ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಅರಣ್ಯಕಾಂಡ

ಅರಣ್ಯಕಾಂಡ ಅಧ್ಯಾಯ 33

1 ಮೋಶೆ ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲ್ ಮಕ್ಕಳ ಪ್ರಯಾಣಗಳು ಇವೇ. 2 ಮೋಶೆಯು ಕರ್ತನ ಆಜ್ಞೆಯ ಪ್ರಕಾರ ಅವರ ಪ್ರಯಾಣಗಳ ಹೊರಡೋಣಗಳನ್ನು ಬರೆದನು. 3 ಅವರ ಪ್ರಯಾಣಗಳ ಹೊರಡೋಣಗಳು ಯಾವ ವೆಂದರೆ--ಅವರು ಮೊದಲನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪಸ್ಕ ಹಬ್ಬದ ಮರು ದಿವಸದಲ್ಲಿ ರಮ್ಸೇಸಿ ನಿಂದ ಹೊರಟರು; ಇಸ್ರಾಯೇಲ್ ಮಕ್ಕಳು ಸಮಸ್ತ ಐಗುಪ್ತ್ಯರ ಎದುರಿನಲ್ಲೇ ಜಯೋತ್ಸವದಿಂದ ಹೊರಟು ಹೋದರು. 4 ಹೇಗಂದರೆ ಕರ್ತನು ಅವರಲ್ಲಿ ಸಮಸ್ತ ಚೊಚ್ಚಲಿನವರನ್ನು ಹೊಡೆದದ್ದರಿಂದ ಐಗುಪ್ತ್ಯರು ಹೂಣಿಡುತ್ತಿದ್ದರು; ಕರ್ತನು ಅವರ ದೇವರುಗಳಿಗೂ ತೀರ್ಪು ಮಾಡಿದನು. 5 ಇಸ್ರಾಯೇಲ್ ಮಕ್ಕಳು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು. 6 ಸುಕ್ಕೋತಿನಿಂದ ಹೊರಟು ಅರಣ್ಯದ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದು ಕೊಂಡರು. 7 ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು. 8 ಪೀಹ ಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಅರಣ್ಯಕ್ಕೆ ದಾಟಿದರು; ಆಗ ಅವರು ಮೂರು ದಿವಸದ ಪ್ರಯಾಣ ಮಾಡಿ ಏತಾಮೆಂಬ ಅರಣ್ಯದಲ್ಲಿ ನಡೆದು ಮಾರಾದಲ್ಲಿ ಇಳಿದರು. 9 ಮಾರಾದಿಂದ ಹೊರಟು ಏಲೀಮಿಗೆ ಬಂದರು; ಏಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರ ಮರಗಳೂ ಇದ್ದದ ರಿಂದ ಅಲ್ಲಿ ಇಳಿದುಕೊಂಡರು. 10 ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದು ಕೊಂಡರು. 11 ಕೆಂಪುಸಮುದ್ರದಿಂದ ಹೊರಟು ಸೀನೆಂಬ ಅರಣ್ಯದಲ್ಲಿ ಇಳಿದುಕೊಂಡು, 12 ಸೀನೆಂಬ ಅರಣ್ಯದಿಂದ ಹೊರಟು ದೊಪ್ಕದಲ್ಲಿ ಇಳಿದು ಕೊಂಡರು. 13 ದೊಪ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು. 14 ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವದಕ್ಕೆ ನೀರು ಇದ್ದಿಲ್ಲ; 15 ರೆಫೀ ದೀಮಿನಿಂದ ಹೊರಟು ಸೀನಾಯಿ ಅರಣ್ಯದಲ್ಲಿ ಇಳಿದುಕೊಂಡರು. 16 ಸೀನಾಯಿ ಅರಣ್ಯದಿಂದ ಹೊರಟು ಕಿಬ್ರೋತ್ಹತಾವದಲ್ಲಿ ಇಳಿದುಕೊಂಡರು. 17 ಕಿಬ್ರೋತ್ಹತಾವದಿಂದ ಹೊರಟು ಹಚೇರೋತಿ ನಲ್ಲಿ ಇಳಿದುಕೊಂಡರು. 18 ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು. 19 ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚನಲ್ಲಿ ಇಳಿದುಕೊಂಡರು. 20 ರಿಮ್ಮೋನ್ ಪೆರೆಚನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು. 21 ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು. 22 ರಿಸ್ಸದಿಂದ ಹೊರಟು ಕೆಹೇಲಾತಿ ನಲ್ಲಿ ಇಳಿದುಕೊಂಡರು. 23 ಕೆಹೇಲಾತಿನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು. 24 ಶೆಫೆರ್ ಪರ್ವತದಿಂದ ಹೊರಟು ಹರಾದದಲ್ಲಿ ಇಳಿದು ಕೊಂಡರು. 25 ಹರಾದದಿಂದ ಹೊರಟು ಮಖೇ ಲೋತಿನಲ್ಲಿ ಇಳಿದುಕೊಂಡರು. 26 ಮಖೇಲೋತಿ ನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು. 27 ತಹತಿನಿಂದ ಹೊರಟು ತೆರಹದಲ್ಲಿ ಇಳಿದು ಕೊಂಡರು. 28 ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು. 29 ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು. 30 ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು. 31 ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು. 32 ಬೆನೇಯಾ ಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದು ಕೊಂಡರು. 33 ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು. 34 ಯೊಟ್ಬಾತ ದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು. 35 ಅಬ್ರೋನದಿಂದ ಹೊರಟು ಎಚ್ಯೋನ್ಗೆಬೆರಿನಲ್ಲಿ ಇಳಿದುಕೊಂಡರು. 36 ಎಚ್ಯೋನ್ಗೆಬೆರಿನಿಂದ ಹೊರಟು ಕಾದೇಶೆಂಬ ಜಿನ್ ಅರಣ್ಯದಲ್ಲಿ ಇಳಿದುಕೊಂಡರು. 37 ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂಚಿನಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು. 38 ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು. 39 ಆರೋನನು ಹೋರ್ ಗುಡ್ಡ ದಲ್ಲಿ ಸಾಯುವಾಗ ಅವನು ನೂರ ಇಪ್ಪತ್ತು ಮೂರು ವರುಷದವನಾಗಿದ್ದನು. 40 ಆಗ ಇಸ್ರಾಯೇಲ್ ಮಕ್ಕಳು ಬರುವದನ್ನು ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿದ್ದ ಕಾನಾನ್ಯ ರಿಗೆ ಅರಸನಾದ ಅರಾದನು ಕೇಳಿದನು. 41 ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು. 42 ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು. 43 ಪೂನೋನಿ ನಿಂದ ಹೊರಟು ಒಬೋತಿನಲ್ಲಿ ಇಳಿದುಕೊಂಡರು. 44 ಒಬೋತಿನಿಂದ ಹೊರಟು ಮೋವಾಬಿನ ಮೇರೆ ಯಲ್ಲಿರುವ ಇಯ್ಯಾಮಿನಲ್ಲಿ ಇಳಿದುಕೊಂಡರು. 45 ಇಯ್ಯಾಮಿನಿಂದ ಹೊರಟು ದೀಬೋನ್ಗಾದಿನಲ್ಲಿ ಇಳಿದುಕೊಂಡರು. 46 ದೀಬೋನ್ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದು ಕೊಂಡರು. 47 ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೇಬೋವಿಗೆದುರಾಗಿರುವ ಅಬಾರೀಮ್ ಗುಡ್ಡಗಳಲ್ಲಿ ಇಳಿದುಕೊಂಡರು. 48 ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು. 49 ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ಯೆಷೀಮೋತಿನಿಂದ ಮೋವಾಬಿನ ಬೈಲುಗಳಲ್ಲಿರುವ ಆಬೇಲ್ಶಿಟ್ಟೀಮಿನ ಪರ್ಯಂತರದ ವರೆಗೂ ಇಳಿದುಕೊಂಡರು. 50 ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ-- 51 ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಯೊರ್ದನನ್ನು ದಾಟಿ ಕಾನಾನ್ ದೇಶಕ್ಕೆ ಬರುವಾಗ 52 ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು. 53 ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ. 54 ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು. 55 ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು. 56 ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.
1. ಮೋಶೆ ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲ್ ಮಕ್ಕಳ ಪ್ರಯಾಣಗಳು ಇವೇ. 2. ಮೋಶೆಯು ಕರ್ತನ ಆಜ್ಞೆಯ ಪ್ರಕಾರ ಅವರ ಪ್ರಯಾಣಗಳ ಹೊರಡೋಣಗಳನ್ನು ಬರೆದನು. 3. ಅವರ ಪ್ರಯಾಣಗಳ ಹೊರಡೋಣಗಳು ಯಾವ ವೆಂದರೆ--ಅವರು ಮೊದಲನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪಸ್ಕ ಹಬ್ಬದ ಮರು ದಿವಸದಲ್ಲಿ ರಮ್ಸೇಸಿ ನಿಂದ ಹೊರಟರು; ಇಸ್ರಾಯೇಲ್ ಮಕ್ಕಳು ಸಮಸ್ತ ಐಗುಪ್ತ್ಯರ ಎದುರಿನಲ್ಲೇ ಜಯೋತ್ಸವದಿಂದ ಹೊರಟು ಹೋದರು. 4. ಹೇಗಂದರೆ ಕರ್ತನು ಅವರಲ್ಲಿ ಸಮಸ್ತ ಚೊಚ್ಚಲಿನವರನ್ನು ಹೊಡೆದದ್ದರಿಂದ ಐಗುಪ್ತ್ಯರು ಹೂಣಿಡುತ್ತಿದ್ದರು; ಕರ್ತನು ಅವರ ದೇವರುಗಳಿಗೂ ತೀರ್ಪು ಮಾಡಿದನು. 5. ಇಸ್ರಾಯೇಲ್ ಮಕ್ಕಳು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು. 6. ಸುಕ್ಕೋತಿನಿಂದ ಹೊರಟು ಅರಣ್ಯದ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದು ಕೊಂಡರು. 7. ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು. 8. ಪೀಹ ಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಅರಣ್ಯಕ್ಕೆ ದಾಟಿದರು; ಆಗ ಅವರು ಮೂರು ದಿವಸದ ಪ್ರಯಾಣ ಮಾಡಿ ಏತಾಮೆಂಬ ಅರಣ್ಯದಲ್ಲಿ ನಡೆದು ಮಾರಾದಲ್ಲಿ ಇಳಿದರು. 9. ಮಾರಾದಿಂದ ಹೊರಟು ಏಲೀಮಿಗೆ ಬಂದರು; ಏಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರ ಮರಗಳೂ ಇದ್ದದ ರಿಂದ ಅಲ್ಲಿ ಇಳಿದುಕೊಂಡರು. 10. ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದು ಕೊಂಡರು. 11. ಕೆಂಪುಸಮುದ್ರದಿಂದ ಹೊರಟು ಸೀನೆಂಬ ಅರಣ್ಯದಲ್ಲಿ ಇಳಿದುಕೊಂಡು, 12. ಸೀನೆಂಬ ಅರಣ್ಯದಿಂದ ಹೊರಟು ದೊಪ್ಕದಲ್ಲಿ ಇಳಿದು ಕೊಂಡರು. 13. ದೊಪ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು. 14. ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವದಕ್ಕೆ ನೀರು ಇದ್ದಿಲ್ಲ; 15. ರೆಫೀ ದೀಮಿನಿಂದ ಹೊರಟು ಸೀನಾಯಿ ಅರಣ್ಯದಲ್ಲಿ ಇಳಿದುಕೊಂಡರು. 16. ಸೀನಾಯಿ ಅರಣ್ಯದಿಂದ ಹೊರಟು ಕಿಬ್ರೋತ್ಹತಾವದಲ್ಲಿ ಇಳಿದುಕೊಂಡರು. 17. ಕಿಬ್ರೋತ್ಹತಾವದಿಂದ ಹೊರಟು ಹಚೇರೋತಿ ನಲ್ಲಿ ಇಳಿದುಕೊಂಡರು. 18. ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು. 19. ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚನಲ್ಲಿ ಇಳಿದುಕೊಂಡರು. 20. ರಿಮ್ಮೋನ್ ಪೆರೆಚನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು. 21. ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು. 22. ರಿಸ್ಸದಿಂದ ಹೊರಟು ಕೆಹೇಲಾತಿ ನಲ್ಲಿ ಇಳಿದುಕೊಂಡರು. 23. ಕೆಹೇಲಾತಿನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು. 24. ಶೆಫೆರ್ ಪರ್ವತದಿಂದ ಹೊರಟು ಹರಾದದಲ್ಲಿ ಇಳಿದು ಕೊಂಡರು. 25. ಹರಾದದಿಂದ ಹೊರಟು ಮಖೇ ಲೋತಿನಲ್ಲಿ ಇಳಿದುಕೊಂಡರು. 26. ಮಖೇಲೋತಿ ನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು. 27. ತಹತಿನಿಂದ ಹೊರಟು ತೆರಹದಲ್ಲಿ ಇಳಿದು ಕೊಂಡರು. 28. ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು. 29. ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು. 30. ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು. 31. ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು. 32. ಬೆನೇಯಾ ಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದು ಕೊಂಡರು. 33. ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು. 34. ಯೊಟ್ಬಾತ ದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು. 35. ಅಬ್ರೋನದಿಂದ ಹೊರಟು ಎಚ್ಯೋನ್ಗೆಬೆರಿನಲ್ಲಿ ಇಳಿದುಕೊಂಡರು. 36. ಎಚ್ಯೋನ್ಗೆಬೆರಿನಿಂದ ಹೊರಟು ಕಾದೇಶೆಂಬ ಜಿನ್ ಅರಣ್ಯದಲ್ಲಿ ಇಳಿದುಕೊಂಡರು. 37. ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂಚಿನಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು. 38. ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು. 39. ಆರೋನನು ಹೋರ್ ಗುಡ್ಡ ದಲ್ಲಿ ಸಾಯುವಾಗ ಅವನು ನೂರ ಇಪ್ಪತ್ತು ಮೂರು ವರುಷದವನಾಗಿದ್ದನು. 40. ಆಗ ಇಸ್ರಾಯೇಲ್ ಮಕ್ಕಳು ಬರುವದನ್ನು ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿದ್ದ ಕಾನಾನ್ಯ ರಿಗೆ ಅರಸನಾದ ಅರಾದನು ಕೇಳಿದನು. 41. ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು. 42. ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು. 43. ಪೂನೋನಿ ನಿಂದ ಹೊರಟು ಒಬೋತಿನಲ್ಲಿ ಇಳಿದುಕೊಂಡರು. 44. ಒಬೋತಿನಿಂದ ಹೊರಟು ಮೋವಾಬಿನ ಮೇರೆ ಯಲ್ಲಿರುವ ಇಯ್ಯಾಮಿನಲ್ಲಿ ಇಳಿದುಕೊಂಡರು. 45. ಇಯ್ಯಾಮಿನಿಂದ ಹೊರಟು ದೀಬೋನ್ಗಾದಿನಲ್ಲಿ ಇಳಿದುಕೊಂಡರು. 46. ದೀಬೋನ್ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದು ಕೊಂಡರು. 47. ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೇಬೋವಿಗೆದುರಾಗಿರುವ ಅಬಾರೀಮ್ ಗುಡ್ಡಗಳಲ್ಲಿ ಇಳಿದುಕೊಂಡರು. 48. ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು. 49. ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ಯೆಷೀಮೋತಿನಿಂದ ಮೋವಾಬಿನ ಬೈಲುಗಳಲ್ಲಿರುವ ಆಬೇಲ್ಶಿಟ್ಟೀಮಿನ ಪರ್ಯಂತರದ ವರೆಗೂ ಇಳಿದುಕೊಂಡರು. 50. ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ-- 51. ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಯೊರ್ದನನ್ನು ದಾಟಿ ಕಾನಾನ್ ದೇಶಕ್ಕೆ ಬರುವಾಗ 52. ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು. 53. ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ. 54. ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು. 55. ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು. 56. ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.
  • ಅರಣ್ಯಕಾಂಡ ಅಧ್ಯಾಯ 1  
  • ಅರಣ್ಯಕಾಂಡ ಅಧ್ಯಾಯ 2  
  • ಅರಣ್ಯಕಾಂಡ ಅಧ್ಯಾಯ 3  
  • ಅರಣ್ಯಕಾಂಡ ಅಧ್ಯಾಯ 4  
  • ಅರಣ್ಯಕಾಂಡ ಅಧ್ಯಾಯ 5  
  • ಅರಣ್ಯಕಾಂಡ ಅಧ್ಯಾಯ 6  
  • ಅರಣ್ಯಕಾಂಡ ಅಧ್ಯಾಯ 7  
  • ಅರಣ್ಯಕಾಂಡ ಅಧ್ಯಾಯ 8  
  • ಅರಣ್ಯಕಾಂಡ ಅಧ್ಯಾಯ 9  
  • ಅರಣ್ಯಕಾಂಡ ಅಧ್ಯಾಯ 10  
  • ಅರಣ್ಯಕಾಂಡ ಅಧ್ಯಾಯ 11  
  • ಅರಣ್ಯಕಾಂಡ ಅಧ್ಯಾಯ 12  
  • ಅರಣ್ಯಕಾಂಡ ಅಧ್ಯಾಯ 13  
  • ಅರಣ್ಯಕಾಂಡ ಅಧ್ಯಾಯ 14  
  • ಅರಣ್ಯಕಾಂಡ ಅಧ್ಯಾಯ 15  
  • ಅರಣ್ಯಕಾಂಡ ಅಧ್ಯಾಯ 16  
  • ಅರಣ್ಯಕಾಂಡ ಅಧ್ಯಾಯ 17  
  • ಅರಣ್ಯಕಾಂಡ ಅಧ್ಯಾಯ 18  
  • ಅರಣ್ಯಕಾಂಡ ಅಧ್ಯಾಯ 19  
  • ಅರಣ್ಯಕಾಂಡ ಅಧ್ಯಾಯ 20  
  • ಅರಣ್ಯಕಾಂಡ ಅಧ್ಯಾಯ 21  
  • ಅರಣ್ಯಕಾಂಡ ಅಧ್ಯಾಯ 22  
  • ಅರಣ್ಯಕಾಂಡ ಅಧ್ಯಾಯ 23  
  • ಅರಣ್ಯಕಾಂಡ ಅಧ್ಯಾಯ 24  
  • ಅರಣ್ಯಕಾಂಡ ಅಧ್ಯಾಯ 25  
  • ಅರಣ್ಯಕಾಂಡ ಅಧ್ಯಾಯ 26  
  • ಅರಣ್ಯಕಾಂಡ ಅಧ್ಯಾಯ 27  
  • ಅರಣ್ಯಕಾಂಡ ಅಧ್ಯಾಯ 28  
  • ಅರಣ್ಯಕಾಂಡ ಅಧ್ಯಾಯ 29  
  • ಅರಣ್ಯಕಾಂಡ ಅಧ್ಯಾಯ 30  
  • ಅರಣ್ಯಕಾಂಡ ಅಧ್ಯಾಯ 31  
  • ಅರಣ್ಯಕಾಂಡ ಅಧ್ಯಾಯ 32  
  • ಅರಣ್ಯಕಾಂಡ ಅಧ್ಯಾಯ 33  
  • ಅರಣ್ಯಕಾಂಡ ಅಧ್ಯಾಯ 34  
  • ಅರಣ್ಯಕಾಂಡ ಅಧ್ಯಾಯ 35  
  • ಅರಣ್ಯಕಾಂಡ ಅಧ್ಯಾಯ 36  
×

Alert

×

Kannada Letters Keypad References