ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಹೋಶೇ

ಹೋಶೇ ಅಧ್ಯಾಯ 10

1 ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿ ಸುತ್ತಾನೆ; ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ. 2 ಅವರ ಹೃದಯವು ಭೇದವಾಯಿತು, ಈಗ ಅವರು ಅಪರಾಧಿಗಳೆಂದು ಕಾಣಿಸಲ್ಪಡುವರು; ಆತನು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವನು. 3 ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು. 4 ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡು ವದಕ್ಕೆ ಸುಳ್ಳು ಪ್ರಮಾಣ ವನ್ನು ಮಾಡುತ್ತಾರೆ. ಆದದ ರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ. 5 ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು. 6 ಅದು ಸಹ ಅರಸ ನಾದ ಯಾರೇಬನಿಗೆ ಕಾಣಿಕೆಯಾಗಿ ಅಶ್ಯೂರಿಗೆ ಒಯ್ಯ ಲ್ಪಡುವದು; ಎಫ್ರಾಯಾಮು ನಾಚಿಕೆಯನ್ನು ಹೊಂದು ವದು; ಇಸ್ರಾಯೇಲ್ ಸಹ ತನ್ನ ಆಲೋಚನೆಗೆ ಅಸಹ್ಯ ಪಡುವದು. 7 ಸಮಾರ್ಯವಾದರೋ ಅದರ ಅರಸನು ನೀರಿನ ಮೇಲೆ ನೊರೆಯ ಹಾಗೆ ಅಳಿದು ಹೋಗುವನು; 8 ಇಸ್ರಾಯೇಲಿನ ಪಾಪವಾದ ಅವೇ ನಿನ ಉನ್ನತವಾದ ಸ್ಥಳಗಳು ಹಾಳಾಗಿಹೋಗುವವು. ಮುಳ್ಳುಗಿಡಗಳೂ ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವವು; ಅವರು ಬೆಟ್ಟಗಳಿಗೆ--ನಮ್ಮನ್ನು ಮುಚ್ಚಿರಿ, ಗುಡ್ಡಗಳೇ ನಮ್ಮ ಮೇಲೆ ಬೀಳಿರಿ ಅನ್ನುವರು. 9 ಓ ಇಸ್ರಾಯೇಲೇ, ನೀನು ಗಿಬ್ಯದ ದಿನಗಳ ಮೊದ ಲಿನಿಂದ ಪಾಪ ಮಾಡಿದ್ದೀ; ಅವರು ಅಲ್ಲೇ ನಿಂತು ಕೊಂಡರು. ಅನ್ಯಾಯದ ಮಕ್ಕಳಿಗೆ ವಿರೋಧವಾದ ಯುದ್ಧವು ಗಿಬ್ಯದಲ್ಲಿ ಅವರನ್ನು ಮುಟ್ಟಲಿಲ್ಲ. 10 ನಾನು ಅವರನ್ನು ಶಿಕ್ಷಿಸಲು ನನಗೆ ಮನಸ್ಸುಂಟು; ಅವರು ತಮ್ಮ ಎರಡು ಅಕ್ರಮಗಳಿಗಾಗಿ ಕಟ್ಟಲ್ಪಡುವಾಗ ಜನರು ಅವರಿಗೆ ವಿರೋಧವಾಗಿ ಕೂಡಿಬರುವರು. 11 ಎಫ್ರಾ ಯಾಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿ ಯುವ ಕಡಸಾಗಿದೆ; ತುಳಿಯುವದನ್ನು ಪ್ರೀತಿಮಾಡು ತ್ತದೆ; ಆದರೆ ನಾನು ಅದರ ಸೌಂದರ್ಯದ ಕುತ್ತಿಗೆಯ ಮೇಲೆ ದಾಟಿಹೋದೆನು. ಎಫ್ರಾಯಾಮು ಸವಾರಿಮಾಡುವ ಹಾಗೆ ನಾನು ಮಾಡುವೆನು; ಯೆಹೂದ ಉಳುವನು, ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು. 12 ನಿಮಗಾಗಿ ನೀತಿಯಲ್ಲಿ ಬಿತ್ತಿರಿ, ಕರುಣೆಯಲ್ಲಿ ಕೊಯ್ಯಿರಿ; ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ; ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವ ವರೆಗೂ ಕರ್ತನನ್ನು ಹುಡುಕುವ ಸಮಯ ಇದೇ. 13 ನೀವು ದುಷ್ಟತ್ವವನ್ನು ಬಿತ್ತು ಅನ್ಯಾಯವನ್ನು ಕೊಯ್ದಿರಿ. ಸುಳ್ಳಿನ ಫಲವನ್ನು ತಿಂದಿದ್ದೀರಿ; ನಿನ್ನ ಮಾರ್ಗದಲ್ಲಿಯೂ ನಿನ್ನ ಬಲಿಷ್ಠರಾದ ಹಲವರಲ್ಲಿಯೂ ಭರವಸೆಯಿಟ್ಟಿದ್ದೀ. 14 ನಿನ್ನ ಜನರಲ್ಲಿ ಗಲಭೆ ಉಂಟಾಗುವದು; ಶಲ್ಮಾನನು ಬೇತ್ ಅರ್ಬೇ ಲನ್ನು ನಾಶಮಾಡಿದ ಪ್ರಕಾರ ನಿನ್ನ ಕೋಟೆಗಳೆಲ್ಲಾ ನಾಶಮಾಡಲ್ಪಡುವವು; ತಾಯಿಯು ತನ್ನ ಮಕ್ಕಳ ಮೇಲೆ ಅಪ್ಪಳಿಸಿ ಪುಡಿಪುಡಿಯಾಗಿ ಮಾಡಲ್ಪಟ್ಟಳು. 15 ಹಾಗೆಯೇ ನಿಮ್ಮ ಬಹಳ ದುಷ್ಟತ್ವದ ನಿಮಿತ್ತ ಬೇತೇಲು ನಿಮಗೆ ಹೀಗೆ ಮಾಡುವದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ಕಡಿಯಲ್ಪ ಡುವನು (ಹಾಳಾಗುವನು).
1 ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿ ಸುತ್ತಾನೆ; ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ. .::. 2 ಅವರ ಹೃದಯವು ಭೇದವಾಯಿತು, ಈಗ ಅವರು ಅಪರಾಧಿಗಳೆಂದು ಕಾಣಿಸಲ್ಪಡುವರು; ಆತನು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವನು. .::. 3 ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು. .::. 4 ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡು ವದಕ್ಕೆ ಸುಳ್ಳು ಪ್ರಮಾಣ ವನ್ನು ಮಾಡುತ್ತಾರೆ. ಆದದ ರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ. .::. 5 ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು. .::. 6 ಅದು ಸಹ ಅರಸ ನಾದ ಯಾರೇಬನಿಗೆ ಕಾಣಿಕೆಯಾಗಿ ಅಶ್ಯೂರಿಗೆ ಒಯ್ಯ ಲ್ಪಡುವದು; ಎಫ್ರಾಯಾಮು ನಾಚಿಕೆಯನ್ನು ಹೊಂದು ವದು; ಇಸ್ರಾಯೇಲ್ ಸಹ ತನ್ನ ಆಲೋಚನೆಗೆ ಅಸಹ್ಯ ಪಡುವದು. .::. 7 ಸಮಾರ್ಯವಾದರೋ ಅದರ ಅರಸನು ನೀರಿನ ಮೇಲೆ ನೊರೆಯ ಹಾಗೆ ಅಳಿದು ಹೋಗುವನು; .::. 8 ಇಸ್ರಾಯೇಲಿನ ಪಾಪವಾದ ಅವೇ ನಿನ ಉನ್ನತವಾದ ಸ್ಥಳಗಳು ಹಾಳಾಗಿಹೋಗುವವು. ಮುಳ್ಳುಗಿಡಗಳೂ ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವವು; ಅವರು ಬೆಟ್ಟಗಳಿಗೆ--ನಮ್ಮನ್ನು ಮುಚ್ಚಿರಿ, ಗುಡ್ಡಗಳೇ ನಮ್ಮ ಮೇಲೆ ಬೀಳಿರಿ ಅನ್ನುವರು. .::. 9 ಓ ಇಸ್ರಾಯೇಲೇ, ನೀನು ಗಿಬ್ಯದ ದಿನಗಳ ಮೊದ ಲಿನಿಂದ ಪಾಪ ಮಾಡಿದ್ದೀ; ಅವರು ಅಲ್ಲೇ ನಿಂತು ಕೊಂಡರು. ಅನ್ಯಾಯದ ಮಕ್ಕಳಿಗೆ ವಿರೋಧವಾದ ಯುದ್ಧವು ಗಿಬ್ಯದಲ್ಲಿ ಅವರನ್ನು ಮುಟ್ಟಲಿಲ್ಲ. .::. 10 ನಾನು ಅವರನ್ನು ಶಿಕ್ಷಿಸಲು ನನಗೆ ಮನಸ್ಸುಂಟು; ಅವರು ತಮ್ಮ ಎರಡು ಅಕ್ರಮಗಳಿಗಾಗಿ ಕಟ್ಟಲ್ಪಡುವಾಗ ಜನರು ಅವರಿಗೆ ವಿರೋಧವಾಗಿ ಕೂಡಿಬರುವರು. .::. 11 ಎಫ್ರಾ ಯಾಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿ ಯುವ ಕಡಸಾಗಿದೆ; ತುಳಿಯುವದನ್ನು ಪ್ರೀತಿಮಾಡು ತ್ತದೆ; ಆದರೆ ನಾನು ಅದರ ಸೌಂದರ್ಯದ ಕುತ್ತಿಗೆಯ ಮೇಲೆ ದಾಟಿಹೋದೆನು. ಎಫ್ರಾಯಾಮು ಸವಾರಿಮಾಡುವ ಹಾಗೆ ನಾನು ಮಾಡುವೆನು; ಯೆಹೂದ ಉಳುವನು, ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು. .::. 12 ನಿಮಗಾಗಿ ನೀತಿಯಲ್ಲಿ ಬಿತ್ತಿರಿ, ಕರುಣೆಯಲ್ಲಿ ಕೊಯ್ಯಿರಿ; ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ; ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವ ವರೆಗೂ ಕರ್ತನನ್ನು ಹುಡುಕುವ ಸಮಯ ಇದೇ. .::. 13 ನೀವು ದುಷ್ಟತ್ವವನ್ನು ಬಿತ್ತು ಅನ್ಯಾಯವನ್ನು ಕೊಯ್ದಿರಿ. ಸುಳ್ಳಿನ ಫಲವನ್ನು ತಿಂದಿದ್ದೀರಿ; ನಿನ್ನ ಮಾರ್ಗದಲ್ಲಿಯೂ ನಿನ್ನ ಬಲಿಷ್ಠರಾದ ಹಲವರಲ್ಲಿಯೂ ಭರವಸೆಯಿಟ್ಟಿದ್ದೀ. .::. 14 ನಿನ್ನ ಜನರಲ್ಲಿ ಗಲಭೆ ಉಂಟಾಗುವದು; ಶಲ್ಮಾನನು ಬೇತ್ ಅರ್ಬೇ ಲನ್ನು ನಾಶಮಾಡಿದ ಪ್ರಕಾರ ನಿನ್ನ ಕೋಟೆಗಳೆಲ್ಲಾ ನಾಶಮಾಡಲ್ಪಡುವವು; ತಾಯಿಯು ತನ್ನ ಮಕ್ಕಳ ಮೇಲೆ ಅಪ್ಪಳಿಸಿ ಪುಡಿಪುಡಿಯಾಗಿ ಮಾಡಲ್ಪಟ್ಟಳು. .::. 15 ಹಾಗೆಯೇ ನಿಮ್ಮ ಬಹಳ ದುಷ್ಟತ್ವದ ನಿಮಿತ್ತ ಬೇತೇಲು ನಿಮಗೆ ಹೀಗೆ ಮಾಡುವದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ಕಡಿಯಲ್ಪ ಡುವನು (ಹಾಳಾಗುವನು).
  • ಹೋಶೇ ಅಧ್ಯಾಯ 1  
  • ಹೋಶೇ ಅಧ್ಯಾಯ 2  
  • ಹೋಶೇ ಅಧ್ಯಾಯ 3  
  • ಹೋಶೇ ಅಧ್ಯಾಯ 4  
  • ಹೋಶೇ ಅಧ್ಯಾಯ 5  
  • ಹೋಶೇ ಅಧ್ಯಾಯ 6  
  • ಹೋಶೇ ಅಧ್ಯಾಯ 7  
  • ಹೋಶೇ ಅಧ್ಯಾಯ 8  
  • ಹೋಶೇ ಅಧ್ಯಾಯ 9  
  • ಹೋಶೇ ಅಧ್ಯಾಯ 10  
  • ಹೋಶೇ ಅಧ್ಯಾಯ 11  
  • ಹೋಶೇ ಅಧ್ಯಾಯ 12  
  • ಹೋಶೇ ಅಧ್ಯಾಯ 13  
  • ಹೋಶೇ ಅಧ್ಯಾಯ 14  
×

Alert

×

Kannada Letters Keypad References