ಪವಿತ್ರ ಬೈಬಲ್

ಈಸೀ ಟು ರೀಡ್ ವರ್ಷನ್ (ESV)
2 ಪೂರ್ವಕಾಲವೃತ್ತಾ

2 ಪೂರ್ವಕಾಲವೃತ್ತಾ ಅಧ್ಯಾಯ 24

ಯೆಹೋವಾಷನು ದೇವಾಲಯವನ್ನು ತಿರಿಗಿ ಕಟ್ಟಿದ್ದು 1 ಯೆಹೋವಾಷನು ಪಟ್ಟಕ್ಕೆ ಬಂದಾಗ ಏಳು ವರ್ಷದವನಾಗಿದ್ದನು. ಅವನು ನಲವತ್ತು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಚಿಬ್ಯ. ಆಕೆ ಬೇರ್ಷೆಬದವಳಾಗಿದ್ದಳು. 2 ಯಾಜಕನಾದ ಯೆಹೋಯಾದನು ಜೀವದಿಂದಿರುವ ತನಕ ಯೆಹೋವಾಷನು ಯೆಹೋವನಿಗೆ ಯೋಗ್ಯವಾಗಿ ನಡೆದುಕೊಂಡನು. 3 ಯೆಹೋಯಾದನು ಅವನಿಗೆ ಇಬ್ಬರು ಕನ್ನಿಕೆಯರನ್ನು ಮದುವೆ ಮಾಡಿಸಿದನು. ಅವನು ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 4 ಸ್ವಲ್ಪಕಾಲವಾದ ಬಳಿಕ ಯೆಹೋವಾಷನು ದೇವಾಲಯವನ್ನು ಸರಿಪಡಿಸಲು ಆಲೋಚಿಸಿದನು. 5 ಅವನು ಯಾಜಕರನ್ನೂ ಲೇವಿಯರನ್ನೂ ಒಟ್ಟಾಗಿ ಕರೆದು, “ಯೆಹೂದ ದೇಶದ ಊರುಗಳಿಗೆ ಹೋಗಿ ಜನರು ಪ್ರತಿ ವರ್ಷ ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಸಂಗ್ರಹಿಸಿರಿ. ದೇವಾಲಯನ್ನು ಸರಿಪಡಿಸಲು ಆ ಹಣವನ್ನು ಉಪಯೋಗಿಸಿರಿ. ಇದನ್ನು ಬೇಗನೆ ಮಾಡಿರಿ” ಎಂದು ಹೇಳಿದನು. ಆದರೆ ಲೇವಿಯರು ಅವಸರ ಮಾಡಲಿಲ್ಲ. 6 ಆಗ ಅರಸನಾದ ಯೆಹೋವಾಷನು ಮಹಾಯಾಜಕನಾದ ಯೆಹೋಯಾದನನ್ನು ಕರೆದು, “ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಯೆಹೂದ ಮತ್ತು ಜೆರುಸಲೇಮಿನ ಜನರಿಂದ ಲೇವಿಯರು ಸಂಗ್ರಹಿಸಿಕೊಂಡು ಬರಲು ನೀನೇಕೆ ಅವರನ್ನು ಒತ್ತಾಯಿಸಲಿಲ್ಲ? ಮೋಶೆಯೂ ಇಸ್ರೇಲರೂ ಆ ಹಣವನ್ನು ಪವಿತ್ರ ಗುಡಾರಕ್ಕಾಗಿ ಉಪಯೋಗಿಸುತ್ತಿರಲಿಲ್ಲವೇ?” ಎಂದು ಕೇಳಿದನು. 7 ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು. 8 ಅರಸನಾದ ಯೆಹೋವಾಷನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ದೇವಾಲಯದ ಬಾಗಿಲಲ್ಲಿ ಇರಿಸಿದನು. 9 ಯೆಹೂದ ಮತ್ತು ಜೆರುಸಲೇಮಿನಲ್ಲಿ ಲೇವಿಯರು ಜನರಿಗೆಲ್ಲಾ ತಮ್ಮ ತಮ್ಮ ತೆರಿಗೆ ಹಣವನ್ನು ತಂದು ದೇವರಿಗೆ ಸಮರ್ಪಿಸುವಂತೆ ಪ್ರಕಟಿಸಿದರು. ಇಸ್ರೇಲರು ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ದೇವರ ಸೇವಕನಾದ ಮೋಶೆಯು ಜನರಿಗೆ ಇದನ್ನು ಆಜ್ಞಾಪಿಸಿದ್ದನು. 10 ಎಲ್ಲಾ ನಾಯಕರೂ ಜನರೂ ಸಂತೋಷದಿಂದ ತಮ್ಮ ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕತೊಡಗಿದರು. ಆ ಪೆಟ್ಟಿಗೆ ತುಂಬಿದ ಮೇಲೆ 11 ಲೇವಿಯರು ಅದನ್ನು ಅರಸನ ಅಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದರು; ರಾಜನ ಕಾರ್ಯದರ್ಶಿ ಮತ್ತು ಯಾಜಕರ ಮುಖಂಡನು ಬಂದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಮತ್ತೆ ಆ ಪೆಟ್ಟಿಗೆಯನ್ನು ಮುಂಚಿನ ಸ್ಥಳದಲ್ಲಿ ಇಡುತ್ತಿದ್ದರು. ಹೀಗೆ ಅವರು ಮಾಡುತ್ತಾ ಬಂದಕಾರಣ ಬಹಳ ಹಣ ಸಂಗ್ರಹಿಸಲ್ಪಟ್ಟಿತು. 12 ಯೆಹೋಯಾದನು ಮತ್ತು ರಾಜನು ದೇವಾಲಯವನ್ನು ದುರಸ್ತಿ ಮಾಡುವವರ ಕೈಗೆ ಅದನ್ನು ಕೊಟ್ಟರು. ಅವರು ಮರದ ಕುಶಲಕರ್ಮಿಗಳನ್ನೂ ಬಡಗಿಗಳನ್ನೂ ದೇವಾಲಯವನ್ನು ಸರಿಪಡಿಸಲು ನೇಮಿಸಿದರು. ಅಲ್ಲದೆ ತಾಮ್ರಕಬ್ಬಿಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿದರು. 13 ಕೆಲಸಗಳ ಮೇಲ್ವಿಚಾರಣೆ ಮಾಡುವವರು ನಂಬಿಗಸ್ತರಾಗಿದ್ದರು. ದೇವಾಲಯವನ್ನು ಸರಿಪಡಿಸುವ ಯೋಜನೆಯು ಪೂರ್ಣಗೊಂಡಿತು. ಅವರು ಅದನ್ನು ಮುಂಚೆ ಹೇಗಿತ್ತೋ ಹಾಗೆಯೇ ಮಾಡಿದರು; ಅಲ್ಲದೆ ಅದಕ್ಕಿಂತಲೂ ಹೆಚ್ಚು ಭದ್ರಪಡಿಸಿದರು. 14 ಕೆಲಸಗಾರರು ತಮ್ಮ ಕೆಲಸವು ಮುಗಿದ ಬಳಿಕ ಉಳಿದ ಹಣವನ್ನು ಅರಸನಾದ ಯೆಹೋವಾಷನಿಗೆ ಮತ್ತು ಯೆಹೋಯಾದನಿಗೆ ತಂದುಕೊಟ್ಟರು. ಆ ಹಣವನ್ನು ದೇವಾಲಯದ ಉಪಕರಣಗಳನ್ನು ಮಾಡಿಸಲು ಉಪಯೋಗಿಸಿದರು. ಅವು ದೇವಾಲಯದೊಳಗಿನ ಸೇವೆಗೂ ಸರ್ವಾಂಗಹೋಮಕ್ಕೂ ಉಪಯುಕ್ತವಾಗಿದ್ದವು. ಮಾತ್ರವಲ್ಲದೆ ಬೆಳ್ಳಿಬಂಗಾರಗಳಿಂದ ಬೋಗುಣಿ ಮತ್ತು ಇತರ ವಸ್ತುಗಳನ್ನು ಮಾಡಿದರು. ಯೆಹೋಯಾದನು ಜೀವದಿಂದಿರುವ ತನಕ ಪ್ರತೀ ದಿವಸ ಸರ್ವಾಂಗಹೋಮವನ್ನರ್ಪಿಸುತ್ತಿದ್ದನು. 15 ಯೆಹೋಯಾದನು ವೃದ್ಧನಾದನು. ಅವನು ದೀರ್ಘಕಾಲ ಬಾಳಿ ತೀರಿಹೋದನು. ಅವನು ಸಾಯುವಾಗ ಅವನಿಗೆ ನೂರ ಮೂವತ್ತು ವರ್ಷವಾಗಿತ್ತು. 16 ಅವನ ದೇಹವನ್ನು ದಾವೀದ ನಗರದಲ್ಲಿ ಅರಸುಗಳ ಸಮಾಧಿಯ ಬಳಿಯಲ್ಲಿ ಸಮಾಧಿ ಮಾಡಿದರು. ಯಾಕೆಂದರೆ ಅವನು ಜೀವಂತನಾಗಿದ್ದಾಗ ಇಸ್ರೇಲಿನ ದೇವರಿಗೂ ಆತನ ಆಲಯಕ್ಕೂ ಒಳ್ಳೆಯದನ್ನೇ ಮಾಡಿದ್ದನು. 17 ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು. 18 ಅರಸನೂ ಆ ನಾಯಕರುಗಳೂ ದೇವಾಲಯವನ್ನು ನಿರಾಕರಿಸಿ ಅಶೇರ ಸ್ತಂಭಗಳನ್ನೂ ಇತರ ವಿಗ್ರಹಗಳನ್ನೂ ಆರಾಧಿಸಿದರು. ಯೆಹೋವನು ಜೆರುಸಲೇಮಿನ ಮತ್ತು ಯೆಹೂದದ ಜನರ ಮೇಲೆ ಕೋಪಗೊಂಡನು. ಯಾಕೆಂದರೆ ಅರಸನೂ ಆ ನಾಯಕರುಗಳೂ ಯೆಹೋವನ ಮುಂದೆ ದೋಷಿಗಳಾಗಿದ್ದರು. 19 ಆತನು ಅವರನ್ನು ತನ್ನ ಕಡೆಗೆ ತಿರುಗಿಕೊಳ್ಳುವಂತೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಪ್ರವಾದಿಗಳು ಜನರನ್ನು ಎಚ್ಚರಿಸಿದರೂ ಅವರ ಮಾತುಗಳಿಗೆ ಅವರು ಗಮನಕೊಡಲಿಲ್ಲ. 20 ಜೆಕರ್ಯನ ಮೇಲೆ ದೇವರಾತ್ಮನು ಬಂದನು. ಅವನು ಯಾಜಕನಾದ ಯೆಹೋಯಾದನ ಮಗ. ಜೆಕರ್ಯನು ಜನರ ಮುಂದೆ ನಿಂತು, “ಯೆಹೋವನು ಹೀಗೆನ್ನುತ್ತಾನೆ: ‘ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನೀವು ಏಕೆ ನಿರಾಕರಿಸುತ್ತೀರಿ? ಏತಕ್ಕೆ? ನೀವು ಉದ್ಧಾರವಾಗುವುದಿಲ್ಲ. ನೀವು ಯೆಹೋವನನ್ನು ತೊರೆದದ್ದರಿಂದ ಆತನು ನಿಮ್ಮನ್ನೂ ತೊರೆದುಬಿಟ್ಟಿರುತ್ತಾನೆ’ ” ಎಂದು ಹೇಳಿದನು. 21 ಆದರೆ ಅವರು ಜೆಕರ್ಯನ ವಿರೋಧವಾಗಿ ಒಳಸಂಚು ಮಾಡಿದರು. ಅವನನ್ನು ಕೊಲ್ಲಲು ಅರಸನು ಅವರಿಗೆ ಆಜ್ಞಾಪಿಸಿದನು. ಆಗ ಅವರು ಅವನನ್ನು ದೇವಾಲಯದ ಅಂಗಳದಲ್ಲಿಯೇ ಕಲ್ಲೆಸೆದು ಕೊಂದರು. 22 ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು. 23 ಆ ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ಬಂತು. ಅವರು ಯೆಹೂದದೇಶ ಮತ್ತು ಜೆರುಸಲೇಮಿನ ಮೇಲೆ ದಾಳಿ ಮಾಡಿ ಎಲ್ಲಾ ನಾಯಕರನ್ನು ಸಂಹರಿಸಿದರು. ಅಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದಮಸ್ಕದ ಅರಸನಿಗೆ ಕಳುಹಿಸಿದರು. 24 ಅರಾಮ್ಯರ ಸೈನ್ಯವು ಸ್ವಲ್ಪ ಮಂದಿಯಿಂದ ಕೂಡಿದ್ದರೂ ಯೆಹೂದದ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟಿತು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದುದರಿಂದ ದೇವರಾದ ಯೆಹೋವನು ಹಾಗೆ ಮಾಡಿದನು. ಈ ರೀತಿಯಾಗಿ ಯೆಹೋವಾಷನು ಶಿಕ್ಷಿಸಲ್ಪಟ್ಟನು. 25 ಅರಾಮ್ಯರು ಯೆಹೋವಾಷನನ್ನು ಬಿಟ್ಟುಹೋಗುವಾಗ ಅವನು ರೋಗದಿಂದ ಬಹಳ ಅಸ್ವಸ್ಥನಾಗಿದ್ದನು. ಅವನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಸಂಚು ಮಾಡಿದರು. ಯಾಕೆಂದರೆ ಅವನು ಯೆಹೋಯಾದನ ಮಗನಾದ ಜೆಕರ್ಯನನ್ನು ಕೊಂದದ್ದರಿಂದ ಸೇವಕರು ಯೆಹೋವಾಷನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದರು. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ಅರಸರುಗಳ ಸಮಾಧಿಯಲ್ಲಿ ಹೂಳಿಡಲಿಲ್ಲ. 26 ಯೆಹೋವಾಷನನ್ನು ಕೊಲ್ಲಲು ಸಂಚುಮಾಡಿದ ಸೇವಕರು ಯಾರೆಂದರೆ: ಜಾಬಾದ್ ಮತ್ತು ಯೆಹೋಜಾಬಾದ್, ಜಾಬಾದನ ತಾಯಿಯ ಹೆಸರು ಶಿಮ್ಗಾತ್, ಈಕೆ ಅಮ್ಮೋನಿಯಳು. ಯೆಹೋಜಾಬಾದನ ತಾಯಿಯು ಶಿಮ್ರೀತ್ ಎಂಬಾಕೆ, ಈಕೆ ಮೋವಾಬ್ಯಳು. 27 ಯೆಹೋವಾಷನ ಮಕ್ಕಳ ಚರಿತ್ರೆ, ಅವನ ವಿರುದ್ಧವಾಗಿ ಹೇಳಿದ ಪ್ರವಾದನೆಗಳು, ಅವನು ದೇವಾಲಯವನ್ನು ಸರಿಪಡಿಸಿದ ವಿಷಯಗಳು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆಯಲ್ಪಟ್ಟಿದೆ. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ರಾಜನಾದನು.
ಯೆಹೋವಾಷನು ದೇವಾಲಯವನ್ನು ತಿರಿಗಿ ಕಟ್ಟಿದ್ದು 1 ಯೆಹೋವಾಷನು ಪಟ್ಟಕ್ಕೆ ಬಂದಾಗ ಏಳು ವರ್ಷದವನಾಗಿದ್ದನು. ಅವನು ನಲವತ್ತು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಚಿಬ್ಯ. ಆಕೆ ಬೇರ್ಷೆಬದವಳಾಗಿದ್ದಳು. .::. 2 ಯಾಜಕನಾದ ಯೆಹೋಯಾದನು ಜೀವದಿಂದಿರುವ ತನಕ ಯೆಹೋವಾಷನು ಯೆಹೋವನಿಗೆ ಯೋಗ್ಯವಾಗಿ ನಡೆದುಕೊಂಡನು. .::. 3 ಯೆಹೋಯಾದನು ಅವನಿಗೆ ಇಬ್ಬರು ಕನ್ನಿಕೆಯರನ್ನು ಮದುವೆ ಮಾಡಿಸಿದನು. ಅವನು ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. .::. 4 ಸ್ವಲ್ಪಕಾಲವಾದ ಬಳಿಕ ಯೆಹೋವಾಷನು ದೇವಾಲಯವನ್ನು ಸರಿಪಡಿಸಲು ಆಲೋಚಿಸಿದನು. .::. 5 ಅವನು ಯಾಜಕರನ್ನೂ ಲೇವಿಯರನ್ನೂ ಒಟ್ಟಾಗಿ ಕರೆದು, “ಯೆಹೂದ ದೇಶದ ಊರುಗಳಿಗೆ ಹೋಗಿ ಜನರು ಪ್ರತಿ ವರ್ಷ ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಸಂಗ್ರಹಿಸಿರಿ. ದೇವಾಲಯನ್ನು ಸರಿಪಡಿಸಲು ಆ ಹಣವನ್ನು ಉಪಯೋಗಿಸಿರಿ. ಇದನ್ನು ಬೇಗನೆ ಮಾಡಿರಿ” ಎಂದು ಹೇಳಿದನು. ಆದರೆ ಲೇವಿಯರು ಅವಸರ ಮಾಡಲಿಲ್ಲ. .::. 6 ಆಗ ಅರಸನಾದ ಯೆಹೋವಾಷನು ಮಹಾಯಾಜಕನಾದ ಯೆಹೋಯಾದನನ್ನು ಕರೆದು, “ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಯೆಹೂದ ಮತ್ತು ಜೆರುಸಲೇಮಿನ ಜನರಿಂದ ಲೇವಿಯರು ಸಂಗ್ರಹಿಸಿಕೊಂಡು ಬರಲು ನೀನೇಕೆ ಅವರನ್ನು ಒತ್ತಾಯಿಸಲಿಲ್ಲ? ಮೋಶೆಯೂ ಇಸ್ರೇಲರೂ ಆ ಹಣವನ್ನು ಪವಿತ್ರ ಗುಡಾರಕ್ಕಾಗಿ ಉಪಯೋಗಿಸುತ್ತಿರಲಿಲ್ಲವೇ?” ಎಂದು ಕೇಳಿದನು. .::. 7 ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು. .::. 8 ಅರಸನಾದ ಯೆಹೋವಾಷನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ದೇವಾಲಯದ ಬಾಗಿಲಲ್ಲಿ ಇರಿಸಿದನು. .::. 9 ಯೆಹೂದ ಮತ್ತು ಜೆರುಸಲೇಮಿನಲ್ಲಿ ಲೇವಿಯರು ಜನರಿಗೆಲ್ಲಾ ತಮ್ಮ ತಮ್ಮ ತೆರಿಗೆ ಹಣವನ್ನು ತಂದು ದೇವರಿಗೆ ಸಮರ್ಪಿಸುವಂತೆ ಪ್ರಕಟಿಸಿದರು. ಇಸ್ರೇಲರು ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ದೇವರ ಸೇವಕನಾದ ಮೋಶೆಯು ಜನರಿಗೆ ಇದನ್ನು ಆಜ್ಞಾಪಿಸಿದ್ದನು. .::. 10 ಎಲ್ಲಾ ನಾಯಕರೂ ಜನರೂ ಸಂತೋಷದಿಂದ ತಮ್ಮ ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕತೊಡಗಿದರು. ಆ ಪೆಟ್ಟಿಗೆ ತುಂಬಿದ ಮೇಲೆ .::. 11 ಲೇವಿಯರು ಅದನ್ನು ಅರಸನ ಅಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದರು; ರಾಜನ ಕಾರ್ಯದರ್ಶಿ ಮತ್ತು ಯಾಜಕರ ಮುಖಂಡನು ಬಂದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಮತ್ತೆ ಆ ಪೆಟ್ಟಿಗೆಯನ್ನು ಮುಂಚಿನ ಸ್ಥಳದಲ್ಲಿ ಇಡುತ್ತಿದ್ದರು. ಹೀಗೆ ಅವರು ಮಾಡುತ್ತಾ ಬಂದಕಾರಣ ಬಹಳ ಹಣ ಸಂಗ್ರಹಿಸಲ್ಪಟ್ಟಿತು. .::. 12 ಯೆಹೋಯಾದನು ಮತ್ತು ರಾಜನು ದೇವಾಲಯವನ್ನು ದುರಸ್ತಿ ಮಾಡುವವರ ಕೈಗೆ ಅದನ್ನು ಕೊಟ್ಟರು. ಅವರು ಮರದ ಕುಶಲಕರ್ಮಿಗಳನ್ನೂ ಬಡಗಿಗಳನ್ನೂ ದೇವಾಲಯವನ್ನು ಸರಿಪಡಿಸಲು ನೇಮಿಸಿದರು. ಅಲ್ಲದೆ ತಾಮ್ರಕಬ್ಬಿಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿದರು. .::. 13 ಕೆಲಸಗಳ ಮೇಲ್ವಿಚಾರಣೆ ಮಾಡುವವರು ನಂಬಿಗಸ್ತರಾಗಿದ್ದರು. ದೇವಾಲಯವನ್ನು ಸರಿಪಡಿಸುವ ಯೋಜನೆಯು ಪೂರ್ಣಗೊಂಡಿತು. ಅವರು ಅದನ್ನು ಮುಂಚೆ ಹೇಗಿತ್ತೋ ಹಾಗೆಯೇ ಮಾಡಿದರು; ಅಲ್ಲದೆ ಅದಕ್ಕಿಂತಲೂ ಹೆಚ್ಚು ಭದ್ರಪಡಿಸಿದರು. .::. 14 ಕೆಲಸಗಾರರು ತಮ್ಮ ಕೆಲಸವು ಮುಗಿದ ಬಳಿಕ ಉಳಿದ ಹಣವನ್ನು ಅರಸನಾದ ಯೆಹೋವಾಷನಿಗೆ ಮತ್ತು ಯೆಹೋಯಾದನಿಗೆ ತಂದುಕೊಟ್ಟರು. ಆ ಹಣವನ್ನು ದೇವಾಲಯದ ಉಪಕರಣಗಳನ್ನು ಮಾಡಿಸಲು ಉಪಯೋಗಿಸಿದರು. ಅವು ದೇವಾಲಯದೊಳಗಿನ ಸೇವೆಗೂ ಸರ್ವಾಂಗಹೋಮಕ್ಕೂ ಉಪಯುಕ್ತವಾಗಿದ್ದವು. ಮಾತ್ರವಲ್ಲದೆ ಬೆಳ್ಳಿಬಂಗಾರಗಳಿಂದ ಬೋಗುಣಿ ಮತ್ತು ಇತರ ವಸ್ತುಗಳನ್ನು ಮಾಡಿದರು. ಯೆಹೋಯಾದನು ಜೀವದಿಂದಿರುವ ತನಕ ಪ್ರತೀ ದಿವಸ ಸರ್ವಾಂಗಹೋಮವನ್ನರ್ಪಿಸುತ್ತಿದ್ದನು. .::. 15 ಯೆಹೋಯಾದನು ವೃದ್ಧನಾದನು. ಅವನು ದೀರ್ಘಕಾಲ ಬಾಳಿ ತೀರಿಹೋದನು. ಅವನು ಸಾಯುವಾಗ ಅವನಿಗೆ ನೂರ ಮೂವತ್ತು ವರ್ಷವಾಗಿತ್ತು. .::. 16 ಅವನ ದೇಹವನ್ನು ದಾವೀದ ನಗರದಲ್ಲಿ ಅರಸುಗಳ ಸಮಾಧಿಯ ಬಳಿಯಲ್ಲಿ ಸಮಾಧಿ ಮಾಡಿದರು. ಯಾಕೆಂದರೆ ಅವನು ಜೀವಂತನಾಗಿದ್ದಾಗ ಇಸ್ರೇಲಿನ ದೇವರಿಗೂ ಆತನ ಆಲಯಕ್ಕೂ ಒಳ್ಳೆಯದನ್ನೇ ಮಾಡಿದ್ದನು. .::. 17 ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು. .::. 18 ಅರಸನೂ ಆ ನಾಯಕರುಗಳೂ ದೇವಾಲಯವನ್ನು ನಿರಾಕರಿಸಿ ಅಶೇರ ಸ್ತಂಭಗಳನ್ನೂ ಇತರ ವಿಗ್ರಹಗಳನ್ನೂ ಆರಾಧಿಸಿದರು. ಯೆಹೋವನು ಜೆರುಸಲೇಮಿನ ಮತ್ತು ಯೆಹೂದದ ಜನರ ಮೇಲೆ ಕೋಪಗೊಂಡನು. ಯಾಕೆಂದರೆ ಅರಸನೂ ಆ ನಾಯಕರುಗಳೂ ಯೆಹೋವನ ಮುಂದೆ ದೋಷಿಗಳಾಗಿದ್ದರು. .::. 19 ಆತನು ಅವರನ್ನು ತನ್ನ ಕಡೆಗೆ ತಿರುಗಿಕೊಳ್ಳುವಂತೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಪ್ರವಾದಿಗಳು ಜನರನ್ನು ಎಚ್ಚರಿಸಿದರೂ ಅವರ ಮಾತುಗಳಿಗೆ ಅವರು ಗಮನಕೊಡಲಿಲ್ಲ. .::. 20 ಜೆಕರ್ಯನ ಮೇಲೆ ದೇವರಾತ್ಮನು ಬಂದನು. ಅವನು ಯಾಜಕನಾದ ಯೆಹೋಯಾದನ ಮಗ. ಜೆಕರ್ಯನು ಜನರ ಮುಂದೆ ನಿಂತು, “ಯೆಹೋವನು ಹೀಗೆನ್ನುತ್ತಾನೆ: ‘ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನೀವು ಏಕೆ ನಿರಾಕರಿಸುತ್ತೀರಿ? ಏತಕ್ಕೆ? ನೀವು ಉದ್ಧಾರವಾಗುವುದಿಲ್ಲ. ನೀವು ಯೆಹೋವನನ್ನು ತೊರೆದದ್ದರಿಂದ ಆತನು ನಿಮ್ಮನ್ನೂ ತೊರೆದುಬಿಟ್ಟಿರುತ್ತಾನೆ’ ” ಎಂದು ಹೇಳಿದನು. .::. 21 ಆದರೆ ಅವರು ಜೆಕರ್ಯನ ವಿರೋಧವಾಗಿ ಒಳಸಂಚು ಮಾಡಿದರು. ಅವನನ್ನು ಕೊಲ್ಲಲು ಅರಸನು ಅವರಿಗೆ ಆಜ್ಞಾಪಿಸಿದನು. ಆಗ ಅವರು ಅವನನ್ನು ದೇವಾಲಯದ ಅಂಗಳದಲ್ಲಿಯೇ ಕಲ್ಲೆಸೆದು ಕೊಂದರು. .::. 22 ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು. .::. 23 ಆ ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ಬಂತು. ಅವರು ಯೆಹೂದದೇಶ ಮತ್ತು ಜೆರುಸಲೇಮಿನ ಮೇಲೆ ದಾಳಿ ಮಾಡಿ ಎಲ್ಲಾ ನಾಯಕರನ್ನು ಸಂಹರಿಸಿದರು. ಅಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದಮಸ್ಕದ ಅರಸನಿಗೆ ಕಳುಹಿಸಿದರು. .::. 24 ಅರಾಮ್ಯರ ಸೈನ್ಯವು ಸ್ವಲ್ಪ ಮಂದಿಯಿಂದ ಕೂಡಿದ್ದರೂ ಯೆಹೂದದ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟಿತು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದುದರಿಂದ ದೇವರಾದ ಯೆಹೋವನು ಹಾಗೆ ಮಾಡಿದನು. ಈ ರೀತಿಯಾಗಿ ಯೆಹೋವಾಷನು ಶಿಕ್ಷಿಸಲ್ಪಟ್ಟನು. .::. 25 ಅರಾಮ್ಯರು ಯೆಹೋವಾಷನನ್ನು ಬಿಟ್ಟುಹೋಗುವಾಗ ಅವನು ರೋಗದಿಂದ ಬಹಳ ಅಸ್ವಸ್ಥನಾಗಿದ್ದನು. ಅವನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಸಂಚು ಮಾಡಿದರು. ಯಾಕೆಂದರೆ ಅವನು ಯೆಹೋಯಾದನ ಮಗನಾದ ಜೆಕರ್ಯನನ್ನು ಕೊಂದದ್ದರಿಂದ ಸೇವಕರು ಯೆಹೋವಾಷನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದರು. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ಅರಸರುಗಳ ಸಮಾಧಿಯಲ್ಲಿ ಹೂಳಿಡಲಿಲ್ಲ. .::. 26 ಯೆಹೋವಾಷನನ್ನು ಕೊಲ್ಲಲು ಸಂಚುಮಾಡಿದ ಸೇವಕರು ಯಾರೆಂದರೆ: ಜಾಬಾದ್ ಮತ್ತು ಯೆಹೋಜಾಬಾದ್, ಜಾಬಾದನ ತಾಯಿಯ ಹೆಸರು ಶಿಮ್ಗಾತ್, ಈಕೆ ಅಮ್ಮೋನಿಯಳು. ಯೆಹೋಜಾಬಾದನ ತಾಯಿಯು ಶಿಮ್ರೀತ್ ಎಂಬಾಕೆ, ಈಕೆ ಮೋವಾಬ್ಯಳು. .::. 27 ಯೆಹೋವಾಷನ ಮಕ್ಕಳ ಚರಿತ್ರೆ, ಅವನ ವಿರುದ್ಧವಾಗಿ ಹೇಳಿದ ಪ್ರವಾದನೆಗಳು, ಅವನು ದೇವಾಲಯವನ್ನು ಸರಿಪಡಿಸಿದ ವಿಷಯಗಳು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆಯಲ್ಪಟ್ಟಿದೆ. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ರಾಜನಾದನು.
  • 2 ಪೂರ್ವಕಾಲವೃತ್ತಾ ಅಧ್ಯಾಯ 1  
  • 2 ಪೂರ್ವಕಾಲವೃತ್ತಾ ಅಧ್ಯಾಯ 2  
  • 2 ಪೂರ್ವಕಾಲವೃತ್ತಾ ಅಧ್ಯಾಯ 3  
  • 2 ಪೂರ್ವಕಾಲವೃತ್ತಾ ಅಧ್ಯಾಯ 4  
  • 2 ಪೂರ್ವಕಾಲವೃತ್ತಾ ಅಧ್ಯಾಯ 5  
  • 2 ಪೂರ್ವಕಾಲವೃತ್ತಾ ಅಧ್ಯಾಯ 6  
  • 2 ಪೂರ್ವಕಾಲವೃತ್ತಾ ಅಧ್ಯಾಯ 7  
  • 2 ಪೂರ್ವಕಾಲವೃತ್ತಾ ಅಧ್ಯಾಯ 8  
  • 2 ಪೂರ್ವಕಾಲವೃತ್ತಾ ಅಧ್ಯಾಯ 9  
  • 2 ಪೂರ್ವಕಾಲವೃತ್ತಾ ಅಧ್ಯಾಯ 10  
  • 2 ಪೂರ್ವಕಾಲವೃತ್ತಾ ಅಧ್ಯಾಯ 11  
  • 2 ಪೂರ್ವಕಾಲವೃತ್ತಾ ಅಧ್ಯಾಯ 12  
  • 2 ಪೂರ್ವಕಾಲವೃತ್ತಾ ಅಧ್ಯಾಯ 13  
  • 2 ಪೂರ್ವಕಾಲವೃತ್ತಾ ಅಧ್ಯಾಯ 14  
  • 2 ಪೂರ್ವಕಾಲವೃತ್ತಾ ಅಧ್ಯಾಯ 15  
  • 2 ಪೂರ್ವಕಾಲವೃತ್ತಾ ಅಧ್ಯಾಯ 16  
  • 2 ಪೂರ್ವಕಾಲವೃತ್ತಾ ಅಧ್ಯಾಯ 17  
  • 2 ಪೂರ್ವಕಾಲವೃತ್ತಾ ಅಧ್ಯಾಯ 18  
  • 2 ಪೂರ್ವಕಾಲವೃತ್ತಾ ಅಧ್ಯಾಯ 19  
  • 2 ಪೂರ್ವಕಾಲವೃತ್ತಾ ಅಧ್ಯಾಯ 20  
  • 2 ಪೂರ್ವಕಾಲವೃತ್ತಾ ಅಧ್ಯಾಯ 21  
  • 2 ಪೂರ್ವಕಾಲವೃತ್ತಾ ಅಧ್ಯಾಯ 22  
  • 2 ಪೂರ್ವಕಾಲವೃತ್ತಾ ಅಧ್ಯಾಯ 23  
  • 2 ಪೂರ್ವಕಾಲವೃತ್ತಾ ಅಧ್ಯಾಯ 24  
  • 2 ಪೂರ್ವಕಾಲವೃತ್ತಾ ಅಧ್ಯಾಯ 25  
  • 2 ಪೂರ್ವಕಾಲವೃತ್ತಾ ಅಧ್ಯಾಯ 26  
  • 2 ಪೂರ್ವಕಾಲವೃತ್ತಾ ಅಧ್ಯಾಯ 27  
  • 2 ಪೂರ್ವಕಾಲವೃತ್ತಾ ಅಧ್ಯಾಯ 28  
  • 2 ಪೂರ್ವಕಾಲವೃತ್ತಾ ಅಧ್ಯಾಯ 29  
  • 2 ಪೂರ್ವಕಾಲವೃತ್ತಾ ಅಧ್ಯಾಯ 30  
  • 2 ಪೂರ್ವಕಾಲವೃತ್ತಾ ಅಧ್ಯಾಯ 31  
  • 2 ಪೂರ್ವಕಾಲವೃತ್ತಾ ಅಧ್ಯಾಯ 32  
  • 2 ಪೂರ್ವಕಾಲವೃತ್ತಾ ಅಧ್ಯಾಯ 33  
  • 2 ಪೂರ್ವಕಾಲವೃತ್ತಾ ಅಧ್ಯಾಯ 34  
  • 2 ಪೂರ್ವಕಾಲವೃತ್ತಾ ಅಧ್ಯಾಯ 35  
  • 2 ಪೂರ್ವಕಾಲವೃತ್ತಾ ಅಧ್ಯಾಯ 36  
×

Alert

×

Kannada Letters Keypad References