ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
ಯೆಶಾಯ

ಯೆಶಾಯ ಅಧ್ಯಾಯ 62

ನೀತಿಯುತವಾದ ಹೊಸ ಜೆರುಸಲೇಮ್ 1 ಚೀಯೋನನ್ನು ನಾನು ಪ್ರೀತಿಸುತ್ತೇನೆ. ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ. ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು. ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
2 ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು. ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು; ಯೆಹೋವನು ತಾನೇ ಆ ಹೆಸರನ್ನು ಕೊಡುವನು.
3 ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು. ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.
4 ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ.
‘ದೇವರ ಪ್ರಿಯ ಜನರು’ ಎಂದು ನೀನು ಕರೆಯಲ್ಪಡುವಿ. ನಿನ್ನ ದೇಶವು ‘ದೇವರ ಮದಲಗಿತ್ತಿ’ ಎಂದು ಕರೆಯಲ್ಪಡುವದು.
ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ; ನಿನ್ನ ದೇಶವು ಆತನಿಗೆ ಸೇರಿದೆ.
5 ಯೌವನಸ್ಥನು ಕನ್ನಿಕೆಯನ್ನು ಪ್ರೀತಿಸಿ ಮದುವೆಯಾಗುವನು; ತನ್ನ ಹೆಂಡತಿಯನ್ನಾಗಿ ಆಕೆಯನ್ನು ಸ್ವೀಕರಿಸುವನು. ಅದೇ ರೀತಿಯಲ್ಲಿ ದೇವರು ನಿನ್ನನ್ನು ವಿವಾಹವಾಗುತ್ತಾನೆ. ದೇಶವು ತುಂಬಿಹೋಗುವಷ್ಟು ಮಕ್ಕಳನ್ನು ಆತನು ಪಡೆದುಕೊಳ್ಳುತ್ತಾನೆ.
ಒಬ್ಬನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಡನೆ ಉಲ್ಲಾಸದಿಂದಿರುವಂತೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.
6 ಜೆರುಸಲೇಮೇ, ನಿನ್ನ ಗೋಡೆಯ ಮೇಲೆ ನಾನು ಕಾವಲುಗಾರರನ್ನು ಇಟ್ಟಿರುತ್ತೇನೆ. ಆ ಕಾವಲುಗಾರರು ಮೌನವಾಗಿರುವದಿಲ್ಲ. ಅವರು ಹಗಲಿರುಳು ಪ್ರಾರ್ಥಿಸುತ್ತಾ ಇರುವರು. ಕಾವಲುಗಾರರೇ, ನೀವು ಯೆಹೋವನಿಗೆ ಪ್ರಾರ್ಥಿಸುತ್ತಾ ಇರಬೇಕು. ಆತನ ವಾಗ್ದಾನಗಳನ್ನು ನೀವು ಆತನ ನೆನಪಿಗೆ ತರಬೇಕು. ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ.
7 ಜೆರುಸಲೇಮ್ ನಗರವು ಜನರ ಹೊಗಳಿಕೆಗೆ ಪಾತ್ರವಾಗುವಂತೆ ಯೆಹೋವನು ಮಾಡುವ ತನಕ ನೀವು ಆತನಿಗೆ ಪ್ರಾರ್ಥಿಸುತ್ತಿರಬೇಕು. 8 ಯೆಹೋವನು ವಾಗ್ದಾನವನ್ನು ಮಾಡಿರುತ್ತಾನೆ. ಆತನ ಸ್ವಂತ ಹೆಸರೇ ಅದಕ್ಕೆ ಸಾಕ್ಷಿಯಾಗಿದೆ. ಆತನು ತನ್ನ ಸಾಮರ್ಥ್ಯದಿಂದ ವಾಗ್ದಾನವನ್ನು ನೆರವೇರಿಸುವನು.
ಯೆಹೋವನು ಹೇಳಿದ್ದೇನೆಂದರೆ, “ನಿನ್ನ ಆಹಾರವನ್ನು ನಾನು ನಿನ್ನ ವೈರಿಗಳಿಗೆ ಮತ್ತೆ ಕೊಡುವದಿಲ್ಲವೆಂದು ವಾಗ್ದಾನ ಮಾಡುತ್ತೇನೆ. ನೀನು ತಯಾರಿಸುವ ದ್ರಾಕ್ಷಾರಸವನ್ನು ಇನ್ನು ಮುಂದೆ ನಿನ್ನ ವೈರಿಗಳು ಸೇವಿಸುವದಿಲ್ಲವೆಂದು ನಾನು ವಾಗ್ದಾನ ಮಾಡುತ್ತೇನೆ.
9 ಒಬ್ಬನು ಆಹಾರವನ್ನು ಒಟ್ಟುಗೂಡಿಸಿ ತಾನೇ ತಿನ್ನುವನು. ಅವನು ದೇವರನ್ನು ಸ್ತುತಿಸುವನು. ದ್ರಾಕ್ಷಿಹಣ್ಣನ್ನು ಶೇಖರಿಸುವವನು ಅದರ ರಸವನ್ನು ಕುಡಿಯುವನು. ಇವೆಲ್ಲವೂ ನನ್ನ ಪರಿಶುದ್ಧ ದೇಶದಲ್ಲಿ ಆಗುವದು.” *ಇವೆಲ್ಲವೂ … ಆಗುವದು ಅಕ್ಷರಶಃ, “ಅವರು ನನ್ನ ಆಲಯದ ಅಂಗಳದಲ್ಲಿ ದ್ರಾಕ್ಷಾರಸವನ್ನು ಕುಡಿಯುವರು.” 10 ದ್ವಾರಗಳೊಳಗಿಂದ ಬನ್ನಿರಿ. ಜನರು ಬರುವದಕ್ಕೆ ದಾರಿಯನ್ನು ಸರಿಮಾಡಿರಿ.
ರಸ್ತೆಯನ್ನು ಸಿದ್ಧಪಡಿಸಿರಿ. ಅದರ ಮೇಲಿರುವ ಕಲ್ಲುಗಳನ್ನು ತೆಗೆದುಬಿಡಿರಿ.
ಜನಾಂಗಗಳು ಕಾಣುವಂತೆ ಧ್ವಜವನ್ನು ಏರಿಸಿರಿ.
11 ಇಗೋ, ಯೆಹೋವನು ದೂರದೇಶಗಳವರಿಗೆ ಹೇಳುವುದೇನೆಂದರೆ,
“ಚೀಯೋನಿನ ಜನರಿಗೆ ತಿಳಿಸಿರಿ: ‘ನೋಡು, ನಿನ್ನ ರಕ್ಷಕನು ಬರುತ್ತಿದ್ದಾನೆ. ತನ್ನ ಕೈಯಲ್ಲಿ ನಿನಗೆ ಪ್ರತಿಫಲವನ್ನು ತೆಗೆದುಕೊಂಡು ಬರುತ್ತಿದ್ದಾನೆ.’ ”
12 ಆತನ ಜನರು “ಪವಿತ್ರಜನ”ರೆಂದೂ, “ಯೆಹೋವನಿಂದ ರಕ್ಷಿಸಲ್ಪಟ್ಟವ”ರೆಂದೂ ಕರೆಯಲ್ಪಡುವರು.
ಜೆರುಸಲೇಮ್, “ದೇವರಿಗೆ ಬೇಕಾದ ಪಟ್ಟಣ”ವೆಂದೂ, “ದೇವರಿರುವ ಪಟ್ಟಣ”ವೆಂದೂ ಕರೆಯಲ್ಪಡುವದು.
ನೀತಿಯುತವಾದ ಹೊಸ ಜೆರುಸಲೇಮ್ 1 ಚೀಯೋನನ್ನು ನಾನು ಪ್ರೀತಿಸುತ್ತೇನೆ. ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ. ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು. ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
.::. 2 ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು. ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು; ಯೆಹೋವನು ತಾನೇ ಆ ಹೆಸರನ್ನು ಕೊಡುವನು.
.::. 3 ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು. ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.
.::. 4 ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ.
‘ದೇವರ ಪ್ರಿಯ ಜನರು’ ಎಂದು ನೀನು ಕರೆಯಲ್ಪಡುವಿ. ನಿನ್ನ ದೇಶವು ‘ದೇವರ ಮದಲಗಿತ್ತಿ’ ಎಂದು ಕರೆಯಲ್ಪಡುವದು.
ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ; ನಿನ್ನ ದೇಶವು ಆತನಿಗೆ ಸೇರಿದೆ.
.::. 5 ಯೌವನಸ್ಥನು ಕನ್ನಿಕೆಯನ್ನು ಪ್ರೀತಿಸಿ ಮದುವೆಯಾಗುವನು; ತನ್ನ ಹೆಂಡತಿಯನ್ನಾಗಿ ಆಕೆಯನ್ನು ಸ್ವೀಕರಿಸುವನು. ಅದೇ ರೀತಿಯಲ್ಲಿ ದೇವರು ನಿನ್ನನ್ನು ವಿವಾಹವಾಗುತ್ತಾನೆ. ದೇಶವು ತುಂಬಿಹೋಗುವಷ್ಟು ಮಕ್ಕಳನ್ನು ಆತನು ಪಡೆದುಕೊಳ್ಳುತ್ತಾನೆ.
ಒಬ್ಬನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಡನೆ ಉಲ್ಲಾಸದಿಂದಿರುವಂತೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.
.::. 6 ಜೆರುಸಲೇಮೇ, ನಿನ್ನ ಗೋಡೆಯ ಮೇಲೆ ನಾನು ಕಾವಲುಗಾರರನ್ನು ಇಟ್ಟಿರುತ್ತೇನೆ. ಆ ಕಾವಲುಗಾರರು ಮೌನವಾಗಿರುವದಿಲ್ಲ. ಅವರು ಹಗಲಿರುಳು ಪ್ರಾರ್ಥಿಸುತ್ತಾ ಇರುವರು. ಕಾವಲುಗಾರರೇ, ನೀವು ಯೆಹೋವನಿಗೆ ಪ್ರಾರ್ಥಿಸುತ್ತಾ ಇರಬೇಕು. ಆತನ ವಾಗ್ದಾನಗಳನ್ನು ನೀವು ಆತನ ನೆನಪಿಗೆ ತರಬೇಕು. ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ.
.::. 7 ಜೆರುಸಲೇಮ್ ನಗರವು ಜನರ ಹೊಗಳಿಕೆಗೆ ಪಾತ್ರವಾಗುವಂತೆ ಯೆಹೋವನು ಮಾಡುವ ತನಕ ನೀವು ಆತನಿಗೆ ಪ್ರಾರ್ಥಿಸುತ್ತಿರಬೇಕು. .::. 8 ಯೆಹೋವನು ವಾಗ್ದಾನವನ್ನು ಮಾಡಿರುತ್ತಾನೆ. ಆತನ ಸ್ವಂತ ಹೆಸರೇ ಅದಕ್ಕೆ ಸಾಕ್ಷಿಯಾಗಿದೆ. ಆತನು ತನ್ನ ಸಾಮರ್ಥ್ಯದಿಂದ ವಾಗ್ದಾನವನ್ನು ನೆರವೇರಿಸುವನು.
ಯೆಹೋವನು ಹೇಳಿದ್ದೇನೆಂದರೆ, “ನಿನ್ನ ಆಹಾರವನ್ನು ನಾನು ನಿನ್ನ ವೈರಿಗಳಿಗೆ ಮತ್ತೆ ಕೊಡುವದಿಲ್ಲವೆಂದು ವಾಗ್ದಾನ ಮಾಡುತ್ತೇನೆ. ನೀನು ತಯಾರಿಸುವ ದ್ರಾಕ್ಷಾರಸವನ್ನು ಇನ್ನು ಮುಂದೆ ನಿನ್ನ ವೈರಿಗಳು ಸೇವಿಸುವದಿಲ್ಲವೆಂದು ನಾನು ವಾಗ್ದಾನ ಮಾಡುತ್ತೇನೆ.
.::. 9 ಒಬ್ಬನು ಆಹಾರವನ್ನು ಒಟ್ಟುಗೂಡಿಸಿ ತಾನೇ ತಿನ್ನುವನು. ಅವನು ದೇವರನ್ನು ಸ್ತುತಿಸುವನು. ದ್ರಾಕ್ಷಿಹಣ್ಣನ್ನು ಶೇಖರಿಸುವವನು ಅದರ ರಸವನ್ನು ಕುಡಿಯುವನು. ಇವೆಲ್ಲವೂ ನನ್ನ ಪರಿಶುದ್ಧ ದೇಶದಲ್ಲಿ ಆಗುವದು.” *ಇವೆಲ್ಲವೂ … ಆಗುವದು ಅಕ್ಷರಶಃ, “ಅವರು ನನ್ನ ಆಲಯದ ಅಂಗಳದಲ್ಲಿ ದ್ರಾಕ್ಷಾರಸವನ್ನು ಕುಡಿಯುವರು.” .::. 10 ದ್ವಾರಗಳೊಳಗಿಂದ ಬನ್ನಿರಿ. ಜನರು ಬರುವದಕ್ಕೆ ದಾರಿಯನ್ನು ಸರಿಮಾಡಿರಿ.
ರಸ್ತೆಯನ್ನು ಸಿದ್ಧಪಡಿಸಿರಿ. ಅದರ ಮೇಲಿರುವ ಕಲ್ಲುಗಳನ್ನು ತೆಗೆದುಬಿಡಿರಿ.
ಜನಾಂಗಗಳು ಕಾಣುವಂತೆ ಧ್ವಜವನ್ನು ಏರಿಸಿರಿ.
.::. 11 ಇಗೋ, ಯೆಹೋವನು ದೂರದೇಶಗಳವರಿಗೆ ಹೇಳುವುದೇನೆಂದರೆ,
“ಚೀಯೋನಿನ ಜನರಿಗೆ ತಿಳಿಸಿರಿ: ‘ನೋಡು, ನಿನ್ನ ರಕ್ಷಕನು ಬರುತ್ತಿದ್ದಾನೆ. ತನ್ನ ಕೈಯಲ್ಲಿ ನಿನಗೆ ಪ್ರತಿಫಲವನ್ನು ತೆಗೆದುಕೊಂಡು ಬರುತ್ತಿದ್ದಾನೆ.’ ”
.::. 12 ಆತನ ಜನರು “ಪವಿತ್ರಜನ”ರೆಂದೂ, “ಯೆಹೋವನಿಂದ ರಕ್ಷಿಸಲ್ಪಟ್ಟವ”ರೆಂದೂ ಕರೆಯಲ್ಪಡುವರು.
ಜೆರುಸಲೇಮ್, “ದೇವರಿಗೆ ಬೇಕಾದ ಪಟ್ಟಣ”ವೆಂದೂ, “ದೇವರಿರುವ ಪಟ್ಟಣ”ವೆಂದೂ ಕರೆಯಲ್ಪಡುವದು.
  • ಯೆಶಾಯ ಅಧ್ಯಾಯ 1  
  • ಯೆಶಾಯ ಅಧ್ಯಾಯ 2  
  • ಯೆಶಾಯ ಅಧ್ಯಾಯ 3  
  • ಯೆಶಾಯ ಅಧ್ಯಾಯ 4  
  • ಯೆಶಾಯ ಅಧ್ಯಾಯ 5  
  • ಯೆಶಾಯ ಅಧ್ಯಾಯ 6  
  • ಯೆಶಾಯ ಅಧ್ಯಾಯ 7  
  • ಯೆಶಾಯ ಅಧ್ಯಾಯ 8  
  • ಯೆಶಾಯ ಅಧ್ಯಾಯ 9  
  • ಯೆಶಾಯ ಅಧ್ಯಾಯ 10  
  • ಯೆಶಾಯ ಅಧ್ಯಾಯ 11  
  • ಯೆಶಾಯ ಅಧ್ಯಾಯ 12  
  • ಯೆಶಾಯ ಅಧ್ಯಾಯ 13  
  • ಯೆಶಾಯ ಅಧ್ಯಾಯ 14  
  • ಯೆಶಾಯ ಅಧ್ಯಾಯ 15  
  • ಯೆಶಾಯ ಅಧ್ಯಾಯ 16  
  • ಯೆಶಾಯ ಅಧ್ಯಾಯ 17  
  • ಯೆಶಾಯ ಅಧ್ಯಾಯ 18  
  • ಯೆಶಾಯ ಅಧ್ಯಾಯ 19  
  • ಯೆಶಾಯ ಅಧ್ಯಾಯ 20  
  • ಯೆಶಾಯ ಅಧ್ಯಾಯ 21  
  • ಯೆಶಾಯ ಅಧ್ಯಾಯ 22  
  • ಯೆಶಾಯ ಅಧ್ಯಾಯ 23  
  • ಯೆಶಾಯ ಅಧ್ಯಾಯ 24  
  • ಯೆಶಾಯ ಅಧ್ಯಾಯ 25  
  • ಯೆಶಾಯ ಅಧ್ಯಾಯ 26  
  • ಯೆಶಾಯ ಅಧ್ಯಾಯ 27  
  • ಯೆಶಾಯ ಅಧ್ಯಾಯ 28  
  • ಯೆಶಾಯ ಅಧ್ಯಾಯ 29  
  • ಯೆಶಾಯ ಅಧ್ಯಾಯ 30  
  • ಯೆಶಾಯ ಅಧ್ಯಾಯ 31  
  • ಯೆಶಾಯ ಅಧ್ಯಾಯ 32  
  • ಯೆಶಾಯ ಅಧ್ಯಾಯ 33  
  • ಯೆಶಾಯ ಅಧ್ಯಾಯ 34  
  • ಯೆಶಾಯ ಅಧ್ಯಾಯ 35  
  • ಯೆಶಾಯ ಅಧ್ಯಾಯ 36  
  • ಯೆಶಾಯ ಅಧ್ಯಾಯ 37  
  • ಯೆಶಾಯ ಅಧ್ಯಾಯ 38  
  • ಯೆಶಾಯ ಅಧ್ಯಾಯ 39  
  • ಯೆಶಾಯ ಅಧ್ಯಾಯ 40  
  • ಯೆಶಾಯ ಅಧ್ಯಾಯ 41  
  • ಯೆಶಾಯ ಅಧ್ಯಾಯ 42  
  • ಯೆಶಾಯ ಅಧ್ಯಾಯ 43  
  • ಯೆಶಾಯ ಅಧ್ಯಾಯ 44  
  • ಯೆಶಾಯ ಅಧ್ಯಾಯ 45  
  • ಯೆಶಾಯ ಅಧ್ಯಾಯ 46  
  • ಯೆಶಾಯ ಅಧ್ಯಾಯ 47  
  • ಯೆಶಾಯ ಅಧ್ಯಾಯ 48  
  • ಯೆಶಾಯ ಅಧ್ಯಾಯ 49  
  • ಯೆಶಾಯ ಅಧ್ಯಾಯ 50  
  • ಯೆಶಾಯ ಅಧ್ಯಾಯ 51  
  • ಯೆಶಾಯ ಅಧ್ಯಾಯ 52  
  • ಯೆಶಾಯ ಅಧ್ಯಾಯ 53  
  • ಯೆಶಾಯ ಅಧ್ಯಾಯ 54  
  • ಯೆಶಾಯ ಅಧ್ಯಾಯ 55  
  • ಯೆಶಾಯ ಅಧ್ಯಾಯ 56  
  • ಯೆಶಾಯ ಅಧ್ಯಾಯ 57  
  • ಯೆಶಾಯ ಅಧ್ಯಾಯ 58  
  • ಯೆಶಾಯ ಅಧ್ಯಾಯ 59  
  • ಯೆಶಾಯ ಅಧ್ಯಾಯ 60  
  • ಯೆಶಾಯ ಅಧ್ಯಾಯ 61  
  • ಯೆಶಾಯ ಅಧ್ಯಾಯ 62  
  • ಯೆಶಾಯ ಅಧ್ಯಾಯ 63  
  • ಯೆಶಾಯ ಅಧ್ಯಾಯ 64  
  • ಯೆಶಾಯ ಅಧ್ಯಾಯ 65  
  • ಯೆಶಾಯ ಅಧ್ಯಾಯ 66  
×

Alert

×

Kannada Letters Keypad References