ಪವಿತ್ರ ಬೈಬಲ್

ಬೈಬಲ್ ಸೊಸೈಟಿ ಆಫ್ ಇಂಡಿಯಾ (BSI)
ಪ್ರಸಂಗಿ

ಪ್ರಸಂಗಿ ಅಧ್ಯಾಯ 4

1 ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ. 2 ಆದಕಾರಣ ಇನ್ನೂ ಜೀವ ದಿಂದಿದ್ದು ಬದುಕುವವರಿಗಿಂತ ಆಗಲೇ ಮೃತಪಟ್ಟ ಸತ್ತವರನ್ನು ನಾನು ಹೆಚ್ಚಾಗಿ ಹೊಗಳಿದೆನು. 3 ಹೌದು, ಇನ್ನೂ ಹುಟ್ಟದೆ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಇವರಿಬ್ಬರಿ ಗಿಂತಲೂ ಶ್ರೇಷ್ಠನು. 4 ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ. 5 ಬುದ್ಧಿಹೀನನು ತನ್ನ ಕೈಗಳನ್ನು ಒಟ್ಟಿಗೆ ಮಡಚಿಕೊಂಡು ತನ್ನ ಸ್ವಂತ ಮಾಂಸವನ್ನು ತಿನ್ನುತ್ತಾನೆ. 6 ಪ್ರಯಾಸದಿಂದಲೂ ಪ್ರಾಣಕ್ಕೆ ಆಯಾಸದಿಂದಲೂ ತುಂಬಿದ ಎರಡು ಕೈಗಳಿಂದಾದದ್ದಕಿಂತ ನೆಮ್ಮದಿಯಿಂದ ಕೂಡಿದ ಒಂದು ಕೈಯಿಂದಾದದ್ದೇ ಲೇಸು. 7 ಆಗ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ಇದ್ದ ವ್ಯರ್ಥವನ್ನು ಕಂಡೆನು. 8 ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ. 9 ಒಬ್ಬನಿಗಿಂತ ಇಬ್ಬರು ಲೇಸು; ತಮ್ಮ ಪ್ರಯಾಸಕ್ಕೆ ಅವರಿಗೆ ಒಳ್ಳೆಯ ಪ್ರತಿಫಲವಿದೆ. 10 ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು; ಅವನು ಒಬ್ಬೊಂಟಿಗನಾಗಿ ಬಿದ್ದರೆ ಅಯ್ಯೋ! ಅವನಿಗೆ ಸಹಾಯ ಮಾಡುವದಕ್ಕೆ ಇನ್ನೊಬ್ಬ ನಿಲ್ಲ. 11 ತಿರುಗಿ ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ; ಒಬ್ಬನು ಹೇಗೆ ಬೆಚ್ಚಗಾಗಿ ರುತ್ತಾನೆ? 12 ಅವನನ್ನು ಒಬ್ಬನು ಜಯಿಸಿದರೆ ಇಬ್ಬರು ಅವನನ್ನು ಎದುರಿಸುವರು; ಮೂರು ಹುರಿಯ ಹಗ್ಗವು ಬೇಗನೆ ಕಿತ್ತುಹೋಗುವದಿಲ್ಲ. 13 ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮುದುಕನೂ ಮೂಢನೂ ಆದ ಅರಸನಿಗಿಂತ ಬಡವನೂ ಜ್ಞಾನಿಯೂ ಆದ ಒಂದು ಮಗುವೇ ಮೇಲು. 14 ಸೆರೆ ಯಿಂದ ಆಳುವದಕ್ಕಾಗಿ ಅವನು ಬರುತ್ತಾನೆ; ಇದಲ್ಲದೆ, ತನ್ನ ರಾಜ್ಯದಲ್ಲಿ ಹುಟ್ಟಿದವನು ಬಡವನಾಗುತ್ತಾನೆ. 15 ತನಗೆ ಪ್ರತಿಯಾಗಿ ನಿಲ್ಲುವ ಎರಡನೆಯ ಮಗು ವಿನೊಂದಿಗೆ ನಡೆಯುವ ಜೀವಿತರನ್ನೆಲ್ಲಾ ಸೂರ್ಯನ ಕೆಳಗೆ ನಾನು ನೋಡಿದೆನು. 16 ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
1 ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ. .::. 2 ಆದಕಾರಣ ಇನ್ನೂ ಜೀವ ದಿಂದಿದ್ದು ಬದುಕುವವರಿಗಿಂತ ಆಗಲೇ ಮೃತಪಟ್ಟ ಸತ್ತವರನ್ನು ನಾನು ಹೆಚ್ಚಾಗಿ ಹೊಗಳಿದೆನು. .::. 3 ಹೌದು, ಇನ್ನೂ ಹುಟ್ಟದೆ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಇವರಿಬ್ಬರಿ ಗಿಂತಲೂ ಶ್ರೇಷ್ಠನು. .::. 4 ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ. .::. 5 ಬುದ್ಧಿಹೀನನು ತನ್ನ ಕೈಗಳನ್ನು ಒಟ್ಟಿಗೆ ಮಡಚಿಕೊಂಡು ತನ್ನ ಸ್ವಂತ ಮಾಂಸವನ್ನು ತಿನ್ನುತ್ತಾನೆ. .::. 6 ಪ್ರಯಾಸದಿಂದಲೂ ಪ್ರಾಣಕ್ಕೆ ಆಯಾಸದಿಂದಲೂ ತುಂಬಿದ ಎರಡು ಕೈಗಳಿಂದಾದದ್ದಕಿಂತ ನೆಮ್ಮದಿಯಿಂದ ಕೂಡಿದ ಒಂದು ಕೈಯಿಂದಾದದ್ದೇ ಲೇಸು. .::. 7 ಆಗ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ಇದ್ದ ವ್ಯರ್ಥವನ್ನು ಕಂಡೆನು. .::. 8 ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ. .::. 9 ಒಬ್ಬನಿಗಿಂತ ಇಬ್ಬರು ಲೇಸು; ತಮ್ಮ ಪ್ರಯಾಸಕ್ಕೆ ಅವರಿಗೆ ಒಳ್ಳೆಯ ಪ್ರತಿಫಲವಿದೆ. .::. 10 ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು; ಅವನು ಒಬ್ಬೊಂಟಿಗನಾಗಿ ಬಿದ್ದರೆ ಅಯ್ಯೋ! ಅವನಿಗೆ ಸಹಾಯ ಮಾಡುವದಕ್ಕೆ ಇನ್ನೊಬ್ಬ ನಿಲ್ಲ. .::. 11 ತಿರುಗಿ ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ; ಒಬ್ಬನು ಹೇಗೆ ಬೆಚ್ಚಗಾಗಿ ರುತ್ತಾನೆ? .::. 12 ಅವನನ್ನು ಒಬ್ಬನು ಜಯಿಸಿದರೆ ಇಬ್ಬರು ಅವನನ್ನು ಎದುರಿಸುವರು; ಮೂರು ಹುರಿಯ ಹಗ್ಗವು ಬೇಗನೆ ಕಿತ್ತುಹೋಗುವದಿಲ್ಲ. .::. 13 ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮುದುಕನೂ ಮೂಢನೂ ಆದ ಅರಸನಿಗಿಂತ ಬಡವನೂ ಜ್ಞಾನಿಯೂ ಆದ ಒಂದು ಮಗುವೇ ಮೇಲು. .::. 14 ಸೆರೆ ಯಿಂದ ಆಳುವದಕ್ಕಾಗಿ ಅವನು ಬರುತ್ತಾನೆ; ಇದಲ್ಲದೆ, ತನ್ನ ರಾಜ್ಯದಲ್ಲಿ ಹುಟ್ಟಿದವನು ಬಡವನಾಗುತ್ತಾನೆ. .::. 15 ತನಗೆ ಪ್ರತಿಯಾಗಿ ನಿಲ್ಲುವ ಎರಡನೆಯ ಮಗು ವಿನೊಂದಿಗೆ ನಡೆಯುವ ಜೀವಿತರನ್ನೆಲ್ಲಾ ಸೂರ್ಯನ ಕೆಳಗೆ ನಾನು ನೋಡಿದೆನು. .::. 16 ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
  • ಪ್ರಸಂಗಿ ಅಧ್ಯಾಯ 1  
  • ಪ್ರಸಂಗಿ ಅಧ್ಯಾಯ 2  
  • ಪ್ರಸಂಗಿ ಅಧ್ಯಾಯ 3  
  • ಪ್ರಸಂಗಿ ಅಧ್ಯಾಯ 4  
  • ಪ್ರಸಂಗಿ ಅಧ್ಯಾಯ 5  
  • ಪ್ರಸಂಗಿ ಅಧ್ಯಾಯ 6  
  • ಪ್ರಸಂಗಿ ಅಧ್ಯಾಯ 7  
  • ಪ್ರಸಂಗಿ ಅಧ್ಯಾಯ 8  
  • ಪ್ರಸಂಗಿ ಅಧ್ಯಾಯ 9  
  • ಪ್ರಸಂಗಿ ಅಧ್ಯಾಯ 10  
  • ಪ್ರಸಂಗಿ ಅಧ್ಯಾಯ 11  
  • ಪ್ರಸಂಗಿ ಅಧ್ಯಾಯ 12  
×

Alert

×

Kannada Letters Keypad References