ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಯೆರೆಮಿಯ

ಯೆರೆಮಿಯ ಅಧ್ಯಾಯ 47

ಫಿಲಿಷ್ಟಿಯರ ಬಗ್ಗೆ ಸಂದೇಶ 1 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಫಿಲಿಷ್ಟಿಯರ ಬಗ್ಗೆ ಬಂದಿತು. ಫರೋಹನು ಗಾಜಾ ಪಟ್ಟಣದ ಮೇಲೆ ಧಾಳಿ ಮಾಡುವ ಮುಂಚೆ ಈ ಸಂದೇಶ ಬಂದಿತು. 2 ಯೆಹೋವನು ಹೀಗೆನ್ನುತ್ತಾನೆ:
“ನೋಡಿರಿ, ಉತ್ತರದಲ್ಲಿ ಶತ್ರು ಸೈನಿಕರು ಒಟ್ಟುಗೂಡುತ್ತಿದ್ದಾರೆ. ದಡಮೀರಿ ಭೋರ್ಗರೆಯುವ ನದಿಯಂತೆ ಅವರು ಬರುವರು.
ಅವರು ಪ್ರವಾಹದಂತೆ ಇಡೀ ದೇಶವನ್ನು ವ್ಯಾಪಿಸುವರು. ಅವರು ಪಟ್ಟಣಗಳನ್ನೂ ಅಲ್ಲಿ ವಾಸಿಸುವ ಜನರನ್ನೂ ಮುತ್ತುವರು.
ಆ ದೇಶಗಳಲ್ಲಿ ವಾಸಮಾಡುವ ಎಲ್ಲರೂ ಸಹಾಯಕ್ಕಾಗಿ ಗೋಳಿಡುವರು.
3 ಅವರು ವೇಗವಾಗಿ ಓಡುವ ಕುದುರೆಗಳ ಶಬ್ಧವನ್ನು ಕೇಳುವರು.
ಅವರು ರಭಸವಾಗಿ ಚಲಿಸುವ ರಥಗಳ ಶಬ್ಧವನ್ನು ಕೇಳುವರು. ಅವರು ಚಕ್ರಗಳ ಗಡಗಡ ಶಬ್ಧವನ್ನು ಕೇಳುವರು.
ತಂದೆಗಳು ತಮ್ಮತಮ್ಮ ಮಕ್ಕಳಿಗೆ ಸುರಕ್ಷಣೆಯನ್ನು ಕೊಡಲಾಗದಷ್ಟು ದುಬರ್ಲರಾಗಿರುವರು.
4 ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ.
ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ.
ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು. ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು.
5 ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು. ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು.
ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ, ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ?
6 “ಅಯ್ಯೋ, ಯೆಹೋವನ ಖಡ್ಗವೇ, ನೀನಿನ್ನೂ ಹೋಗಲಿಲ್ಲವೇ? ಎಷ್ಟು ಹೊತ್ತು ನೀನು ಹೋರಾಡುತ್ತಿರುವೆ?
ನಿನ್ನ ಒರೆಯಲ್ಲಿ ಹೋಗು! ಸುಮ್ಮನಿರು, ಶಾಂತವಾಗಿರು!
7 ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ? ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ.
ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”
1. {ಫಿಲಿಷ್ಟಿಯರ ಬಗ್ಗೆ ಸಂದೇಶ} ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಫಿಲಿಷ್ಟಿಯರ ಬಗ್ಗೆ ಬಂದಿತು. ಫರೋಹನು ಗಾಜಾ ಪಟ್ಟಣದ ಮೇಲೆ ಧಾಳಿ ಮಾಡುವ ಮುಂಚೆ ಈ ಸಂದೇಶ ಬಂದಿತು. 2. ಯೆಹೋವನು ಹೀಗೆನ್ನುತ್ತಾನೆ: “ನೋಡಿರಿ, ಉತ್ತರದಲ್ಲಿ ಶತ್ರು ಸೈನಿಕರು ಒಟ್ಟುಗೂಡುತ್ತಿದ್ದಾರೆ. ದಡಮೀರಿ ಭೋರ್ಗರೆಯುವ ನದಿಯಂತೆ ಅವರು ಬರುವರು. ಅವರು ಪ್ರವಾಹದಂತೆ ಇಡೀ ದೇಶವನ್ನು ವ್ಯಾಪಿಸುವರು. ಅವರು ಪಟ್ಟಣಗಳನ್ನೂ ಅಲ್ಲಿ ವಾಸಿಸುವ ಜನರನ್ನೂ ಮುತ್ತುವರು. ಆ ದೇಶಗಳಲ್ಲಿ ವಾಸಮಾಡುವ ಎಲ್ಲರೂ ಸಹಾಯಕ್ಕಾಗಿ ಗೋಳಿಡುವರು. 3. ಅವರು ವೇಗವಾಗಿ ಓಡುವ ಕುದುರೆಗಳ ಶಬ್ಧವನ್ನು ಕೇಳುವರು. ಅವರು ರಭಸವಾಗಿ ಚಲಿಸುವ ರಥಗಳ ಶಬ್ಧವನ್ನು ಕೇಳುವರು. ಅವರು ಚಕ್ರಗಳ ಗಡಗಡ ಶಬ್ಧವನ್ನು ಕೇಳುವರು. ತಂದೆಗಳು ತಮ್ಮತಮ್ಮ ಮಕ್ಕಳಿಗೆ ಸುರಕ್ಷಣೆಯನ್ನು ಕೊಡಲಾಗದಷ್ಟು ದುಬರ್ಲರಾಗಿರುವರು. 4. ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ. ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ. ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು. ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು. 5. ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು. ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು. ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ, ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ? 6. “ಅಯ್ಯೋ, ಯೆಹೋವನ ಖಡ್ಗವೇ, ನೀನಿನ್ನೂ ಹೋಗಲಿಲ್ಲವೇ? ಎಷ್ಟು ಹೊತ್ತು ನೀನು ಹೋರಾಡುತ್ತಿರುವೆ? ನಿನ್ನ ಒರೆಯಲ್ಲಿ ಹೋಗು! ಸುಮ್ಮನಿರು, ಶಾಂತವಾಗಿರು! 7. ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ? ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ. ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”
  • ಯೆರೆಮಿಯ ಅಧ್ಯಾಯ 1  
  • ಯೆರೆಮಿಯ ಅಧ್ಯಾಯ 2  
  • ಯೆರೆಮಿಯ ಅಧ್ಯಾಯ 3  
  • ಯೆರೆಮಿಯ ಅಧ್ಯಾಯ 4  
  • ಯೆರೆಮಿಯ ಅಧ್ಯಾಯ 5  
  • ಯೆರೆಮಿಯ ಅಧ್ಯಾಯ 6  
  • ಯೆರೆಮಿಯ ಅಧ್ಯಾಯ 7  
  • ಯೆರೆಮಿಯ ಅಧ್ಯಾಯ 8  
  • ಯೆರೆಮಿಯ ಅಧ್ಯಾಯ 9  
  • ಯೆರೆಮಿಯ ಅಧ್ಯಾಯ 10  
  • ಯೆರೆಮಿಯ ಅಧ್ಯಾಯ 11  
  • ಯೆರೆಮಿಯ ಅಧ್ಯಾಯ 12  
  • ಯೆರೆಮಿಯ ಅಧ್ಯಾಯ 13  
  • ಯೆರೆಮಿಯ ಅಧ್ಯಾಯ 14  
  • ಯೆರೆಮಿಯ ಅಧ್ಯಾಯ 15  
  • ಯೆರೆಮಿಯ ಅಧ್ಯಾಯ 16  
  • ಯೆರೆಮಿಯ ಅಧ್ಯಾಯ 17  
  • ಯೆರೆಮಿಯ ಅಧ್ಯಾಯ 18  
  • ಯೆರೆಮಿಯ ಅಧ್ಯಾಯ 19  
  • ಯೆರೆಮಿಯ ಅಧ್ಯಾಯ 20  
  • ಯೆರೆಮಿಯ ಅಧ್ಯಾಯ 21  
  • ಯೆರೆಮಿಯ ಅಧ್ಯಾಯ 22  
  • ಯೆರೆಮಿಯ ಅಧ್ಯಾಯ 23  
  • ಯೆರೆಮಿಯ ಅಧ್ಯಾಯ 24  
  • ಯೆರೆಮಿಯ ಅಧ್ಯಾಯ 25  
  • ಯೆರೆಮಿಯ ಅಧ್ಯಾಯ 26  
  • ಯೆರೆಮಿಯ ಅಧ್ಯಾಯ 27  
  • ಯೆರೆಮಿಯ ಅಧ್ಯಾಯ 28  
  • ಯೆರೆಮಿಯ ಅಧ್ಯಾಯ 29  
  • ಯೆರೆಮಿಯ ಅಧ್ಯಾಯ 30  
  • ಯೆರೆಮಿಯ ಅಧ್ಯಾಯ 31  
  • ಯೆರೆಮಿಯ ಅಧ್ಯಾಯ 32  
  • ಯೆರೆಮಿಯ ಅಧ್ಯಾಯ 33  
  • ಯೆರೆಮಿಯ ಅಧ್ಯಾಯ 34  
  • ಯೆರೆಮಿಯ ಅಧ್ಯಾಯ 35  
  • ಯೆರೆಮಿಯ ಅಧ್ಯಾಯ 36  
  • ಯೆರೆಮಿಯ ಅಧ್ಯಾಯ 37  
  • ಯೆರೆಮಿಯ ಅಧ್ಯಾಯ 38  
  • ಯೆರೆಮಿಯ ಅಧ್ಯಾಯ 39  
  • ಯೆರೆಮಿಯ ಅಧ್ಯಾಯ 40  
  • ಯೆರೆಮಿಯ ಅಧ್ಯಾಯ 41  
  • ಯೆರೆಮಿಯ ಅಧ್ಯಾಯ 42  
  • ಯೆರೆಮಿಯ ಅಧ್ಯಾಯ 43  
  • ಯೆರೆಮಿಯ ಅಧ್ಯಾಯ 44  
  • ಯೆರೆಮಿಯ ಅಧ್ಯಾಯ 45  
  • ಯೆರೆಮಿಯ ಅಧ್ಯಾಯ 46  
  • ಯೆರೆಮಿಯ ಅಧ್ಯಾಯ 47  
  • ಯೆರೆಮಿಯ ಅಧ್ಯಾಯ 48  
  • ಯೆರೆಮಿಯ ಅಧ್ಯಾಯ 49  
  • ಯೆರೆಮಿಯ ಅಧ್ಯಾಯ 50  
  • ಯೆರೆಮಿಯ ಅಧ್ಯಾಯ 51  
  • ಯೆರೆಮಿಯ ಅಧ್ಯಾಯ 52  
×

Alert

×

Kannada Letters Keypad References