ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು 85:1

Notes

No Verse Added

ಕೀರ್ತನೆಗಳು 85:1

1
ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.
2
ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
3
ನಿನ್ನ ಕೋಪ ವನ್ನೆಲ್ಲಾ ನೀನು ತೆಗೆದುಬಿಟ್ಟಿದ್ದೀ; ನೀನು ಕೋಪದ ಉರಿಯಿಂದ ತಿರುಗಿಕೊಂಡಿದ್ದೀ.
4
ನಮ್ಮ ರಕ್ಷಣೆಯ ದೇವರೇ, ನಮ್ಮ ಕಡೆಗೆ ತಿರುಗು; ನಮ್ಮ ಮೇಲಿರುವ ನಿನ್ನ ಕೋಪವನ್ನು ತೊಲ ಗಿಸು.
5
ಎಂದೆಂದಿಗೂ ನಮ್ಮ ಮೇಲೆ ಕೋಪಿಸು ವಿಯೋ? ತಲತಲಾಂತರಕ್ಕೂ ನಿನ್ನ ಕೋಪವನ್ನು ಏಳ ಮಾಡುವಿಯೋ?
6
ನಿನ್ನ ಜನರು ನಿನ್ನಲ್ಲಿ ಸಂತೋಷ ಪಡುವ ಹಾಗೆ ನೀನು ತಿರುಗಿ ನಮ್ಮನ್ನು ಉಜ್ಜೀವಿ ಸುವದಿಲ್ಲವೋ?
7
ಕರ್ತನೇ, ನಿನ್ನ ಕರುಣೆಯನ್ನು ನಮಗೆ ದಯಪಾಲಿಸು. ನಿನ್ನ ರಕ್ಷಣೆಯನ್ನು ನಮಗೆ ಕೊಡು.
8
ಕರ್ತನಾದ ದೇವರು ಏನು ಹೇಳುತ್ತಾನೋ ಅದನ್ನು ಕೇಳುವೆನು; ನಿಶ್ಚಯವಾಗಿ ಜನರಿಗೂ ತನ್ನ ಪರಿಶುದ್ಧ ರಿಗೂ ಸಮಾಧಾನದ ಮಾತು ಹೇಳುವನು; ಇನ್ನು ಬುದ್ಧಿಹೀನತ್ವಕ್ಕೆ ಅವರು ತಿರುಗಿಕೊಳ್ಳದೆ ಇರಲಿ.
9
ನಿಶ್ಚ ಯವಾಗಿ ಘನವು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ಆತನಿಗೆ ಭಯಪಡುವವರಿಗೆ ಆತನ ರಕ್ಷಣೆಯು ಸವಿಾಪವಾಗಿದೆ.
10
ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ.
11
ಸತ್ಯವು ಭೂಮಿಯಿಂದ ಮೊಳೆಯು ವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
12
ಹೌದು, ಕರ್ತನು ಒಳ್ಳೇದನ್ನು ಮಾಡುವನು. ನಮ್ಮ ಭೂಮಿಯು ಅದರ ಬೆಳೆಯನ್ನು ಕೊಡುವದು.
13
ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಗಳಲ್ಲಿ ನಡೆಯುವಂತೆ ಮಾರ್ಗವನ್ನು ಮಾಡುವದು.
×

Alert

×

kannada Letters Keypad References