ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು 99:1

Notes

No Verse Added

ಕೀರ್ತನೆಗಳು 99:1

1
ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.
2
ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
3
ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.
4
ಅರಸನ ಬಲವು ನ್ಯಾಯವನ್ನು ಪ್ರೀತಿ ಮಾಡುತ್ತದೆ; ನೀನು ನೀತಿಯನ್ನು ಸ್ಥಿರಪಡಿಸುತ್ತೀ; ನ್ಯಾಯವನ್ನೂ ನೀತಿಯನ್ನೂ ಯಾಕೋ ಬಿನಲ್ಲಿ ನೀನು ಮಾಡಿದ್ದೀ.
5
ನಮ್ಮ ದೇವರಾದ ಕರ್ತ ನನ್ನು ಉನ್ನತಪಡಿಸಿರಿ; ಆತನ ಪಾದ ಪೀಠದಲ್ಲಿ ಆರಾ ಧಿಸಿರಿ; ಆತನು ಪರಿಶುದ್ಧನೇ.
6
ಆತನ ಯಾಜಕರಲ್ಲಿ ಮೋಶೆಯೂ ಆರೋನನೂ ಆತನ ಹೆಸರನ್ನು ಕರೆಯುವವರಲ್ಲಿ ಸಮುವೇಲನೂ; ಅವರು ಕರ್ತನನ್ನು ಕರೆದಾಗ ಆತನು ಅವರಿಗೆ ಉತ್ತರ ಕೊಟ್ಟನು.
7
ಆತನು ಮೇಘಸ್ತಂಭದಲ್ಲಿಂದ ಅವರ ಸಂಗಡ ಮಾತನಾಡಿದನು; ಆತನ ಸಾಕ್ಷಿಗಳನ್ನೂ ಆತನು ಅವರಿಗೆ ಕೊಟ್ಟ ನಿಯಮಗಳನ್ನೂ ಅವರು ಕೈಕೊಂಡರು.
8
ನಮ್ಮ ದೇವರಾದ ಕರ್ತನೇ, ನೀನು ಅವರಿಗೆ ಉತ್ತರಕೊಟ್ಟೆ; ಅವರ ಕೃತ್ಯಗಳಿಗೋಸ್ಕರ ನೀನು ಅವ ರಿಗೆ ಮುಯ್ಯಿಗೆ ಮುಯ್ಯಿ ಕೊಡುವಾತನಾಗಿದ್ದರೂ ಅವರನ್ನು ಕ್ಷಮಿಸುವ ದೇವರು ನೀನಾಗಿದ್ದೀ.
9
ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.
×

Alert

×

kannada Letters Keypad References