ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಪ್ರಕಟನೆ

ಪ್ರಕಟನೆ ಅಧ್ಯಾಯ 8

1 ಆತನು ಏಳನೆಯ ಮುದ್ರೆಯನ್ನು ತೆರೆ ದಾಗ ಸುಮಾರು ಅರ್ಧಗಂಟೆ ಹೊತ್ತಿನವರೆಗೂ ಪರಲೋಕದಲ್ಲಿ ನಿಶ್ಯಬ್ದವಾಯಿತು. 2 ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ಮಂದಿ ದೂತರನ್ನು ಕಂಡೆನು; ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟಿದ್ದವು. 3 ಆಮೇಲೆ ಚಿನ್ನದ ಧೂಪದ ಪಾತ್ರೆಯಿದ್ದ ಮತ್ತೊಬ್ಬ ದೂತನು ಬಂದು ಯಜ್ಞವೇದಿಯ ಬಳಿ ಯಲ್ಲಿ ನಿಂತನು; ಸಿಂಹಾಸನದ ಮುಂದೆ ಇದ್ದ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು. 4 ಆಗ ಧೂಪದ ಹೊಗೆಯು ದೂತನ ಕೈಯೊಳಗಿಂದ ಹೊರಟು ಪರಿಶುದ್ಧರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಾನಕ್ಕೆ ಏರಿಹೋಯಿತು. 5 ತರುವಾಯ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಗೆ ಬಿಸಾಡಿದನು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಭೂ ಕಂಪವೂ ಉಂಟಾದವು. 6 ಏಳು ತುತೂರಿಗಳಿದ್ದ ಏಳು ಮಂದಿ ದೂತರು ತುತೂರಿಗಳನ್ನೂದುವದಕ್ಕೆ ಸಿದ್ಧಮಾಡಿಕೊಂಡರು. 7 ಮೊದಲನೆಯ ದೂತನು ಊದಿದಾಗ ರಕ್ತದಲ್ಲಿ ಕಲಸಿದ್ದ ಆನೆಕಲ್ಲಿನ ಮಳೆಯೂ ಬೆಂಕಿಯೂ ಭೂಮಿಗೆ ಸುರಿಸಲ್ಪಟ್ಟವು; ಮರಗಳೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಹಸುರು ಹುಲ್ಲೆಲ್ಲಾ ಸುಟ್ಟುಹೋಯಿತು. 8 ಎರಡನೆಯ ದೂತನು ಊದಿದಾಗ ಬೆಂಕಿಯಿಂದ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿದ್ದದ್ದು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದ ಮೂರ ರಲ್ಲಿ ಒಂದು ಭಾಗ ರಕ್ತವಾಯಿತು; 9 ಸಮುದ್ರದಲ್ಲಿರುವ ಪ್ರಾಣವಿದ್ದ ಜೀವಿಗಳೊಳಗೆ ಮೂರರಲ್ಲಿ ಒಂದು ಭಾಗ ಸತ್ತುಹೋಯಿತು; ಹಡಗುಗಳೊಳಗೆ ಮೂರರಲ್ಲಿ ಒಂದು ಭಾಗ ನಾಶವಾಯಿತು. 10 ಮೂರನೆಯ ದೂತನು ಊದಿದಾಗ ದೀಪ ದಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶ ದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು. 11 ಆ ನಕ್ಷತ್ರಕ್ಕೆ ಮಾಚಿಪತ್ರೆ ಎಂದು ಹೆಸರು. ನೀರಿನಲ್ಲಿ ಮೂರರೊಳಗೆ ಒಂದು ಭಾಗ ಮಾಚಿಪತ್ರೆ ಯಾಯಿತು. ಆ ನೀರು ವಿಷವಾದದ್ದರಿಂದ ಮನುಷ್ಯರಲ್ಲಿ ಬಹಳ ಮಂದಿ ಸತ್ತರು. 12 ನಾಲ್ಕನೆಯ ದೂತನು ಊದಿದಾಗ ಸೂರ್ಯನ ಮೂರರಲ್ಲಿ ಒಂದು ಭಾಗವೂ ಚಂದ್ರನ ಮೂರರಲ್ಲಿ ಒಂದು ಭಾಗವೂ ನಕ್ಷತ್ರಗಳ ಮೂರರಲ್ಲಿ ಒಂದು ಭಾಗವೂ ಒಡೆಯಲ್ಪಟ್ಟದ್ದರಿಂದ ಮೂರನೇ ಭಾಗವು ಕತ್ತಲಾಯಿತು; ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಇತ್ತು; ರಾತ್ರಿಯು ಹಾಗೆಯೇ ಆ 13 ಆಮೇಲೆ ನಾನು ನೋಡಲಾಗಿ ಇಗೋ, ಒಬ್ಬ ದೂತನು ಆಕಾಶ ಮಧ್ಯದಲ್ಲಿ ಹಾರುತ್ತಾ--ಇನ್ನೂ ಊದಬೇಕಾಗಿರುವ ಮೂವರು ದೂತರ ಮಿಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿ ಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.
1 ಆತನು ಏಳನೆಯ ಮುದ್ರೆಯನ್ನು ತೆರೆ ದಾಗ ಸುಮಾರು ಅರ್ಧಗಂಟೆ ಹೊತ್ತಿನವರೆಗೂ ಪರಲೋಕದಲ್ಲಿ ನಿಶ್ಯಬ್ದವಾಯಿತು. .::. 2 ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ಮಂದಿ ದೂತರನ್ನು ಕಂಡೆನು; ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟಿದ್ದವು. .::. 3 ಆಮೇಲೆ ಚಿನ್ನದ ಧೂಪದ ಪಾತ್ರೆಯಿದ್ದ ಮತ್ತೊಬ್ಬ ದೂತನು ಬಂದು ಯಜ್ಞವೇದಿಯ ಬಳಿ ಯಲ್ಲಿ ನಿಂತನು; ಸಿಂಹಾಸನದ ಮುಂದೆ ಇದ್ದ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು. .::. 4 ಆಗ ಧೂಪದ ಹೊಗೆಯು ದೂತನ ಕೈಯೊಳಗಿಂದ ಹೊರಟು ಪರಿಶುದ್ಧರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಾನಕ್ಕೆ ಏರಿಹೋಯಿತು. .::. 5 ತರುವಾಯ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಗೆ ಬಿಸಾಡಿದನು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಭೂ ಕಂಪವೂ ಉಂಟಾದವು. .::. 6 ಏಳು ತುತೂರಿಗಳಿದ್ದ ಏಳು ಮಂದಿ ದೂತರು ತುತೂರಿಗಳನ್ನೂದುವದಕ್ಕೆ ಸಿದ್ಧಮಾಡಿಕೊಂಡರು. .::. 7 ಮೊದಲನೆಯ ದೂತನು ಊದಿದಾಗ ರಕ್ತದಲ್ಲಿ ಕಲಸಿದ್ದ ಆನೆಕಲ್ಲಿನ ಮಳೆಯೂ ಬೆಂಕಿಯೂ ಭೂಮಿಗೆ ಸುರಿಸಲ್ಪಟ್ಟವು; ಮರಗಳೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಹಸುರು ಹುಲ್ಲೆಲ್ಲಾ ಸುಟ್ಟುಹೋಯಿತು. .::. 8 ಎರಡನೆಯ ದೂತನು ಊದಿದಾಗ ಬೆಂಕಿಯಿಂದ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿದ್ದದ್ದು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದ ಮೂರ ರಲ್ಲಿ ಒಂದು ಭಾಗ ರಕ್ತವಾಯಿತು; .::. 9 ಸಮುದ್ರದಲ್ಲಿರುವ ಪ್ರಾಣವಿದ್ದ ಜೀವಿಗಳೊಳಗೆ ಮೂರರಲ್ಲಿ ಒಂದು ಭಾಗ ಸತ್ತುಹೋಯಿತು; ಹಡಗುಗಳೊಳಗೆ ಮೂರರಲ್ಲಿ ಒಂದು ಭಾಗ ನಾಶವಾಯಿತು. .::. 10 ಮೂರನೆಯ ದೂತನು ಊದಿದಾಗ ದೀಪ ದಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶ ದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು. .::. 11 ಆ ನಕ್ಷತ್ರಕ್ಕೆ ಮಾಚಿಪತ್ರೆ ಎಂದು ಹೆಸರು. ನೀರಿನಲ್ಲಿ ಮೂರರೊಳಗೆ ಒಂದು ಭಾಗ ಮಾಚಿಪತ್ರೆ ಯಾಯಿತು. ಆ ನೀರು ವಿಷವಾದದ್ದರಿಂದ ಮನುಷ್ಯರಲ್ಲಿ ಬಹಳ ಮಂದಿ ಸತ್ತರು. .::. 12 ನಾಲ್ಕನೆಯ ದೂತನು ಊದಿದಾಗ ಸೂರ್ಯನ ಮೂರರಲ್ಲಿ ಒಂದು ಭಾಗವೂ ಚಂದ್ರನ ಮೂರರಲ್ಲಿ ಒಂದು ಭಾಗವೂ ನಕ್ಷತ್ರಗಳ ಮೂರರಲ್ಲಿ ಒಂದು ಭಾಗವೂ ಒಡೆಯಲ್ಪಟ್ಟದ್ದರಿಂದ ಮೂರನೇ ಭಾಗವು ಕತ್ತಲಾಯಿತು; ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಇತ್ತು; ರಾತ್ರಿಯು ಹಾಗೆಯೇ ಆ .::. 13 ಆಮೇಲೆ ನಾನು ನೋಡಲಾಗಿ ಇಗೋ, ಒಬ್ಬ ದೂತನು ಆಕಾಶ ಮಧ್ಯದಲ್ಲಿ ಹಾರುತ್ತಾ--ಇನ್ನೂ ಊದಬೇಕಾಗಿರುವ ಮೂವರು ದೂತರ ಮಿಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿ ಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.
  • ಪ್ರಕಟನೆ ಅಧ್ಯಾಯ 1  
  • ಪ್ರಕಟನೆ ಅಧ್ಯಾಯ 2  
  • ಪ್ರಕಟನೆ ಅಧ್ಯಾಯ 3  
  • ಪ್ರಕಟನೆ ಅಧ್ಯಾಯ 4  
  • ಪ್ರಕಟನೆ ಅಧ್ಯಾಯ 5  
  • ಪ್ರಕಟನೆ ಅಧ್ಯಾಯ 6  
  • ಪ್ರಕಟನೆ ಅಧ್ಯಾಯ 7  
  • ಪ್ರಕಟನೆ ಅಧ್ಯಾಯ 8  
  • ಪ್ರಕಟನೆ ಅಧ್ಯಾಯ 9  
  • ಪ್ರಕಟನೆ ಅಧ್ಯಾಯ 10  
  • ಪ್ರಕಟನೆ ಅಧ್ಯಾಯ 11  
  • ಪ್ರಕಟನೆ ಅಧ್ಯಾಯ 12  
  • ಪ್ರಕಟನೆ ಅಧ್ಯಾಯ 13  
  • ಪ್ರಕಟನೆ ಅಧ್ಯಾಯ 14  
  • ಪ್ರಕಟನೆ ಅಧ್ಯಾಯ 15  
  • ಪ್ರಕಟನೆ ಅಧ್ಯಾಯ 16  
  • ಪ್ರಕಟನೆ ಅಧ್ಯಾಯ 17  
  • ಪ್ರಕಟನೆ ಅಧ್ಯಾಯ 18  
  • ಪ್ರಕಟನೆ ಅಧ್ಯಾಯ 19  
  • ಪ್ರಕಟನೆ ಅಧ್ಯಾಯ 20  
  • ಪ್ರಕಟನೆ ಅಧ್ಯಾಯ 21  
  • ಪ್ರಕಟನೆ ಅಧ್ಯಾಯ 22  
×

Alert

×

Kannada Letters Keypad References