ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಚೆಫನ್ಯ

ಚೆಫನ್ಯ ಅಧ್ಯಾಯ 3

1 ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! 2 ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ. 3 ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ. 4 ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ. 5 ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು. 6 ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ. 7 ನಾನು--ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವಿ; ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ಕಡಿದು ಬಿಡಲ್ಪ ಡುವದಿಲ್ಲ; ಆದರೆ ಅವರು ಬೇಗನೆ ಎದ್ದು ತಮ್ಮ ಕ್ರಿಯೆಗಳನ್ನೆಲ್ಲಾ ಕೆಡಿಸಿಬಿಟ್ಟರು ಅಂದೆನು. 8 ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು. 9 ಆಗ ನಾನು ಶುದ್ಧ ಭಾಷೆಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು; ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡು ವರು. 10 ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿ ಹೋದವರ ನನ್ನ ಮಗಳೂ ನನ್ನ ಕಾಣಿಕೆಯನ್ನು ತರುವರು. 11 ಆ ದಿನದಲ್ಲಿ ನೀನು ನನಗೆ ವಿರೋಧ ವಾಗಿ ಪಾಪ ಮಾಡಿದ ನಿನ್ನ ಎಲ್ಲಾ ಕ್ರಿಯೆಗಳ ನಿಮಿತ್ತ ನಾಚಿಕೆಪಡದೆ ಇರುವಿ; ಆಗ ನಿನ್ನ ಹೆಚ್ಚಳದಲ್ಲಿ ಸಂಭ್ರಮ ಪಡುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕು ವೆನು; ನನ್ನ ಪರಿಶುದ್ಧ ಪರ್ವತಕ್ಕೋಸ್ಕರ ಇನ್ನು ಮೇಲೆ ನೀನು ಗರ್ವಪಡುವದೇ ಇಲ್ಲ. 12 ಇದಲ್ಲದೆ ನಿನ್ನ ಮಧ್ಯದಲ್ಲಿ ಬಡವರನ್ನೂ ಹೀನವಾದವರನ್ನೂ ಉಳಿಸುವೆನು; ಇವರು ಕರ್ತನ ಹೆಸರಿನಲ್ಲಿ ನಂಬಿಕೆ ಇಡುವರು. 13 ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯಮಾಡುವದಿಲ್ಲ; ಸುಳ್ಳು ಹೇಳುವದಿಲ್ಲ; ಅವರ ಬಾಯಲ್ಲಿ ಮೋಸದ ನಾಲಿಗೆ ಕಾಣುವದಿಲ್ಲ; ಅವರು ಮಂದೆಯಂತೆ ಮೇದು ಮಲಗುವರು; ಭಯಪಡಿಸು ವವನು ಒಬ್ಬನೂ ಇರುವದಿಲ್ಲ. 14 ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು. 15 ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. 16 ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. 17 ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು. 18 ಪರಿಶುದ್ಧ ಸಭೆಯ ವಿಷಯವಾಗಿ ವ್ಯಸನ ಪಡುವವರನ್ನು ನಾನು ಕೂಡಿಸುತ್ತೇನೆ; ಅವರು ನಿನ್ನವರೇ; ಅವರ ಮೇಲೆ ನಿಂದೆ ಭಾರವಾಗಿದೆ. 19 ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು. 20 ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.
1. ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! 2. ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ. 3. ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ. 4. ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ. 5. ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು. 6. ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ. 7. ನಾನು--ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವಿ; ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ಕಡಿದು ಬಿಡಲ್ಪ ಡುವದಿಲ್ಲ; ಆದರೆ ಅವರು ಬೇಗನೆ ಎದ್ದು ತಮ್ಮ ಕ್ರಿಯೆಗಳನ್ನೆಲ್ಲಾ ಕೆಡಿಸಿಬಿಟ್ಟರು ಅಂದೆನು. 8. ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು. 9. ಆಗ ನಾನು ಶುದ್ಧ ಭಾಷೆಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು; ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡು ವರು. 10. ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿ ಹೋದವರ ನನ್ನ ಮಗಳೂ ನನ್ನ ಕಾಣಿಕೆಯನ್ನು ತರುವರು. 11. ಆ ದಿನದಲ್ಲಿ ನೀನು ನನಗೆ ವಿರೋಧ ವಾಗಿ ಪಾಪ ಮಾಡಿದ ನಿನ್ನ ಎಲ್ಲಾ ಕ್ರಿಯೆಗಳ ನಿಮಿತ್ತ ನಾಚಿಕೆಪಡದೆ ಇರುವಿ; ಆಗ ನಿನ್ನ ಹೆಚ್ಚಳದಲ್ಲಿ ಸಂಭ್ರಮ ಪಡುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕು ವೆನು; ನನ್ನ ಪರಿಶುದ್ಧ ಪರ್ವತಕ್ಕೋಸ್ಕರ ಇನ್ನು ಮೇಲೆ ನೀನು ಗರ್ವಪಡುವದೇ ಇಲ್ಲ. 12. ಇದಲ್ಲದೆ ನಿನ್ನ ಮಧ್ಯದಲ್ಲಿ ಬಡವರನ್ನೂ ಹೀನವಾದವರನ್ನೂ ಉಳಿಸುವೆನು; ಇವರು ಕರ್ತನ ಹೆಸರಿನಲ್ಲಿ ನಂಬಿಕೆ ಇಡುವರು. 13. ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯಮಾಡುವದಿಲ್ಲ; ಸುಳ್ಳು ಹೇಳುವದಿಲ್ಲ; ಅವರ ಬಾಯಲ್ಲಿ ಮೋಸದ ನಾಲಿಗೆ ಕಾಣುವದಿಲ್ಲ; ಅವರು ಮಂದೆಯಂತೆ ಮೇದು ಮಲಗುವರು; ಭಯಪಡಿಸು ವವನು ಒಬ್ಬನೂ ಇರುವದಿಲ್ಲ. 14. ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು. 15. ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. 16. ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. 17. ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು. 18. ಪರಿಶುದ್ಧ ಸಭೆಯ ವಿಷಯವಾಗಿ ವ್ಯಸನ ಪಡುವವರನ್ನು ನಾನು ಕೂಡಿಸುತ್ತೇನೆ; ಅವರು ನಿನ್ನವರೇ; ಅವರ ಮೇಲೆ ನಿಂದೆ ಭಾರವಾಗಿದೆ. 19. ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು. 20. ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.
  • ಚೆಫನ್ಯ ಅಧ್ಯಾಯ 1  
  • ಚೆಫನ್ಯ ಅಧ್ಯಾಯ 2  
  • ಚೆಫನ್ಯ ಅಧ್ಯಾಯ 3  
×

Alert

×

Kannada Letters Keypad References