ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು 130:1

Notes

No Verse Added

ಕೀರ್ತನೆಗಳು 130:1

1
ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ.
2
ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ.
3
ಕರ್ತನೇ, ನೀನು ಅಕ್ರಮಗಳ ಮೇಲೆ ಕಣ್ಣಿಟ್ಟರೆ ಕರ್ತನೇ, ಯಾರು ನಿಲ್ಲುವರು?
4
ಆದರೆ ಜನರು ನಿನಗೆ ಭಯಪಡುವ ಹಾಗೆ ನಿನ್ನಲ್ಲಿ ಕ್ಷಮಾಪಣೆ ಉಂಟು.
5
ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ.
6
ಉದಯಕ್ಕಾಗಿ ಕಾದುಕೊಳ್ಳುವವ ರಿಗಿಂತ ಹೌದು, ಉದಯಕ್ಕಾಗಿ ಕಾದುಕೊಳ್ಳುವವರಿ ಗಿಂತ ನನ್ನ ಪ್ರಾಣವು ಕರ್ತನಿಗಾಗಿ ನಿರೀಕ್ಷಿಸುತ್ತದೆ.
7
ಇಸ್ರಾಯೇಲು ಕರ್ತನಲ್ಲಿ ನಿರೀಕ್ಷಿಸಲಿ; ಕರ್ತನ ಬಳಿಯಲ್ಲಿ ಕರುಣೆಯೂ ಆತನಲ್ಲಿ ವಿಮೋಚನೆಯೂ ಬಹಳವಾಗಿದೆ.
8
ಆತನು ಇಸ್ರಾಯೇಲನ್ನು ಅದರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವನು.
×

Alert

×

kannada Letters Keypad References