಯಾಯ 28  
  • ಯೆರೆಮಿಯ ಅಧ್ಯಾಯ 29  
  • ಯೆರೆಮಿಯ ಅಧ್ಯಾಯ 30  
  • ಯೆರೆಮಿಯ ಅಧ್ಯಾಯ 31  
  • ಯೆರೆಮಿಯ ಅಧ್ಯಾಯ 32  
  • ಯೆರೆಮಿಯ ಅಧ್ಯಾಯ 33  
  • ಯೆರೆಮಿಯ ಅಧ್ಯಾಯ 34  
  • ಯೆರೆಮಿಯ ಅಧ್ಯಾಯ 35  
  • ಯೆರೆಮಿಯ ಅಧ್ಯಾಯ 36  
  • ಯೆರೆಮಿಯ ಅಧ್ಯಾಯ 37  
  • ಯೆರೆಮಿಯ ಅಧ್ಯಾಯ 38  
  • ಯೆರೆಮಿಯ ಅಧ್ಯಾಯ 39  
  • ಯೆರೆಮಿಯ ಅಧ್ಯಾಯ 40  
  • ಯೆರೆಮಿಯ ಅಧ್ಯಾಯ 41  
  • ಯೆರೆಮಿಯ ಅಧ್ಯಾಯ 42  
  • ಯೆರೆಮಿಯ ಅಧ್ಯಾಯ 43  
  • ಯೆರೆಮಿಯ ಅಧ್ಯಾಯ 44  
  • ಯೆರೆಮಿಯ ಅಧ್ಯಾಯ 45  
  • ಯೆರೆಮಿಯ ಅಧ್ಯಾಯ 46  
  • ಯೆರೆಮಿಯ ಅಧ್ಯಾಯ 47  
  • ಯೆರೆಮಿಯ ಅಧ್ಯಾಯ 48  
  • ಯೆರೆಮಿಯ ಅಧ್ಯಾಯ 49  
  • ಯೆರೆಮಿಯ ಅಧ್ಯಾಯ 50  
  • ಯೆರೆಮಿಯ ಅಧ್ಯಾಯ 51  
  • ಯೆರೆಮಿಯ ಅಧ್ಯಾಯ 52  
×

Alert

×

Kannada Letters Keypad References