ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಮಿಕ

ಮಿಕ ಅಧ್ಯಾಯ 1

1 ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು. 2 ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ. 3 ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು. 4 ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು. 5 ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ? 6 ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು. 7 ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು. 8 ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು. 9 ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ. 10 ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು. 11 ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು. 12 ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ. 13 ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು. 14 ಹೀಗಿರುವದರಿಂದ ಮೋರೆಷತ್ ಗತ್ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು. 15 ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು. 16 ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
1. ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು. 2. ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ. 3. ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು. 4. ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು. 5. ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ? 6. ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು. 7. ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು. 8. ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು. 9. ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ. 10. ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು. 11. ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು. 12. ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ. 13. ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು. 14. ಹೀಗಿರುವದರಿಂದ ಮೋರೆಷತ್ ಗತ್ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು. 15. ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು. 16. ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
  • ಮಿಕ ಅಧ್ಯಾಯ 1  
  • ಮಿಕ ಅಧ್ಯಾಯ 2  
  • ಮಿಕ ಅಧ್ಯಾಯ 3  
  • ಮಿಕ ಅಧ್ಯಾಯ 4  
  • ಮಿಕ ಅಧ್ಯಾಯ 5  
  • ಮಿಕ ಅಧ್ಯಾಯ 6  
  • ಮಿಕ ಅಧ್ಯಾಯ 7  
×

Alert

×

Kannada Letters Keypad References